Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಕಿವಿಯೊಂದಿಗೆ ಮನೆಯನ್ನೂ ಸ್ವಚ್ಛವಾಗಿಡಬಹುದು

ಖರ್ಚಿಲ್ಲದ ಮತ್ತು ಸುಲಭವಾಗಿ ಸಿಗುವ ಈ ಕಾಟನ್ ಬಡ್ಸ್ ಮನೆಯಲ್ಲಿರುವ ಸಣ್ಣ ವಸ್ತುವಿನಿಂದ ಹಿಡಿದು ದೊಡ್ಡ ವಸ್ತುಗಳನ್ನೂ ಸರಳವಾಗಿ ಶುಚಿಗೊಳಿಸುತ್ತೆ. ಇದನ್ನು ಉಪಯೋಗಿಸಿಕೊಂಡು ಹೇಗೆ ಸುಲಭವಾಗಿ ಕೆಲವು ವಸ್ತುಗಳನ್ನು ಶುದ್ಧಗೊಳಿಸಬಹುದು ಎಂದು ಇಲ್ಲಿ ತಿಳಿದುಕೊಳ್ಳಿ:
1. ಮೊಬೈಲ್ ಮತ್ತು ರಿಮೋಟ್: ನಿಮ್ಮ ಮೊಬೈಲ್ ಮತ್ತು ಟಿ.ವಿ ರಿಮೋಟ್ ಗಳ ಕೀಪ್ಯಾಡ್ ಸಂದಿಗಳಲ್ಲಿ ಧೂಳು ಸೇರಿಕೊಂಡಿದ್ದರೆ ಅದನ್ನು ನೀರಿನಿಂದ ತೊಳೆಯಲು ಸಾಧ್ಯವಿಲ್ಲ. ಆದ್ದರಿಂದ ಕಾಟನ್ ಬಡ್ಸ್ ಈ ಸಮಯದಲ್ಲಿ ತುಂಬಾ ಉಪಯೋಗಕ್ಕೆ ಬರುತ್ತದೆ.
2. ಕಂಪ್ಯೂಟರ್: ಕಂಪ್ಯೂಟರ್ ಮತ್ತು ಮೌಸ್ ಗಳನ್ನು ಸ್ವಲ್ಪ ಸೋಪು ಮಿಶ್ರಿತ ಕಾಟನ್ ಬಡ್ಸ್ ನಿಂದ ಹೊಸತರಂತೆ ಹೊಳೆಯುವ ರೀತಿ ಮಾಡಬಹುದು. ಕಂಪ್ಯೂಟರ್ ಸ್ಕ್ರೀನಿನ ಫ್ರೇಮ್ ಶುಚಿಗೊಳಿಸಲೂ ಕೂಡ ಇದನ್ನು ಬಳಸಬಹುದು.
3. ಶೋ ಪೀಸ್: ತುಂಬಾ ಸೂಕ್ಷ್ಮವಾದ ಶೋಪೀಸ್, ಮೆಟಲ್ ಕಲಾತ್ಮಕ ವಸ್ತುಗಳನ್ನು, ಕನ್ನಡಿಯನ್ನು ಮತ್ತು ಪೇಂಟಿಂಗ್ ಫ್ರೇಮ್ ಗಳ ಸಂದಿ ಸಂದಿಗಳಲ್ಲಿ ಸೇರಿಹೋಗಿರುವ ಧೂಳನ್ನು ಇದರಿಂದ ಅತಿ ಸುಲಭವಾಗಿ ತೆಗೆದುಹಾಕಬಹುದು.
4. ರೆಫ್ರಿಜರೇಟರ್: ಶಾಂಪೂವಿನಲ್ಲಿ ಕಾಟನ್ ಬಡ್ಸ್ ಅದ್ದಿಕೊಂಡು ರೆಫ್ರಿಜರೇಟರ್ ನ ಬಾಗಿಲು, ಹಿಡಿ ಮತ್ತು ಬಾಗಿಲಿನ ಒಳಭಾಗವನ್ನು ಒರೆಸಬಹದು. ಇದನ್ನು ಟಿ.ವಿ. ರೇಡಿಯೋ ಇನ್ನಿತರ ವಸ್ತುಗಳಿಗೂ ಅನುಸರಿಸಬಹುದು.
5. ಪಾತ್ರೆಗಳು: ಪಾತ್ರೆಗಳ ಸಂದಿಯಲ್ಲಿ ಉಳಿದುಹೋಗಿರುವ ಹಳೆಯ ಕಲೆಯನ್ನು ಸಹ ಇದರಿಂದ ಹೋಗಲಾಡಿಸಬಹುದು. ಪಾತ್ರೆ ತೊಳೆಯುವ ಪುಡಿಯೊಂದಿಗೆ ಕಾಟನ್ ಬಡ್ಸ್ ಅದ್ದಿಕೊಂಡು ಗಟ್ಟಿಯಾಗಿ ಪಾತ್ರೆಯ ಕಲೆಯ ಮೇಲೆ ಉಜ್ಜಿದರೆ ಕಲೆ ಮಾಯವಾಗುತ್ತದೆ.
6. ಬಾಟಲಿಗಳು: ಸಾಸ್, ಜ್ಯಾಮ್, ಜೇನು ಮುಂತಾದ ಬಾಟಲಿಗಳ ಮುಚ್ಚಳದ ಒಳಭಾಗಕ್ಕೆ ಕೈ ಹಾಕಿ ತೊಳೆಯಲು ಸಾಧ್ಯವಾಗದ ಕಾರಣ ಕಾಟನ್ ಬಡ್ಸ್ ಹಾಕಿ ಉಜ್ಜಿದರೆ ಉಳಿದುಕೊಂಡಿದ್ದ ಕೊಳೆ ಬೇಗನೆ ಮಾಯವಾಗುತ್ತದೆ. ಇದರಿಂದ ಇರುವೆ, ಸೊಳ್ಳೆಗಳು ತುಂಬುವುದೂ ಕಡಿಮೆ ಆಗುತ್ತದೆ.
ಇವು ತುಂಬಾ ಸರಳ ಸಲಹೆಗಳು ಎನ್ನಿಸಿದರೂ ಕೂಡ ತುಂಬಾ ಪರಿಣಾಮಕಾರಿ. ಚಿಕ್ಕ ಚಿಕ್ಕ ವಸ್ತುಗಳನ್ನೂ ಶುದ್ಧವಾಗಿಟ್ಟುಕೊಳ್ಳುವುದರಲ್ಲೇ ಮನೆಯ ಸ್ವಚ್ಛತೆ ಅಡಗಿದೆ. ಆದ್ದರಿಂದ ವಸ್ತುಗಳನ್ನು ಶುಚಿಗೊಳಿಸಲು ಕಾಟನ್ ಬಡ್ಸ್ ನ ಉಪಯೋಗ ಸಂಪೂರ್ಣವಾಗಿ ಪಡೆದುಕೊಳ್ಳಿ.



Click it and Unblock the Notifications
