Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕೋಲಾ ಬಳಸಿ ಕ್ಲೀನಿಂಗ್ ಮಾಡಬಹುದು!

ಕೋಲಾ ಪಾತ್ರೆಯನ್ನು ಶುದ್ಧ ಮಾಡಲು: ಅಡುಗೆ ಸ್ವಲ್ಪ ಗಮನಿಸದಿದ್ದರೆ ಪಾತ್ರೆ ಸೀದು ಹೋಗುವುದು ಸಹಜ. ಹೀಗೆ ಸೀದು ಹೋದ ಪಾತ್ರೆಗಳನ್ನು ತೊಳೆಯುವುದು ಕಷ್ಟ. ಇಂತಹ ಸೀದು ಹೋದ ಪಾತ್ರೆಯಲ್ಲಿ ತೊಳೆಯುವಾಗ ಸ್ವಲ್ಪ ಕೋಲಾ ಹಾಕಿಟ್ಟು 10 ನಿಮಿಷದ ಬಳಿಕ ತೊಳೆದರೆ ಪಾತ್ರೆ ಹೊಚ್ಚ ಹೊಸದು ತರಹ ಕಾಣುವುದು.
ಕಲೆಯನ್ನು ಹೋಗಲಾಡಿಸಲು: ಗ್ರೀಸ್, ರಕ್ತ, ಎಣ್ಣೆ ಕಲೆಗಳನ್ನು ತೆಗೆಯಲು ಕೋಲಾ ಬಳಸಬಹುದು. ಬಕೆಟ್ ನೀರಿನಲ್ಲಿ ಕೋಲಾ ಹಾಕಿ ಅದಕ್ಕೆ ಸೋಪಿನ ಪುಡಿ ಹಾಕಿ ಮಿಶ್ರ ಮಾಡಿ ಬಟ್ಟೆಯನ್ನು ಅದರಲ್ಲಿ ಅರ್ಧಗಂಟೆ ಕಾಲ ನೆನೆ ಹಾಕಬೇಕು. ನಂತರ ಒಗೆದರೆ ಕಲೆ ನಿಮ್ಮ ಬಟ್ಟೆಯಿಂದ ಮಾಯವಾಗಿ ಬಟ್ಟೆ ತುಂಬಾ ಸ್ವಚ್ಛವಾಗಿ ಕಾಣಬಹುದು.
ಟಾಯ್ಲೆಟ್ ಶುದ್ಧ ಮಾಡಲು: ಬಾತ್ ಟಬ್, ಟಾಯ್ಲೆಟ್, ಸಿಂಕ್ ಇವುಗಳ್ನು ಕೋಲಾ ಹಾಕಿ ತೊಳೆದರೆ ಪಳಪಳ ಹೊಳೆಯುತ್ತಿರುತ್ತದೆ. ಕೋಲಾವನ್ನು ಬಾತ್ ಟಬ್ ಅಥವಾ ಟಾಯ್ಲೆಟ್ ಗೆ ಹಾಕಿ ಅರ್ಧ ಗಂಟೆ ಬಿಟ್ಟು ಬ್ರಷ್ ನಿಂದ ತಿಕ್ಕಿ ತೊಳೆಯಿರಿ. ನಿಮ್ಮ ಟಾಯ್ಲೆಟ್ ಉಳಿದ ಟಾಯ್ಲೆಟ್ ಕ್ಲೀನರ್ ಗಿಂತ ಪಳಪಳವಾಗಿ ಹೊಳೆಯುವುದು.
ತುಕ್ಕು ತೆಗೆಯಲು: ತಾಮ್ರ ಅಥವಾ ಕಬ್ಬಿಣದ ವಸ್ತುಗಳಿಗೆ ತುಕ್ಕು ಹಿಡಿದರೆ ಆ ವಸ್ತುಗಳ ಮೇಲೆ ಕೋಲಾ ಸುರಿದು ಒಂದು ರಾತ್ರಿ ಇಟ್ಟು ಮಾರನೆ ದಿನ ತೊಳೆದರೆ ಆ ತುಕ್ಕು ಕಲೆಗಳು ಮಾಯವಾಗುವುದು!
ಗ್ಲಾಸ್ ಗಳನ್ನು ಶುಚಿಗೊಳಿಸಲು: ಮನೆ ಕಿಟಕಿಗಳನ್ನು ಶುದ್ಧ ಮಾಡಲು ಇದನ್ನು ಬಳಸಬಹುದು. ಇದರಲ್ಲಿ ಸಿಟ್ರಿಕ್ ಆಸಿಡ್ ಇರುವುದರಿಂದ ಇದರಿಂದ ಗ್ಲಾಸ್ ಉಜ್ಜಿದರೆ ಗ್ಲಾಸ್ ಪಳಪಳ ಹೊಳೆಯುವಂತಾಗುವುದು.
ಇನ್ನೊಮ್ಮೆ ಕೋಲಾ ರುಚಿ ಸವಿಯಲು ಕೊಳ್ಳುವಾಗ ಒಂದು ಕೋಲಾ ಅಧಿಕ ಕೊಂಡು ಅದನ್ನು ಈ ಮೇಲಿನಂತೆ ಬಳಸಿ ನೋಡಿ ಇದರ ಟು ಇನ್ ಒನ್ ಗುಣ ನಿಮಗೆ ಇಷ್ಟವಾಗುವುದು.



Click it and Unblock the Notifications
