Latest Updates
-
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ?
ವಾಸ್ತು ಪ್ರಕಾರ ಮನೆಯಲ್ಲಿ ಹಣದ ಡಬ್ಬವನ್ನು ಯಾವ ಭಾಗದಲ್ಲಿಡಬೇಕು?

ವಾಸ್ತು ಶಾಸ್ತ್ರವೆಂದರೆ ಮನೆ ಅಥವಾ ಯಾವುದೇ ಕಟ್ಟದಲ್ಲಿರುವಂತಹ ನಕಾರಾತ್ಮಕತೆ ದೂರ ಮಾಡಿಕೊಂಡು ಧನಾತ್ಮಕತೆ ಸೆಳೆಯುವುದು. ಇದರಿಂದ ಜನರಿಗೆ ಮನಸ್ಸಿಗೆ ಶಾಂತಿ, ಸುಖ ಮತ್ತು ಸಮೃದ್ಧಿ ಸಿಗುವುದು. ಇಂದಿನ ದಿನಗಳಲ್ಲಿ ಪ್ರತಿಯೊಬ್ಬರು ವಾಸ್ತು ಪ್ರಕಾರವೇ ಮನೆ ಹಾಗೂ ಕಟ್ಟಡಗಳನ್ನು ಕಟ್ಟುತ್ತಾರೆ. ಕೆಲವರಿಗೆ ಇದರ ಬಗ್ಗೆ ನಂಬಿಕೆ ಇಲ್ಲದೆ ಇರಬಹುದು. ಈ ಲೇಖನದಲ್ಲಿ ನಿಮಗೆ ಸಂಪತ್ತು ಹಾಗೂ ಸಮೃದ್ಧಿ ತರಬಲ್ಲ ವಾಸ್ತುವಿನ ಬಗ್ಗೆ ತಿಳಿಸಿಕೊಡಲಿದ್ದೇವೆ. ಇದು ನಿಮಗೆ ತುಂಬಾ ಸಹಕಾರಿಯಾಗಲಿದೆ. ಪ್ರತಿಯೊಬ್ಬರ ಮನೆಯಲ್ಲಿ ಅಲ್ಪಸ್ವಲ್ಪವಾದರೂ ಹಣ ಮತ್ತು ಬೆಲೆಬಾಳುವ ವಸ್ತುಗಳು ಇದ್ದೇ ಇರುತ್ತದೆ.
ಇದನ್ನು ಕೆಲವರು ಎಲ್ಲೆಂದರಲ್ಲಿ ಬಿಸಾಕಿಡುತ್ತಾರೆ. ಇನ್ನು ಕೆಲವರು ವಾಸ್ತು ಪ್ರಕಾರವೇ ಇದನ್ನು ಇಟ್ಟುಕೊಳ್ಳುವರು. ಇದರಿಂದ ಅವರ ಮನೆಯಲ್ಲಿ ಯಾವತ್ತೂ ಸಂಪತ್ತಿನ ಕೊರತೆ ಕಾಡುವುದಿಲ್ಲ. ಇದು ನಗದು ಹಣ, ಆಭರಣ ಅಥವಾ ಇತರ ಯಾವುದೇ ಬೆಲೆಬಾಳುವ ವಸ್ತುವಾಗಿದ್ದರೂ ಅದನ್ನು ಎಲ್ಲಿಡಬೇಕೆಂದು ವಾಸ್ತು ಪ್ರಕಾರ ಈ ಲೇಖನದಲ್ಲಿ ಹೇಳಿಕೊಡಲಿದ್ದೇವೆ....

ಹಣದ ಡಬ್ಬ ಮತ್ತು ಬೆಲೆಬಾಳುವ ವಸ್ತುಗಳ ಉತ್ತರ ಭಾಗದಲ್ಲಿಯೇ ಇಡಿ
ಉತ್ತರ ಭಾಗವನ್ನು ಸಂಪತ್ತು ಮತ್ತು ಶ್ರೀಮಂತಿಕೆಯ ದೇವರು ಕುಬೇರನದ್ದು ಎಂದು ಪರಿಗಣಿಸಲಾಗುತ್ತದೆ. ಹಣದ ಡಬ್ಬ ಮತ್ತು ಬೆಲೆಬಾಳುವ ವಸ್ತುಗಳನ್ನು ಯಾವಾಗಲೂ ನೀವು ಉತ್ತರ ದಿಕ್ಕಿನಲ್ಲಿಡಬೇಕು. ಇದರಿಂದ ನಿಮಗೆ ಅದೃಷ್ಟ ಸಿಗುವುದು ಮತ್ತು ಸಂಪತ್ತು ಹೆಚ್ಚಾಗುವುದು.

ದಕ್ಷಿಣ ಭಾಗವು ಸುರಕ್ಷಿತವಲ್ಲ!
ಹಣದ ಡಬ್ಬವನ್ನು ಉತ್ತರ ಭಾಗದಲ್ಲಿ ಇಟ್ಟುಕೊಂಡು ಅದರ ಬಾಗಿಲು ದಕ್ಷಿಣಕ್ಕೆ ಮುಖಮಾಡಿ ಇಡಬೇಡಿ. ದೇವಿ ಲಕ್ಷ್ಮೀಯು ದಕ್ಷಿಣ ಭಾಗದಿಂದ ಪ್ರಯಾಣ ಆರಂಭಿಸಿ ಉತ್ತರ ಭಾಗದಲ್ಲಿ ನೆಲೆಸುವಳು ಎನ್ನುವ ನಂಬಿಕೆಯಿದೆ. ಈ ವಾಸ್ತು ಸೂತ್ರ ಅಳವಡಿಸಿದರೆ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು.

ಪೂರ್ವ ಭಾಗದಲ್ಲಿ ಹಣವಿಡುವುದು
ನಿಮ್ಮ ಹಣದ ಡಬ್ಬಿಯನ್ನು ಯಾವುದೋ ಕಾರಣಕ್ಕಾಗಿ ಉತ್ತರ ಭಾಗದಲ್ಲಿ ಇಡಲು ಸಾಧ್ಯವಾಗದೇ ಇದ್ದರೆ ಆಗ ನೀವು ಇದನ್ನು ಪೂರ್ವ ದಿಕ್ಕಿನಲ್ಲಿ ಇಟ್ಟುಬಿಡಿ. ಅಂಗಡಿಗಳ ಯಜಮಾನರು ಕೂಡ ಪೂರ್ವ ಭಾಗದಲ್ಲಿ ತಮ್ಮ ಹಣದ ಡಬ್ಬವಿರಬೇಕೆಂದು ಬಯಸುವರು. ನೈಋತ್ಯ ಭಾಗದಲ್ಲಿ ಕ್ಯಾಶಿಯರ್ ಕುಳಿತುಕೊಂಡಿದ್ದರೆ ಆಗ ಆತನ ಎಡದ ಭಾಗದಲ್ಲಿ ಹಣದ ಡಬ್ಬಿಯಿರಬೇಕು ಮತ್ತು ಆತ ಪೂರ್ವಕ್ಕೆ ಮುಖ ಮಾಡಿಕೊಂಡಿದ್ದರೆ ಆಗ ಬಲದ ಬದಿಯಲ್ಲಿ ಹಣದ ಡಬ್ಬಿಯಿರಬೇಕು.

ನಾಲ್ಕು ಮೂಲೆ ಬರುವ ಸ್ಥಳದಲ್ಲಿ ಹಣದ ಪೆಟ್ಟಿಗೆ ಇಡದಿರಿ!
ಮನೆಯಲ್ಲಿ ನಾಲ್ಕು ಮೂಲೆಗಳು ಇರುವಂತಹ ಸ್ಥಳದಲ್ಲಿ ಹಣದ ಡಬ್ಬಿಯನ್ನು ಇಡಬಾರದು. ವಿಶೇಷವಾಗಿ ಈಶಾನ್ಯ, ಆಗ್ನೇಯ ಮತ್ತು ನೈಋತ್ಯ ಮೂಲೆಯಲ್ಲಿ ಹಣವನ್ನು ಇಡಬಾರದು. ನಿಮ್ಮ ಸುರಕ್ಷತೆ ಎನ್ನುವುದು ಉತ್ತರ ದಿಕ್ಕಿನಲ್ಲಿರುತ್ತದೆ. ದಕ್ಷಿಣ ಭಾಗದಲ್ಲಿ ಹಣವನ್ನು ಇಡುವುದು ತಪ್ಪಿಸಿ. ಇದರಿಂದ ಕೆಟ್ಟ ಅದೃಷ್ಟಗಳು ಎದುರಾಗುವುದು.

ಪೂಜಾ ಕೋಣೆಯಲ್ಲಿ ಹಣದ ಪೆಟ್ಟಿಗೆ ಇಡಬೇಡಿ
ಪೂಜಾ ಕೋಣೆಯಲ್ಲಿ ಅಥವಾ ದೇವರ ಮನೆಯಲ್ಲಿ ಹಣದ ಪೆಟ್ಟಿಗೆಯನ್ನು ಇಡಬಾರದು. ವಾಸ್ತು ಪ್ರಕಾರ ಹಣವನ್ನು ದೇವರ ಮನೆಯಲ್ಲಿ ಇಡಬಾರದು. ಬದಲಿಗೆ ಮಲಗುವ ಕೋಣೆಯಲ್ಲಿ ಭದ್ರವಾಗಿ ಇಡಬಹುದು ಎಂದು ಹೇಳಲಾಗುತ್ತದೆ. ಅಷ್ಟೇ ಅಲ್ಲದೆ ಹಣದ ಪೆಟ್ಟಿಗೆಯ ಬಾಗಿಲು ಮುಖ್ಯ ದ್ವಾರ ಅಥವಾ ಗೇಟ್ ನಿಂದ ಗೋಚರವಾಗುವಂತೆ ಇದ್ದರೆ ನಿಮ್ಮ ಎಲ್ಲಾ ಹಣವು ಹೊರಹೋಗುವುದು. ವಾಸ್ತು ಪ್ರಕಾರ ನಿಮ್ಮ ಸ್ನಾನ ಗೃಹ, ಶೌಚಾಲಯ, ಅಡಿಗೆ ಮನೆ, ನೆಲ ಮಾಳಿಗೆ ಅಥವಾ
ಮೆಟ್ಟಿಲುಗಳ ಸಾಲಲ್ಲಿ ಗೌಪ್ಯವಾಗಿ ಹಣವನ್ನು ಇಡುವುದು ತಪ್ಪಿಸಿ. ಇದರಿಂದ ಹಣ ಉಳಿಯುವುದಕ್ಕಿಂತ ನಷ್ಟವಾಗುವ ಸಾಧ್ಯತೆಯೇ ಹೆಚ್ಚಾಗಿರುತ್ತದೆ.

ಹಣವನ್ನು ಇಟ್ಟುಕೊಳ್ಳುವ ಸರಿಯಾದ ವಿಧಾನ
- ಅಚ್ಚುಕಟ್ಟಾದ ಹಾಗೂ ಸ್ವಚ್ಛವಾದ ಸ್ಥಳದಲ್ಲಿ ಹಣವನ್ನು ಇರಿಸಿ.
ಇದು ನಿಮ್ಮ ಹಣದ ಸುರಕ್ಷತೆಯನ್ನು ಪ್ರತಿಬಿಂಬಿಸುತ್ತದೆ.
- ನೀವು ನಿಮ್ಮ ಮನೆಯಲ್ಲಿ ಉತ್ತರ ದಿಕ್ಕಿನ ಗೋಡೆಯ ಮೇಲೆ ಲಕ್ಷ್ಮಿ ದೇವಿಯೊಂದಿಗೆ ನಾಣ್ಯವನ್ನು ಇರಿಸಿ. - ನಗದು ಹಣವನ್ನು ಫೈಲ್‍ಗಳು ಅಥವಾ ಇನ್ಯಾವುದಾದರೂ ಕಾಗದ ಪತ್ರದೊಂದಿಗೆ ಇರಿಸದಿರಿ.
- ನಿಮ್ಮ ಮನೆಯ ಮೊದಲ ಅಥವಾ ಕೊನೆಯ ಕೊಠಡಿಯಲ್ಲಿ ಹಣದ ಪೆಟ್ಟಿಗೆ ಇಡುವುದನ್ನು ತಪ್ಪಿಸಿ.
- ಕಿಟಕಿಯ ಬಳಿ ಹಣವನ್ನು ಇರಿಸದಿರಿ. ಇದು ಸಂಪತ್ತು ನಿಮ್ಮ ಮನೆಯಿಂದ ಆಚೆ ಹೋಗುವುದನ್ನು ಸೂಚಿಸುತ್ತದೆ.
- ಹಣವನ್ನು ಸದಾ ಸೂಕ್ತ ಸ್ಥಳದಲ್ಲಿ ವಾಸ್ತು ಪ್ರಕಾರ ಇರಿಸಿಕೊಳ್ಳಬೇಕು. ಆಗ ಧನಾತ್ಮಕ ವೈಭವಗಳು ಹೆಚ್ಚುವುದು.



Click it and Unblock the Notifications











