Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಟ್ಟೆ ಮೇಲಿನ ಕೆಟ್ಟ ಕಲೆಗೆ ಇಲ್ಲಿದೆ ಸಲಹೆ

ಬಟ್ಟೆ ಮೇಲೆ ನೈಲ್ ಪಾಲಿಶ್ ಮತ್ತು ಲಿಪ್ ಸ್ಟಿಕ್ ಕಲೆಯಾದರೆ ಹೀಗೆ ಮಾಡಿ:
1. ಕಲೆಯಾದ ಬಟ್ಟೆಯನ್ನು ಒಗೆಯುವ ಮುನ್ನ ಅದರ ಮೇಲೆ ನೀಡಿರುವ ಲೇಬಲ್ ಪರೀಕ್ಷಿಸಿ. ಕೆಲವೊಂದು ಬಟ್ಟೆಗಳು ಡ್ರೈ ವಾಶ್ ಮಾತ್ರದ್ದಾಗಿರುತ್ತದೆ.
2. ಬಟ್ಟೆಯಿಂದ ನೈಲ್ ಪಾಲಿಶ್ ಕಲೆ ಹೋಗಬೇಕೆಂದರೆ ಏಸ್ಟೋನ್ ಹೊಂದಿರುವ ನೈಲ್ ಪಾಲಿಶ್ ರಿಮೂವರ್ ಉಪಯೋಗಿಸಬಹುದು. ಕಲೆಯಾದ ಬಟ್ಟೆ ಕೆಳಗೆ ಬಿಳಿ ಬಟ್ಟೆ ಹಾಕಿ ಹತ್ತಿಯನ್ನು ರಿಮೂವರ್ ನಲ್ಲಿ ಅದ್ದಿ ಕಲೆಯಾದ ಜಾಗವನ್ನು ಉಜ್ಜಬೇಕು. ಕಲೆಯನ್ನು ಟವಲ್ ಹೀರಿಕೊಳ್ಳುವವರೆಗೂ ಮೃದುವಾಗಿ ಉಜ್ಜಬೇಕು.
3. ರಿಮೂವರ್ ನಿಂದ ಕಲೆ ಹೋಗದಿದ್ದರೆ, ರಬ್ಬಿಂಗ್ ಆಲ್ಕೊಹಾಲ್ ನಲ್ಲಿ ಹತ್ತಿ ಅದ್ದಿ ಕಲೆಯ ಮೇಲೆ ಉಜ್ಜಬೇಕು. ಬಟ್ಟೆ ಬಣ್ಣ ಬಿಳಿ ಅಥವಾ ತಿಳಿ ಬಣ್ಣದ್ದಾಗಿದ್ದರೆ, ಅದಕ್ಕೆ ಹೈಡ್ರೋಜೆನ್ ಪೆರಾಕ್ಸೈಡ್ ಬಳಸಿ ಉಳಿದ ಕಲೆಯನ್ನು ತೊಲಗಿಸಬಹುದು.
4. ಬಟ್ಟೆ ಮೇಲೆ ಲಿಪ್ ಸ್ಟಿಕ್ ಕಲೆಯಾಗಿದ್ದರೆ, ಅದಕ್ಕೂ ರಬ್ಬಿಂಗ್ ಆಲ್ಕೊಹಾಲ್ ಬಳಸಬಹುದು. ಶುದ್ಧಗೊಳಿಸುವಾಗ ಯಾವಾಗಲೂ ಬಿಳಿ ಬಟ್ಟೆಯನ್ನೇ ಉಪಯೋಗಿಸಿ. ಇದರಿಂದ ಬಟ್ಟೆಗೆ ಬಣ್ಣ ತಗುಲುವುದು ತಪ್ಪುತ್ತದೆ.
5. ಡಿಟರ್ಜೆಂಟ್ ನಿಂದಲೂ ಲಿಪ್ ಸ್ಟಿಕ್ ಮತ್ತು ನೇಲ್ ಪಾಲಿಶ್ ಕಲೆ ಹೋಗಿಸಬಹುದು. ಬಿಸಿ ನೀರಿನಲ್ಲಿ 10-15 ನಿಮಿಷ ಬಟ್ಟೆ ನೆನೆಸಿ ನಂತರ ಡಿಟರ್ಜೆಂಟನ್ನು ಕಲೆಯಾದ ಜಾಗಕ್ಕೆ ಉಜ್ಜಬೇಕು. 3-4 ನಿಮಿಷ ಬಿಟ್ಟು ತೊಳೆಯಬೇಕು. ನೀರಿಗೆ ವಿನಿಗರ್ ಬೆರೆಸಿದರೂ ಕಲೆ ಬೇಗ ಹೋಗುತ್ತೆ.
6. ನೀರು, ವಿನೆಗರ್ ಮತ್ತು ಅಡುಗೆ ಸೋಡಾ ಬೆರೆಸಿ 5-8 ನಿಮಿಷ ಈ ಮಿಶ್ರಣದಲ್ಲಿ ಬಟ್ಟೆ ನೆನೆಸಿ ನಂತರ ಒಗೆದರೆ ಕಲೆ ಬೇಗ ಬಿಡುತ್ತದೆ.
7. ಪೆಟ್ರೋಲಿಯಂ ಜೆಲ್ಲಿ ಕಲೆ ತೊಲಗಿಸಲು ಇರುವ ಇನ್ನೊಂದು ಸುಲಭ ಉಪಾಯ. ಕಲೆ ಮೇಲೆ ಪೆಟ್ರೋಲಿಯಂ ಜಲ್ಲಿ ಬಳಸಿ ಉಜ್ಜಿ 15 ನಿಮಿಷ ಹಾಗೆಯೇ ಬಿಟ್ಟು ತೊಳೆಯಬೇಕು.
8. ಶೇವಿಂಗ್ ಕ್ರೀಂ ಅನ್ನು ಸಹ ಕಲೆ ತೆಗೆಯಲು ಉಪಯೋಗಿಸಬಹುದು.
9. ಅಮೊನಿಯಾದೊಂದಿಗೆ ಅಡುಗೆ ಸೋಡಾ ಬೆರೆಸಿ ಉಜ್ಜಿದರೂ ಕಲೆಯಿಂದ ಬೇಗ ಮುಕ್ತಿ ದೊರೆಯುತ್ತದೆ.



Click it and Unblock the Notifications
