Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಈರುಳ್ಳಿಯಿಂದ ಮನೆ ಶುಚಿ - ಸೂಪರ್ ಟಿಪ್ಸ್ ಅಲ್ವಾ?
"ಒಂದೇ ದಿನ ರಜೆ ಇರುವುದು ಅದರಲ್ಲೂ ಆರಾಮವಾಗಿರಲು ಆಗುವುದಿಲ್ಲ, ಮನೆ ಕ್ಲೀನಿಂಗ್ ಮಾಡಿ ಮುಗಿಸುವಷ್ಟರಲ್ಲಿ ಸಾಕು ಸಾಕಾಗಿರುತ್ತದೆ" ಎಂದು ಹೊರಗೆ ದುಡಿಯುವ ಮಹಿಳೆಯರು ರಜಾದಿನದಲ್ಲಿ ಗೊಣಗಾಡಿದರೆ ಮನೆಯಲ್ಲಿರುವ ಮಹಿಳೆಯರು "ಸ್ವಲ್ಪ ಹೊತ್ತು ಕೂರಲೂ ಪುರುಸೊತ್ತು ಇರಲ್ಲ" ಎಂದು ತಮ್ಮ ಅಸಮಧಾನವನ್ನು ವ್ಯಕ್ತ ಪಡಿಸುತ್ತಾರೆ.
ಆದರೆ ಮನೆ ಕೆಲಸಕ್ಕೆ ಕೆಲವೊಂದು ಟಿಪ್ಸ್ ಗಳಿವೆ, ಅವುಗಳಂತೆ ಪಾಲಿಸಿದರೆ ಅರ್ಧ ಶ್ರಮ ಕಡಿಮೆಯಾಗುವುದು. ಉದಾಹರಣೆಗೆ ತಾಮ್ರದ ಪಾತ್ರೆಗಳನ್ನು ಎಷ್ಟು ಹೊತ್ತು ಸೋಪು ಹಾಕಿ ತಿಕ್ಕಿದರೂ ಹೆಚ್ಚಿನ ಹೊಳಪು ಪಡೆಯಲು ಸಾಧ್ಯವಿಲ್ಲ. ಅದೇ ಸ್ವಲ್ಪ ಹುಣಸೆ ಹಣ್ಣಿಗೆ ಉಪ್ಪು ಹಾಕಿ, ಅದಕ್ಕೆ ಸ್ವಲ್ಪ ಉಪ್ಪು ಹಾಕಿ ತಾಮ್ರ ಪಾತ್ರೆಗಳನ್ನು ಉಜ್ಜಿದರೆ ಪಾತ್ರೆ ಪಳಪಳ ಎಂದು ಹೊಳೆಯುತ್ತದೆ. ಹಾಗೆಯೇ ಕಿಟಕಿ ಗ್ಲಾಸ್ ಗಳನ್ನು ತಿಕ್ಕಿ ತೊಳೆಯುವ ಬದಲು ಪೇಪರ್ ಗೆ ಸ್ವಲ್ಪ ಸೀಮೆಯೆಣ್ಣೆ ಹಾಕಿ ಉಜ್ಜಿದರೆ ಗ್ಲಾಸ್ ಹೊಳಪನ್ನು ಪಡೆಯುತ್ತದೆ.
ಮನೆ ಕ್ಲೀನಿಂಗ್ ಗೆ ನಿಂಬೆ ಹಣ್ಣು, ಈರುಳ್ಳಿ ಈ ರೀತಿಯ ಆಹಾರ ಸಾಮಾಗ್ರಿಗಳನ್ನೂ ಬಳಸಬಹುದು. ಇಲ್ಲಿ ನಾವು ಈರುಳ್ಳಿಯಿಂದ ಮನೆ ಕ್ಲೀನಿಂಗ್ ಮಾಡಲು ಟಿಪ್ಸ್ ನೀಡಲಾಗಿದೆ ನೋಡಿ:

ಸ್ಟೀಲ್ ಪಾತ್ರೆಗಳ ಹೊಳಪಿಗೆ:
ಸ್ಟೀಲ್ ಪಾತ್ರೆಗಳನ್ನು ತುಂಬಾ ಕಾಲ ಬಳಸಿದಾಗ ಅದು ತನ್ನ ಹೊಳಪನ್ನು ಕಳೆದುಕೊಳ್ಳುತ್ತದೆ. ಹೀಗೆ ಹೊಳಪು ಕಳೆದುಕೊಂಡ ಪಾತ್ರೆಗಳನ್ನು ಕತ್ತರಿಸಿದ ಈರುಳ್ಳಿ ತುಂಡನ್ನು ಉಜ್ಜಿ ತೊಳೆದರೆ ಪಾತ್ರೆ ಪುನಃ ಹೊಳಪನ್ನು ಪಡೆಯುತ್ತದೆ.

ಅಡುಗೆ ಮನೆಯಲ್ಲಿ:
ದೋಸೆ ಅಥವಾ ಚಪಾತಿ ಮಾಡುವ ಮೊದಲು ತವಾವನ್ನು ಈರುಳ್ಳಿಯಿಂದ ಉಜ್ಜಿದರೆ ದೋಸೆ ಬೆಂದಾಗ ತವಾದಿಂದ ಚೆನ್ನಾಗಿ ಎದ್ದು ಬರುತ್ತದೆ.

ಸೀದ ಪಾತ್ರೆಗಳ ಶುಚಿಗೆ:
ಸೀದ ಪಾತ್ರೆಯನ್ನು ಶುಚಿ ಮಾಡುವುದು ಸ್ವಲ್ಪ ಕಷ್ಟ ಕೆಲಸವೇ, ಆದರೆ ಈರುಳ್ಳಿ ಬಳಸಿದರೆ ಸುಲಭವಾಗಿ ಶುಚಿ ಮಾಡಬಹುದು. ಸೀದು ಹೋದ ಪಾತ್ರೆಗೆ ಈರುಳ್ಳಿ ತುಂಡುಗಳನ್ನು ಉಜ್ಜಿ 10 ನಿಮಿಷದ ಬಳಿಕ ತೊಳೆದರೆ ಪಾತ್ರೆ ಶುಚಿಯಾಗುವುದು.

ಗ್ರಿಲ್:
ಗ್ರಿಲ್ ಮೆಷಿನ್ ಗಳನ್ನು ತೊಳೆಯಲು ಕೂಡ ಈರುಳ್ಳಿ ಬಳಸಬಹುದು. ಈರುಳ್ಳಿಯನ್ನು ಕತ್ತರಿಸಿ ಅದರಿಂದ ಗ್ರಿಲ್ ಉಜ್ಜಿದರೆ ಗ್ರಿಲ್ ಶುಚಿಯಾಗುವುದು ಹಾಗೂ ಹೊಳಪನ್ನು ಪಡೆಯುತ್ತದೆ.

ವಾಸನೆಯನ್ನು ಹೋಗಲಾಡಿಸಲು:
ಮನೆಯ ಮೂಲೆಯಲ್ಲಿ ಕೆಟ್ಟ ವಾಸನೆ ಬರುತ್ತಿದ್ದರೆ ಆ ಜಾಗದಲ್ಲಿ ಈರುಳ್ಳಿಯನ್ನು ಹಾಕಿದರೆ ಕೆಟ್ಟ ವಾಸನೆಯನ್ನು ಹೋಗಲಾಡಿಸಬಹುದು.



Click it and Unblock the Notifications
