Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಅಡುಗೆ ಘಮ್ಮೆನ್ನಲು ಸೊಪ್ಪುಗಳನ್ನು ಹೀಗೆ ಬಳಸಿ
ನಾವು ಅಡುಗೆ ಮಾಡುವಾಗ ರುಚಿ ಚೆನ್ನಾಗಿ ಬರಬೇಕೆಂದು ಕರಿಬೇವಿನ ಒಗ್ಗರಣೆ ಕೊಡುವುದು, ಕೊತ್ತಂಬರಿ ಸೊಪ್ಪು ಹಾಕುವುದು ಅಥವಾ ಪುದೀನಾ ಹಾಕುವುದು, ಇನ್ನು ಕೆಲವೊಂದು ವಿಶೇಷ ಅಡುಗೆಗೆ ತುಳಸಿ, ದೊಡ್ಡಪತ್ರೆ ಮುಂತಾದ ಗಿಡ ಮೂಲಿಕೆ ಬಳಸುವುದು ಮಾಡುತ್ತೇವೆ. ಇವುಗಳನ್ನು ಹಾಕಿದಾಗ ಅಡುಗೆಯ ಸ್ವಾದವೇ ತುಂಬಾ ಭಿನ್ನ ಅನಿಸುವುದು. ಅಡುಗೆಗೆ ಘಮ್ಮೆನ್ನುವ ಪರಿಮಳವನ್ನು ಕೂಡ ನೀಡುವುದು.
ಅಡುಗೆಗೆ ಸ್ವಾದ ಹೆಚ್ಚಿಸಲು ಬಳಸುವ ಸೊಪ್ಪು, ಎಲೆಗಳು ತಾಜಾವಾಗಿದ್ದರೆ ಪರಿಮಳ ತುಂಬಾ ಚೆನ್ನಾಗಿರುತ್ತದೆ. ಅದನ್ನು ಒಣಗಿಸಿದರೂ ಚೆನ್ನಾಗಿರುತ್ತದೆ. ಆದರೆ ಅವುಗಳನ್ನು ಸರಿಯಾಗಿ ಸಂಗ್ರಹಿಸಿಡದಿದ್ದರೆ ಮಾತ್ರ ಬಳಸಲು ಸಾಧ್ಯವಿಲ್ಲ, ಬಳಸಿದರೂ ನಾವು ಬಯಸಿದ ರುಚಿ ಅಡುಗೆಗೆ ಸಿಗುವುದಿಲ್ಲ.

ಇನ್ನು ಈ ಗಿಡಮೂಲಿಕೆಗಳನ್ನು ತಂದಾಗ ಅವುಗಳನ್ನು ಸರಿಯಾಗಿ ಸಂಗ್ರಹಿಸಿ ಇಡದಿದ್ದರೆ ಬೇಗನೆ ಹಾಳಾಗುತ್ತವೆ. ಇಲ್ಲಿ ನಾವು ಅಡುಗೆಯ ಸ್ವಾದ ಹೆಚ್ಚಿಸಲು ಗಿಡ ಮೂಲಿಕೆಗಳು, ಸುವಾಸನೆ ಇರುವ ಎಲೆಗಳು ಮುಂತಾದ ಅಡುಗೆ ಸಾಮಗ್ರಿ ಸಂಗ್ರಹಿಸಿಡುವುದು ಹೇಗೆ ಎಂಬ ಟಿಪ್ಸ್ ನೀಡಿದ್ದೇವೆ ನೋಡಿ:
ಗಿಡ ಮೂಲಿಕೆ ಬಳಕೆ
ಕೊತ್ತಂಬರಿ, ಪುದೀನಾ, ಕರಿಬೇವು ಇವುಗಳನ್ನು ಸಂಗ್ರಹಿಸಿಟ್ಟು ಬಳಸುವುದಕ್ಕಿಂತ ತಾಜಾ ಬಳಸಿದರೆ ಸ್ವಾದ ಹೆಚ್ಚು. ಆದ್ದರಿಂದ ನಿಮ್ಮ ಮನೆಯಲ್ಲಿಯೇ ಈ ಗಿಡಗಳು ಇದ್ದರೆ ಅವುಗಳನ್ನು ತುಂಬಾ ಕಿತ್ತು ಸಂಗ್ರಹಿಸಿ ಇಡುವುದಕ್ಕಿಂತ ಅಡುಗೆಗೆ ಮಾಡುವ ಮುಂಚೆ ಕಿತ್ತು ಬಳಸಿ. ಇನ್ನು ನೀವು ಅಡುಗೆಗೆ ಈ ಸೊಪ್ಪುಗಳನ್ನು ಬಳಸುವುದಾದರೆ ಬೆಳಗ್ಗೆ ಕಿತ್ತರೆ ತುಂಬಾ ತಾಜಾವಾಗಿರುತ್ತದೆ.
ಸಂಗ್ರಹಣೆ ಹೇಗೆ?
ಈ ಸೊಪ್ಪುಗಳನ್ನು ಸಂಗ್ರಹಿಸಿ ಇಡುವುದಾದರೆ ಒಂದೆರಡು ದಿನದ ಒಳಗೆ ಬಳಸುವುದಾದರೆ ಅದರ ತೊಟ್ಟು ಸ್ವಲ್ಪ ಕತ್ತರಿಸಿ ತೊಟ್ಟು ನೀರಿನಲ್ಲಿ ಮುಳುಗುವಂತೆ ಹಾಕಿಡಿ. ಇದರಿಂದ ಕೂಡ ತಾಜಾತನದಿಂದ ಕೂಡಿರುತ್ತದೆ. ಇನ್ನು ಫ್ರಿಡ್ಜ್‌ನಲ್ಲಿ ಇಡುವುದಾದರೆ ಪ್ಲಾಸ್ಟಿಕ್ ಡಬ್ಬದಲ್ಲಿ ಇಡಬೇಕು. ಡಬ್ಬದಲ್ಲಿ ಇಡುವ ಮುಂಚೆ ಸೋಸಿ, ತೊಳೆದು ಒಂದು ಪೇಪರ್‌ನ ಮೇಲೆ ಹರಡಿ ಒಂದೆರಡು ತಾಸು ಇಟ್ಟು ನಂತರ ತೆಗೆದು ಡಬ್ಬದಲ್ಲಿ ಹಾಕಿಡಬೇಕು.
ಅಡುಗೆಗೆ ಬಳಸುವಾಗ ಇವುಗಳನ್ನು ಗಮನಿಸಿ
* ಅಡುಗೆಯ ಪರಿಮಳ ಹೆಚ್ಚಿಸುವ ಸೊಪ್ಪು ಬಳಸುವಾಗ ಕೊತ್ತಂಬರಿ ಸೊಪ್ಪು, ಪುದೀನಾ ಬಳಸುವುದಾದರೆ ಅದರ ದಂಟು ಜತೆ ಬಳಸಿದರೆ ಆಹಾರದ ಸುವಾಸನೆ ಹೆಚ್ಚುವುದು. ಹೀಗೆ ಬಳಸುವಾಗ ಅಡುಗೆಯ ಕೊನೆಯ ಹಂತ ಅಥವಾ ಯಾವುದೇ ಹಂತದಲ್ಲಿ ಬಳಸಬಹುದು.
* ಪೇಸ್ಟ್ ಮಾಡಿ ಬಳಸುವುದಾದರೆ ಅದನ್ನು ಎಣ್ಣೆಯಲ್ಲಿ ಫ್ರೈ ಮಾಡಲೇಬೇಕು, ಇಲ್ಲದಿದ್ದರೆ ಸೊಪ್ಪಿನ ವಾಸನೆ ಆಹಾರದ ರುಚಿ ಹಾಗೂ ಪರಿಮಳ ಹಾಳು ಮಾಡುವುದು.
* ಹೆಚ್ಚು ಪರಿಮಳದ ಸೊಪ್ಪು ಬಳಸುವುದಾದರೆ ಸ್ವಲ್ಪ ಬಳಸಿ. ಕೊತ್ತಂಬರಿ, ಪುದೀನಾ ಸ್ವಲ್ಪ ಹಾಕುವಲ್ಲಿ ತುಂಬಾ ಹಾಕಿದರೆ ಕೊತ್ತಂಬರಿ ಸೊಪ್ಪಿನ ವಾಸನೆಯೇ ಮೂಗಿಗೆ ಬಡೆಯುತ್ತದೆ. ಆದ್ದರಿಂದ ಈ ರೀತಿಯ ಅಡುಗೆಯ ಅಲಂಕಾರಿಕ ಸೊಪ್ಪುಗಳನ್ನು ಮಿತಿಯಲ್ಲಿ ಬಳಸಿದರೆ ಒಳ್ಳೆಯದು.
* ಎರಡು ಮೂರು ಬಗೆಯ ಸೊಪ್ಪು ಬಳಸುವುದಾದರೆ ಹೆಚ್ಚು ಜಾಗ್ರತೆ ವಹಿಸಬೇಕು, ಇಲ್ಲದಿದ್ದರೆ ಅಡುಗೆಯ ರುಚಿ ಹಾಳಾಗುವುದು.
* ಒಣ ಗಿಡಮೂಲಿಕೆ ಬಳಸುವುದಾದರೆ ಸ್ವಲ್ಪ ಬಳಸಿ. ತಾಜಾ ಗಿಡ ಮೂಲಿಕೆಗಳಿಗಿಂತ ಒಣಗಿರುವ ಸೊಪ್ಪಿನ ಸುವಾಸನೆ ಸ್ವಲ್ಪ ಅಧಿಕವಾಗಿರುತ್ತದೆ. ಆಹಾರ ತುಂಬಾ ಘಮ್ಮೆಂದರೆ ತಿನ್ನಲು ಕಷ್ಟ.



Click it and Unblock the Notifications