Latest Updates
-
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ -
ಕೋಲ್ಕತ್ತಾ ದುರ್ಗಾ ಪೂಜೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಿ, ಪಂಡಾಲ್ ಹಾಪಿಂಗ್ಗೆ ಇಲ್ಲಿದೆ ಸ್ಮಾರ್ಟ್ ಪ್ಲಾನ್!
ಸಿಲಿಂಡರ್ ಪಡೆಯುವಾಗ ಕಡ್ಡಾಯವಾಗಿ ಈ ವಿಷಯ ಗಮನಿಸಿ..! ಎಷ್ಟೋ ಜನಕ್ಕೆ ಇದು ತಿಳಿದಿರೋದಿಲ್ಲ.!
ಈಗ ಎಲ್ಲರ ಮನೆಯಲ್ಲೂ ಎಲ್‌ಪಿಜಿ ಸಿಲಿಂಡರ್ ಇದ್ದೇ ಇರುತ್ತೆ. ಗ್ಯಾಸ್ ಒಂದಲ್ಲಾ ಎರಡು ಮೂರು ಇಟ್ಟುಕೊಂಡಿರುತ್ತಾರೆ. ಈಗ ಗ್ಯಾಸ್ ಖಾಲಿ ಆದರೆ ಹೆಚ್ಚು ಸಮಸ್ಯೆ ಆಗುವುದಿಲ್ಲ, ಏಕೆಂದರೆ ಕರೆಂಟ್ ಒಲೆಗಳು, ಅಥವಾ ಮತ್ತೊಂದು ಸಿಲಿಂಡರ್ ಇದ್ದೇ ಇರುತ್ತೆ. ಇಲ್ಲವೆ ಬುಕ್ ಮಾಡದೆ ಏಜೆಂನ್ಸಿ ಬಳಿ ಹೋಗಿ ನಾವೇ ತಕ್ಷಣ ಸಿಲಿಂಡರ್ ತರಬಹುದು.
ಆದ್ರೆ ನಾವು ಸಿಲಿಂಡರ್ ಬುಕ್ ಮಾಡಿದ ಒಂದೆರಡು ದಿನಕ್ಕೆಲ್ಲ ಈಗ ಗ್ಯಾಸ್ ಸಿಲಿಂಡರ್ ಮನೆ ಬಾಗಿಲಿಗೆ ಬರುತ್ತೆ. ನಾವು ಕೂಡ ಅದನ್ನು ಜೋಡಿಸಿ ಅಡುಗೆ ಮಾಡಲು ಆರಂಭಿಸುತ್ತೇವೆ. ಆದ್ರೆ ನಾವು ಎಂದಿಗೂ ಅದನ್ನು ಪರೀಕ್ಷೆಗೆ ಒಳಪಡಿಸುವುದೇ ಇಲ್ಲ. ಕೇವಲ ರೆಗ್ಯೂಲೇಟರ್ ಸರಿಯಾಗಿ ಕೂತಿದೆಯೇ? ಎಲ್ಲಾದರು ಗ್ಯಾಸ್ ಲೀಕ್ ಆಗುತ್ತಿದೆಯೇ ಎಂಬುದನ್ನು ಮಾತ್ರ ಗಮನಿಸುತ್ತೇವೆ.

ಆದ್ರೆ ಈ ಸಿಲಿಂಡರ್ ಮೇಲಿನ ಕೆಲವೊಂದು ರಹಸ್ಯವಾಗಿ ಕಾಣುವ ಅಕ್ಷರಗಳು, ನಂಬರ್‌ಗಳನ್ನು ನಾವು ಗಮನಿಸಬೇಕಾಗುತ್ತದೆ. ಏಕೆಂದರೆ ಈ ಸಿಲಿಂಡರ್‌ಗಳಿಗೂ ಎಕ್ಸ್‌ಪರಿ ಡೇಟ್ ಇರುತ್ತೆ. ದಿನಾಂಕ ಮುಗಿದಿರುವ ಗ್ಯಾಸ್ ಸಿಲಿಂಡರ್ ಬಳಸುವುದು ಜೀವಕ್ಕೆ ಹಾನಿಯಾಗಲಿದೆ, ನಿಮದಷ್ಟೇ ಅಲ್ಲ ಬದಲಿಗೆ ಇಡೀ ಕುಟುಂಬದವರನ್ನು ಅಪಾಯಕ್ಕೆ ತಳ್ಳುವ ಸಾಧ್ಯತೆ ಇರಲಿದೆ.
ಹಾಗಾದ್ರೆ ಎಲ್‌ಪಿಜಿ ಸಿಲಿಂಡರ್‌ನ ಮೇಲೆ ಕೊನೆಯ ದಿನಾಂಕ ಎಲ್ಲಿರುತ್ತೆ. ಇದನ್ನು ಲೆಕ್ಕ ಹಾಕುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಸಿಲಿಂಡರ್‌ಗಳು ಅತ್ಯಂತ ಉತ್ಕೃಷ್ಟ ಉಕ್ಕು, ಕಬ್ಬಿಣದಿಂದ ಮಾಡಲ್ಪಟ್ಟಿರುತ್ತೆ, ಏಕೆಂದರೆ ಅತೀ ಹೆಚ್ಚು ಒತ್ತಡವನ್ನು ಈ ಸಿಲಿಂಡರ್‌ಗಳು ತಡೆದುಕೊಳ್ಳಬೇಕಾಗುತ್ತದೆ. ಕೆಲವೊಮ್ಮೆ ಒತ್ತಡದಿಂದ ಇವು ಸ್ಪೋಟವಾಗುವುದನ್ನು ನೀವು ಗಮನಿಸಿರಬಹುದು. ಹಾಗೆ ಈ ಸಿಲಿಂಡರ್‌ಗಳಿಗೂ ಕೊನೆಯ ದಿನಾಂಕ ಎಂಬುದನ್ನು ಸಿಲಿಂಡರ್‌ಗಳ ಮೇಲೆಯೇ ಹಾಕಿರುತ್ತಾರೆ.
ನೀವು ಸಿಲಿಂಡರ್‌ನ ಮೇಲ್ಭಾಗದಲ್ಲಿ ಅವುಗಳ ತೂಕ ಇರುವುದನ್ನು ನೋಡಿರಬಹುದು. ಹಾಗೆ ಕೊನೆಯ ದಿನವನ್ನು ಕೂಡ ಅಲ್ಲಿ ಹಾಕಿರುತ್ತಾರೆ. ಆದ್ರೆ ಸಾಮಾನ್ಯವಾಗಿ ದಿನಾಂಕವನ್ನು ಅವರು ಮುದ್ರಿಸಿರುವುದಿಲ್ಲ ಬದಲಿಗೆ ಸಂಕೇತಗಳ ಮೂಲಕ ಅವರು ಅಂತ್ಯದ ದಿನ ನಮೂದಿಸಿರುತ್ತಾರೆ. ಸಿಲಿಂಡರ್‌ಗಳ ಮೇಲೆ ಸಾಮಾನ್ಯವಾಗಿ ABCD ಎಂಬ ಅಕ್ಷರಗಳನ್ನು ಬರೆಯಲಾಗಿರುತ್ತದೆ, ಇದು ಆ ಸಿಲಿಂಡರ್‌ನ ಕೊನೆಯ ದಿನಾಂಕ
ಅದರಲ್ಲಿ ಎಲ್ಲಾ ಅಕ್ಷರಗಳ ಹಿಂದಿರುವ ಅರ್ಥವೇನು? ABCD ಯಾವ ತಿಂಗಳನ್ನು ನಿರ್ಧರಿಸುತ್ತವೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಮೊದಲಿಗೆ A ಅಕ್ಷರವು ಜನವರಿ, ಫೆಬ್ರವರಿ, ಮಾರ್ಚ್ ಎಂದರ್ಧ, B ಅಂದರೆ ಏಪ್ರಿಲ್ ಮೇ, ಜೂನ್. C ಅಂದರೆ ಜುಲೈ, ಆಗಸ್ಟ್, ಸೆಪ್ಟೆಂಬರ್. D ಅಂದ್ರೆ ಅಕ್ಟೋಬರ್, ನವೆಂಬರ್ ಡಿಸೆಂಬರ್. ನಿಮ್ಮ ಸಿಲಿಂಡರ್‌ನ ಮೇಲೆ A 23, B 24, C 25 ಈ ರೀತಿ ಬರೆದಿರುತ್ತಾರೆ. ಇದಕ್ಕೆ ಅನುಗುಣವಾಗಿ ABCD ಹಾಗೂ ಅವುಗಳ ಡೇಟ್‌ಗಳ ನೋಡಿ ನೀವು ಸಿಲಿಂಡರ್‌ನ ಅಂತ್ಯದ ದಿನಾಂಕ ಗುರುತಿಸಬಹುದು. A 23 ಅಂದರೆ 2023ರ ಮಾರ್ಚ್ ವರೆಗೂ ಇದರ ವ್ಯಾಲಿಡಿಟಿ ಇರಲಿದೆ ಎಂದರ್ಥ.
ಒಂದು ವೇಳೆ ನಿಮ್ಮ ಸಿಲಿಂಡರ್ ದಿನಾಂಕ ಮುಗಿದಿದ್ದರೆ ಅಂತಹ ಸಿಲಿಂಡರ್ ಡೆಲಿವರಿ ಪಡೆಯಬೇಡಿ, ಇದು ಅಪಾಯ ತಂದೊಡ್ಡಲಿದೆ. ಒಂದು ವೇಳೆ ನೀವು ನೋಡದೆ ಇದ್ದರೆ ಮತ್ತೆ ಎಜೆಂಟ್‌ಗೆ ಕರೆ ಮಾಡಿ ಬೇರೆ ಸಿಲಿಂಡರ್ ಪಡೆದುಕೊಳ್ಳಿ.
ಇದಾದ ಬಳಿಕ ಸಿಲಿಂಡರ್‌ನ ಸೀಲ್ ಓಪನ್ ಆಗಿದೆಯೇ ಎಂಬುದನ್ನು ಗಮನಿಸಬೇಕು. ಒಂದು ವೇಳೆ ಸೀಲ್ ಓಪನ್ ಆಗಿರುವುದು ಇಲ್ಲವೆ ಹರಿದಿರುವಂತೆ ಕಂಡುಬಂದರೆ ಆ ಸಿಲಿಂಡರ್ ತೆಗೆದುಕೊಳ್ಳಬೇಡಿ. ಹಾಗೆ ನೀವು ರೆಗ್ಯೂಲೇಟರ್‌ಗೆ ಹಾಕಿದಾಗ ಗ್ಯಾಸ್ ಲೀಕ್ ಆಗುತ್ತಿದ್ದರೆ ಅದರಲ್ಲಿ ವಾಷರ್ ಸಮಸ್ಯೆ ಇರಬಹುದು. ತಕ್ಷಣ ಬದಲಾಯಿಸಿಕೊಳ್ಳಿ, ಇಲ್ಲವೆ ವಾಷರ್ ಹಾಕಿದರೆ ಸರಿಹೋಗುತ್ತದೆ.



Click it and Unblock the Notifications
