Latest Updates
-
ಕಾಲಾಷ್ಟಮಿ 2026: ನಾಳೆ ಕಾಲಾಷ್ಟಮಿ ಆಚರಣೆ, ಶಿವನ ಉಗ್ರವತಾರ ಕಾಲಭೈರವನ ಪೂಜಿಸುವುದು ಏಕೆ? -
ಅಜ್ಜಿಯ ಕಾಲದ ಅಮೃತ! ಬೇಸಿಗೆಯಲ್ಲಿ ದೇಹ ತಂಪಾಗಿರಬೇಕಾ? ಒಂದು ಗ್ಲಾಸ್ ಸಾಕು.. ಟ್ರೈ ಮಾಡಿ ನೋಡಿ -
ಗುರು ನೇರ ಸಂಚಾರ: ಮಾರ್ಚ್ 11 ರಿಂದ ಗಜಕೇಸರಿ ಯೋಗ.. ಈ ರಾಶಿಯವರ ಸಕಲ ಕಷ್ಟಗಳಿಗೂ ಮುಕ್ತಿ ಸಿಗುವ ಕಾಲ -
ದೇಹಕ್ಕೆ ಬಲ ನೀಡುವ ಹುರಿದಕ್ಕಿ ಉಂಡೆ ಸಲೀಸಾಗಿ ಮಾಡಿ! ಇಲ್ಲಿದೆ ಸುಲಭದ ಮನೆಮದ್ದು! -
ಹೋಟೆಲ್ ರುಚಿಯ ಅಕ್ಕಿ ರೊಟ್ಟಿ.. ಮುರಿಯದಂತೆ ಸಾಫ್ಟ್ ಆಗಿ ಮಾಡೋದು ಹೇಗೆ? ಹೊಸಬರಿಗೆ ಕೂಡ ಸುಲಭ -
ಹೊಸ ಮನೆ, ವಾಹನ ಖರೀದಿಸುವ ಯೋಗ! ಜೀವನದಲ್ಲಿ ಹೆಚ್ಚಲಿದೆ ಸಂತಸ -
March 10 Horoscope: ಆದಾಯ ಗಳಿಕೆಯ ಆಸೆಯಿಂದ ಹಣ ಕಳೆದುಕೊಳ್ಳಬೇಡಿ -
ಹುಷಾರ್.. ಈ ರಾಶಿಗಳಿಗೆ ಶನಿಯಿಂದ ಸಂಕಷ್ಟ ಶುರು! ಶನಿಯ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳೋದು ಹೇಗೆ? -
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ!
ನೀವೇ ಚಿನ್ನಾಭರಣಗಳನ್ನು ಸ್ವಚ್ಚಗೊಳಿಸುವುದು ಹೇಗೆ?
ನಿಮ್ಮ ಚಿನ್ನಾಭರಣಗಳನ್ನು ವೃತ್ತಿಪರವಾದ ರೀತಿಯಲ್ಲಿ ಶುಚಿಯಾಗಿಟ್ಟುಕೊಳ್ಳುವ ವಿಚಾರದಷ್ಟು ಮಹತ್ತರವಾದ ವಿಷಯ ಮತ್ತೊಂದಿರಲಾರದು. ಅಂತಹ ವೃತ್ತಿಪರ ಸ್ವಚ್ಚಗೊಳಿಸುವಿಕೆಯು, ನಿಮ್ಮ ಚಿನ್ನಾಭರಣಗಳು, ನೀವು ಪ್ರಥಮ ಬಾರಿಗೆ ಧರಿಸಿದಾಗ ಹೇಗೆ ಲಕ ಲಕ ಹೊಳೆಯುತ್ತಿದ್ದವೋ, ಈಗಲೂ ಅದೇ ರೀತಿ ಮಿಂಚುವಂತೆ ಮಾಡುತ್ತದೆ.
ಆದರೆ, ನಮ್ಮ ದಿನನಿತ್ಯದ ಧಾವಂತದ ನಡುವೆ ಚಿನ್ನಾಭರಣಗಳ ಸ್ವಚ್ಚತೆಗಾಗಿ ಆಭರಣ ಮಳಿಗೆಗೆ ಎಡತಾಕಲು ನಮಗೆ ಪುರುಸೊತ್ತೇ ಸಿಗುವುದಿಲ್ಲ. ಈಗ ನೀವು ನಿಮ್ಮ ಮನೆಯಲ್ಲಿಯೇ ಲಭ್ಯವಿರಬಹುದಾದ ಗೃಹೋಪಯೋಗೀ ಸಾಧನಗಳಾದ ಆಮ್ಲ ಪ್ರತಿಬಂಧಕ (antacid), ಅಲ್ಯೂಮಿನಿಯಂನ ಹಾಳೆ (aluminium foil), ಮತ್ತು ವಿನೆಗರ್ ಇವೇ ಮೊದಲಾದವುಗಳನ್ನು ಬಳಸಿಕೊಂಡು ನಿಮ್ಮ ಆಭರಣಗಳನ್ನು ಸ್ವಚ್ಚಗೊಳಿಸಿಕೊಳ್ಳಬಹುದು.
ಈ ಸಾಧನಗಳನ್ನುಪಯೋಗಿಸಿ ಸ್ವಚ್ಚಗೊಳಿಸುವುದು ಅದೆಷ್ಟು ಸುಲಭ ಎಂದು ನೀವೇ ಈ ಕೆಳಗಿನದ್ದನ್ನು ಓದಿ ತಿಳಿದುಕೊಳ್ಳಿರಿ. ಇದನ್ನು ತಿಳಿದುಕೊಂಡ ಬಳಿಕ, ನೀವು ಮತ್ತೆ ಆಭರಣಗಳ ಸ್ವಚ್ಚತೆಗಾಗಿ ಮಳಿಗೆಗೆ ಭೇಟಿ ನೀಡುವ ಪ್ರಮೇಯವೇ ಬಾರದು.

(ಗಮನಿಸಿ: ರಾಸಾಯನಿಕ ಹಾಗೂ ಇತರ ಕಠಿಣವಾದ ಉಜ್ಜುವಿಕೆಯಂತಹ (abrasive cleaners) ಸಾಧನಗಳನ್ನುಪಯೋಗಿಸಿ ಸ್ವಚ್ಚಗೊಳಿಸುವ ವಿಧಾನಗಳು, ನಾಜೂಕಾದ ಹರಳುಗಳು ಮತ್ತು ಮುತ್ತುಗಳುಳ್ಳ ಆಭರಣಗಳಿಗೆ ಹೇಳಿಸಿದವುಗಳಲ್ಲ. ಇಂತಹ ಆಭರಣಗಳ ಸ್ವಚ್ಚತೆಗಾಗಿ, ಸೋಪು ಮತ್ತು ನೀರನ್ನು ಮಾತ್ರವೇ ಉಪಯೋಗಿಸಿರಿ).
ಅಮೋನಿಯಾ (Ammonia)
ವಜ್ರಗಳು ಹೆಣ್ಣೋರ್ವಳ ಅತ್ಯುತ್ತಮ ಸ್ನೇಹಿತೆಯಾಗಿದ್ದರೂ ಸಹ, ಅವು ಕೊಳಕಾಗಿದ್ದರೆ ಅದು ಅವಳಿಗೆ ಇಷ್ಟವಾಗಲಾರದು. ವಜ್ರಾಭರಣವನ್ನು 1 ಕಪ್ ನಷ್ಟು ಬೆಚ್ಚಗಿನ ನೀರು ಮತ್ತು 1/4 ಕಪ್ ನಷ್ಟು ಅಮೋನಿಯಾ ಮಿಶ್ರಣದ ದ್ರಾವಣದಲ್ಲಿ 15 ನಿಮಿಷಗಳ ಕಾಲ ನೆನೆಸಿ ಇಡಿರಿ. ನಂತರ ಒಂದು ನಯವಾದ ಕೂದಲುಗಳುಳ್ಳ ಟೂಥ್ ಬ್ರಶ್ ಅನ್ನು ಉಪಯೋಗಿಸಿಕೊಂಡು, ಉಳಿದಿರಬಹುದಾದ ಯಾವುದೇ ಧೂಳನ್ನು, ವಿಶೇಷವಾಗಿ ಆಭರಣದ ಕುಸುರಿ ಕೆಲಸದ ಭಾಗಗಳಲ್ಲಿ ಮತ್ತು ಆಭರಣದ ಅಡಿಭಾಗದಲ್ಲಿನ ಧೂಳನ್ನು ತಿಕ್ಕಿ ತೆಗೆಯಿರಿ.
ವಿನೆಗರ್
ನಿಮ್ಮ ಚಿನ್ನ ಮತ್ತು ಹರಳುಗಳ ಆಭರಣಗಳನ್ನು ಸ್ವಚ್ಚಗೊಳಿಸಲು ಬಿಳಿಯ ವಿನೆಗರ್ ನ ಬಳಕೆಯಷ್ಟು ಸುಲಭವಾದ ಮಾರ್ಗವು, ಬಹುಶಃ ಬೇರಾವ ವಸ್ತುವಿನ ಬಳಕೆಯಿಂದಲೂ ಸಹ ಸಾಧ್ಯವಾಗಲಾರದು. ನಿಮ್ಮ ಆಭರಣವನ್ನು ಹಾಗೆಯೇ ಸುಮ್ಮನೆ ವಿನೆಗರ್ ನ ಜಾಡಿಯಲ್ಲಿ ಹಾಕಿ, ಅದನ್ನು 10 ರಿಂದ 15 ನಿಮಿಷಗಳ ಕಾಲ ಹಾಗೆಯೇ ಆ ಜಾಡಿಯಲ್ಲಿಯೇ ಇರಗೊಡಿರಿ ಹಾಗೂ ಮಧ್ಯೆ ಮಧ್ಯೆ ಸ್ವಲ್ಪ ಮಟ್ಟಿಗೆ ಆ ಜಾಡಿಯನ್ನು ಅಲುಗಾಡಿಸುತ್ತಿರಿ. ನಂತರ ಆಭರಣವನ್ನು ಜಾಡಿಯಿಂದ ಹೊರತೆಗೆದು, ಅಗತ್ಯವೆನಿಸಿದರೆ ನಯವಾದ ಕೂದಲುಳ್ಳ ಟೂಥ್ ಬ್ರಶ್ ನಿಂದ ಉಜ್ಜಿರಿ.
ಆಮ್ಲ ಪ್ರತಿಬಂಧಕ (antacid)
ನಿಮ್ಮ ಹೊಟ್ಟೆಯನ್ನು ಅಮ್ಲಪ್ರಕೋಪದಿಂದ ಶಮನಗೊಳಿಸಲು ಕೆಲಸ ಮಾಡುವ ಆಮ್ಲ ಪ್ರತಿಬಂಧಕದ (antacid) ಬುರುಗು ಅಥವಾ ನೊರೆಯ ಶಕ್ತಿಯು, ನಿಮ್ಮ ಆಭರಣಗಳನ್ನೂ ಕೂಡ ಸ್ವಚ್ಚ ಮಾಡಿಬಿಡಬಲ್ಲದು. ಈ ಆಮ್ಲ ಪ್ರತಿಬಂಧಕದ (antacid) ದ ಎರಡು ಗುಳಿಗೆಗಳನ್ನು ಬೆಚ್ಚಗಿನ ನೀರಿರುವ ಲೋಟದಲ್ಲಿ ಹಾಕಿ, ನೊರೆಯುoಟಾಗುವoತೆ ಮಾಡಿರಿ. ನಿಮ್ಮ ಆಭರಣವನ್ನು ಈ ಲೋಟದಲ್ಲಿ ಎರಡು ನಿಮಿಷಗಳ ಕಾಲ ಇರಗೊಟ್ಟು ನಂತರ ಹೊರತೆಗೆದು ತೊಳೆಯಿರಿ.
ಅಲ್ಯೂಮಿನಿಯಂ ನ ತೆಳು ಹಾಳೆ (aluminium foil)
ನಿಮ್ಮ ಬೆಳ್ಳಿಯ ಪಾತ್ರೆಗಳನ್ನು ತೊಳೆಯಲು ಉಪಯೋಗಿಸುವ ರೀತಿಯಲ್ಲಿಯೇ, ನಿಮ್ಮ ಕಾಂತಿಯನ್ನು ಕಳೆದುಕೊಂಡ ಬೆಳ್ಳಿಯ ಆಭರಣಗಳನ್ನು ಸ್ವಚ್ಚ ಗೊಳಿಸಲು ಅಲ್ಯೂಮಿನಿಯಂನ ತೆಳುವಾದ ಹಾಳೆಯನ್ನು ಬಳಸಿರಿ. ಅಲ್ಯೂಮಿನಿಯಂ ನ ಒಂದು ಚೂರಿನಿಂದ, ಒಂದು ಟ್ರೇಯ ಮೇಲೆ ರೇಖೆಯನ್ನು ಎಳೆದು, ನಿಮ್ಮ ಬೆಳ್ಳಿಯ ಆಭರಣಗಳನ್ನು ಆ ರೇಖೆಯ ಮೇಲಿಡಿರಿ. ನಿಮ್ಮ ಆಭರಣದ ಮೇಲೆ ಈಗ ಅಡುಗೆ ಸೋಡಾದ ಒಂದು ಪದರವನ್ನು ಚಿಮುಕಿಸಿರಿ, ನಂತರ ಕುಡಿಯುವ ನೀರನ್ನು ಅದರ ಮೇಲೆ ನಿಧಾನವಾಗಿ ಸುರಿಯಿರಿ. ನಿಮ್ಮ ಆಭರಣದ ಮೇಲಿದ್ದ ಕಲೆಗಳು ಈಗ ಅಲ್ಯೂಮಿನಿಯಂ ನ ಚೂರಿಗೆ ವರ್ಗಾಯಿಸಲ್ಪಡುತ್ತವೆ. ನಿಮ್ಮ ಆಭರಣದ ಎಲ್ಲಾ ಭಾಗಗಳೂ ಕೂಡ ಅಲ್ಯೂಮಿನಿಯಂ ನ ಸಂಪರ್ಕಕ್ಕೆ ಬರುವಂತೆ ಅದನ್ನು ನಡುನಡುವೆ ಅತ್ತಿತ್ತ ಚಲಿಸುತ್ತಿರಬೇಕಾಗಬಹುದು. ಇದಾದ ನಂತರ ನಿಮ್ಮ ಆಭರಣವನ್ನು ತೆಗೆದು ನೀರಿನಿಂದ ತೊಳೆಯಿರಿ.
ಸೋಪು ಮತ್ತು ನೀರು
ಮುತ್ತುಗಳು ಮತ್ತು ಪೂರ್ಣಪ್ರಮಾಣದ ಆಭರಣಗಳಲ್ಲದ, ನಾಜೂಕಾದ ಮತ್ತು ರಂಧ್ರಗಳಿರುವ ಅಲಂಕಾರಿಕ ವಸ್ತುಗಳನ್ನು ಸ್ವಚ್ಚಗೊಳಿಸಲು, ಅವುಗಳು ಅತ್ಯುತ್ತಮವಾದ ರೀತಿಯಲ್ಲಿ ಕಾಣುವಂತೆ ಮಾಡಲು ನಿಮಗೆ ಸೋಪು ಮತ್ತು ನೀರಿನ್ನು ಹೊರತುಪಡಿಸಿ ಬೇರಾವುದರ ಅವಶ್ಯಕತೆಯೂ ಇಲ್ಲ. ಎರಡು ಕಪ್ ಗಳಷ್ಟು ಬೆಚ್ಚಗಿನ ನೀರು ಮತ್ತು ಕೆಲವು ಹನಿಗಳಷ್ಟು ಹದವಾದ woolite ನಂತಹ ಮಾರ್ಜಕ (detergent)ಗಳ ಮಿಶ್ರಣವುಳ್ಳ ದ್ರಾವಣವೊಂದರಲ್ಲಿ ನಿಮ್ಮ ಮುತ್ತುಗಳ ಹಾರವನ್ನು ಕೂಡಲೇ ಅದ್ದುವುದರ ಮೂಲಕ ಸ್ವಚ್ಚಗೊಳಿಸಿರಿ.
ನಿಮ್ಮ ಹಾರದ ಪ್ರತಿಯೊಂದು ಮುತ್ತನ್ನೂ ಸಹ ಒಂದು ತೆಳುವಾದ, ಒಣ ಹತ್ತಿ ಬಟ್ಟೆಯನ್ನು ಉಪಯೋಗಿಸಿ ಒರೆಸಿರಿ ಮತ್ತು ಆ ಮಾಲೆಯನ್ನು ನೆಲದ ಮೇಲಿಟ್ಟು ಒಣಗಲು ಬಿಡಿರಿ. (ಮುತ್ತುಗಳನ್ನು ಪದೇ ಪದೇ ಧರಿಸುವುದರಿಂದ ವಾಸ್ತವವಾಗಿ, ಅವು ಹೊಳಪುಳ್ಳದ್ದಾಗಿಯೇ ಉಳಿಯುತ್ತವೆ, ಅದ್ದರಿಂದ ಅವುಗಳನ್ನು ಆಗಾಗ್ಗೆ ಧರಿಸಲು ಹಿಂದೇಟು ಹಾಕದಿರಿ). ಪೂರ್ಣ ಪ್ರಮಾಣವಲ್ಲದ ಆಭರಣಗಳನ್ನು ಸ್ವಚ್ಚಗೊಳಿಸಲು ಸೋಪಿನ ಅವಶ್ಯಕತೆಯೂ ಇಲ್ಲ. ನಯವಾದ ಕೂದಲುಗಳುಳ್ಳ ಒಂದು ಟೂಥ್ ಬ್ರಶ್ ಅನ್ನು ಹಾಗೆಯೇ ಸುಮ್ಮನೆ ಬೆಚ್ಚಗಿನ ನೀರಿನಲ್ಲಿ ಒಮ್ಮೆ ಅದ್ದಿ ತೆಗೆದು ಆ ಆಭರಣದ ಕಲ್ಲುಗಳನ್ನು ಉಜ್ಜಿಬಿಡಿರಿ. ನಂತರ ಒಂದು ಸ್ವಚ್ಚವಾದ ಬಟ್ಟೆಯಿಂದ ಅದನ್ನು ಒರೆಸಿ ಒಣಗಿಸಿ ತದನಂತರ ಅದನ್ನು ಒಳಗಿಡುವ ಮೊದಲು ಕೆಲವು ಘಂಟೆಗಳ ಕಾಲ ಗಾಳಿಯಲ್ಲಿ ಒಣಗಲು ಬಿಡಿರಿ.



Click it and Unblock the Notifications











