Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ರದ್ದಿ ಪೇಪರ್ ನಿಂದ 8 ಪ್ರಯೋಜನಗಳು
ಇಂದಿನ ಸುದ್ದಿ ನಾಳೆಗೆ ರದ್ದಿ, ಹಾಗಂತ ಇಂದಿನ ನ್ಯೂಸ್ ಪೇಪರ್ ಅನ್ನು ರದ್ದಿಗೆ ಹಾಕಬೇಡಿ! ಏಕೆಂದರೆ ನ್ಯೂಸ್ ಪೇಪರ್ ಅನ್ನು ರದ್ದಿಗೆ ಬಿಸಾಡುವ ಬದಲು ಇದನ್ನು ಮನೆಯ ಶುಚಿತ್ವಕ್ಕೆ, ಮನೆ ಅಲಂಕಾರಕ್ಕೆ ಬಳಸಬಹುದು. ಇಲ್ಲಿ ನಾವು ಪೇಪರ್ ಅನ್ನು ಮನೆ ಬಳಕೆಯಲ್ಲಿ ಹೇಗೆಲ್ಲಾ ಬಳಸಬಹುದು ಎಂಬ ಸ್ಮಾರ್ಟ್ಸ್ ಟಿಪ್ಸ್ ನೀಡಿದ್ದೇವೆ ನೋಡಿ:
1. ಗಾಜನ್ನು ಒರೆಸಲು: ಮನೆ ಕಿಟಕಿಯ ಗಾಜುಗಳನ್ನು ಪೇಪರ್ ನಿಂದ ಒರೆಸಿದರೆ ಕಿಟಕಿ ಫಳಫಳ ಹೊಳೆಯುತ್ತದೆ. ಫೋಟೊ ಫ್ರೇಮ್, ಗ್ಲಾಸ್ ಈ ರೀತಿಯ ಯಾವುದೇ ಗಾಜಿನ ವಸ್ತುಗಳನ್ನು ಪೇಪರ್ ನಿಂದ ಶುಚಿ ಮಾಡಬಹುದು.

2. ಪೇಪರ್ ನಿಂದ ರಕ್ಷಣೆ: ಮನೆಯಲ್ಲಿರುವ ಕಪಾಟುಗಳಿಗೆ ಪೇಪರ್ ಹಾಕಿ ನಂತರ ವಸ್ತುಗಳನ್ನು ಇಟ್ಟರೆ ಕಬೋರ್ಡ್ ನಲ್ಲಿ ಕೊಳೆ ಅಥವಾ ಕಲೆ ಕಂಡು ಬರುವುದಿಲ್ಲ.
3. ಡ್ರೈಯರ್ ಆಗಿ: ಶೂವಿನಲ್ಲಿ ನೀರು ಬಿದ್ದರೆ ಅದನ್ನು ಬೇಗನೆ ಒಣಗಿಸಲು ಪೇಪರ್ ಹಾಕಿಟ್ಟರೆ ಸಾಕು, ಪೇಪರ್ ನೀರನ್ನು ಹೀರಿಕೊಳ್ಳುವುದರಿಂದ ಶೂ ಬೇಗನೆ ಒಣಗುತ್ತದೆ. ಟೇಬಲ್ ಅಥವಾ ಮರದ ಡೆಸ್ಕ್ ಟೀ ಚೆಲ್ಲಿ ಹೋದರೆ ಅದನ್ನು ಒರೆಸಲು ಪೇಪರ್ ಬಳಸಬಹುದು.
4. ಮನೆಯ ಅಲಂಕಾರಕ್ಕೆ: ಪೇಪರ್ ಅನ್ನು ಕತ್ತರಿಸಿ ಅನೇಕ ಅಲಂಕಾರಿಕ ವಸ್ತುಗಳನ್ನು ತಯಾರಿಸಬಹುದು. ಇದರಿಂದ ಗೊಂಬೆಗಳನ್ನು ತಯಾರಿಸಿ ಅಲಂಕಾರಕ್ಕೆ ಇಡಬಹುದು.
5. ಮೇಕಪ್ ತೆಗೆಯಲು: ಮುಖದಲ್ಲಿ ತುಂಬಾ ಮೇಕಪ್ ಆಗಿದ್ದರೆ ಪೇಪರ್ ನಿಂದ ಉಜ್ಜಿ ಅಧಿಕವಾದ ಮೇಕಪ್ ಅನ್ನು ತೆಗೆಯಬಹುದು.
6. ಐರನ್ ಬಾಕ್ಸ್ : ಐರನ್ ಬಾಕ್ಸ್ ನ ಕೆಳಭಾಗವನ್ನು ಪೇಪರ್ ನಿಂದ ಉಜ್ಜಿ ಅದನ್ನು ಶುದ್ಧ ಮಾಡಬಹುದು.
7. ತಾಜಾ ತರಕಾರಿಗಾಗಿ: ತರಕಾರಿಗಳು ಬೇಗನೆ ಹಾಳಾಗದಿರಲು ಅವುಗಳನ್ನು ಪೇಪರ್ ನಲ್ಲಿ ಸುತ್ತಿಟ್ಟರೆ ಸಾ
8. ಬೀಜದ ಗುಣಮಟ್ಟ ಪರೀಕ್ಷಿಸಲು: ಬೀಜಗಳನ್ನು ಮಣ್ಣಿ ಬಿತ್ತುವ ಮುನ್ನ ಆ ಬೀಜ ಬಿತ್ತಿದರೆ ಚೆನ್ನಾಗಿ ಮೊಳಕೆ ಬರಬಹುದೇ ಎಂದು ತಿಳಿಯಲು ಸ್ವಲ್ಪ ಬೀಜವನ್ನು ಪೇಪರ್ ನಲ್ಲಿ ಸುತ್ತಿ 2 ವಾರಗಳ ಇಡಬೇಕು. ಹೀಗೆ ಇಟ್ಟ ಬೀಜಗಳು ಮೊಳಕೆ ಬಂದರೆ ಅಂತಹ ಬೀಜಗಳನ್ನು ಧೈರ್ಯವಾಗಿ ಮಣ್ಣಿನಲ್ಲಿ ಬೆಳೆಯಬಹುದು.



Click it and Unblock the Notifications
