Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕರೆಂಟ್ ಉಳಿಸಲು ಈ ಕಿವಿಮಾತು ಕೇಳಿ

* ಬಲ್ಬ್ ಬದಲಾಗಿ ಸಿಎಫ್ ಎಲ್ ಬಲ್ಬ್ : ಇನ್ ಕ್ಯಾಂಡೆಸೆಂಟ್ ಬಲ್ಬ್ ಬದಲಾಗಿ ಸಿಎಫ್ಎಲ್ (ಕಾಂಪಾಕ್ಟ್ ಫ್ಲೋರೆಸೆಂಟ್ ಲೈಟ್) ಬಳಕೆ ಮಾಡಿ. ಅತಿ ಕಡಿಮೆ ವಿದ್ಯುತ್ ಉಪಯೋಗಿಸಿಕೊಳ್ಳುವ ಈ ಲೈಟ್ ಹೆಚ್ಚು ವೋಲ್ಟೇಜ್ ಪಡೆಯುವ ಇನ್ ಕ್ಯಾಂಡಸೆಂಟ್ ಬಲ್ಬ್ ಗಿಂತ ತುಂಬಾ ಉತ್ತಮ. ಮನೆಗೆ ಅವಶ್ಯಕವೆನಿಸುವಷ್ಟು ಹಿತವಾದ ಬೆಳಕು ನೀಡುವ ಸಿಎಫ್ಎಲ್ ಮಾಮೂಲಿ ಬಲ್ಬ್ ಗಿಂತ ಹೆಚ್ಚು ಬೆಳಕನ್ನು ನೀಡಿ ವಿದ್ಯುತ್ ಬಿಲ್ ನಲ್ಲಿಯೂ ತನ್ನ ಚಮತ್ಕಾರವನ್ನು ತೋರಿಸುತ್ತದೆ.
* ಸೀಲಿಂಗ್ ಫ್ಯಾನ್: ಮನೆಗಳಿಗೆಂದರೆ ಸೀಲಿಂಗ್ ಫ್ಯಾನ್ ಗಳ ಬಳಕೆಯೇ ಇರಲಿ. ಎಸಿಗಿಂತ ಸೀಲಿಂಗ್ ಫ್ಯಾನ್ ವಿದ್ಯುತ್ ಉಳಿಕೆಗೆ ತುಂಬಾ ಸಹಾಯಕಾರಿ. ಏಕೆಂದರೆ ಎಸಿಗೆ ಹೋಲಿಸಿದರೆ ಸೀಲಿಂಗ್ ಫ್ಯಾನ್ ತುಂಬಾ ಕಡಿಮೆ ವಿದ್ಯುತ್ ನಲ್ಲಿ ಚಲನೆ ಮಾಡುತ್ತದೆ. ಪ್ರತಿ ರೂಮಿಗೂ ಎಸಿ ಗಳ ಬದಲು ಸೀಲಿಂಗ್ ಫ್ಯಾನ್ ಬಳಸಿದರೆ ನಿಜಕ್ಕೂ ವಿದ್ಯುತ್ ಗಣನೀಯವಾಗಿ ಕಡಿಮೆ ಉಪಯೋಗಿಸಲ್ಪಡುತ್ತದೆ.
* ಸೋಲಾರ್ ಇರಲಿ: ಕರೆಂಟ್ ವಾಟರ್ ಹೀಟರ್ ಗಳಿಗೆ ಹೋಲಿಸಿದರೆ ಇದು ತುಂಬಾ ಪರಿಸರ ಸ್ನೇಹಿ ವಿಧಾನ. ಸೂರ್ಯನ ಕಿರಣಗಳನ್ನು ಉಪಯೋಗಿಸಿಕೊಂಡು ಬಿಸಿಯಾಗುವ ಸೋಲಾರ್ ನೀರು ಹೀಟರ್ ನೀರಿಗಿಂತ ಒಳ್ಳೆಯದು. ಹೀಟರ್ ನಲ್ಲಿ ನೀರು ಬಿಸಿ ಮಾಡುವುದಕ್ಕೆ ತುಂಬಾ ವೋಲ್ಟೇಜ್ ಅವಶ್ಯಕತೆ ಇದೆ. ಆದ್ದರಿಂದ ವಿದ್ಯುತ್ ಇಲ್ಲದೆಯೇ ನಡೆಯುವ ಸೋಲಾರ್ ಉತ್ತಮ. ಚಳಿ ಮತ್ತು ಮಳೆಗಾಲದಲ್ಲಿ ಸೋಲಾರ್ ಕೈಕೊಟ್ಟರೂ ಅದಕ್ಕೆಂದು ಪರ್ಯಾಯ ಮಾರ್ಗವೂ ಇರುತ್ತದೆ.
* ಲೈಟಿಂಗ್ ಕಂಟ್ರೋಲರ್ : ವಿದ್ಯುತ್ ಉಳಿಸಲು ಲೈಟಿಂಗ್ ಕಂಟ್ರೋಲ್ ತುಂಬಾ ಪರಿಣಾಮಕಾರಿ ವಿಧಾನ. ಇದಕ್ಕೆಂದು ದುಬಾರಿ ವೆಚ್ಚದ ಕಂಟ್ರೋಲರ್ ಖರೀದಿಸುವ ಅವಶ್ಯಕತೆ ಇಲ್ಲ. ತುಂಬಾ ಸಿಂಪಲ್ ಮತ್ತು ಕಡಿಮೆ ಬೆಲೆಯ ಲೈಟ್ ಕಂಟ್ರೋಲರ್ ಗಳೂ ಕೂಡ ಲಭ್ಯವಿದೆ. ಬೆಳಕನ್ನು ಆಧರಿಸಿ ವಿದ್ಯುತ್ ಬಳಕೆ, ವಾತಾವರಣಕ್ಕನುಗುಣವಾಗಿ ವಿದ್ಯುತ್ ಉಪಯೋಗ, ಸೆನ್ಸಾರ್ ಮುಂತಾದ ಸೌಲಭ್ಯವನ್ನು ಹೊಂದಿರುವ ಲೈಟಿಂಗ್ ಕಂಟ್ರೋಲರ್ ನಿಮ್ಮ ಮನೆಯಲ್ಲೂ ಇದ್ದರೆ ಉತ್ತಮ.



Click it and Unblock the Notifications
