Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಬೆಳ್ಳುಳ್ಳಿ ತುಂಬಾ ಸಮಯ ಇಟ್ಟರೂ ಹಾಳಾಗದಿರಲು ಸ್ಟೋರಿಂಗ್ ಟಿಪ್ಸ್
ಬೆಳ್ಳುಳ್ಳಿಯನ್ನು ತುಂಬಾ ಸಮಯ ಇಡುವಾಗ ಅದನ್ನು ಸರಿಯಾದ ರೀತಿಯಲ್ಲಿ ಸ್ಟೋರ್ ಮಾಡಬೇಕು, ಇಲ್ಲದಿದ್ದರೆ ಬೆಳ್ಳುಳ್ಳಿ ಕಪ್ಪು-ಕಪ್ಪಾಗಿ ಹಾಳಾಗುತ್ತದೆ, ಈಗೀನ ದುಬಾರಿ ರೇಟ್‌ನಲ್ಲಿ ಒಂದು ಎಸಳು ಬೆಳ್ಳುಳ್ಳಿ ಕೂಡ ಹಾಳಾದರೆ ಛೇ ಇದು ಹಾಳಾಯ್ತಲ್ಲಾ ಎಂದು ಅಂದುಕೊಳ್ಳುತ್ತೇವೆ. ಬೆಳ್ಳುಳ್ಳಿ ಹಾಳಾಗದಂತೆ ಸ್ಟೋರ್ ಮಾಡುವುದು ಹೇಗೆ? ಸಿಪ್ಪೆ ಸುಲಿದ ಬೆಳ್ಳುಳ್ಳಿ ಹೇಗೆ ಇಡಬೇಕು ಎಂದು ನೋಡೋಣ ಬನ್ನಿ:

ಬೆಳ್ಳುಳ್ಳಿಯನ್ನು ತುಂಬಾ ಸಮಯ ಇಡುವುದು ಹೇಗೆ?
ನೀವು ಇಡೀ ಬೆಳ್ಳುಳ್ಳಿಯನ್ನು ಡ್ರೈ ಜಾಗದಲ್ಲಿ ಒಂದು ಪಾತ್ರೆ ಅಥವಾ ಬುಟ್ಟಿಯಲ್ಲಿ ಹಾಕಿಡಿ, ಮುಚ್ಚಳ ಹಾಕಬೇಡಿ, ಸೂರ್ಯ ಬಿಸಿಲು ನೇರವಾಗಿ ಅದರ ಮೇಲೆ ಬೀಳದಂತೆ ಇಡಿ. ಬೇಕಿದ್ದರೆ ಬಿಸಿಲಿನಲ್ಲಿ ಹಾಕಿ ನಂತರ ಎತ್ತಿಡಬಹುದು, ಆದರೆ ಪ್ರತಿದಿನ ಸೂರ್ಯನ ಬೆಳಕು ಬೀಳುವಂತೆ ಇಡಬೇಡಿ.
ಸಿಪ್ಪೆ ಸುಲಿದ ಬೆಳ್ಳುಳ್ಳು ಫ್ರೀಝರ್‌ನಲ್ಲಿಡಿ
ನೀವು ಸಿಪ್ಪೆ ಸುಲಿದ ಬೆಳ್ಳುಳ್ಳಿಯನ್ನು ಹೊರಗಡೆ ಇಡುವುದು ಒಳ್ಳೆಯದಲ್ಲ, ಬದಲಿಗೆ ಫ್ರಿಜ್‌ನಲ್ಲಿಡಿ, ತುಂಬಾ ದಿನ ಇಡುವುದಾದರೆ ಒಂದು ಬೌಲ್‌ಗೆ ಹಾಕಿ ಅದನ್ನು ಕವರ್ ಮಾಡಿ ಫ್ರೀಝರ್‌ನಲ್ಲಿಡಿ.
ಓವನ್‌ನಲ್ಲಿ ಡ್ರೈ ಮಾಡಿ ಸಂಗ್ರಹಿಸಿಡಬಹುದು
ನೀವು ಬೆಳ್ಳುಳ್ಳಿ ಸಿಪ್ಪೆ ಸುಲಿದು ಉದ್ದಕ್ಕೆ ಎರಡು ತುಂಡು ಮಾಡಿ ನಂತರ ಓವನ್ 140°F ಪ್ರೀಹೀಟ್ ಮಾಡಿ 2 ಗಂಟೆ ಇಡಿ, ನಂತರ ಓವನ್ ಹೀಟ್ 130°F ಗೆ ಇಟ್ಟು 4-5 ಗಂಟೆ ಡ್ರೈ ಮಾಡಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ.
ಬೆಳ್ಳುಳ್ಳಿ ಪೇಸ್ಟ್ ಮಾಡುವ ವಿಧಾನ'
ನೀವು ಬೆಳ್ಳುಳ್ಳಿ ಪೇಸ್ಟ್ ಕೂಡ ಮಾಡಿ ತುಂಬಾ ದಿನಗಳವರೆಗೆ ಇಟ್ಟು ಬಳಸಬಹುದು. ನೀವು ಬೆಳ್ಳುಳ್ಳಿಯ ಸಿಪ್ಪೆ ಸುಲಿದು ಅದಕ್ಕೆ ಸ್ವಲ್ಪಅಡುಗೆ ಎಣ್ಣೆ ಹಾಕಿ ಗ್ರೈಂಡ್ ಮಾಡಿ.
ಬೆಳ್ಳುಳ್ಳಿಯನ್ನು ಡಬ್ಬಿಯಲ್ಲಿ ಹಾಕಿ ಗಾಳಿಯಾಡದಂತೆ ಮುಚ್ಚಳ ಹಾಕಿಡಿ, ಹೀಗೆ ಮಾಡಿ ಫ್ರಿಜ್‌ನಲ್ಲಿಟ್ಟರೆ 3-4 ತಿಂಗಳು ಕೂಡ ಇಟ್ಟು ಬಳಸಬಹುದು.
ಬೆಳ್ಳುಳ್ಳಿ ಪೇಸ್ಟ್ ಮಾಡುವಾಗ ಗಮನಿಸಬೇಕಾದ ಅಂಶಗಳು
ಇಡಿ ಬೆಳ್ಳುಳ್ಳಿ ಪೇಸ್ಟ್ ಮಾಡಿ, ಅದರ ಮೇಲಿನ ಸಿಪ್ಪೆ ಮಾತ್ರ ತೆಗೆದರೆ ಸಾಕು
ಗ್ಲಾಸ್ ಜಾರ್‌ನಲ್ಲಿ ಸಂಗ್ರಹಿಸಿಡುವ ಮುನ್ನ ಅದನ್ನು ಒಣ ಬಟ್ಟೆಯಿಂದ ಚೆನ್ನಾಗಿ ಒರೆಸಬೇಕು.
ಪೇಸ್ಟ್ ಮಾಡುವಾಗ ಎಣ್ಣೆ ಸೇರಿಸಲೇಬೇಕೆಂಬ ನಿರ್ಬಂಧವಿಲ್ಲ
ನೀವು ಬೆಳ್ಳುಳ್ಳಿ ಪೇಸ್ಟ್ ಮಾಡುವಾಗ ಎಣ್ಣೆ ಸೇರಿಸಬಹುದು ಸೇರಿಸದೇಕೂಡ ಇರಬಹುದು.
ಇನ್ನು ಶುಂಠಿ ಜೊತೆ ರುಬ್ಬಬಹುದು
ನೀವು ಬೆಳ್ಳುಳ್ಳಿ ಜೊತೆ ಸಿಪ್ಪೆ ಸುಲಿದ ಶುಂಠಿ ಹಾಕಿ ರುಬ್ಬಿಪೇಸ್ಟ್ ಮಾಡಿ ಬಳಸಬಹುದು. ಶುಂಠಿ ಬೆಳ್ಳುಳ್ಳಿ ಪೇಸ್ಟ್ ಬಳಸುವುದಾದರೆ ಸಮ ಪ್ರಮಾಣದಲ್ಲಿ ಬಳಸಿ.
ಇನ್ನು ನೀವು ಬೆಳ್ಳುಳ್ಳಿ ಪೇಸ್ಟ್ ಮಾಡುವಾಗ ಸ್ವಲ್ಪ ಉಪ್ಪು ಸೇರಿಸಿ ಮಾಡಿದರೆ ಇನ್ನೂ ಒಳ್ಳೆಯದು. ಇನ್ನು ಬೆಳ್ಳುಳ್ಳಿ ಪೇಸ್ಟ್ ಅನ್ನು ಐಸ್ ಟ್ರೇಯಲ್ಲಿ ಹಾಕಿ ಫ್ರೀಝ್ ಮಾಡಿ ಅದನ್ನು ನಿಮಗೆ ಬೇಕಾದಾಗ ಬಳಸಬಹುದು.
ನೀವು ಹಾಗೇ ಫ್ರಿಡ್ಜ್‌ನಲ್ಲಿಟ್ಟು ಬಳಸುವುದಾದರೆ ವಾರದವರೆಗೆ ಇಟ್ಟು ಬಳಸಬಹುದು.



Click it and Unblock the Notifications
