Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಲೆದರ್ ಜಾಕೆಟ್ ಹೆಚ್ಚು ಕಾಲ ಬಾಳಿಕೆ ಬರಬೇಕೆ?

ಲೆದರ್ ಜಾಕೆಟ್ ಗಳ ಕ್ಲೀನಿಂಗ್ ಮತ್ತು ನಿರ್ವಹಣೆ ಹೀಗಿರಲಿ:
1. ಲೆದರ್ ಜಾಕೆಟ್ ಗಳನ್ನು ಹ್ಯಾಂಗರ್ ನಲ್ಲಿ ತೂಗಿಟ್ಟರೆ ಸುಕ್ಕಾಗುವುದಿಲ್ಲ. ಈ ಮೂಲಕ ಲೆದರ್ ನಲ್ಲಿ ಬಿರುಕು ಮೂಡುವುದು ತಪ್ಪುತ್ತದೆ. ಆಗಾಗ್ಗೆ ಲೆದರ್ ವಸ್ತುಗಳನ್ನು ಬಿಸಿಲಿನಲ್ಲಿ ಒಣಗಿಸಬೇಕು ಮತ್ತು ತುಂಬಾ ಇಕ್ಕಟ್ಟಿನಲ್ಲಿಡದೆ ಗಾಳಿಯಾಡುವ ಜಾಗದಲ್ಲಿಡಬೇಕು.
2. ಜಾಕೆಟ್ ಗಳನ್ನು ಸ್ವಲ್ಪ ತೇವದ ಬಟ್ಟೆಯಿಂದ ಒರೆಸಿದರೆ ಅಷ್ಟೇ ಸಾಕು. ಅಕಸ್ಮಾತ್ ಬೆವರಿನ ಕಲೆ ಅಧಿಕವಾಗಿದ್ದರೆ ಡ್ರೈ ಕ್ಲೀನ್ ವಾಶ್ ಉತ್ತಮ.
3. ಲೆದರ್ ವಸ್ತುಗಳನ್ನು ಕ್ಲೀನ್ ಮಾಡಲು ಬ್ರಶ್ ಅಥವಾ ನೀರನ್ನು ಉಪಯೋಗಿಸಬೇಡಿ. ಇದರಿಂದ ಬೇಗನೆ ಹರಿದುಹೋಗುವ ಸಾಧ್ಯತೆಯಿದೆ.
4. ಲೆದರ್ ಮೇಲೆ ಕಲೆಯಾದರೆ ಆಲಿವ್ ಎಣ್ಣೆ ಮತ್ತು ನೀರು ಅಥವಾ ವಿನಿಗರ್ ಮತ್ತು ನೀರು ಅಥವಾ ಗಡುಸಲ್ಲದ ಸೋಪಿನ ನೀರಿನಿಂದ ಕಲೆಯಾದ ಜಾಗವನ್ನು ಮಾತ್ರ ಮೃದುವಾಗಿ ಉಜ್ಜಿ, ತಕ್ಷಣವೇ ಪೇಪರ್ ಟವಲ್ ನಿಂದ ಒರೆಸಿ ಒಣಗಿಸಿಬಿಡಬೇಕು.
5. ಐರನ್ ಮಾಡಬೇಕೆಂದರೆ ತುಂಬಾ ಕಡಿಮೆ ಉಷ್ಣಾಂಶದಲ್ಲಿ, ಒಳಗಿನ ಭಾಗವನ್ನು ಮಾತ್ರ ಐರನ್ ಮಾಡಬೇಕು. ಲೆದರ್ ಬಟ್ಟೆ ಮೇಲೆ ಕಾಟನ್ ಬಟ್ಟೆ ಇಟ್ಟು ಐರನ್ ಮಾಡಿದರೆ ತೊಂದರೆಯಾಗುವುದಿಲ್ಲ.
6. ಲೆದರ್ ನಲ್ಲಿ ಬಿರುಕು ಕಾಣಿಸಿಕೊಂಡರೆ ಫ್ಯಾಬ್ರಿಕ್ ಗ್ಲೂ ಬಳಸಬೇಕು. ಲೆದರ್ ಬಟ್ಟೆಗಳಿಗೆಂದೇ ಇರುವ ಲೆದರ್ ಕಂಡೀಶನರ್ ಹೆಚ್ಚು ಬಾಳಿಕೆ ಬರುತ್ತದೆ.
7. ಲೆದರ್ ಬಟ್ಟೆ ಇಡುವ ವಾಡ್ರೋಬ್ ನಲ್ಲಿ ನುಸಿನುಂಡೆ ಮತ್ತು ಇನ್ನಿತರ ಫ್ರೆಶ್ನರ್ ಗಳನ್ನು ಇಡುವುದನ್ನು ಮರೆಯಬೇಡಿ. ಇದರಿಂದ ಲೆದರ್ ಬಟ್ಟೆಗೆ ಮುಸುಕು ವಾಸನೆ ಬರುವುದು ತಪ್ಪುತ್ತದೆ.



Click it and Unblock the Notifications
