For Quick Alerts
ALLOW NOTIFICATIONS  
For Daily Alerts

ಕೆಂಪು ಮದ್ಯದ ಕಲೆ ಹೋಗಲಾಡಿಸುವುದು ಹೇಗೆ?

By ಲೇಖಕ
|

ಎಲ್ಲಾ ಭೋಜನ ಕೂಟಗಳ ಆಯೋಜಕರು ಮತ್ತು ಮದ್ಯಪಾನ ಪ್ರಿಯರು ಮದ್ಯದಿಂದ ಉಂಟಾಗುವ ಕಲೆಗಳ ಬಗ್ಗೆ ತಲೆಕೆಡಿಸಿಕೊಳ್ಳಲೇಬೇಕು. ಮದ್ಯದಿಂದ ನಿಮ್ಮ ಮನೆಯಲ್ಲಿರುವ ಮೇಜಿನ ಮೇಲೆ ಹಾಕುವ ಹಳೆಯ ಕಾಲದ ಬಟ್ಟೆ ಆಗಲಿ ಅಥವಾ ನಿಮ್ಮ ಹೊಸ ಸೋಫಾದ ಮೇಲೆ ಕಲೆಗಳು ಆಗಿಯೇ ಆಗುತ್ತವೆ. ಇಂತಹ ಸಂದರ್ಭಗಳಲ್ಲಿ ಒಂದು ಉಪಯೋಗಕಾರಿಯಾದ ಮತ್ತು ಪ್ರಭಾವಶಲಿಯಾದ ಕಲೆ ತೆಗೆಯುವ ಸಾಧನ ಅಥವಾ ಯೋಚನೆ ನಿಮ್ಮಲ್ಲಿ ಬೇಕೇ ಬೇಕು.

ಮದ್ಯ ಬೇರೆ ಬೇರೆ ಬಟ್ಟೆಗಳ ಮೇಲೆ ವಿಭಿನ್ನ ರೀತಿಗಳಲ್ಲಿ ವರ್ತಿಸಿ ಕಲೆಗಳನ್ನು ಉಂಟುಮಾಡುವುದರಿಂದ ಕಲೆಗಳನ್ನು ತೆಗೆಯುವ ಯಾವುದೇ ವಿಧಾನವೂ 100% ಸಮರ್ಪಕವಾದುದಲ್ಲ. ಬೇಗನೇ ಕಲೆ ತೆಗೆಯುವ ಮತ್ತು ಸರಿಯಾದ ಬಟ್ಟೆಗಳ ಮೇಲೆ ಸರಿಯಾದ ಕಲೆ ನಿರ್ಮೂಲಕ ಇದ್ದರೆ ಒಳ್ಳೆಯದು.

Method to Get Red Wine Stains

ಬಟ್ಟೆಯ ಮೇಲೆ ಪರೀಕ್ಷಿಸಿ

ಯಾವುದೇ ಕಲೆ ನಿರ್ಮೂಲಕವನ್ನು ಬಳಸುವ ಮೊದಲು ಆ ಕಲೆ ನಿರ್ಮೂಲಕವನ್ನು ಬಳಸಿ ಅದರ ಪ್ರಭಾವವನ್ನು ಖಾತರಿ ಮಾಡಿಟ್ಟುಕೊಳ್ಳಿ. ನೀವು ಬಳಸಲು ಮುಂದಾಗಿರುವ ಕಲೆ ನಿರ್ಮೂಲಕವನ್ನು ಬಟ್ಟೆಯ ಒಂದು ಸಣ್ಣ ಭಾಗದಲ್ಲಿ ಬಳಸಿ ಅದು ಬಟ್ಟೆಯ ಬಣ್ಣವನ್ನು ತೆಗೆಯುವುದಿಲ್ಲ ಮತ್ತು ಅದು ಯಾವುದೇ ರೀತಿಯಲ್ಲಿ ಬಟ್ಟೆಯನ್ನು ಹಾಳು ಮಾಡುವುದಿಲ್ಲ ಎಂದು ನೋಡಿಕೊಳ್ಳಿ. ಇದನ್ನು ಬಟ್ಟೆಯ ಒಂದು ಭಾಗದಲ್ಲಿ ಬಳಸಿ ಒಂದೆರಡು ಗಂಟೆಗಳ ಕಾಲ ಕಾಯಿರಿ ಮತ್ತು ಪರಿಣಾಮವನ್ನು ನೋಡಿರಿ. ಆ ಕಲೆ ನಿರ್ಮೂಲಕದ ಪೆಕೆಟ್ಟಿನ ಮೇಲಿರುವ ಬಳಸುವ ಮಾರ್ಗಸೂಚಿಯನ್ನು ಸರಿಯಾಗಿ ಓದಿ.

ಬಿಳಿ ಮದ್ಯ ಮತ್ತು ಉಪ್ಪು

ಕೇಳುವಾಗ ಅಷ್ಟು ಪರಿಣಾಮಕಾರಿ ಎಂದು ಅನ್ನಿಸದೇ ಹೋದರೂ ನಿಮ್ಮ ಅಡುಗೆಯ ಮನೆಯಲ್ಲಿರುವ ಹಲವು ಸಾಮಗ್ರಿಗಳು ಬಿಳಿ ಸೋಫಾದ ಮೇಲಾದ ಕೆಂಪಗಿನ ಮದ್ಯದ ಕಲೆಯನ್ನು ತೆಗೆಯಲು ಬಹಳ ಪರಿಣಾಮಕಾರಿಯಾದ ಅಸ್ತ್ರ. ಬಿಳಿಯ ಮದ್ಯ ಮತ್ತು ಉಪ್ಪು ಕೆಂಪು ಮದ್ಯದ ಕಲೆಗಳನ್ನು ತೆಗೆಯಲು ರಾಮಬಾಣ. ದ್ರವ ಪದಾರ್ಥವನ್ನು ಹೀರುವ ಕಾಗದದ ಮೂಲಕ ಮೊದಲು ಸಾಧ್ಯವಾದಷ್ಟು ದ್ರವ ಪದಾರ್ಥವನ್ನು ತೆಗೆಯಲು ಪ್ರಯತ್ನಿಸಿ. ನಂತರ ಬಿಳಿ ಮದ್ಯ ಅಥವಾ ನೀರನ್ನು ಆ ಕಲೆಯ ಮೇಲೆ ಚಿಮುಕಿಸಿ. ನಂತರ ಅಡುಗೆ ಉಪ್ಪನ್ನು ಬಿಳಿ ಮದ್ಯ ಮತ್ತು ಮದ್ಯದ ಕಲೆಯ ಮೇಲೆ ಹಾಕಿ. ಕಲೆಯನ್ನು ಹೀರಲು 10-15 ನಿಮಿಷಗಳ ಹಾಗೆಯೇ ಬಿಡಿ. ಎರಡು ಕಪ್ ಬಿಸಿ ನೀರಿಗೆ 1 ಚಮಚ ಬಟ್ಟೆ ಒಗೆಯುವ ಮಾರ್ಜಕವನ್ನು ಹಾಕಿ ತಯಾರಿಸಿಡಿ. ಹಾಗೂ ಇದನ್ನು ಕಲೆಯ ಜಾಗದಲ್ಲಿ ಹಾಕಿ ನೆನೆಯಲಿ ಬಿಡಿ. ಗಾಳಿ ಹಾಕಿ ಒಣಗಿಸಲು ಪ್ರಯತ್ನಿಸಿ ಮತ್ತು ಬೇಕಾದಲ್ಲಿ ಇದನ್ನೇ ಪುನಃ ಮಾಡಿ.

ಡಿಶ್ ಮಾರ್ಜಕ

ಒಂದೊಮ್ಮೆ ಭೋಜನಕೂಟ ನಡೆದ ದಿನ ಕಲೆಯನ್ನು ಗುರುತಿಸಲಾಗದಿದ್ದಲ್ಲಿ ಮತ್ತು ಮರುದಿನ ಈ ಕಲೆ ಕಂಡುಬಂದಲ್ಲಿ 1 ಚಮಚದಷ್ಟು ಡಿಶ್ ಡಿಟರ್ಜೆಂಟ್ ಮತ್ತು ತಣ್ಣೀರನ್ನು ಬಳಸಿ. 1 ಚಮಚ ಡಿಶ್ ಡಿಟರ್ಜೆಂಟ್ ಮತ್ತು 2 ಕಪ್ ನೀರನ್ನು ಹಾಕಿ ಕಲಕಿ ಮತ್ತು ಒಂದು ಸ್ಪಂಜನ್ನು ಬಳಸಿ ಕಲೆಯ ಮೇಲಿಡಿ. ಒಂದು ಬಿಳಿ ಬಣ್ಣದ ನೀರನ್ನು ಹೀರುವ ಕಾಗದವನ್ನು ಬಳಸಿ ಆ ಕಲೆ ಹೋಗುವ ತನಕ ಅದರ ಮೇಲೆ ಉಜ್ಜಿರಿ. ಬಿಸಿ ನೀರನ್ನು ಹಾಕಿ ನೆನೆಯಲು ಬಿಡಿ ಮತ್ತು ಹಾಗೆಯೇ ಒಣಗಲಿ.

ಡ್ರೈ ಕ್ಲೀನಿಂಗ್ ದ್ರಾವಕ

ಕೆಲವು ಸಂದರ್ಭಗಳಲ್ಲಿ ಸೋಫಾಗಳು ಯಾವುದೇ ರೀತಿಯ ಗೃಹಬಳಕೆಯ ಸಾಮಗ್ರಿಗಳಿಗೆ ವರ್ತಿಸುವುದಿಲ್ಲ. ಅಂತಹ ಬಟ್ಟೆಗಳಿಗೆ ಅದರ ತಯಾರಕರು ಡ್ರೈ ಕ್ಲೀನಿಂಗ್ ಅನ್ನು ಸಲಹೆ ಮಾಡಿದ್ದಲ್ಲಿ ಡ್ರೈ ಕ್ಲೀನಿಂಗ್ ದ್ರಾವಕವನ್ನು ಬಳಸಿ. ಆ ದ್ರಾವಕದ ಮೇಲಿರುವ ಸೂಚನೆಗಳನ್ನು ಓದಿ, ಅದು ನಿಮ್ಮಲ್ಲಿರುವ ಬಟ್ಟೆಯ ಮೇಲೆ ಮತ್ತು ಆಗಿರುವ ಕಲೆಯ ಮೇಲೆ ಪರಿಣಾಮಕಾರಿ ಆಗಿದೆಯೇ ಎಂದು ಪರೀಕ್ಷಿಸಿ. ಅದರ ಮೇಲೆ ಸೂಚಿಸಿರುವ ಹಾಗೆ ಅದನ್ನು ಬಳಸಿ ಮತ್ತು ಕಲೆಯನ್ನು ತೆಗೆಯಿರಿ.

English summary

Method to Get Red Wine Stains | ಕೆಂಪು ಮದ್ಯದ ಕಲೆ ಹೋಗಲಾಡಿಸುವುದು ಹೇಗೆ?

As every fabric reacts to stains differently, no stain removal method is guaranteed to remove red wine 100 percent of the time. A quick reaction, however, and knowing which products to use helps improve the likelihood of the couch coming clean.
Story first published: Friday, January 25, 2013, 16:26 [IST]
X
Desktop Bottom Promotion