Latest Updates
-
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು!
ಬಾತ್ ರೂಂಗಿಂತ ಅಡುಗೆ ಮನೆಯಲ್ಲೇ ಹೆಚ್ಚು ಕೀಟಾಣು!

ಯಾವಾಗಲೂ ನೀರು ಹರಿದಾಡುವ ಬಾತ್ ರೂಂಗಿಂತ ಆಹಾರ ತಯಾರಿಸುವ ಅಡುಗೆ ಮನೆಯಲ್ಲಿಯೇ ಹೆಚ್ಚು ಕ್ರಿಮಿ ಕೀಟಾಣುಗಳಿರುತ್ತವೆ ಎಂದು ಸಮೀಕ್ಷೆ ತಿಳಿಸಿದೆ. ಅಷ್ಟೇ ಅಲ್ಲದೆ ಇವು ರೋಗರುಜಿನಗಳನ್ನು ಬೇಗ ತಗುಲುವಂತೆ ಮಾಡುತ್ತದೆ ಎಂದೂ ಎಚ್ಚರಿಸಿದೆ.
ಸಮೀಕ್ಷೆಯ ಭಾಗವಾಗಿ ಸುಮಾರು 10,000 ಜನರನ್ನು ಈ ಕುರಿತು ಪ್ರಶ್ನೆಗೆ ಒಳಪಡಿಸಿದಾಗ, ಬಾತ್ ರೂಂ ನಲ್ಲಿಯೇ ಹೆಚ್ಚು ಕ್ರಿಮಿ ಕೀಟಾಣುಗಳಿವೆ ಎಂಬ ಉತ್ತರ ಲಭಿಸಿತ್ತು. ಆದರೆ ಸತ್ಯ ಬೇರೆಯೇ ಆಗಿದೆ ಎಂದು ಸಂಶೋಧನೆ ವರದಿ ಮಾಡಿದೆ.
ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯುವುದರಿಂದ, ಪಾತ್ರೆ ತೊಳೆಯುವ ಸಿಂಕ್ ಅನ್ನು ಸರಿಯಾಗಿ ಶುದ್ಧಗೊಳಿಸದಿರುವುದರಿಂದ, ಅಡುಗೆ ನಂತರ ಜಾಗವನ್ನು ಒಪ್ಪವಾಗಿ ಶುಚಿಗೊಳಿಸದಿರುವುದರಿಂದ ಮತ್ತು ಬೇಡದ ಉಳಿಕೆ ಸಾಮಾನನ್ನು ಅಲ್ಲಲ್ಲಿ ಹಾಗೆಯೇ ಬಿಡುವುದರಿಂದ ಕೀಟಾಣುಗಳು ದುಪ್ಪಟ್ಟಾಗಿ ಆರೋಗ್ಯಕ್ಕೆ ಮಾರಕವಾಗುತ್ತದೆ ಎಂದಿದೆ.
ಡೈನಿಂಗ್ ಟೇಬಲ್ ಮೇಲೂ ಅತಿಯಾದ ಕೀಟಾಣುಗಳಿರುತ್ತವೆ. ಅದನ್ನು ಅವಶ್ಯವಾಗಿ ಕ್ಲೀನ್ ಮಾಡದಿದ್ದರೆ ಆರೋಗ್ಯ ಸಮಸ್ಯೆಗೆ ದಾರಿಯಾಗುತ್ತದೆ ಎಂದಿದೆ. ಆದ್ದರಿಂದ ಆಗಾಗ್ಗೆ ಅಡುಗೆ ಮನೆಯಲ್ಲಿ ಬಳಸುವ ಬಟ್ಟೆಯನ್ನು ಬದಲಿಸುವುದು, ಅಡುಗೆ ಮನೆಯನ್ನು ಗಲೀಜಾಗದಂತೆ ಎಚ್ಚರವಹಿಸುವುದು ತುಂಬಾ ಅವಶ್ಯಕ.
ಮೂರು ದಿನಕ್ಕೊಮ್ಮೆಯಾದರೂ ಬಿಸಿ ನೀರಿನಲ್ಲಿ ಸೋಪಿನ ಪುಡಿ ಬೆರೆಸಿ ನೆಲ ಮತ್ತು ಟೈಲ್ಸ್ ಗಳನ್ನು ತೊಳೆಯುತ್ತಿದ್ದರೆ ಕ್ರಿಮಿ ಕೀಟಾಣುಗಳನ್ನು ಕಡಿಮೆಮಾಡಬಹುದು ಎಂದು ಸಲಹೆ ನೀಡಿದೆ.



Click it and Unblock the Notifications
