Latest Updates
-
ವಿಶ್ವ ಹೃದಯ ದಿನಕ್ಕೆ ರೆಡಿಯಾಗಿ: 20 ನಿಮಿಷದ ಈ ಸಿಂಪಲ್ ವರ್ಕೌಟ್ ನಿಮ್ಮ ಸ್ಟ್ಯಾಮಿನಾ ಹೆಚ್ಚಿಸುತ್ತೆ! -
ಮ್ಯಾಟ್ರಿಮೋನಿ ಆಪ್ಗಳಲ್ಲಿ ಆಧಾರ್ ಪರಿಶೀಲನೆ: ನಕಲಿ ಪ್ರೊಫೈಲ್ಗಳಿಗೆ ಇನ್ನು ಬ್ರೇಕ್? -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸುರಕ್ಷಿತವಾಗಿಡಲು ತಕ್ಷಣವೇ ಈ ಕೆಲಸ ಮಾಡಿ -
ಹಬ್ಬದ ಸೀಸನ್: ನಿಮ್ಮ ಅಡುಗೆಮನೆಯಲ್ಲಿ ವಿಷವಿದೆಯೇ? ಮಹಾರಾಷ್ಟ್ರ ಎಫ್ಡಿಎ ದಾಳಿಯ ನಂತರ ಎಚ್ಚರ! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ಆಫರ್ ಮಳೆಯಲ್ಲಿ ಸಿಲುಕುವ ಮುನ್ನ ಈ 5 ಟಿಪ್ಸ್ ಮಿಸ್ ಮಾಡ್ಬೇಡಿ! -
10 ನಿಮಿಷದ ದೇಸಿ ಬಾಡಿವೇಟ್ ಚಾಲೆಂಜ್: ಜಿಮ್ ಇಲ್ಲದೆ ಫಿಟ್ ಆಗಲು ಈ ವರ್ಕೌಟ್ ಟ್ರೈ ಮಾಡಿ! -
ಮದುವೆ ಅವಧಿ ಕಡಿಮೆಯಿದ್ದರೂ ₹50 ಲಕ್ಷ ಜೀವನಾಂಶ: ಹೈಕೋರ್ಟ್ ತೀರ್ಪಿನಿಂದ ಪತಿಗಳಿಗೆ ಎಚ್ಚರಿಕೆ! -
ಗಣೇಶ ವಿಸರ್ಜನೆಗೆ ರೆಡಿಯಾಗಿದ್ದೀರಾ? ಅಪಾರ್ಟ್ಮೆಂಟ್ ನಿವಾಸಿಗಳಿಗಾಗಿ ಇಲ್ಲಿದೆ ಸ್ಮಾರ್ಟ್ ಟಿಪ್ಸ್ ಮತ್ತು ಪಾಲಿಕೆ ಸಹಾಯವಾಣಿ! -
ಹಬ್ಬದ ಸೀಸನ್ನಲ್ಲಿ ಎಚ್ಚರ! ದೆಹಲಿಯಲ್ಲಿ ಕಲಬೆರಕೆ ಸ್ವೀಟ್ಸ್ ದಾಳಿ: 30 ಸೆಕೆಂಡ್ಗಳಲ್ಲಿ ಪರೀಕ್ಷಿಸುವುದು ಹೇಗೆ? -
ಸೆಪ್ಟೆಂಬರ್ 25 ಗಣೇಶ ವಿಸರ್ಜನೆ: ಮುಂಬೈ, ಪುಣೆ, ಹೈದರಾಬಾದ್ನಲ್ಲಿ ಟ್ರಾಫಿಕ್ ರೂಟ್ ಬದಲಾವಣೆ, ಪರ್ಯಾಯ ಮಾರ್ಗಗಳ ಮಾಹಿತಿ ಇಲ್ಲಿದೆ!
ಅಕ್ವೇರಿಯಂ ಕ್ಲೀನ್ ಮಾಡೋದು ಕಷ್ಟವೇನಲ್ಲ

ಅಷ್ಟೇ ಅಲ್ಲ ಇದರ ನಿರ್ವಹಣೆ ಕಷ್ಟ ಅಂತಲೇ ಮನೆಗೆ ಫಿಶ್ ಟ್ಯಾಂಕ್ ತರದವರೂ ಇದ್ದಾರೆ. ಮೀನುಗಳು ಗಲೀಜು ವಾತಾವರಣದಲ್ಲಿ ಇರಲು ಸಾಧ್ಯವಾಗದೆ ಸಾಯುತ್ತೆ. ಆದ್ದರಿಂದ ಫಿಶ್ ಟ್ಯಾಂಕ್ ತೊಳೆಯುವ ಕೆಲವು ಸಿಂಪಲ್ ಸಲಹೆಗಳನ್ನು ನೀಡಲಾಗಿದೆ.
ಫಿಶ್ ಟ್ಯಾಂಕ್ ಶುದ್ಧಗೊಳಿಸುವ ವಿಧಾನ:
1. ಕೇವಲ ನೀರನ್ನು ಹೊರಗೆ ಸುರಿದರೆ ಫಿಶ್ ಟ್ಯಾಂಕ್ ಶುದ್ಧತೆ ಕೆಲಸ ಮುಗಿದಿದೆ ಎಂದಲ್ಲ. ಇದರಿಂದ ಮೀನುಗಳಿಗೆ ತೊಂದರೆಯೂ ಇದೆ. ಯಾವಾಗಲೂ ನೀರನ್ನು ಚೆಲ್ಲುತ್ತಿದ್ದರೆ ನೀರಿನಲ್ಲಿರುವ ಒಳ್ಳೆ ಬ್ಯಾಕ್ಟೀರಿಯಾ ಅಥವಾ ನೀರನ್ನು ಶುದ್ಧಗೊಳಿಸುವ ಬ್ಯಾಕ್ಟೀರಿಯಾ ಇಲ್ಲದಂತಾಗುತ್ತದೆ.
2. ನೀರನ್ನು ಆಗಾಗ್ಗೆ ಬದಲಿಸುವುದರಿಂದ ಅದರಲ್ಲಿ ಕ್ಲೋರಿನ್ ಮತ್ತು ಕೆಮಿಕಲ್ ಹೆಚ್ಚಾಗಿ ಮೀನುಗಳು ಸಾಯುವ ಸಾಧ್ಯತೆ ಜಾಸ್ತಿ. ಇದು ಕೊಳೆ ನೀರಿಗಿಂತ ಅಪಾಯಕಾರಿ. ಆದ್ದರಿಂದ ಆಗಾಗ್ಗೆ ನೀರನ್ನು ಬದಲಿಸುವ ಬದಲು ಇರುವ ನೀರನ್ನೇ ಶುದ್ಧವಿಟ್ಟುಕೊಳ್ಳುವ ರೀತಿಯನ್ನು ಅನುಸರಿಸಿ.
3. ಮೊದಲು ಮೀನನ್ನು ನೀರಿನಿಂದ ಹೊರತೆಗೆದು ಇನ್ನೊಂದು ಬಕೆಟ್ ನಲ್ಲಿ ಬಿಡಬೇಕು. ಪಾಚಿ ತೆಗೆಯಲು ಇರುವ ಪ್ಯಾಡ್ ನಿಂದ ಫಿಶ್ ಟ್ಯಾಂಕ್ ಶುದ್ಧಗೊಳಿಸಬಹುದು.
4. ಫಿಶ್ ಟ್ಯಾಂಕ್ ನಲ್ಲಿರಿಸಿದ ಕಲ್ಲು ಮತ್ತು ಇನ್ನಿತರ ವಸ್ತುಗಳನ್ನು ಹೊರತೆಗೆಯಬೇಕು. ಅದರಲ್ಲೇ ಎಲ್ಲ ಉಳಿದ ಆಹಾರ ಮತ್ತು ಮೀನಿನ ಗಲೀಜು ಹೆಚ್ಚುಸೇರಿಕೊಂಡಿರುತ್ತದೆ. ಇದನ್ನು ಜೋರಾಗಿ ಹರಿಯುವ ನೀರಿನಡಿಯಲ್ಲಿಟ್ಟು ಚೆನ್ನಾಗಿ ಎಲ್ಲ ಪಾಚಿಯೂ ಹೋಗುವಂತೆ ತೊಳೆಯಬೇಕು.
5. ಇದಾದ ನಂತರ ಶೆಲ್, ಪೈಪ್ ಮತ್ತು ಇನ್ನಿತರ ಅಲಂಕಾರಿಕ ವಸ್ತುಗಳನ್ನು ಶುದ್ಧಗೊಳಿಸಿ. ಮೀನಿನ ಟ್ಯಾಂಕಿಗೆ ಹೆಚ್ಚು ಬಣ್ಣ ಬಣ್ಣದ ಅಲಂಕಾರಿಕ ವಸ್ತುಗಳನ್ನು ಇಡಬಾರದು. ಇದು ಮೀನಿಗೆ ಹಾನಿಕಾರಕವಾಗಬಹುದು.
6. ಈಗ ಫಿಶ್ ಟ್ಯಾಂಕನ್ನು ಬೆಚ್ಚಗಿನ ನೀರಿನಲ್ಲಿ ಒಮ್ಮೆ ತೊಳೆದು ಪ್ಯಾಂಡ್ ನಿಂದ ಸುತ್ತಲೂ ಉಜ್ಜಿ ನಂತರವೂ ಬಿಸಿ ನೀರಿನಿಂದ ತೊಳೆಯಬೇಕು.
7. ಅಕ್ವೇರಿಯಂ ಶುದ್ಧಗೊಳಿಸುವಾಗ ಯಾವಾಗಲೂ ಕಡಿಮೆ ಸಾಂದ್ರತೆಯ ಕ್ರಿಮಿ ನಾಶಕ ಬಳಕೆ ಮಾಡಬೇಕು. ಗಾಜಿನ ಸಂದಿಯನ್ನೂ ಚೆನ್ನಾಗಿ ತೊಳೆಯಬೇಕು. ಇಲ್ಲವೆಂದರೆ ಒರೆಸಿಕೊಳ್ಳಲೂಬಹುದು.
8. ಅಕ್ವೇರಿಯಂ ಗಾಜುಗಳಲ್ಲಿ ಬಿಳಿ ಗೆರೆಗಳು ಹಾಗೇ ಉಳಿದುಕೊಂಡಿದ್ದರೆ ಅದನ್ನು ತೆಗೆಯಲು ಬ್ಲೇಡನ್ನು ಬಳಸಬಹುದು. ಬ್ಲೇಡ್ ನಿಂದ ನಯವಾಗಿ ಉಜ್ಜಿದರೆ ಒಳ್ಳೆಯದು. ಗ್ಲಾಸ್ ಚೆನ್ನಾಗಿ ಕಾಣಬೇಕೆಂದಿದ್ದರೆ ಗ್ಲಾಸ್ ಶೈನರ್ ಬಳಸಬಹುದು. ಆದರೆ ಇದನ್ನು ಹೊರಗೆ ಮಾತ್ರ ಬಳಸಬೇಕು. ಒಳಗೆ ಹಾಕಿದರೆ ಮೀನಿಗೆ ತೊಂದರೆಯಾಗಬಹುದು.



Click it and Unblock the Notifications
