Latest Updates
-
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ
ಕಾರ್ಪೆಟ್ ಕ್ಲೀನ್ ಮಾಡಲು ಕೀ ಇಲ್ಲಿದೆ

ಕಾರ್ಪೆಟ್ ಕ್ಲೀನ್ ಮಾಡೋದು ಬಟ್ಟೆ ಅಥವಾ ಬೆಡ್ ಶೀಟ್ ಒಗೆದಷ್ಟು ಸುಲಭವಲ್ಲ. ಆದ್ದರಿಂದ ಕಾರ್ಪೆಟ್ ಸ್ವಚ್ಛಗೊಳಿಸುವ ವಿಧಾನ ತಿಳಿದುಕೊಂಡರೆ ಕೆಲಸ ಸುಲಭ ಸಾಧ್ಯ.
ಕೊಳಕು ಮಾಡುವ ಮುನ್ನ...
ಕಾರ್ಪೆಟ್ ಗಲೀಜಾಗದಂತೆ ಆದಷ್ಟು ಎಚ್ಚರವಹಿಸಬೇಕು. ಕಾರ್ಪೆಟ್ ದುಬಾರಿಯಾದ ಕಾರಣ ಅದರ ನಿರ್ವಹಣೆಯತ್ತಲೂ ಗಮನ ಹರಿಸಬೇಕು. ಆದಷ್ಟು ಕಾರ್ಪೆಟ್ ಮೇಲೆ ಕೊಳೆ ಕಲೆಗಳು ಆಗದಂತೆ ಮುನ್ನವೇ ಎಚ್ಚರಿಕೆ ವಹಿಸಬೇಕು.
ಕಾರ್ಪೆಟ್ ಮೇಲಿನ ಕಲೆ ಹೋಗಿಸುವುದು ಹೇಗೆ?
* ವ್ಯಾಕ್ಯೂಮ್ ಕ್ಲೀನರ್ ನಿಂದ ಅತಿ ಸುಲಭವಾಗಿ ಕಾರ್ಪೆಟ್ ಶುದ್ದಗೊಳಿಸಬಹುದು. ಆದರೆ ವ್ಯಾಕ್ಯೂಮ್ ಕ್ಲೀನರ್ ಇಲ್ಲವೆಂದಾದರೆ, ಮೆದುವಾದ ಪೊರಕೆಯಲ್ಲಿ ಕಾರ್ಪೆಟ್ ಮೇಲೆ ಗುಡಿಸಿಕೊಳ್ಳಬಹುದು.
1. ಟಿಶ್ಯೂ ಪೇಪರ್: ಕಲೆ ತೊಲಗಿಸಲು ಟಿಶ್ಯು ಪೇಪರ್ ತುಂಬಾ ಉಪಯೋಗಕ್ಕೆ ಬರುತ್ತೆ. ಕಲೆ ಆದ ತಕ್ಷಣ ಅದರ ಮೇಲೆ ದಪ್ಪವಾದ ಟಿಶ್ಯೂ ಪೇಪರ್ ಹಾಕಿ ಎಲ್ಲ ದ್ರವವನ್ನು ಹೀರಿಕೊಳ್ಳುವಂತೆ ಮಾಡಬೇಕು. ಇದು ಕಲೆ ಉಳಿದುಕೊಳ್ಳದಂತೆ ನೋಡಿಕೊಳ್ಳುತ್ತದೆ.
2. ಕಾಫಿ ಕಲೆಗೆ ಬಿಳಿ ವಿನಿಗರ್: ಕಾರ್ಪೆಟ್ ಮೇಲೆ ಕಾಫಿ ಕಲೆಯಾದರೆ ನೋಡಲು ಕಿರಿಕಿರಿ. ಕಾಫಿ ಕಲೆ ತೊಲಗಿಸುವಲ್ಲಿ ವಿನಿಗರ್ ಹೆಚ್ಚು ಸಹಾಯಕ. ಮೊದಲು ಬಿಸಿ ನೀರಿನಲ್ಲಿ ಬಟ್ಟೆ ಅದ್ದಿ ಕಾಫಿ ಬಿದ್ದ ಜಾಗವನ್ನು ಒದ್ದೆ ಮಾಡಬೇಕು. ಕಾರ್ಪೆಟ್ ಸ್ವಲ್ಪ ಬಿಸಿ ಆದಂತೆ ಅನಿಸಿದಾಗ ಬಟ್ಟೆಗೆ ವಿನಿಗರ್ ಸೋಕಿಸಿ ಕಲೆ ಜಾಗವನ್ನು ನಯವಾಗಿ ಒರೆಸಬೇಕು. ಕೊನೆಗೆ ಇನ್ನೊಂದು ಒಣಬಟ್ಟೆಯಲ್ಲಿ ನೆಲವನ್ನು ಒರೆಸಿ ಒಣಗಲು ಬಿಡಬೇಕು.
3. ರಕ್ತದ ಕಲೆಗೆ ತಣ್ಣನೆ ನೀರು: ಕಾರ್ಪೆಟ್ ಮೇಲೆ ರಕ್ತ ಕಲೆಯಾದರೆ ಅದನ್ನು ತೊಲಗಿಸಲು ಐಸ್ ಕ್ಯೂಬ್ ನೀರಿನಲ್ಲಿ ಬಟ್ಟೆ ಅದ್ದಿ ಕಲೆಯಾದ ಜಾಗವನ್ನು ನಯವಾಗಿ ಒರೆಸಿ ಕಾರ್ಪೆಟ್ ಕಲೆ ಹೋಗಲಾಡಿಸಬಹುದು.
ಈ ಸಲಹೆಗಳು ನಿಮ್ಮ ಕಾರ್ಪೆಟ್ ಗಳನ್ನು ಶುದ್ದವಾಗಿಟ್ಟುಕೊಳ್ಳಲು ಹೆಚ್ಚು ಸಹಾಯಕವಾಗಿವೆ. ಆದರೆ ಕಲೆಯಾದ ತಕ್ಷಣವೇ ಅದನ್ನು ಗುರುತಿಸಿದರೆ ಇನ್ನೂ ಒಳ್ಳೆಯದು.



Click it and Unblock the Notifications
