Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಬಾಚಣಿಕೆ, ಹೇರ್ ಬ್ರಶ್ ಸುಲಭವಾಗಿ ಕ್ಲೀನ್ ಮಾಡೋದು ಹೇಗೆ?

1. ಬಾಚಣಿಕೆ ಅಥವಾ ಹೇರ್ ಬ್ರಶ್ ಶುದ್ದಗೊಳಿಸುವ ಮುನ್ನ ಅದರಲ್ಲಿ ಸುತ್ತಿಕೊಂಡಿರುವ ಕೂದಲನ್ನು ಒಂದಿಷ್ಟೂ ಬಿಡದೆ ತೆಗೆದುಬಿಡಬೇಕು.
2. ಬಾಚಣಿಕೆಯ ಅನುಸಾರವಾಗಿ ಬಿಸಿ ಅಥವಾ ತಣ್ಣಗಿನ ನೀರಿನಲ್ಲಿ ಬಾಚಣಿಕೆಯನ್ನು ಸ್ವಲ್ಪ ತೇವಗೊಳಿಸಬೇಕು.
3. ಒಂದು ಚಿಕ್ಕ ಟಬ್ ನಲ್ಲಿ ಬೆಚ್ಚಗಿನ ನೀರಿಗೆ ಶಾಂಪೂ ಬೆರೆಸಿ ಅದರಲ್ಲಿ ಬಾಚಣಿಕೆ ಅಥವಾ ಹೇರ್ ಬ್ರಶ್ ಅನ್ನು 10 ನಿಮಷ ನೆನೆಸಿಡಬೇಕು. ಇದು ಬಾಚಣಿಕೆ ಮತ್ತು ಹೇರ್ ಬ್ರಶ್ ಕೊಳೆ ಹೋಗಿಸುವ ಪರಿಣಾಮಕಾರಿ ವಿಧಾನ.
4. ಈಗ ಟೂಥ್ ಬ್ರಶ್ ನಿಂದ ಬಾಚಣಿಕೆಯ ಹಲ್ಲುಗಳ ಮಧ್ಯೆ ವಿರೋಧ ದಿಕ್ಕಿನಲ್ಲಿ ಉಜ್ಜಬೇಕು. ಬಾಚಣಿಕೆಯ ಎರಡೂ ಬದಿಯಲ್ಲೂ ಹೀಗೆ ಮಾಡಬೇಕು.
5. ಹೇರ್ ಬ್ರಶ್ ದುಂಡಗಿರುವುದರಿಂದ ಅದನ್ನು ತೊಳೆಯುವುದು ಸ್ವಲ್ಪ ಕಷ್ಟವೆನಿಸಬಹುದು. ಆದ್ದರಿಂದ ಸಣ್ಣಗಿರುವ ಬ್ರಶ್ ನಿಂದ ಬ್ರಶ್ ನ ಸಂದಿಗಳನ್ನು ನಿಧಾನವಾಗಿ ಉಜ್ಜಬೇಕು.
6. ಬಾಚಣಿಕೆ ಶುದ್ಧಗೊಳಿಸುವಾಗ ಹೆಚ್ಚು ಒತ್ತಡ ಹಾಕಿ ಉಜ್ಜಬೇಡಿ. ಇದರಿಂದ ಬಾಚಣಿಕೆಯ ಹಲ್ಲುಗಳು ಕಿತ್ತುಬರಬಹುದು. ಬ್ರಶ್ ಅಥವಾ ಬಾಚಣಿಕೆಯಲ್ಲಿ ಸ್ವಲ್ಪವೂ ಶಾಂಪೂ ಉಳಿಯದಂತೆ ತೊಳೆದು ಟವಲ್ ನಿಂದ ಒಮ್ಮೆ ಒರೆಸಿ ಅದನ್ನು ಒಣಗಲು ಬಿಡಬೇಕು.
7. ನಿಮ್ಮ ಹೇರ್ ಬ್ರಶ್ ಯಾವಾಗಲೂ ಶುದ್ಧವಾಗಿರಬೇಕೆಂದರೆ ಎರಡು ದಿನಕ್ಕೊಮ್ಮೆ ನೀವು ಮಲಗುವ ಮುನ್ನ ನೀರಿನಲ್ಲಿ 3-4 ನಿಮಿಷ ನೆನೆ ಹಾಕಿ ಮೃದುವಾಗಿ ಉಜ್ಜಿ, ಒಣಗಿಸಿದರೆ ಹೆಚ್ಚು ಶ್ರಮವಿಲ್ಲದೆ ನಿಮ್ಮ ಬಾಚಣಿಕೆ ಶುದ್ಧಗೊಳ್ಳುತ್ತದೆ.



Click it and Unblock the Notifications
