Latest Updates
-
ಸುಪ್ರೀಂ ಕೋರ್ಟ್ ಲೋಕ್ ಅದಾಲತ್ ದಿನ 2: ನಿಮ್ಮ ಪ್ರಕರಣ ಇತ್ಯರ್ಥವಾಗಲು ಈ ದಾಖಲೆಗಳು ಕಡ್ಡಾಯ! -
ರಕ್ಷಾ ಬಂಧನ 2026: ಹಬ್ಬದ ಸಂಭ್ರಮಕ್ಕೆ ಬಜೆಟ್ ಮತ್ತು ಪ್ಲಾನಿಂಗ್ ಹೀಗಿರಲಿ! -
ಮಳೆಗಾಲದಲ್ಲಿ ಬೆಂಗಳೂರಿನ ಮನೆ ಮತ್ತು ಬಾಲ್ಕನಿ ರಕ್ಷಣೆ: 40 ನಿಮಿಷದ ಸಿಂಪಲ್ ಚೆಕ್ಲಿಸ್ಟ್ -
ಬೆಂಗಳೂರಿನಲ್ಲಿ 2 ದಿನ ಭಾರಿ ಪವರ್ ಕಟ್: ಈ 70 ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಮುನ್ನೆಚ್ಚರಿಕೆ ವಹಿಸಿ! -
ಈರುಳ್ಳಿ ಬೆಲೆ ಏರಿಕೆ ಬಿಸಿ: ₹800ರಲ್ಲಿ ವಾರಪೂರ್ತಿ ಪ್ರೋಟೀನ್ ಯುಕ್ತ ಆರೋಗ್ಯಕರ ಊಟದ ಪ್ಲಾನ್! -
ಹಬ್ಬದ ಸಿಹಿ ತಯಾರಿಗೆ ಸಕ್ಕರೆ ಬೆಲೆ ಬಿಸಿ: ಜೇಬಿಗೆ ಹೊರೆಯಾಗದಂತೆ ಸಂಭ್ರಮಿಸುವುದು ಹೇಗೆ? -
LPG e-KYC ಗಡುವು: ನಾಳೆಯೇ ಕೊನೆಯ ದಿನ, ನಿಮ್ಮ ಗ್ಯಾಸ್ ಸಂಪರ್ಕ ಕಡಿತವಾಗದಂತೆ ತಡೆಯುವುದು ಹೇಗೆ? -
BWF ಸೆಮಿಫೈನಲ್ ವೀಕ್ಷಿಸುವಾಗ ಮೈಕೈ ನೋವೇ? 8 ನಿಮಿಷದ ಈ ಸಿಂಪಲ್ ವ್ಯಾಯಾಮ ಮಾಡಿ! -
ಸುಪ್ರೀಂ ಕೋರ್ಟ್ ವಿಶೇಷ ಲೋಕ್ ಅದಾಲತ್: ವಿಚ್ಛೇದನ, ಕಸ್ಟಡಿ ಸಮಸ್ಯೆಗಳಿಗೆ ಇಲ್ಲಿದೆ ಸುಲಭ ಪರಿಹಾರ! -
ಅಪಾರ್ಟ್ಮೆಂಟ್ನಲ್ಲಿ ಪರಿಸರ ಸ್ನೇಹಿ ಗಣೇಶ ಹಬ್ಬ: ದಂಡ ತಪ್ಪಿಸಿ, ಸುಲಭವಾಗಿ ವಿಸರ್ಜನೆ ಮಾಡುವುದು ಹೇಗೆ?
ಸೊಪ್ಪುಗಳನ್ನು ತಿಂಗಳ ಕಾಲ ಹಾಳಾಗದಂತೆ ಇಡಿ..! ತುಂಬಾ ಸಿಂಪಲ್ ಕೆಲಸ!
ಅಡುಗೆಗೆ ನಾವು ಬಳಸುವ ಹಲವು ವಸ್ತುಗಳು ಬಹುಬೇಗ ಹಾಳಾಗುತ್ತದೆ. ಈಗ ಮಳೆಗಾಲ ಮುಗಿದು ಬಿಸಿಲು ಆರಂಭವಾಗುವುದರಿಂದ ಅಡುಗೆ ವಸ್ತುಗಳಾದ ಲಿಂಬು, ಶುಂಠಿ, ಕೊತ್ತಂಬರಿ ಸೊಪ್ಪು, ಕರಿವೇವು ಈ ಎಲ್ಲಾ ವಸ್ತುಗಳು ಬಹುಬೇಗ ಹಾಳಾಗುತ್ತದೆ. ಈ ಬಿಸಿಲಿನಲ್ಲಿ ಬೇಗ ಒಣಗುತ್ತವೆ. ನಿಮ್ಮ ಮನೆಯಲ್ಲಿ ಫ್ರಿಡ್ಜ್ ಇದ್ದರೂ ಕೂಡ ಬಹುಬೇಗ ಹಾಳಾಗುತ್ತದೆ. ಫ್ರಿಡ್ಜ್ ಇಲ್ಲದೆ ಇರುವ ಮನೆಯಲ್ಲಿ ಈ ವಸ್ತುಗಳು ಬೇಗ ಹಾಳಾಗುತ್ತವೆ.
ಆದ್ರೆ ಈ ವಸ್ತುಗಳ್ಳಿ ನಮಗೆ ಎಲ್ಲಾ ಸಾಂಬಾರ್ ಮಾಡಲು, ಚಟ್ನಿ ಮಾಡಲು ಬಳಸುವ ಕೊತ್ತಂಬರಿ ಸೊಪ್ಪನ್ನು ಮನೆಗೆ ತಂದಾಗ ಬಹುಬೇಗ ಹಾಳಾಗುತ್ತದೆ. ಆದ್ರೆ ನಾವು ಈ ಕೊತ್ತಂಬರಿ ಸೊಪ್ಪು ಹಾಳಾಗದಂತೆ ಒಂದು ತಿಂಗಳ ಕಾಲ ಇಡಬಹುದು. ಹೌದು ಈ ರೀತಿಯ ವಿಧಾನದಲ್ಲಿ ಸೊಪ್ಪನ್ನು ಶೇಖರಿಸಿಟ್ಟರೆ ಒಂದು ತಿಂಗಳಾದರು ಕೊತ್ತಂಬರಿ ಸೊಪ್ಪು ಹಾಳಾಗುವುದಿಲ್ಲ.

ಮನೆಯಲ್ಲಿ ಯಾವ ರೀತಿ ಈ ಸೊಪ್ಪನ್ನು ಇಟ್ಟರೆ ಹಾಳಾಗುವುದಿಲ್ಲ ಎನ್ನುವ ಮಾಹಿತಿ ನಾವಿಂದು ತಿಳಿದುಕೊಳ್ಳೋಣ. ಸೊಪ್ಪುಗಳನ್ನು ಹಾಳಾಗದಂತೆ ಯಾವ ವಿಧಾನದಲ್ಲಿ ಇಡಬೇಕು ಎಂಬುದನ್ನು ತಿಳಿಯೋಣ.
ಮೊದಲು ಕೊತ್ತಂಬರಿ ಕಟ್ಟು ತೆಗೆದುಕೊಂಡು ಅದರ ಬುಡವನ್ನು ಕತ್ತರಿಸಿಕೊಳ್ಳಿ. ಅಂದರೆ ಅದರ ಬುಡದ ಭಾಗ ಕತ್ತರಿಸಿ ಹಾಕಿ. ಈಗ ಒಂದು ಪ್ಲಾಸ್ಟಿಕ್ ಡಬ್ಬ ತೆಗೆದುಕೊಳ್ಳಿ. ಊಟದ ಬಾಕ್ಸ್‌ನಂತೆ ಇರುವ ಡಬ್ಬ ಇದ್ದರೆ ಒಳ್ಳೆಯದು. ಇದರ ಒಳಗೆ ಕಿಚನ್ ಪೇಪರ್ ಅಥವಾ ಟಿಷ್ಯೂ ಪೇಪರ್ ಅಥವಾ ಕಾಟನ್‌ನ ಯಾವುದಾದರು ಒಂದು ಬಟ್ಟೆಯನ್ನ ಹರಡಿಕೊಳ್ಳಿ. ಕೆಳಗಿನ ಭಾಗ ಮುಚ್ಚುವಂತಿರಬೇಕು.
ಈಗ ಸ್ವಲ್ಪ ಸ್ವಲ್ಪವೆ ಕೊತ್ತಂಬರಿ ಸೊಪ್ಪನ್ನು ತೆಗೆದುಕೊಂಡು ಅದನ್ನು ಡಬ್ಬದೊಳಗೆ ನಿಧಾನವಾಗಿ ಇಡಬೇಕು. ಹೆಚ್ಚು ಒತ್ತಿ ಒತ್ತಿ ಸೊಪ್ಪನ್ನು ತುಂಬಬೇಡಿ. ನಿಧಾನವಾಗಿ ಇಡಿ. ನಂತರ ಸೊಪ್ಪಿನ ಮೇಲ್ಭಾಗದಲ್ಲೂ ಬಟ್ಟೆ ಅಥವಾ ಈ ಕಿಚನ್ ಪೇಪರ್ ಹಾಕಿ ಮುಚ್ಚಳ ಮುಚ್ಚಿ ಅದನ್ನು ಫ್ರಿಡ್ಜ್‌ನಲ್ಲಿ ಇಡಿ. ಫ್ರಿಡ್ಜ್ ನಿಮ್ಮ ಮನೆಯಲ್ಲಿ ಇಲ್ಲದಿದ್ದರೆ ಒಂದು ದೊಡ್ಡ ಸ್ಟೀಲ್ ಪಾತ್ರೆಗೆ ಸ್ವಲ್ಪವೇ ನೀರು ಹಾಕಿ ಈ ಡಬ್ಬವನ್ನು ಅದರಲ್ಲಿ ಇಡಿ. ಡಬ್ಬದ ಒಳಗೆ ನೀರು ಹೋಗಬಾರದು. ಹೀಗೆ ಇಟ್ಟರೆ ಸುಮಾರು 1 ತಿಂಗಳ ಕಾಲ ಸೊಪ್ಪು ಹಾಳಾಗುವುದಿಲ್ಲ. ಆದರೆ ನಾವು ಆಗಾಗ ಡಬ್ಬ ತೆಗೆಯುತ್ತೇವೆ. ಆದ್ರೆ ನೀವು ಪ್ರತಿ ಬಾರಿ ಡಬ್ಬ ತೆಗೆದಾಗಲು ಇದರ ಜೀವಿತಾವಧಿ ಕಡಿಮೆಯಾಗುತ್ತದೆ. ನೀವು ಡಬ್ಬ ತೆರೆದು ತಕ್ಷಣವೇ ಮತ್ತೆ ಇದೆ ರೀತಿ ಮುಚ್ಚಿ ಇಡಿ.
ಕರಿಬೇವಿನ ಸೊಪ್ಪು ಇಡುವುದು ಹೇಗೆ?
ಕರಿವೇವಿನ ಸೊಪ್ಪನ್ನು ಕೂಡ ನೀವು ಒಂದು ವರ್ಷ ಇಡಬಹುದು. ಹೇಗೆಂದರೆ ಮೊದಲು ಫ್ರಿಡ್ಜ್‌ನಲ್ಲಿರುವ ಐಸ್ ಕ್ಯೂಬ್ ಅಚ್ಚನ್ನು ಖಾಲಿ ಮಾಡಿಕೊಳ್ಳಿ. ಬಳಿಕ ಕರಿಬೇವಿನ ಎಲೆಗಳನ್ನು ಬಿಡಿಸಿ ಚೆನ್ನಾಗಿ ತೊಳೆದುಕೊಳ್ಳಿ. ನಂತರ ಐಸ್ ಕ್ಯೂಬ್ ಅಚ್ಚು ತೊಳೆದು ಅದರ ಎಲ್ಲಾ ಅಚ್ಚಿನಲ್ಲಿ ಎರಡು ಎರಡು ಬೇವಿನ ಎಲೆ ಇಟ್ಟು ಅದಕ್ಕೆ ನೀರು ಹಾಕಿ ಫ್ರೀಜರ್‌ನಲ್ಲಿ ಇಡಿ.
ಇದು ಫ್ರೀಜ್ ಆದ ಬಳಿಕ ಎಲ್ಲಾ ಐಸ್ ಕ್ಯೂಬ್ ಆಗಿ ಬದಲಾಗಿರುತ್ತದೆ. ಈ ಐಸ್ ಕ್ಯೂಬ್ ಗಳನ್ನು ಒಂದು ಜಿಪ್ಪರ್ ಲಾಕ್ ಪ್ಲಾಸ್ಟಿಕ್‌ನಲ್ಲಿ ಹಾಕಿ ಮತ್ತೆ ಫ್ರಿಡ್ಜ್‌ನಲ್ಲಿ ಇಡಿ. ನಿಮಗೆ ಬೇಕಾದಾಗ ಈ ಐಸ್ ಕ್ಯೂಬ್ ಅನ್ನು ತೆಗೆದು ನೀರಿನಲ್ಲಿ ಹಾಕಿ ಇಟ್ಟರೆ ಐಸ್ ಕರಗಿ ಕರಿಬೇವು ಸಿಗುತ್ತದೆ. ಇದನ್ನು ನೀವು ಅಡುಗೆಗೆ ಬಳಸಬಹುದಾಗಿದೆ.



Click it and Unblock the Notifications
