Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಬಟ್ಟೆ ಮೇಲಿನ ಮಣ್ಣಿನ ಕಲೆ ಹೋಗಿಸುವುದು ಹೇಗೆ?

ಬಟ್ಟೆಯ ಮೇಲಿನ ಮಣ್ಣಿನ ಕಲೆ ಹೋಗಿಸುವುದು ಹೇಗೆ?
1. ಮಣ್ಣಿನ ಕಲೆಯಾದರೆ ಅದು ತೇವವಿದ್ದಾಗಲೇ ಒರೆಸಬಾರದು. ಇದರಿಂದ ಕಲೆ ಇನ್ನಷ್ಟು ಹರಡುತ್ತದೆ. ಅದನ್ನು ಪ್ರತ್ಯೇಕವಾಗಿ ಒಣಹಾಕಿ ಅದು ಒಣಗಿದ ನಂತರ ಒರೆಸಬೇಕು.
2. ಕಲೆಯಾದ ಬಟ್ಟೆ ಒಣಗಿದ ನಂತರ ಹಾಗೆಯೇ ಒಗೆಯಲು ನೆನೆಹಾಕಬಾರದು. ಬ್ರಶ್ ಸಹಾಯದಿಂದ ಬಟ್ಟೆಗೆ ಮೆತ್ತಿಕೊಂಡ ಮಣ್ಣನ್ನು ಮೊದಲು ಉದುರಿಸಬೇಕು.
3. ಬೆಚ್ಚಗಿನ ನೀರಿಗೆ ವಾಷಿಂಗ್ ಪೌಡರ್ ಬೆರೆಸಿ 20 ನಿಮಿಷ ನೆನೆಸಬೇಕು. ಮೊದಲು ಬಟ್ಟೆ ಮೇಲಿನ ಲೇಬಲ್ ಪರೀಕ್ಷಿಸಬೇಕು. ಕೆಲವು ಬಟ್ಟೆಯನ್ನು ಬಿಸಿ ನೀರಿನಲ್ಲಿ ಒಗೆಯಬಾರದೆಂಬ ಸೂಚನೆಯಿರುತ್ತದೆ. ಈ ವಿಧಾನದಿಂದ ಮಣ್ಣಿನ ಕಲೆಯನ್ನು ಬೇಗ ತೆಗೆಯಬಹುದು.
4. ನಿಂಬೆಹಣ್ಣಿನ ಹೋಳಿನಿಂದ ಮಣ್ಣಿನ ಕಲೆಯಾದ ಜಾಗದ ಮೇಲೆ ಉಜ್ಜಿದರೆ ಕಲೆ ಬೇಗನೆ ಬಿಡುತ್ತದೆ.
5. ಬಟ್ಟೆ ನೆನೆಸುವ ನೀರಿನೊಂದಿಗೆ ಅಡುಗೆ ಸೋಡಾ ಬೆರೆಸಿದರೆ ಕಲೆಯನ್ನು ಇನ್ನೂ ಸುಲಭವಾಗಿ ಹೋಗಿಸಬಹುದು.
6. ಜೀನ್ಸ್ ಮೇಲೆ ಕಲೆ ಆಗಿದ್ದರೆ ನೀರಿನಲ್ಲಿ ನೆನೆಸಿದ ನಂತರ ಡಿಟರ್ಜೆಂಟ್ ಅಥವಾ ಸೋಪನ್ನು ಹಾಕಿ ಬ್ರಶ್ ನಿಂದ ಅದರ ಮೇಲೆ ಮೃದುವಾಗಿ ಉಜ್ಜಬೇಕು. ಆಗ ಕಲೆ ಹೋಗುತ್ತದೆ.
7. ಕಲೆಯನ್ನು ಹೋಗಿಸಲು ನಿಂಬೆರಸದೊಂದಿಗೆ ಉಪ್ಪನ್ನು ಬೆರೆಸಿಯೂ ಉಜ್ಜಬಹುದು ಅಥವಾ ನೀರಿನಿಂದ ಕೊಳೆಯನ್ನು ತೊಳೆದ ನಂತರ ವಿನೆಗರ್ ನಿಂದ ತೊಳೆದು ಒಣಗಿಸಿದರೆ ಕಲೆ ಕಾಣುವುದಿಲ್ಲ.



Click it and Unblock the Notifications
