Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆ ನಿರ್ವಹಣೆಯಲ್ಲಿ ಬಳಸಬಹುದಾದ ಸರಳ ಉಪಾಯ
ಮನೆ ಕೆಲಸದಲ್ಲಿ ಚಿಕ್ಕ ಪುಟ್ಟ ಸಲಹೆಗಳು ತುಂಬಾ ಸಹಕಾರಿಯಾಗುತ್ತವೆ. ಸರಳವಾಗಿ ಮಾಡಿ ಮುಗಿಸಬಹುದಾದ ಕೆಲಸಕ್ಕೆ ಗೊತ್ತಿಲ್ಲದೆ ತುಂಬಾ ಕಷ್ಟ ಪಡುತ್ತೇವೆ. ಉದಾಹರಣೆಗೆ ಶರ್ಟ್ ನಲ್ಲಿ ಗ್ರೀಸ್ ಅಂಟುಕೊಂಡಿದ್ದರೆ ಅದನ್ನು ಸುಲಭವಾಗಿ ತೆಗೆಯಲು ಬರದಿದ್ದರೆ ತುಂಬಾ ಕಷ್ಟ ಪಡಬೇಕಾಗುತ್ತದೆ. ಅದೇ ಗೊತ್ತಿದ್ದರೆ ನಿಂಬೆ ಹಣ್ಣು ಮತ್ತು ಸ್ವಲ್ಪ ಸೀಮೆ ಎಣ್ಣೆ ಹಾಕಿ ಉಜ್ಜಿದರೆ ಸಾಕು ಹೋಗುತ್ತದೆ. ಈ ರೀತಿಯ ಅನೇಕ ಸರಳ ಉಪಾಯಗಳು ಗೊತ್ತಿಲ್ಲದೆ ಕಷ್ಟ ಪಡುತ್ತೇವೆ. ಈ ಕೆಳಗ್ಗೆ ಕೆಲ ಉಪಾಯಗಳಿವೆ. ಅವುಗಳು ಮನೆ ಕೆಲಸದಲ್ಲಿ ನಿಮಗೆ ಸಹಕಾರಿಯಾಗುವುದು.

1. ಕಾಫಿ ಪುಡಿಯನ್ನು ಫ್ರಿಜ್ ನಲ್ಲಿ ಶೇಕರಿಸಿಟ್ಟರೆ ಅದರ ತಾಜಾ ವಾಸನೆ ಹೋಗದೆ ತುಂಬಾ ಕಾಲ ಬಾಳಿಕೆ ಬರುತ್ತದೆ.
2. ಕೈಯಲ್ಲಿ ಅಥವಾ ಪಾತ್ರೆಯಲ್ಲಿ ಗ್ರೀಸ್ ಕಲೆಗಳಾಗಿದ್ದರೆ ಸ್ವಲ್ಪ Vaseline ಹಾಕಿ ಹಚ್ಚಿ ಒಂದು ಬಟ್ಟೆಯಿಂದ ಉಜ್ಜಿದರೆ ಗ್ರೀಸ್ ಕಲೆ ಸುಲಭದಲ್ಲಿ ಹೋಗುವುದು.
3. ಟೂತ್ ಪೇಸ್ಟ್ ಹಾಕಿ ಚಿನ್ನ ಮತ್ತು ಬೆಳ್ಳಿ ತೊಳೆದರೆ ಅದರ ಹೊಳಪು ಹೆಚ್ಚುವುದು.
4. ಪಾತ್ರೆಯಲ್ಲಿ ತುಂಬಾ ಎಣ್ಣೆ ಜಿಗುಟಿದ್ದರೆ ಬಿಸಿ ನೀರಿಗೆ ಹಾಕಿ ನಿಂಬೆ ಹಣ್ಣಿನಿಂದ ತಿಕ್ಕಿದರೆ ಎಣ್ಣೆ ಪಸೆ ಹೋಗುವುದು.
5. ಏನಾದರೂ ಸಂಗ್ರಹಿಸಿಡುವ ಡಬ್ಬಿಗಳನ್ನು ತೊಳೆಯುವಾಗ ಸ್ವಲ್ಪ ಅಡುಗೆ ಸೋಡಾ ಹಾಕಿ ತೊಳೆದರೆ ಡಬ್ಬಿಯಲ್ಲಿ ಆಹಾರ ಸಾಮಾಗ್ರಿಗಳ ವಾಸನೆ ಉಳಿಯುವುದಿಲ್ಲ. ಉದಾಹರಣೆಗೆ : ಉಪ್ಪಿನ ಕಾಯಿ ಡಬ್ಬಿ
6. ಕಿಚನ್ ನಲ್ಲಿ ತರಕಾರಿ ಕತ್ತರಿಸಲು ಬಳಸುವ ಸಾಮಾಗ್ರಿಗಳನ್ನು ವಾರಕ್ಕೊಮ್ಮೆ ಬಿಸಿ ನೀರಿನಲ್ಲಿ ಹಾಕಿ ವಿನಿಗರ್ ಬಳಸಿ ತೊಳೆಯುವುದು ಒಳ್ಳೆಯದು.
7. ಮೊಸಾಯಿಕ್ ಟೈಲ್ಸ್ ನಡುವೆ ಇರುವ ಕೊಳೆಯನ್ನು ತೆಗೆಯಲು ಅಡುಗೆ ಸೋಡಾವನ್ನು ಬಳಸಬಹುದು.
8. ಬಟ್ಟೆ ಒಗೆದದು ಶುದ್ಧ ನೀರಿನಲ್ಲಿ ತೊಳೆದ ನಂತರ ಗುಲಾಬಿ ದಳಗಳು, ಪುದೀನಾ ಎಲೆ, ತುಳಸಿ ಎಲೆಯನ್ನು ನೀರಿನಲ್ಲಿ ಹಾಕಿ ಕುದಿಸಿ ಬಕೆಟ್ ನೀರಿನಲ್ಲಿ ಮಿಶ್ರ ಮಾಡಿ ಅದರಲ್ಲಿ ಬಟ್ಟೆಯನ್ನು ಅದ್ದಿ ಒಣಗಿಸಿದರೆ ಬಟ್ಟೆ ಪರಿಮಳದಿಂದ ಕೂಡಿರುತ್ತದೆ.
9. ಬಟ್ಟೆಗಳನ್ನು ಒಗೆದು ಮಡಚಿ ಇಡುವಾಗ ಪೇಪರ್ ಬಳಸಿ ಮಡಚಿಟ್ಟರೆ ಬಟ್ಟೆ ಹಾಳಾಗುವುದಿಲ್ಲ. ಸುವಾಸನೆ ಇರುವ ಹೂಗಳನ್ನು ಒಣಗಿಸಿ, ತುಳಸಿಯ ಬೀಜಗಳನ್ನು ಸ್ವಲ್ಪ ತೆಗೆದು ಇವುಗಳನ್ನು ಒಂದು ಕವರ್ ನಲ್ಲಿ ಹಾಕಿ ಬಟ್ಟೆ ಕಬೋರ್ಡ್ ನಲ್ಲಿಟ್ಟರೆ ಬಟ್ಟೆ ಸುವಾಸನೆಯಿಂದ ಕೂಡಿರುತ್ತದೆ.
10. ಟವಲ್ ನಿಂದ ಕೆಟ್ಟ ವಾಸನೆ ಹೋಗಿಸುವ ಸುಲಭ ಉಪಾಯವೆಂದರೆ ಅಡುಗೆ ಸೋಡಾ ಬಳಕೆ. ಬಿಸಿ ನೀರಿಗೆ ಅಡುಗೆ ಸೋಡಾ ಬೆರೆಸಿ 20-30 ನಿಮಿಷ ನೆನೆಸಿ ಒಗೆದರೆ ವಾಸನೆ ಇರುವುದಿಲ್ಲ.



Click it and Unblock the Notifications
