Latest Updates
-
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ -
ಮದುವೆಯಾದ ತಕ್ಷಣ ಸ್ವಾತಂತ್ರ್ಯ ಕೊನೆಗೊಳ್ಳುವುದಿಲ್ಲ: ದಾಂಪತ್ಯದಲ್ಲಿ 'ಸಮ್ಮತಿ'ಯ ಮಹತ್ವವೇನು? -
ಕೇರಳದಲ್ಲಿ ಭಾರೀ ಮಳೆ: ಯೆಲ್ಲೋ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆ ಕ್ರಮಗಳು ಅತ್ಯಗತ್ಯ -
ಗಣೇಶ ಹಬ್ಬದ ಪ್ರಸಾದ ತಯಾರಿಸುತ್ತಿದ್ದೀರಾ? ಕಲಬೆರಕೆ ತಡೆಯಲು ಮತ್ತು ಸುರಕ್ಷಿತ ಪ್ರಸಾದಕ್ಕೆ ಇಲ್ಲಿದೆ ಮಹತ್ವದ ಟಿಪ್ಸ್ -
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು?
ಸೊಳ್ಳೆ ಬರದಂತೆ ತಡೆಯುವುದು ಹೇಗೆ?
ಸೊಳ್ಳೆ ಕಡಿತವನ್ನು ನಿವಾರಿಸಲು ನಾವು ಮನೆಯಲ್ಲಿ ಹಲವಾರು ರಾಸಾಯನಿಕ ಪದಾರ್ಥಾ ಆಧಾರಿತ ಉತ್ಪನ್ನಗಳನ್ನು ಬಳಸುತ್ತೇವೆ. ಆದರು ಈ ಉತ್ಪನ್ನಗಳು ಕಡಿಮೆ ಸುರಕ್ಷತೆಯನ್ನು ಹೊಂದಿದ್ದು, ಆರೋಗ್ಯದ ಮೇಲೆ ದುಷ್ಪರಿಣಾಮವನ್ನು ಬೀರುತ್ತವೆ.
ಅದಕ್ಕಾಗಿ ನಾವು ಇಲ್ಲಿ ನಿಮಗಾಗಿ ಕೆಲವು ಪ್ರಾಕೃತಿಕವಾಗಿ ಲಭ್ಯವಿರುವ ಪರಿಹಾರೋಪಾಯಗಳನ್ನು ನೀಡುತ್ತಿದ್ದೇವೆ, ನೋಡಿ:

ತೆಂಗಿನ ನಾರು: ಮೊದಲಿನಿಂದಲು ತೆಂಗಿನ ಕಾಯಿಯ ಒಣ ನಾರನ್ನು ಸೊಳ್ಳೆ ನಿವಾರಕವನ್ನಾಗಿ ಬಳಸಲಾಗುತ್ತಿದೆ. ಮೊದಲು ತೆಂಗಿನ ಕಾಯಿಯ ನಾರನ್ನು ತೆಗೆದುಕೊಂಡು ಬೆಂಕಿ ಹಚ್ಚಿ ಹೊಗೆ ಬರುವಂತೆ ಮಾಡಿ, 5-6 ನಿಮಿಷಗಳ ಕಾಲ ನಿಮ್ಮ ಕೋಣೆಯಲ್ಲಿ ಇಡಿ. ಈ ಹೊಗೆಯಿಂದ ಸೊಳ್ಳೆಗಳು ಓಡಿ ಹೋಗುತ್ತವೆ. ತೆಂಗಿನ ನಾರು ಹೊಗೆ ಉಂಟು ಮಾಡಿದರು ಅದು ಆರೋಗ್ಯಕ್ಕೆ ಒಳ್ಳೆಯದೇ ಆಗಿದೆ.
ಕರ್ಪೂರ ಗಂಧಕ: ಕರ್ಪೂರ ಗಂಧಕವು ಸೊಳ್ಳೆಗಳ ಪ್ರಬಲ ಶತ್ರು. ಈ ಅಂಶಗಳು ಕರ್ಪೂರದಲ್ಲಿ ದೊರೆಯುತ್ತವೆ. ಕರ್ಪೂರವನ್ನು ನಿಮ್ಮ ಕೋಣೆಯಲ್ಲಿ ಹಚ್ಚಿ, ಸ್ವಲ್ಪ ಹೊತ್ತಿನ ನಂತರ ನೋಡಿ, ಸೊಳ್ಳೆಗಳು ಆ ಕೋಣೆಯಲ್ಲಿ ಇಲ್ಲದಿರುವುದನ್ನು ನೀವು ಗಮನಿಸುತ್ತೀರಿ.
ಸೀಮೆ ಎಣ್ಣೆ ಮತ್ತು ಕರ್ಪೂರ: ಸೀಮೆ ಎಣ್ಣೆಯ ವಾಸನೆ ಅಷ್ಟೇನು ಹಿತಕರವಾಗಿರುವುದಿಲ್ಲ. ಆದ್ದರಿಂದ ಸೀಮೆ ಎಣ್ಣೆಯನ್ನು ಕರ್ಪೂರದ ಜೊತೆಗೆ ಬೆರೆಸಿ, ಅದನ್ನು ಕೋಣೆಯಲ್ಲಿ ಸಿಂಪಡಿಸಿ. ಸ್ವಾಭಾವಿಕವಾಗಿ ಸೊಳ್ಳೆಗಳು ಅಲ್ಲಿಂದ ಕಾಲು ಕೀಳುತ್ತವೆ. ನಿಮಗೆ ಇನ್ನು ಸೊಳ್ಳೆ ಕಚ್ಚುವ ಭೀತಿ ಇರುವುದಿಲ್ಲ.



Click it and Unblock the Notifications
