Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಟ್ಟೆ ಬಣ್ಣ ಮಾಸದಂತೆ ತಡೆಯುವುದು ಹೇಗೆ?

ಆದರೆ ಇವುಗಳ ನಿರ್ವಹಣೆಯನ್ನು ಸರಿಯಾಗಿ ಮಾಡಿದರೆ ಈ ಬಟ್ಟೆಗಳ ಬಣ್ಣವನ್ನು ಉಳಿಸಿ ಇದರ ಬಣ್ಣ ಇನ್ನಿತರ ಬಟ್ಟೆಗಳಿಗೆ ಸೋಕುವುದನ್ನೂ ತಡೆಯಬಹುದು. ಅದು ಹೇಗೆ ಎಂದು ಇಲ್ಲಿ ತಿಳಿದುಕೊಳ್ಳಿ.
ಬಣ್ಣದ ಬಟ್ಟೆಗಳನ್ನು ನಿರ್ವಹಣೆ ಮಾಡುವುದು ಹೇಗೆ?
1. ಬಣ್ಣ ಹೋಗುವ ಬಟ್ಟೆಗಳೊಂದಿಗೆ ಬಿಳಿ ಮತ್ತು ಇನ್ನಿತರ ತಿಳಿ ಬಣ್ಣದ ಬಟ್ಟೆಗಳನ್ನು ನೆನೆಹಾಕಬೇಡಿ. ಇದರಿಂದ ಬೇರೆ ಬಟ್ಟೆಗಳಿಗೂ ಬಣ್ಣ ತಗುಲುವುದು ತಪ್ಪುತ್ತದೆ. ಕಾಟನ್ ಬಟ್ಟೆಯನ್ನು ಮೊದಲ ಬಾರಿ ಒಗೆಯುತ್ತಿದ್ದರೆ ಅದನ್ನು ನೀರು, ಕಲ್ಲುಪ್ಪು ಮತ್ತು ಸ್ವಲ್ಪ ಸೋಡಾದೊಂದಿಗೆ ನೆನೆಹಾಕಿದರೆ ಬಣ್ಣ ಹರಡುವುದಿಲ್ಲ.
2. ಬಣ್ಣ ಹೋಗುವ ಬಟ್ಟೆಯನ್ನು ಹೆಚ್ಚು ಕಾಲ ನೆನೆಸಬಾರದು. ಇದರಿಂದ ಬಣ್ಣ ಹೆಚ್ಚಾಗಿ ಹೋಗಲು ಅವಕಾಶ ಮಾಡಿಕೊಟ್ಟಂತಾಗುತ್ತದೆ. ಇಂತಹ ಬಟ್ಟೆಗಳಿಗೆ ಬ್ರಶ್ ಬಳಸಬಾರದು. ತಣ್ಣಗಿನ ನೀರಿನಲ್ಲಿ ಕೈಯ್ಯಲ್ಲೇ ಉಜ್ಜಿ ನೆರಳಿನಲ್ಲಿ ಒಣಗಿಸಬೇಕು.
3. ಈ ರೀತಿ ಬಣ್ಣ ಹೋಗುವ ಬಟ್ಟೆಗಳನ್ನು ಮೆಶಿನ್ ನಲ್ಲಿ ಒಗೆಯಬೇಕೆಂದಿದ್ದರೆ, ಗಾಢ ಬಣ್ಣದ ಬಟ್ಟೆಗಳು, ಒಂದೇ ಬಣ್ಣದ ಬಟ್ಟೆಗಳನ್ನು (ಕಪ್ಪು, ಗಾಢ ಕಂದು, ಮರೂನ್ ಮುಂತಾದುವು) ಒಟ್ಟಿಗೆ ಹಾಕಿ. ಇದರಿಂದ ಬಣ್ಣ ಹೋದರೂ ಗೋಚರಿಸುವುದಿಲ್ಲ.
4. ಬಟ್ಟೆಗಳನ್ನು ಒಗೆದ ನಂತರ ನೆರಳಿರುವ ಜಾಗದಲ್ಲಿ ಒಣಗಿಸಿ. ಇದರಿಂದ ಬಟ್ಟೆ ಬಣ್ಣ ಮಾಸುವುದಿಲ್ಲ.
5. ಒಗೆದ ಬಟ್ಟೆಗಳನ್ನು ತುಂಬಾ ಹಿಂಡಬೇಡಿ. ಇದರಿಂದ ಬಟ್ಟೆಯಲ್ಲಿ ಗೆರೆ ಮೂಡಿ ಹಳೆಯದಂತೆ ಕಾಣುತ್ತದೆ. ಚೆನ್ನಾಗಿ ಒದರಿದ ನಂತರ ಸರಿಯಾಗಿ ಒಣಹಾಕಬೇಕು.



Click it and Unblock the Notifications
