Latest Updates
-
ಡೇಟಿಂಗ್ ಆಪ್ ಬಳಸುವಾಗ ಎಚ್ಚರ: ಸೈಬರ್ ವಂಚನೆ ಮತ್ತು ಸೆಕ್ಸ್ಟಾರ್ಷನ್ನಿಂದ ಪಾರಾಗುವುದು ಹೇಗೆ? -
ಈರುಳ್ಳಿ ಬೆಲೆ ಇಳಿಕೆ: ಗೃಹಿಣಿಯರಿಗೆ ನಿರಾಳ, ಬಜೆಟ್ ಸ್ನೇಹಿ ಅಡುಗೆಗೆ ಈಗ ಸುಲಭ! -
ಕಿಚ್ಚ ಸುದೀಪ್-ಪ್ರೇಮ್ ಟೀಸರ್ ರಿಲೀಸ್: ಸಂಭ್ರಮಿಸಲು ಸಿದ್ಧರಾಗಿ, ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ ವಿಷಕಾರಿ ಗಾಳಿ: ಶ್ವಾಸಕೋಶದ ಆರೋಗ್ಯಕ್ಕಾಗಿ ಮನೆಯಲ್ಲೇ ಮಾಡಿ ಈ 15 ನಿಮಿಷದ ವರ್ಕೌಟ್ -
ಮದುವೆ ಭರವಸೆ ವಂಚನೆ: ಹಣ ಕೊಟ್ಟು ರಾಜಿ ಮಾಡಿಕೊಳ್ಳುವವರಿಗೆ ಸುಪ್ರೀಂ ಕೋರ್ಟ್ ಎಚ್ಚರಿಕೆ -
ಚಳಿಗಾಲದ ಸ್ಪೆಷಲ್: 30 ನಿಮಿಷದಲ್ಲಿ ತಯಾರಾಗುವ 5 ಹೈ-ಪ್ರೋಟೀನ್, ಡಯಾಬಿಟಿಸ್-ಸ್ಮಾರ್ಟ್ ಸೂಪ್ಗಳು! -
ಸಂವಿಧಾನ ದಿನ: ಬೆಳಿಗ್ಗೆ 11 ಗಂಟೆಗೆ ಪ್ರಸ್ತಾವನೆ ಓದಿ, ನಿಮ್ಮ ಡಿಜಿಟಲ್ ಪ್ರಮಾಣಪತ್ರ ಪಡೆಯುವುದು ಹೇಗೆ? -
ಮಳೆಗಾಲದ ಬೆಳಿಗ್ಗೆ ಆಲಸ್ಯವೇ? ಬೆಂಗಳೂರಿನಲ್ಲಿ ಫಿಟ್ ಆಗಿರಲು 20 ನಿಮಿಷಗಳ ಸರಳ ವರ್ಕೌಟ್ ಇಲ್ಲಿದೆ! -
16 ದಿನಗಳ ಸುರಕ್ಷತಾ ಅಭಿಯಾನ: ನಿಮ್ಮ ರಕ್ಷಣೆಗಾಗಿ ಈ ತುರ್ತು ಸಂಖ್ಯೆಗಳು ಮತ್ತು ಸಲಹೆಗಳು ಇಂದೇ ತಿಳಿಯಿರಿ -
ಸಪ್ಲಿಮೆಂಟ್ ಖರೀದಿಸುವ ಮುನ್ನ ಎಚ್ಚರ! ಮಹಾರಾಷ್ಟ್ರ FDA ಕಠಿಣ ನಿಯಮ: ಸುಳ್ಳು ಜಾಹೀರಾತುಗಳಿಗೆ ಬ್ರೇಕ್
ಕುಕ್ಕರ್ನಿಂದ ನೀರು ಲೀಕ್ ಆದರೆ ಹೀಗೆ ಮಾಡಿ..! 100 ಪರ್ಸೆಂಟ್ ವರ್ಕ್ ಆಗುತ್ತೆ..!
ಅಡುಗೆ ಮನೆಯಲ್ಲಿ ಗೃಹಿಣಿಯರು ಒಂದಲ್ಲಾ ಒಂದು ರೀತಿಯ ಸಮಸ್ಯೆಯನ್ನು ನಿತ್ಯವು ಅನುಭವಿಸುತ್ತಿರುತ್ತಾರೆ. ಅದರಲ್ಲೂ ಅಡುಗೆ ಮಾಡುವಾಗ ಕೆಲವೊಮ್ಮೆ ಗ್ಯಾಸ್ ಮುಗಿದು ಹೋಗುವುದು, ಇಲ್ಲವೆ ಯಾವುದಾದರು ಅಡುಗೆ ಸಾಮಗ್ರಿ ಖಾಲಿಯಾಗುವುದು, ಪ್ರಷರ್ ಕುಕ್ಕರ್ ಕೈ ಕೊಡುವುದು, ಸೀಟಿ ಹೊಡೆಯದೇ ಇರುವುದು ಹೀಗೆ ಹತ್ತಾರು ಸಮಸ್ಯೆಗಳಿಗೆ ಅವರು ಒಳಗಾಗುವುದು ಸಾಮಾನ್ಯ ಎನ್ನುವಂತಾಗಿರುತ್ತದೆ.
ಅದರಲ್ಲೂ ಬರ್ನರ್ ಸರಿಯಾಗಿ ಹೊತ್ತಿಕೊಳ್ಳದೆ ಇರುವುದು, ಲೈಟರ್ ಹತ್ತಿಕೊಳ್ಳದೆ ಇರುವುದು ಹೀಗೆ ಕೆಲವೊಂದು ಸಮಸ್ಯೆಗಳು ಅಡುಗೆ ಮಾಡುವ ಸಮಯದಲ್ಲಿ ಕಾಡುತ್ತವೆ. ಇದೆಲ್ಲವನ್ನು ನಾವು ಕ್ಷಣದಲ್ಲಿ ಸರಿಪಡಿಸಬಹುದು. ಹಾಗೆ ನಮಗೆ ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಕಾಡುವ ಸಮಸ್ಯೆ ಅಂದ್ರೆ ಕುಕ್ಕರ್ನಿಂದ ನೀರು ಲೀಕ್ ಆಗುವುದು.

ಕುಕ್ಕರ್ನಲ್ಲಿ ಅನ್ನ ಮಾಡಲು ಇಟ್ಟಾಗ ಅಥವಾ ಬೇಳೆ ಇಟ್ಟಾಗ ಒಂದೆರಡು ಸೀಟಿ ಹೊಡೆದಾಗ ನೀರು ಲೀಕ್ ಆಗುತ್ತದೆ. ಹೀಗೆ ಲೀಕ್ ಆಗುವುದರಿಂದ ಒಲೆ ಮೇಲೆ ನೀರು ಬೀಳುವುದು, ಅಡುಗೆ ಮನೆಯೆಲ್ಲಾ ಮತ್ತೊಂದು ಗಂಟೆಯ ಕೆಲಸಕ್ಕೆ ದಾರಿಯಾಗುತ್ತದೆ. ಇದು ಎಲ್ಲಾ ಗೃಹಿಣಿಯರ ಸಮಸ್ಯೆಯಾಗಿರುತ್ತದೆ.
ಹಾಗಾದ್ರೆ ಈ ಸಮಸ್ಯೆಗೆ ಮನೆಯಲ್ಲೇ ಹೇಗೆ ಪರಿಹಾರ ಮಾಡಿಕೊಳ್ಳುವುದು? ಇದಕ್ಕೇ ಏನು ಮಾಡಬೇಕು? ಕುಕ್ಕರ್ನಿಂದ ನೀರು ಬರದಂತೆ ಮಾಡುವುದು ಹೇಗೆ? ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಕ್ಕರ್ನಿಂದ ನೀರು ಹೊರಬರಲು ಪ್ರಮುಖ ಕಾರಣ ಅಂದರೆ ಕುಕ್ಕರ್ ಸವಿದಿದೆ ಎಂದರ್ಥ. ಇಲ್ಲವೆ ರಬ್ಬರ್ ಬದಲಾಯಿಸಬೇಕಾದ ಸಮಸ್ಯೆ ಎನ್ನಬಹುದು. ಆದ್ರೆ ಸಾಮಾನ್ಯವಾಗಿ ಕುಕ್ಕರ್ನ ಒಂದು ಭಾಗದಲ್ಲಿ ಸವಿದರೆ ರಬ್ಬರ್ ಸರಿಯಾಗಿ ಕೂರಿಸಲು ಆಗದೇ ಇದ್ದಾಗ ಲೀಕ್ ಆಗುತ್ತದೆ. ಹೀಗಾಗಿ ಮೊದಲು ಕುಕ್ಕರ್ ಸರಿಮಾಡಬೇಕು.
ಮರಳು ಕಾಗದ / ಸ್ಯಾಂಡ್ ಪೇಪರ್
ಕುಕ್ಕರ್ನ ಒಂದು ಬದಿಯಲ್ಲಿ ನೀರು ಹನಿಹಾಕುವುದು ಇಲ್ಲವೆ ಸುರಿಯುವುದು ಆಗುತ್ತಿದ್ದರೆ ಈ ಸ್ಯಾಂಡ್ ಪೇಪರ್ ಬಳಸಿ ಸರಿ ಮಾಡಬಹುದು. ಕುಕ್ಕರ್ನ ಮುಚ್ಚಳದ ಕಂಠದ ಬಳಿ ಗೆರೆಗಳು ಮೂಡುವ ಕಾರಣ ನೀರು ಸೋರಲು ಆರಂಭಿಸುತ್ತದೆ. ಹೀಗಾಗಿ ಈ ಗೆರೆಗಳನ್ನು ಮೊದಲು ತೆಗೆಯಬೇಕು. ಹೀಗಾಗಿ ಸ್ಯಾಂಡ್ ಪೇಪರ್ ಅನ್ನು ಗೆರೆಗಳಿರುವ ಜಾಗದಲ್ಲಿ ಉಜ್ಜಬೇಕು. ಈ ಗೆರೆಗಳು ಮಾಯವಾದರೆ ಇನ್ನೆಂದು ನೀರು ಸುರಿಯುವುದಿಲ್ಲ.
ಸೀಟಿ ತೆಗೆದು ಕ್ಲೀನ್ ಮಾಡಿ
ಕುಕ್ಕರ್ ಸೀಟಿ ಬಳಿಯಿಂದ ನೀರು ಸುರಿಯುತ್ತಿದ್ದರೆ ಅದನ್ನು ನಿಲ್ಲಿಸಲು ಸೀಟಿಯನ್ನು ಬಿಚ್ಚಿ ಚೆನ್ನಾಗಿ ತೊಳೆಯಬೇಕು. ಹಾಗೆ ಸೇಫ್ಟಿ ಬಳಿ ಹಿಡಿದಿರುವ ಕಪ್ಪು ಕೊಳೆಯನ್ನು ತೆಗೆಯಬೇಕು. ಒಂದು ಸಣ್ಣ ಕಡ್ಡಿಯನ್ನು ತೆಗೆದುಕೊಂಡು ಸ್ವಚ್ಚ ಮಾಡಿಕೊಳ್ಳಬೇಕು.
ಕುಕ್ಕರ್ ರಬ್ಬರ್ಗೆ ಎಣ್ಣೆ ಸವರಿ
ಕುಕ್ಕರ್ನ ರಬ್ಬರ್ ಸಡಿಲವಾದಾಗಲು ನೀರು ಸೋರಿಕೆಯಾಗುತ್ತದೆ. ಹೀಗಾಗಿ ಕುಕ್ಕರ್ನ ರಬ್ಬರ್ಗೆ ಎಣ್ಣ ಸವರಿ ತಣ್ಣಗಿರುವ ನೀರಿನಲ್ಲಿ ಅದ್ದಿ ಇಡಬೇಕು. ಸುಮಾರು 1 ಗಂಟೆಯ ಬಳಿಕ ತೆಗೆದು ಮತ್ತೆ ಎಣ್ಣೆ ಸವರಿದರೆ ರಬ್ಬರ್ ಬಿಗಿಯಾಗುತ್ತದೆ. ಇಲ್ಲವೆ ಈ ರಬ್ಬರ್ ಅನ್ನು ಫ್ರಿಡ್ಜ್ನಲ್ಲಿ ಡೀಪ್ ಫ್ರೀಜ್ನಲ್ಲಿ ಇಡಬೇಕು.
ರಬ್ಬರ್ಗೆ ಮತ್ತೊಂದು ರಬ್ಬರ್ ಸುತ್ತಿ
ಇಷ್ಟಾದರು ಕುಕ್ಕರ್ನಿಂದ ನೀರು ಸೋರುವುದು ನಿಲ್ಲದಿದ್ದರೆ ನೀವು ಕುಕ್ಕರ್ನ ರಬ್ಬರ್ ತೆಗೆದುಕೊಂಡು, ಕೂದಲಿಗೆ ಹಾಕುವ ಅಥವಾ ಸಣ್ಣ ರಬ್ಬರ್ ಅನ್ನು ಕತ್ತರಿಸಿ ಅದನ್ನು ಕುಕ್ಕರ್ನ ರಬ್ಬರ್ಗೆ ಸುತ್ತಬೇಕು. ಈ ಸಣ್ಣ ರಬ್ಬರ್ ಚೆನ್ನಾಗಿ ಸುತ್ತಿದರೆ ಬಳಿಕ ಇದನ್ನು ಕುಕ್ಕರ್ಗೆ ಹಾಕಿದಾಗ ಬಿಗಿಯಾಗಿ ಹಿಡಿದುಕೊಳ್ಳುತ್ತದೆ. ಈ ವೇಳೆ ನೀರು ಸುರಿಯುವುದು ನಿಲ್ಲುತ್ತದೆ.



Click it and Unblock the Notifications
