Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಕುಕ್ಕರ್‌ನಿಂದ ನೀರು ಲೀಕೇಜ್ ಆಗುತ್ತಿದ್ದರೆ ಹೀಗೆ ಮಾಡಿ..! ಇಲ್ಲಿದೆ ಟಿಪ್ಸ್!!
ನೀವು ಮನೆಯಲ್ಲಿ ಅದ್ರಲ್ಲೂ ಅಡುಗೆ ಮನೆಯಲ್ಲಿ ಹಲವು ರೀತಿಯ ಸಮಸ್ಯೆ ಎದುರಿಸುತ್ತೀರಿ. ನಿತ್ಯ ಅಡುಗೆ ಮಾಡುವ ಮಂದಿಗೆ ಇದರ ಕಷ್ಟ ಎಂಬುದು ತಿಳಿದಿರುತ್ತೆ. ಅದ್ರಲ್ಲೂ ಗೃಹಿಣಿಯರು ಮನೆಯಲ್ಲಿ ಅನ್ನ ಮಾಡಲು ಕುಕ್ಕರ್ ಬಳಸುತ್ತಾರೆ. ಅನ್ನ ಮಾಡಲು ಮಾತ್ರವಲ್ಲ ಹಲವು ಬಾರಿ ಕುಕ್ಕರ್ ಬಳಕೆಗೆ ಬರುತ್ತದೆ.
ಆದ್ರೆ ಕುಕ್ಕರ್‌ನಲ್ಲಿ ಸಾಮಾನ್ಯವಾಗಿ ಕಂಡುಬರುವ ಸಮಸ್ಯೆ ಅಂದರೆ ಕುಕ್ಕರ್‌ನಿಂದ ನೀರು ಹೊರಬರುವುದು. ಕುಕ್ಕರ್‌ನಲ್ಲಿ ಅನ್ನ, ಬೇಳೆ, ತರಕಾರಿ ಬೇಯಿಸುವಾಗ ಅದರಿಂದ ನೀರು ಹೋರಬರುತ್ತದೆ. ಹೀಗೆ ಹೊರಬಂದ ನೀರು ಸ್ಟವ್ ಮೇಲೆ ಬೀಳುವುದರಿಂದ ಅದನ್ನು ಸ್ವಚ್ಛ ಮಾಡೋದು ಮತ್ತೊಂದು ಕೆಲಸವಾಗಿತ್ತೆ. ಹೀಗಾಗಿ ಗೃಹಿಣಿಯರಿಗೆ ಇದೊಂದು ದೊಡ್ಡ ಸಮಸ್ಯೆಯಾಗಿ ತಲೆನೋವಾಗಿ ಪರಿಣಮಿಸುತ್ತೆ.

ಕುಕ್ಕರ್‌ನಿಂದ ನೀರು ಉಕ್ಕಿ ಬರೋದನ್ನ ತಡೆಯಲೆಂದು ಹಲವರು ಕುಕ್ಕರ್‌ಗೆ ಹಾಕುವ ರಬ್ಬರ್ ಬದಲಾಯಿಸುವುದನ್ನ ಮಾಡ್ತಾರೆ. ಆದ್ರೆ ಹೀಗೆ ಮಾಡಿದ್ರೂ ಕುಕ್ಕರ್‌ನಿಂದ ನೀರು ಹೊರಬರುವುದು ನಿಲ್ಲುವುದಿಲ್ಲ. ಹಾಗಾದ್ರೆ ಈ ರೀತಿ ನೀರು ಹೊರಬರುವುದನ್ನ ತಡೆಯುವುದು ಹೇಗೆ? ಇದಕ್ಕೆ ಏನು ಮಾಡಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕುಕ್ಕರ್ ಸೀಟಿ ಸಚ್ಛ ಮಾಡಿ
ನಾವು ನಿತ್ಯ ಕುಕ್ಕರ್ ಬಳಸುವಾಗ ಅದರ ರಬ್ಬರ್ ಅನ್ನು ಮಾತ್ರ ತೊಳೆಯುತ್ತೇವೆ, ಹಾಗೆ ಕುಕ್ಕರ್ ಅನ್ನು ತೊಳೆದು ಮತ್ತೆ ಬಳಸುತ್ತೇವೆ, ಆದ್ರೆ ಕುಕ್ಕರ್ ಮೇಲೆ ಬಳಸುವ ಸೀಟಿಯನ್ನು ಮೇಲಕ್ಕೆ ತೊಳೆದು ಬಿಡುತ್ತೇವೆ. ಆದರೆ ಈ ಸೀಟಿಯನ್ನ ಸಂಪೂರ್ಣವಾಗಿ ಬಿಚ್ಚಿ ಒಳಗೆ ಸಿಲುಕಿರುವ ಆಹಾರದ ಸಣ್ಣ ಸಣ್ಣ ಪುಡಿಯನ್ನು ಸ್ವಚ್ಛ ಮಾಡಬೇಕು. ಪ್ರತಿ ಬಾರಿ ಕುಕ್ಕರ್ ಸೀಟಿ ಹೊಡೆದಾಗ ಇದರ ಒಳಗೆ ಆಹಾರದ ಸಣ್ಣ ಪುಡಿ ಅಥವಾ ಕಣ ಸೇರಿಕೊಳ್ಳುತ್ತದೆ. ಆದರೆ ನಾವು ಕುಕ್ಕರ್ ಮತ್ತು ಅದರ ರಬ್ಬರ್ ಅನ್ನು ಮಾತ್ರ ಚೆನ್ನಾಗಿ ತೊಳೆಯುತ್ತೇವೆಯೇ ಹೊರತು ಎಂದಿಗೂ ಈ ಸೀಟಿಯನ್ನ ತೊಳೆಯುವುದಿಲ್ಲ. ಆದರೆ ಇದರ ಮೇಲಿನ ಕ್ಯಾಪ್ ತೆಗೆದು ಚೆನ್ನಾಗಿ ಕ್ಲೀನ್ ಮಾಡಿ ಬಳಸುವುದರಿಂದ ಕುಕ್ಕರ್ ಲೀಕೇಜ್ ತಡೆಯಬಹುದು.
ಕುಕ್ಕರ್ ರಬ್ಬರ್ ಅನ್ನು ಫ್ರಿಡ್ಜ್‌ನಲ್ಲಿಡಿ
ಪ್ರತಿ ಬಾರಿ ಕುಕ್ಕರ್ ಬಳಸಿದ ಬಳಿಕ ನಾವು ರಬ್ಬರ್ ತೊಳೆದು ತೆಗೆದಿಡುತ್ತೇವೆ. ಆದ್ರೆ ಅದನ್ನು ಸೋಪು ಹಾಕಿ ಚೆನ್ನಾಗಿ ತೊಳೆದು ಫ್ರಿಡ್ಜ್‌ನಲ್ಲಿಡಬೇಕು. ಫ್ರಿಡ್ಜ್‌ನಲ್ಲಿ ಡೀಪ್ ಫ್ರೀಜ್ ಮಾಡಿದರೆ ರಬ್ಬರ್ ಹಿಗ್ಗಿಕೊಂಡಿರುವುದು ಸರಿಯಾಗುತ್ತದೆ. ಇದು ಕುಕ್ಕರ್ ಮುಚ್ಚಳ ಮತ್ತಷ್ಟು ಬಿಗಿಯಾಗಲು ಸಹಾಯ ಮಾಡುತ್ತದೆ. ಹೀಗಾದಾಗ ಕುಕ್ಕರ್‌ನಿಂದ ಲೀಕೇಜ್ ತಡೆಯಬಹುದು.
ಸೇಫ್ಟಿ ವಾಲ್ವ್ ಬದಲಾಯಿಸಿ
ಕುಕ್ಕರ್‌ನಲ್ಲಿ ನೀರು ಯಾವಾಗಲು ಲೀಕ್ ಆಗುತ್ತಿದ್ದರೆ ಅಥವಾ ಸೀಟಿ ಹೊಡೆಯುದು ತಡವಾಗುವುದು ಇಲ್ಲವೆ ಅನ್ನ ಮೆದುವಾಗುವುದು, ತಳ ಹಿಡಿಯುವುದು ಆಗುತ್ತಿದ್ದರೆ ಸೇಫ್ಟಿ ವಾಲ್ವ್ ಅನ್ನು ಬದಲಾಯಿಸಿ. ಇದರಿಂದ ಕುಕ್ಕರ್ ಎಂದಿನಂತಾಗಲಿದೆ. ಆದರೆ ನೀವೆ ಇದನ್ನು ಕಳಚಿ ರಿಪೇರಿ ಮಾಡಲು ಮುಂದಾಗಬೇಡಿ. ಇದರಿಂದ ಅಪಾಯ ಎದುರಾಗಬಹುದು.
ಅಡುಗೆಗೂ ಮುನ್ನ ರಬ್ಬರ್‌ಗೆ ಎಣ್ಣೆ ಹಚ್ಚಿ
ಪ್ರತಿ ಬಾರಿ ಕುಕ್ಕರ್ ಅನ್ನು ಬಳಸುವ ಮೊದಲು ಅದರ ರಬ್ಬರ್ ತೆಗೆದು ನಾಲ್ಕು ಹನಿ ಎಣ್ಣೆ ಹಾಕಿ ಚೆನ್ನಾಗಿ ಹಚ್ಚಿಕೊಳ್ಳಿ. ಇದರಿಂದ ರಬ್ಬರ್ ಚೆನ್ನಾಗಿ ಬಿಗಿದುಕೊಳ್ಳಲಿದೆ. ಇದು ಕುಕ್ಕರ್‌ನಿಂದ ಗ್ಯಾಸ್ ಲೀಕ್ ಆಗುವುದು ನೀರು ಹೊರಬರುವುದು ನಿಲ್ಲಲಿದೆ. ಈ ಎಲ್ಲಾ ಟ್ರಿಕ್ಸ್ ಬಳಿಕವೂ ಕುಕ್ಕರ್‌ನಿಂದ ನೀರು ಹೊರಬರುತ್ತಲೇ ಇದ್ದರೆ ಕುಕ್ಕರ್ ಲಿಡ್ ಹಿಡಿಯ ಬುಡದಲ್ಲಿರುವ ಮೊಳೆಯನ್ನ ಟೈಟ್ ಮಾಡಿಕೊಳ್ಳಿ. ಇಷ್ಟಾದರು ನೀರು ಹೊರಬರುವುದು ನಿಲ್ಲದಿದ್ದರೆ ಕುಕ್ಕರ್ ಬದಲಾಯಿಸುವುದು ಉತ್ತಮ.



Click it and Unblock the Notifications
