Latest Updates
-
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ!
ಚೆಂದದ ಬ್ಯಾಗು ಬಾಳಿಕೆ ಬರಲು ಏನು ಮಾಡಬೇಕು?

ದುಬಾರಿ ಬೆಲೆಯನ್ನು ತೆತ್ತು ತರುವ ಈ ಬ್ಯಾಗುಗಳನ್ನು ಸರಿಯಾದ ರೀತಿಯಲ್ಲಿ ನಿರ್ವಹಿಸಿದರೆ ತುಂಬಾ ಕಾಲ ಬಾಳಿಕೆ ಬರುತ್ತದೆ.ಆದ್ದರಿಂದ ಈ ಕೆಳಗಿನ ಸಲಹೆಗಳನ್ನು ಪಾಲಿಸಿದರೆ ಬ್ಯಾಗುಗಳು ಹೆಚ್ಚಿನ ಕಾಲ ಬಾಳಿಕೆ ಬರುವಂತೆ ಮಾಡಬಹುದಾಗಿದೆ.
1. ಬ್ಯಾಗಿನಲ್ಲಿರುವ ಎಲ್ಲಾ ವಸ್ತುಗಳನ್ನು ತೆಗೆದು ಬ್ಯಾಗುಗಳನ್ನು ತೊಳೆಯಬಹುದು, ಫ್ಯಾಬ್ರಿಕ್ ಬ್ಯಾಗುಗಳನ್ನು ಬೇಕಾದರೆ ಮೃದು ಸೋಪು ಬಳಸಿ ತೊಳೆದು ಒಣಗಿಸಬಹುದಾಗಿದೆ.
2. ಒಂದು ವೇಳೆ ಬ್ಯಾಗು ಫ್ಯಾಬ್ರಿಕ್ ಅಲ್ಲದಿದ್ದರೆ ವ್ಯಾಕ್ಯೂಮ್ ಕ್ಲೀನರ್ ನಲ್ಲಿ ಸಹ ಶುದ್ಧ ಪಡಿಸಬಹುದಾಗಿದೆ. ಹೀಗೆ ಶುದ್ಧ ಮಾಡುವಾಗ ಎಲ್ಲಾ ಜಿಪ್ ಗಳನ್ನು ಶುದ್ಧ ಪಡಿಸ ಬೇಕು.
3. ಚರ್ಮದ ಬ್ಯಾಗುಗಳನ್ನು ಹತ್ತಿ ಬಟ್ಟೆಯನ್ನು ನೆನಸಿ ಅದರಿಂದ ಉಜ್ಜಿ ಒಣಗಿಸಬೇಕು.
4. ಸ್ಯೂಡ್ ಬ್ಯಾಗುಗಳಿಗೆ ಸ್ಯೂಡ್ ಕ್ಲೀನರ್ ಗಳನ್ನು ಬಳಸಿ ಶುಚಿಗೊಳಿಸಬಹುದು.
5. ವೆಲ್ವೆಟ್ ಮತ್ತು ಸಿಲ್ಕ್ ಬ್ಯಾಗುಗಳನ್ನು ಡ್ರೈ ವಾಸ್ ಗೆ ಕೊಡಬಹುದಾಗಿದೆ.
6. ಬ್ಯಾಗಿನಲ್ಲಿ ದೂಳು ತುಂಬಿದರೆ ಅದನ್ನು ಒಳಗೆ, ಹೊರಗೆ ಮಡಚಿ ಹಳೆಯ ಹಲ್ಲು ಉಜ್ಜುವ ಬ್ರೆಷ್ ಬಳಸಿ ತೆಗೆಯಬಹುದಾಗಿದೆ.
7. ಬ್ಯಾಗಿನಲ್ಲಿ ಚಿಲ್ಲರೆ ಹಣವನ್ನು ನೇರವಾಗಿ ಹಾಕುವುದರ ಬದಲು ಅದಕ್ಕಾಗಿ ಚಿಕ್ಕ ಚೀಲ ಮಾಡಿ ನಂತರ ಅದನ್ನು ಬ್ಯಾಗಿನಲ್ಲಿ ಹಾಕಿ.
8. ಹಣವನ್ನು ನೇರವಾಗಿ ಬ್ಯಾಗಿನಲ್ಲಿ ಇಡದೆ ಅದನ್ನು ಪರ್ಸ್ ನಲ್ಲಿ ಇಟ್ಟು ನಂತರ ಇಡಬೇಕು.
9. ಗಂಧದ ಪುಡಿ ಅಥವಾ ಲ್ಯಾವೆಂಡರ್ ಪುಡಿಯನ್ನು ಬ್ಯಾಗ್ ನಲ್ಲಿ ಇಡುವುದರಿಂದ ಬ್ಯಾಗಿನಿಂದ ಕೆಟ್ಟವಾಸನೆ ಬರುವುದಿಲ್ಲ.
10. ಬಳಕೆ ಮಾಡದಿದ್ದ ಬ್ಯಾಗುಗಳನ್ನು ಒಂದು ಪೇಪರ್ ನಲ್ಲಿ ಸುತ್ತಿ ತೆಗೆದು ಇಡಬೇಕು.
ಈ ರೀತಿ ಮಾಡಿ ಬ್ಯಾಗುಗಳನ್ನು ಸ್ಟೈಲಿಷ್ ಆಗಿ ಇಡಬಹುದಾಗಿದೆ.



Click it and Unblock the Notifications
