Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಮನೆಯ ಅಂದ ಹೆಚ್ಚಿಸುವಲ್ಲಿ ಕನ್ನಡಿ ಹೇಗೆ ಸಹಕಾರಿ?
ಹೆಚ್ಚು ಬೆಳಕು ಮತ್ತು ಹೊಳಪುಗಳನ್ನು ತರುವದರಿಂದ ಕನ್ನಡಿಗಳನ್ನು ತುಂಬಾ ಹಿಂದಿನಿಂದಲೂ ಮನೆಗಳಲ್ಲಿ ಬಳಸಲಾಗುತ್ತಿದೆ. ಸರಳವಾದ ದೊಡ್ಡ ನಿಲುಗನ್ನಡಿಯನ್ನು ಒಂದೆಡೆ ತೂಗುಹಾಕಿದಾಕ್ಷಣವೇ ನಿಮ್ಮಲ್ಲಿ " ಲುಕಿಂಗ್ ಗ್ಲಾಸ್" ಪರಿಣಾಮದ ಮಾಂತ್ರಿಕತೆ ಉಂಟಾಗಿಬಿಡುತ್ತದೆ. ಅಂತೆಯೇ , ಮನೆಗಳಲ್ಲಿ ಇನ್ನೂ ಹೆಚ್ಚು ರಚನಾತ್ಮಕವಾಗಿ ವಿವಿಧ ಬಗೆಯ ಕನ್ನಡಿಗಳನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಬಹುದು.
ಮನೆಯ ಅಂಗಳದಲ್ಲಿ ಕನ್ನಡಿ ಇಡುವ ಮೂಲಕ ಒಂದು ರಹಸ್ಯವಾದ ಕೋಣೆಯನ್ನು ರಚಿಸಬಹುದು ಅಥವಾ ನಿಮ್ಮ ಉದ್ಯಾನದ ಮಾರ್ಗ ಸೂಚಿಯಾಗಿಯೂ ಬಳಸಬಹುದು. ಒಡೆದ ಕನ್ನಡಿಗಳನ್ನೂ ಬಳಸಿಕೊಂಡು ಅನೇಕ ಸುಂದರ ರಚನೆಗಳನ್ನು ಸೃಷ್ಟಿಸಬಹುದು.

ಮೊಸಾಯಿಕ್ ಕನ್ನಡಿಗಳು: ಕನ್ನಡಿಯ ತುಣುಕುಗಳಿಂದ ನಿಮ್ಮ ಮನೆಯನ್ನು ಅಲಂಕರಿಸುವುದು ಒಂದು ಉತ್ತಮ, ರಚನಾತ್ಮಕ ಮಾರ್ಗವಾಗಿದೆ. ನೀವು ಕಲೆಯಲ್ಲಿ ಆಸಕ್ತರಾಗಿದ್ದಲ್ಲಿ ಒಡೆದ ಕನ್ನಡಿಯ ತುಣುಕುಗಳು, ವರ್ಣರಂಜಿತ ಹಂಚುಗಳನ್ನು ಬಳಸಿ ಮೊರೊಕನ್ ಶೈಲಿಯಲ್ಲಿ ಮೇಜಿನ ಮೇಲ್ಭಾಗ ಅಥವಾ ಗೋಡೆಯ ಫಲಕಗಳನ್ನು ರಚಿಸಬಹುದು. ಇದರಿಂದ ಸೂರ್ಯರಶ್ಮಿಯೂ ಕೋಣೆಯೊಳಗೆ ಯತೇಚ್ಚವಾಗಿ ಪಸರಿಸಿ ಮನಸ್ಸನ್ನು ಪ್ರಫುಲ್ಲಗೊಳಿಸುವದು.
ಪುರಾತನ ಕನ್ನಡಿಗಳು: ಹಳೆಯ, ಕಲೆಗಳಾಗಿರುವ ಕನ್ನಡಿಗಳು ಪ್ರಾಚೀನ ಕಾಲದ ಭಾವವನ್ನು ಬಿಂಬಿಸುತ್ತವೆ . ಅಂಥವುಗಳು ಒಳಾಂಗಣ ಅಲಂಕಾರಕ್ಕೆ ಗೋಥಿಕ್ ಸ್ಪರ್ಶ ನೀಡುವಲ್ಲಿ ಹೆಚ್ಚು ಉಪಯೋಗಕಾರಿ. ಅಲ್ಪಬೆಲೆಯ ಮಾರುಕಟ್ಟೆಗಳಿಂದ ಅಥವಾ ಸಣ್ಣ ಮಾರಾಟಗಾರರಿಂದ ಹಳೆಯ ಕನ್ನಡಿಗಳು ಸಂಗ್ರಹಿಸಿ, ಅವುಗಳನ್ನು ಮನೆಯ ಒಂದು ಮೂಲೆಯಲ್ಲಿ ಗುಂಪಾಗಿ ನೇತುಹಾಕಿದರೆ ಒಂದು ಮೋಡದ ರಚನೆ ಅಥವಾ ಕಳೆದು ಹೋದ ಸಮಯದ ಲಾವಣ್ಯ ಮರಳಿಬೊಂದ ಅನುಭವವಾಗುವುದು.ಅವುಗಳ ಚೌಕಟ್ಟುಗಳನ್ನು ಹೊಂದಿಸುವಲ್ಲಿ ಶ್ರಮಹಾಕದೇ; ಅಸಮ ಹಾಗೂ ತುಣುಕು ಕನ್ನಡಿಗಳ ಸರಳ ಅಲಂಕಾರವೇ ಆಕರ್ಷಿತವಾಗಿರುತ್ತದೆ ಎಂಬುದನ್ನು ನೆನಪಿಡಿ.
ಚೌಕಟ್ಟುಗಳ ಅಲಂಕಾರ: ಕೋಣೆಯ ಪರಿಕಲ್ಪನೆಯನ್ನಾಧರಿಸಿ ಕನ್ನಡಿಗಳ ಚೌಕಟ್ಟುಗಳನ್ನು ಅಲಂಕರಿಸಬೇಕು. ಅಂದರೆ ಸ್ನಾನಗೃಹದ ಕನ್ನಡಿಯನ್ನು ಸಮುದ್ರದಲ್ಲಿ ಸಿಗುವ ಶಂಖ್,ಕಪ್ಪೆಚಿಪ್ಪು , ಗಾಜು ಅಥವಾ ಕೆಲವು ಸಣ್ಣ ಕಟ್ಟಿಗೆ ಚೂರುಗಳಿಂದ ಅಲಂಕರಿಸುವದರಿಂದ ಆ ಸ್ನಾನಗೃಹಕ್ಕೆ ಸಮುದ್ರ ದಂಡೆಯ ಮೆರಗು ನೀಡಿದಂತಗುತ್ತದೆ.
ಕನ್ನಡಿಯಲ್ಲಿ ಕಿಡಕಿ: ದೊಡ್ಡ ಕನ್ನಡಿಯ ಮುಂದೆ ಒಂದು ಸರಳವಾದ ಕಿಡಕಿಚೌಕಟ್ಟನ್ನು ಇರಿಸುವ ಮೂಲಕ ಕನ್ನಡಿಯಲ್ಲೂ ಕಿಡಕಿಯ ಪರಿಣಾಮ ರಚಿಸಬಹುದು.ಅದರ ಕೆಳಗೆ ಕಪಾಟನ್ನಿಟ್ಟು ಅದರ ಮೇಲೆ ಹಲವರು ಗಿಡ ಗಂಟಿಗಳನ್ನು ಹಾಕಿರಿ. ಕನ್ನಡಿ ದೊಡ್ಡದಿದ್ದರೂ ಅಥವಾ ಚಿಕ್ಕದಿದ್ದರೂ ಅದರ ಒಳಗೊಂದು ಅದ್ಭುತ ಲೋಕ ಅನಾವರಣಗೊಂಡಿರುತ್ತದೆ.
ವಿಭಿನ್ನ ಸ್ಥಳಗಳಲ್ಲಿ ಕನ್ನಡಿಗಳು
ಕನ್ನಡಿಯ ಅಂಚುಗಳಿಗೆ ಕಡ್ಡಿಗಳನ್ನು ಹಚ್ಚಿ ಕತ್ತಲಿರುವ ಕೋಣೆಗಳಲ್ಲಿ , ಉಗ್ರಾಣಗಳಲ್ಲಿ ಮತ್ತು ಕಪಾಟುಗಳಲ್ಲಿ ಬೆಳಕನ್ನು ಪ್ರತಿಫಲಿಸಲು ಇಡಬಹುದು. ಫೋಟೋ ಚೌಕಟ್ಟುಳ್ಳ ಕನ್ನಡಿಯನ್ನು ದೀಪದ ಹಿಂದಿರಿಸುವದರಿಂದ ಆ ಕೋಣೆಯಲ್ಲಿ ಹೆಚ್ಚು ಬೆಳಕು ಪಸರಿಸುವುದು. ಒಂದು ಹಬ್ಬದ ಊಟದ ಮೇಜಿಗೆ ಹೊಳಪು ನೀಡಲು ಸ್ಥಳದಲ್ಲಿ ಮ್ಯಾಟ್ಸ್ ಮತ್ತು ಕನ್ನಡಿಯ ಚೂರುಗಳನ್ನು ಬಳಸಿದ ಚಾಪೆ ಮತ್ತು ಕೋಸ್ಟರಗಳನ್ನು ಬಳಸಬಹುದು .ಬಳಸುವ ಮುನ್ನ ಅವುಗಳನ್ನು ಸುರಕ್ಷತಾ ಗಾಜಿನಿಂದ ಮಾಡಲಾಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. "ಆಕಾಶ ದೀಪ" ಪರಿಣಾಮ ರಚಿಸಲು ಹಜಾರದ ಮೇಲ್ಛಾವಣಿಗೆ ಕನ್ನಡಿಗಳನ್ನು ಜೋಡಿಸಬಹುದು ಇದರಿಂದ ಹಜಾರವು ಪ್ರಕಾಶಮಾನವಾಗುವುದು.
ಉದ್ಯಾನಗಳಲ್ಲಿ ಪ್ರತಿಬಿಂಬ
ತೋಟಗಳಲ್ಲಿ ಕನ್ನಡಿಗಳ ಬಳಕೆ ಒಂದು ಮಾಂತ್ರಿಕತೆಯಿಂದ ಕೂಡಿದೆ ಎನ್ನಬಹುದು. ದೊಡ್ಡ ಆಯತಾಕಾರದ ಕನ್ನಡಿಗಳನ್ನು ಗೋಡೆಗಳ ಮೇಲೆ ನೇರವಾಗಿ ಇರಿಸುವದರಿಂದ ನೋಡುಗರಿಗೆ ಆಚೆ ಮತ್ತೊಂದು ಉಧ್ಯಾನವಿದೆ ಎಂಬ ಭ್ರಮೆ ಮೂಡಿಸುತ್ತದೆ. ಕನ್ನಡಿಯ ಕಡೆಗೆ ಒಂದು ಮಾರ್ಗ ಮಾಡುವುದರಿಂದ ಈ ಭ್ರಮೆಗೆ ಇನ್ನಷ್ಟು ಪುಷ್ಟಿದೊರೆಯುತ್ತದೆ. ನೀವು ಬೇಲಿಗಳು ಮತ್ತು ಕಳಾಹೀನ ಗೋಡೆಗಳ ಮೇಲೆ ಕನ್ನಡಿ-ಕಿಡಕಿಗಳನ್ನು ರಚಿಸಬಹುದು. ಇದರಿಂದ ನಿಮ್ಮ ಹೂದೊಟದ ರಮ್ಯತೆ ಇನ್ನಷ್ಟು ವರ್ಧಿಸುವದು.ಕನ್ನಡಿಗಳನ್ನು ಆದಷ್ಟು ನೆರಳಿರುವ ಸ್ಥಳಗಳಲ್ಲಿ ಇರಿಸಿದರೆ ಒಳ್ಳೆಯದು, ಪ್ರಬಲವಾದ ಪ್ರತಿಫಲಿತ ಬೆಳಕಿನಿಂದ ಗಿಡಗಳಿಗೆ ಅಪಾಯವನ್ನುಂಟಾಗುವ ಸಾಧ್ಯತೆಗಳಿರುತ್ತವೆ.



Click it and Unblock the Notifications
