Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮೊಸಾಯಿಕ್ ನೆಲದ ಅಂದಕ್ಕೆ ಕೆಲ ಸಲಹೆಗಳು

1. ವ್ಯಾಕ್ಯೂಮ್ ಕ್ಲೀನಿಂಗ್: ವ್ಯಾಕ್ಯೂಮ್ ಕ್ಲೀನರ್ ಬಳಸಿದರೆ ನೆಲ ಶುದ್ಧವಾಗಿ ಕಾಣುತ್ತದೆ. ವ್ಯಾಕ್ಯೂಮ್ ಕ್ಲೀನರ್ ಚಿಕ್ಕ ಕಸವನ್ನು ಕೂಡ ತೆಗೆಯುವುದರಿಂದ ನೆಲ ಶುಚಿಯಾಗಿ ಕಾಣುವುದು. ಅಲ್ಲದೆ ಇದನ್ನು ಬಳಸಿದಾಗ ನೆಲ ಶುಚಿ ಮಾಡಲು ಅಧಿಕ ಸಮಯ ಬೇಕಾಗಿಲ್ಲ. ವ್ಯಾಕ್ಯೂಮ್ ಕ್ಲೀನರ್ ಇಲ್ಲ ಅಂದರೆ ಈ ಕೆಳಗಿನ ಸಲಹೆಗಳನ್ನು ಪಾಲಿಸಬಹುದು.
2. ಸೋಪು ನೀರು: ಸೋಪ್ ನೀರು ಹಾಕಿ ಬ್ರಷ್‌ನಿಂದ ತಿಕ್ಕಿದರೆ ನೆಲದಲ್ಲಿ ಅಂಟಿರುವ ಕಲೆಗಳನ್ನು ಸುಲಭದಲ್ಲಿ ತೆಗೆಯಬಹುದು.
* ಮೂಲೆಯಲ್ಲಿರುವ ಕೊಳೆಯನ್ನು ತೆಗೆಯಲು ಹಳೆ ಟೂತ್ ಬ್ರಷ್ ಬಳಸಿ ತಿಕ್ಕಿದರೆ ಸಾಕು.
* ನೆಲ ತೊಳೆದ ಮೇಲೆ ಸಂಪೂರ್ಣವಾಗಿ ಒಣಗುವವರೆಗೆ ಓಡಾಡಬಾರದು.
3. ಅಡುಗೆ ಸೋಡಾ: ಮೊಸಾಯಿಕ್ ಟೈಲ್ಸ್ ನಡುವೆ ಇರುವ ಕೊಳೆಯನ್ನು ತೆಗೆಯಲು ಅಡುಗೆ ಸೋಡಾವನ್ನು ನೀರಿನಲ್ಲಿ ಹಾಕಿ, ಆ ನೀರನ್ನು ಟೈಲ್ಸ್ ಮೇಲೆ ಹಾಕಿ 15 ನಿಮಿಷ ಬಿಡಬೇಕು. ನಂತರ ಬ್ರಷ್ ಹಾಕಿ ತಿಕ್ಕಬೇಕು. ನಂತರ ಸ್ಪಾಂಜ್ ಅನ್ನು ಸೋಪ್ ನೀರಿನಲ್ಲಿ ಹಾಕಿ ನೆಲವನ್ನು ಉಜ್ಜಬೇಕು. ನಂತರ ಶುದ್ಧವಾದ ನೀರಿನಿಂದ ತೊಳೆದರೆ ನೆಲ ತುಂಬಾ ಹೊಳಪನ್ನು ಪಡೆಯುತ್ತದೆ. ಈ ರೀತಿ ತಿಂಗಳಿಗೆ ಎರಡು ಬಾರಿಯಾದರೂ ಮಾಡಬೇಕು. ಆಗ ಟೈಲ್ಸ್ ತನ್ನ ತುಂಬಾ ಶುಚಿಯಾಗಿ ಕಾಣುವುದು.
4. ಆಸಿಡ್ ಕ್ಲೀನಿಂಗ್: ನೆಲ ಶುಚಿಗೆ ಆಸಿಡ್ ಬಳಸುವುದಾದರೆ ಬಳಸುವ ವಿಧಾನದ ಬಗ್ಗೆ ತಿಳಿದಿರಬೇಕು. ಇಲ್ಲದಿದ್ದರೆ ನೆಲ ಹಾಳಾಗುವುದು. ಒಂದು ದೊಡ್ಡ ಬಕೆಟ್ ನೀರಿಗೆ 1/2 ಕಪ್ ಆಸಿಡ್ ಹಾಕಿದರೂ ಸಾಕು. ಕ್ಲೀನ್ ಮಾಡಲು ದುರ್ಬಲ ಆಮ್ಲ ಬಳಸುವುದು ಒಳ್ಳೆಯದು.
5. ಬ್ರಷ್: ನೆಲ ತಿಕ್ಕಲು ಸಿಂಥೆಟಿಕ್ ಫೈಬರ್ ಬ್ರಷ್ ಬಳಸುವುದು ಒಳ್ಳೆಯದು.



Click it and Unblock the Notifications
