Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ತುಕ್ಕು ಹಿಡಿಯುವುದನ್ನು ತಡೆಯುವುದು ಸುಲಭ

ಚಾಕು ಅಥವಾ ಇನ್ನಿತರ ವಸ್ತುವಿನ ತುಕ್ಕು ಹೋಗಿಸುವ ವಿಧಾನ:
1. ತುಕ್ಕು ಹೋಗಿಸುವ ಪರಿಣಾಮಕಾರಿ ವಿಧಾನವೆಂದರೆ ಆಲೂಗಡ್ಡೆಯನ್ನು ಕತ್ತರಿಸಿ ಆಲೂಗಡ್ಡೆ ರಸವನ್ನು ಪೂರ್ಣ ಸವರಿ ರಾತ್ರಿಯಿಡೀ ಬಿಟ್ಟು ಬೆಳಗ್ಗೆ ಬೆಚ್ಚಗಿನ ನೀರಿನಿಂದ ತೊಳೆದು ಒರೆಸಬೇಕು.
2. ಈರುಳ್ಳಿಯಿಂದ ಚಾಕು ಅಥವಾ ಕತ್ತರಿಯನ್ನು ಉಜ್ಜಿದರೆ ಈರುಳ್ಳಿ ಮೇಲೆ ತುಕ್ಕು ಕೆಂಪು ರಸದ ಮೂಲಕ ಕಾಣಿಸಿಕೊಳ್ಳುತ್ತದೆ. ಈರುಳ್ಳಿಯಲ್ಲಿರುವ ಆಸಿಡ್ ನಿಂದ ತುಕ್ಕು ಬೇಗನೆ ಹೋಗುತ್ತದೆ.
3. ಕೊಬ್ಬರಿ ಎಣ್ಣೆಯನ್ನೂ ತುಕ್ಕು ಹೋಗಿಸಲು ಬಳಸಬಹುದು. 45-60 ನಿಮಿಷ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಬಿಡಬೇಕು. ನಂತರ ಬಿಸಿ ನೀರಿನಿಂದ ತೊಳೆದು ಒಣಗಿಸಬೇಕು.
4. ಬಿಳಿ ವಿನೆಗರ್ ತುಕ್ಕನ್ನು ಹೋಗಿಸುವಲ್ಲಿ ಹೆಚ್ಚು ಪರಿಣಾಮಕಾರಿ. ತುಕ್ಕನ್ನು ಶಾಶ್ವತವಾಗಿ ಹೋಗಿಸಲೂ ಬಿಳಿ ವಿನೆಗರ್ ಬಳಸಬಹುದು.
5. ವೈಟ್ ವಿನೆಗರ್ ನಲ್ಲಿ ಸ್ವಲ್ಪ ಕಾಟನ್ ಬಟ್ಟೆಯನ್ನು ಅದ್ದಿ ಚಾಕುವಿನ ತುದಿಯನ್ನು ಜಾಗರೂಕತೆಯಿಂದ ಉಜ್ಜಬೇಕು. ಇದರಿಂದ ತುಕ್ಕು ಹಿಡಿದಿರುವುದು ಬೇಗನೆ ಹೋಗುತ್ತದೆ.
6. ವೈಟ್ ವಿನೆಗರ್ ನಲ್ಲಿ ಅದ್ದಿದ ಬಟ್ಟೆಯಲ್ಲಿ ಚಾಕು ಅಥವಾ ಕತ್ತರಿಯನ್ನು ಸುತ್ತಿಟ್ಟು ಒಂದು ರಾತ್ರಿ ಬಿಡಬೇಕು. ಬೆಳಗ್ಗೆ ಬೆಚ್ಚಗಿನ ನೀರಿನಂದ ತೊಳೆದು ತಕ್ಷಣವೇ ಒರೆಸಿದರೆ ತುಕ್ಕು ಬೇಗನೆ ಹೋಗುತ್ತದೆ.
7. ವ್ಯಾಸೆಲಿನ್ ಹಚ್ಚಿದರೂ ಕೂಡ ತುಕ್ಕನ್ನು ಹೋಗಲಾಡಿಸಬಹುದು.
ಯಾವಾಗಲೂ ಲೋಹದ ವಸ್ತುಗಳನ್ನು ನೀರು ಬೀಳದಂತೆ ನೋಡಿಕೊಳ್ಳಬೇಕು. ಬಿದ್ದರೂ ತಕ್ಷಣವೇ ಒಣಗಿಸಬೇಕು. ತುಕ್ಕು ಹೋಗಿಸುವ ಮೇಲಿನ ವಿಧಾನವನ್ನು ಅನುಸರಿಸಿದ ನಂತರ ಲೋಹದ ವಸ್ತುಗಳನ್ನು ಸಂಪೂರ್ಣವಾಗಿ ಒಣಗಲು ಅವಕಾಶ ನೀಡಬೇಕು. ಇಲ್ಲವೆಂದರೆ ಮತ್ತೆ ತುಕ್ಕು ಹಿಡಿಯುತ್ತದೆ.



Click it and Unblock the Notifications
