Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮಲ್ಲಿಗೆ ಬಳ್ಳಿಗೆ ಇರಲಿ ಚೆಂದದ ಪೋಷಣೆ

ಮಲ್ಲಿಗೆ ಬಳ್ಳಿಯನ್ನು ಪೋಷಿಸುವ ಕೆಲವು ಸಲಹೆ ಇಲ್ಲಿವೆ:
1. ಮಲ್ಲಿಗೆಯ ವಿಧಗಳು: ಮಲ್ಲಿಗೆ ಹೂವಿನಲ್ಲಿ ಅನೇಕ ಬಗೆಗಳಿವೆ. ನಿಮ್ಮ ತೋಟಕ್ಕೆ ಯಾವ ಬಗೆಯ ಮಲ್ಲಿಗೆ ಸೂಕ್ತ ಎಂಬುದನ್ನು ಅರಿತುಕೊಂಡು ಮಲ್ಲಿಗೆ ಬಳ್ಳಿ ನೆಟ್ಟರೆ ಚೆಂದ. ಏಳು ಸುತ್ತಿನ ಮಲ್ಲಿಗೆ ಘಮಗುಟ್ಟುವ ಪರಿಮಳದೊಂದಿಗೆ ನೋಡಲೂ ಆಕರ್ಷಕವಾಗಿರುತ್ತದೆ. ಅದನ್ನೂ ನೆಡಬಹುದು ಅಥವಾ ಒಂದು ದಳದ ಮಲ್ಲಿಗೆ ಹೂವೂ ಕೂಡ ಚೆಂದವಿರುತ್ತದೆ.
2. ಬೆಳೆಸುವ ಜಾಗ: ಸೂರ್ಯನ ಬೆಳಕು ಮತ್ತು ನೆರಳು ಎರಡೂ ಇರುವ ಜಾಗದಲ್ಲಿ ಮಲ್ಲಿಗೆ ಬಳ್ಳಿ ನೆಡಬೇಕು. ಅದು ಸದಾವಕಾಶವಾಗಿ ಹರಡಲು ಸುತ್ತಮುತ್ತಲೂ ಸ್ವಲ್ಪ ಜಾಗವಿರಲಿ. ಮಣ್ಣೂ ಕೂಡ ಫಲವತ್ತತೆಯಿಂದಿರಲಿ. ಕೆಂಪು ಮಣ್ಣಾದರೆ ಗಿಡ ಚೆನ್ನಾಗಿ ಬೆಳೆಯುತ್ತದೆ.
3. ನೆಡುವ ವಿಧಾನ: ಮಲ್ಲಿಗೆ ನೆಡಲು ಚಿಕ್ಕದಾದ (ಗಿಡದ ಬೇರಿನ ಅಳತೆ) ಗುಂಡಿ ತೆಗೆದು (6 ಇಂಚು ಉದ್ದ) ಬಳ್ಳಿಯನ್ನು ನೆಡಬೇಕು. ಸ್ವಲ್ಪ ನೀರನ್ನು ಚುಮುಕಿಸಿ ಒಳಗೆ ಗೊಬ್ಬರ ಹಾಕಿ ಮಣ್ಣು ಮುಚ್ಚಬೇಕು. ಮಣ್ಣಿನಲ್ಲಿ ಫಲವತ್ತತೆ ಇಲ್ಲದಿದ್ದರೆ ಗಿಡವನ್ನು ನೆಟ್ಟ ನಂತರ ಬೇರಿನ ಸುತ್ತ ಗೊಬ್ಬರ ಹಾಕಬೇಕು.
4. ನೀರು ಹಾಕುವ ವಿಧಾನ: ಮಲ್ಲಿಗೆ ಹೂವಿಗೆ ನೀರು ಸಿಂಪಡಿಸಲು ರಾತ್ರಿ ಸರಿಯಾದ ಸಮಯ. ಬಳ್ಳಿ ನೆಟ್ಟಿರುವ ಮಣ್ಣಿನಲ್ಲಿ ಯಾವಾಗಲೂ ತೇವಾಂಶವಿರಬೇಕು. ಹಾಗೆಂದು ಹೆಚ್ಚು ನೀರನ್ನೂ ಸುರಿಯಬಾರದು.
5. ಕತ್ತರಿಸುವ ವಿಧಾನ: ಬಳ್ಳಿಯ ಎಲೆಗಳು ಒಣಗುತ್ತಿದ್ದಂತೆ ಅವುಗಳನ್ನು ಕತ್ತರಿಸುತ್ತಿರಬೇಕು. ಬಳ್ಳಿ ಆರೋಗ್ಯಕರವಾಗಿ ಬೆಳೆಯಬೇಕೆಂದರೆ ಬಲಿತ ಗಿಡದ ಭಾಗವನ್ನು ಕತ್ತರಿಸುತ್ತಿರಬೇಕು. ಒಣಗಿದ ಎಲೆ ಮತ್ತು ಉದುರಿದ ಹೂವುಗಳನ್ನು ಗೊಬ್ಬರವಾಗಿಯೂ ಬಳಸಬಹುದು.
6. ಸಂರಕ್ಷಣೆ: ಬಳ್ಳಿಯ ಸುತ್ತಮುತ್ತಲೂ ಅನವಶ್ಯಕ ಗಿಡಗಂಟಿಗಳಿದ್ದರೆ ಅವುಗಳನ್ನು ತೆರವುಗೊಳಿಸಬೇಕು. ಇಲ್ಲದಿದ್ದರೆ ಎಲ್ಲ ಸತ್ವವನ್ನು ಸುತ್ತಮುತ್ತಲಿರುವ ಗಿಡಗಳೇ ಹೀರಿಕೊಂಡು ಮಲ್ಲಿಗೆ ಬರಿದಾಗುವ ಸಾಧ್ಯತೆ ಇದೆ.
ಈ ಇಷ್ಟೂ ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಮಲ್ಲಿಗೆ ಬಳ್ಳಿಯನ್ನು ನೆಟ್ಟರೆ ನಿಮ್ಮ ಮನೆಯಂಗಳ ಮಲ್ಲಿಗೆ ಗಂಧದಿಂದ ತುಂಬಿರುತ್ತದೆ.



Click it and Unblock the Notifications
