Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ನಿಂಬೆ-ಕೊತ್ತಂಬರಿ ಸೊಪ್ಪು ತಿಂಗಳಿಗೂ ಹೆಚ್ಚು ಕಾಲ ಹಾಳಾಗದಂತೆ ಇಡಿ..! ಹೇಗೆ ಗೊತ್ತಾ?
ಅಡುಗೆ ಮನೆಯ ಒಂದೊಂದು ವಸ್ತುಗಳನ್ನ ಜೋಪಾನ ಮಾಡಿ ಇಡೋದು ಗೃಹಿಣಿಯರ ಕೆಲಸವಾಗಿರುತ್ತೆ. ಅದ್ರಲ್ಲೂ ಏನಾದರು ಊಟ, ತಿಂಡಿ ಉಳಿದರೆ ಅದನ್ನು ಕೆಡದಂತೆ ಇಡುವುದು ಹೊಡ್ಡ ಸಾಹಸವೆ. ಆದ್ರೆ ಇದರ ಜೊತೆಗೆ ತರಕಾರಿ, ಸೊಪ್ಪುಮ ಹಣ್ಣುಗಳ ಬಹುಬೇಗ ಕೆಟ್ಟು ಹೋಗುತ್ತವೆ. ಇದಕ್ಕಾಗಿ ಫ್ರಿಡ್ಜ್ ಬಳಸುತ್ತಾರೆ. ಆದ್ರೆ ಎಲ್ಲರ ಮನೆಯಲ್ಲೂ ಫ್ರಿಡ್ಜ್ ಇರಬೇಕಲ್ಲ.
ಫ್ರಿಡ್ಜ್‌ನಲ್ಲಿಟ್ಟರೂ ಕೆಲವು ವಸ್ತುಗಳು ಬೇಗ ಕೆಡುತ್ತವೆ. ತರಕಾರಿಗಳನ್ನು ಹೆಚ್ಚು ದಿನ ಫ್ರಿಡ್ಜ್‌ನಲ್ಲೂ ಇಡಲು ಸಾಧ್ಯವಿಲ್ಲ. ಹಣ್ಣುಗಳು, ಚಟ್ನಿ ಹೀಗೆ ಏನೆ ಇಟ್ಟರು ಒಂದು ಅಥವಾ ಎರಡು ದಿನ ಇಡಬಹುದು ಅಷ್ಟೆ. ಆದ್ರೆ ನಾವಿಂದು ಹೇಳುವ ಈ ಟ್ರಿಕ್ಸ್ ಮಾಡಿದ್ರೆ ವರ್ಷಗಳ ಕಾಲ ಕೆಲವೊಂದು ವಸ್ತುಗಳನ್ನ ಹಾಲಾಗದಂತೆ ಇಡಬಹುದು.

ಹಾಗಾದ್ರೆ ಯಾವ ದಿನಬಳಕೆ ವಸ್ತುವನ್ನು ಹೆಚ್ಚು ದಿನಗಳ ಕಾಲ ಹಾಳಾಗದಂತೆ ಇಡಬಹುದು. ಯಾವೆಲ್ಲಾ ವಸ್ತುವನ್ನು ಫ್ರಿಡ್ಜ್‌ನಲ್ಲಿ ಈ ರೀತಿ ಇಟ್ಟರೆ ಅದು ವರ್ಷಗಳ ಕಾಲ ಹಾಳಾಗದೆ ಇರಲಿದೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ನಿಂಬೆ ಹಣ್ಣು
ನಿಂಬೆ ಹಣ್ಣು ನಿತ್ಯದ ಅಡುಗೆಗೆ ಬೇಕಾಗಿರುವ ಪದಾರ್ಥ. ಆದ್ರೆ ಒಮ್ಮೆ ಐದಾರು ನಿಂಬೆ ಹಣ್ಣು ತಂದರೆ ಒಂದನ್ನು ಬಳಸುತ್ರೇವೆ ಉಳಿದವನ್ನು ಹಾಗೆಯೇ ಇಡುತ್ತೇವೆ, ಆದ್ರೆ ಹಾಗೆ ಇಟ್ಟ ನಿಂಬೆ ಹಣ್ಣುಗಳು ಬೇಗ ಕೆಡಲು ಆರಂಭವಾಗುತ್ತವೆ. ಜೊತೆಗೆ ಬೇಸಿಗೆಯಲ್ಲಿ ನಿಂಬೆ ಹಣ್ಣಿನ ಬೆಲೆ ಗಗನಕ್ಕೇರಿರುತ್ತದೆ. ಹೀಗಾಗಿ ಹಲವರು ಕಡಿಮೆ ದರವಿದ್ದಾಗ ಹೆಚ್ಚು ಹಣ್ಣುಗಳ ತಂದಿಡುತ್ತಾರೆ. ಆದ್ರೆ ಇವನ್ನು ಫ್ರಿಡ್ಜ್‌ನಲ್ಲಿ ಇಟ್ಟರು ಸಹ ಬಹುದಿನ ಬಾಳಿಕೆ ಬರುವುದಿಲ್ಲ ಬೇಗ ಕೆಟ್ಟು ಹೋಗುತ್ತವೆ.
ಆದ್ರೆ ನಾವಿಂದು ಈ ನಿಂಬೆ ಹಣ್ಣನ್ನು ಸುಮಾರು 3 ರಿಂದ 4 ತಿಂಗಳು ಶೇಖರಿಸಿ ಇಡುವುದು ಹೇಗೆ ಎಂಬುದನ್ನು ತಿಳಿಸುತ್ತೇವೆ ನೋಡಿ. ಮೊದಲು ಎಲ್ಲಾ ನಿಂಬೆಯನ್ನು ಒಂದು ಪಾತ್ರೆಯಲ್ಲಿ ಹಾಕಿ ಚೆನ್ನಾಗಿ ತೊಳೆದು ಬಟ್ಟೆಯಿಂದ ಒರೆಸಿಕೊಂಡು ಅದರಲ್ಲಿ ನೀರಿನ ಅಂಶ ಇರದಂತೆ ಒರೆಸಿಕೊಳ್ಳಿ. ಬಳಿಕ ಒಂದು ಸ್ಪೂನ್‌ನಲ್ಲಿ ಕೊಬ್ಬರಿ ಎಣ್ಣೆ ತೆಗೆದುಕೊಂಡು ಕೈಗೆ ಹಚ್ಚಿಕೊಂಡು ಎಲ್ಲಾ ನಿಂಬೆ ಹಣ್ಣಗಳಿಗೂ ಸವರಿಕೊಳ್ಳಿ. ನಂತರ 5 ನಿಮಿಷ ಗಾಳಿಗೆ ಇಡಬೇಕು. ಇಲ್ಲವೆ ಫ್ರಿಡ್ಜ್‌ನಲ್ಲಿ 5 ನಿಮಿಷ ಇಡಬೇಕು.
ಈಗ ನೀವು ನಿಂಬೆಯನ್ನು ಯಾವ ಪಾತ್ರೆಯಲ್ಲಿ ಹಾಕಿ ಶೇಖರಿಸಿಡಲು ಮುಂದಾಗುತ್ತೀರೋ ಆ ಪಾತ್ರೆ ಅಥವಾ ಡಬ್ಬ ತೆಗೆದುಕೊಂಡು ಅದರ ತಳಕ್ಕೆ ಪೇಪರ್ ಅಥವಾ ಟಿಷ್ಯು ಪೇಪರ್ ಇಡಬೇಕು. ನಂತರ ಅದರಲ್ಲಿ ನಿಂಬೆ ಹಣ್ಣು ಹಾಕಬೇಕು. ನಂತರ ಮೇಲೆ ಸಹ ಪೇಪರ್ ಹಾಕಿ ಮುಚ್ಚಳ ಮುಚ್ಚಿ ಫ್ರಿಡ್ಜ್‌ನಲ್ಲಿ ಇಟ್ಟರೆ ಮೂರರಿಂದ ನಾಲ್ಕು ತಿಂಗಳ ಕಾಲ ಇಡಬಹುದು.
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಸೊಪ್ಪನ್ನು ನಾವು ನಿತ್ಯ ಬಳಸುತ್ತೇವೆ. ಈಗಂತು ಕೊತ್ತಂಬರಿ ಸೊಪ್ಪು ದುಬಾರಿಯಾಗುತ್ತಿದೆ. ಆದ್ರೆ ಒಮ್ಮೆ ಕೊತ್ತಂಬರಿ ಸೊಪ್ಪು ಬಹುಬೇಗ ಒಣಗಿ ಹೋಗುತ್ತೆ. ಏನೆ ಮಾಡಿದ್ರೂ ಕೊತ್ತಂಬರಿ ಸೊಪ್ಪು ವಾರದ ವರೆಗೆ ಇಡಬಹುದು ಅಷ್ಟೆ. ಆದರೆ ನಾವಿಂದು ಹೇಳುವ ವಿಧಾನದಲ್ಲಿ ಕೊತ್ತಂಬರಿ ಸೊಪ್ಪು ಶೇಖರಿಸಿಟ್ಟರೆ ತಿಂಗಳ ಕಾಲ ಇಡಬಹುದು.
ಮೊದಲು ಕೊತ್ತಂಬರಿ ಸೊಪ್ಪಿನ ಬೇರು ಕತ್ತರಿಸಿ ಸ್ವಚ್ಛ ಮಾಡಿಕೊಳ್ಳಿ, ಬಳಿಕ ಚೆನ್ನಾಗಿ ತೊಳೆದು ಒಣಗಲು ಬಿಡಿ. ನೀರಿನ ಪಸೆ ಒಣಗಬೇಕು. ನಂತರ ಚಿಕ್ಕದಾಗಿ ಕತ್ತರಿಸಿಕೊಳ್ಳಬೇಕು. ನಂತರ ಇದನ್ನು ಒಂದು ತಟ್ಟೆಗೆ ಹಾಕಿ ಹರಡಿಕೊಂಡು 4 ಗಂಟೆ ಒಣಗಬೇಕು. ನಂತರ ಒಂದು ಪ್ಲಾಸ್ಟಿಕ್ ಡಬ್ಬಿ ತೆಗೆದುಕೊಂಡು ಚೆನ್ನಾಗಿ ಒರೆಸಿಕೊಳ್ಳಿ, ಒಳಗೆ ಬಟ್ಟೆ ಹಾಕಿ ಒರೆಸಿ, ನಂತರ ಒಳಗೆ ಒಂದು ಸಣ್ಣ ಪೇಪರ್ ಹಾಕಿಕೊಂಡು ಅದಕ್ಕೆ ಕತ್ತರಿಸಿಕೊಂಡ ಕೊತ್ತಂಬರಿ ಸೊಪ್ಪು ಹಾಕಿ ಚೆನ್ನಾಗಿ ಗಟ್ಟಿಯಾಗಿ ಮುಚ್ಚಳ ಹಾಕಿ ಫ್ರಿಡ್ಜ್‌ನಲ್ಲಿಡಿ. ಇದು 1 ತಿಂಗಳ ವರೆಗೂ ಸೊಪ್ಪು ಹಾಳಾಗುವುದರಿಂದ ತಡೆಯಬಹುದು.



Click it and Unblock the Notifications
