Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಬಟ್ಟೆಗೆ ಹಿಡಿದ ಕಲೆ ಹೋಗಲಾಡಿಸೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್..!!
ನಾವು ಬಟ್ಟೆ ಒಗೆಯುವಾಗ ಸಾಮಾನ್ಯವಾಗಿ ಬಿಳಿ ಬಣ್ಣದ ಬಟ್ಟೆ ಅಥವಾ ಬೇರೆ ಯಾವುದಾದರು ಬಣ್ಣದ ಬಟ್ಟೆಯನ್ನು ಎಲ್ಲಾ ಬಟ್ಟೆಗಳ ಜೊತೆಗೆ ನೆನೆಸಿಟ್ಟರೆ ಬಣ್ಣವೆಲ್ಲಾ ಬಿಟ್ಟುಕೊಳ್ಳುತ್ತದೆ. ಕೆಲವೊಮ್ಮೆ ಜೀನ್ಸ್ ಪ್ಯಾಂಟ್‌ಗಳು, ಇಲ್ಲವೆ ನೀಲಿ ಬಣ್ಣದ ಶರ್ಟ್‌ಗಳು ಹೆಚ್ಚಾಗಿ ಬಣ್ಣ ಬಿಡುತ್ತವೆ. ಈ ಬಣ್ಣ ಬೇರೆ ಶರ್ಟ್, ಪ್ಯಾಂಟ್, ಟಿ ಶರ್ಟ್‌ಗೆ ತಗುಲಿ ಬಣ್ಣವೇ ಬದಲಾಗುತ್ತದೆ. ಜೊತೆಗೆ ಮತ್ತೆಂದು ಆ ಬಟ್ಟೆ ಬಳಸಲು ಬಾರದಿರುವಷ್ಟು ಹಾಳಾಗುತ್ತದೆ.
ಅದ್ರಲ್ಲೂ ನಿಮ್ಮ ಫೇವರಿಟ್ ಬಟ್ಟೆ ಅಥವಾ ಅತೀ ದುಬಾರಿ ಬೆಲೆಯ ಬಟ್ಟೆಗೆ ಈ ರೀತಿ ಬಣ್ಣ ಹಿಡಿದರೆ ಕೋಪ, ಸಿಟ್ಟಿನ ಜೊತೆ ನೋವಾಗುತ್ತೆ. ಅದನ್ನು ಡ್ರೈ ಕ್ಲೀನಿಂಗ್‌ಗೆ ನೀಡಿದರು ಸಹ ಸರಿಯಾಗುವ ಲಕ್ಷಣ ಇರುವುದಿಲ್ಲ. ಜೊತೆಗೆ ನಾವು ಮನೆಯಲ್ಲಿ ಎಷ್ಟು ಬಾರಿ ತೊಳೆದರು ಸಹ ಆ ಕಲೆಗಳು ಹೋಗುವುದೇ ಇಲ್ಲ.

ಕೆಲವೊಮ್ಮೆ ಹೊಸ ಬಟ್ಟೆಗಳಿಗೂ ಈ ರೀತಿ ಕಲೆಗಳು ಹಿಡಿದು ಮತ್ತೆಂದು ಬಳಸಲು ಆಗುವುದಿಲ್ಲ. ಆದ್ರೆ ಮನೆಯಲ್ಲಿ ಏನು ಮಾಡಿದರೆ ಈ ಕಲೆಗಳನ್ನು ತೆಗೆಯಬಹುದು. ಹೇಗೆ ಮಾಡಿದರೆ ಬಹುಕಾಲದ ಬಣ್ಣಗಳು, ಕಲೆಗಳು ತೆಗೆಯಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಸಾಮಾನ್ಯವಾಗಿ ನಾವು ಬಟ್ಟೆಯಲ್ಲಿ ಕಲೆಗಳಾದಾಗ ಆ ಒಂದು ಬಟ್ಟೆಯನ್ನ ನೀರಿನಲ್ಲಿ ನೆನೆಸಿಡುತ್ತೇವೆ, ಇಲ್ಲವೆ ಯಾವುದಾದರು ಸೋಪಿನ ಪುಡಿ ಹಾಕಿ ನೊರೆ ಬರುವಂತೆ ಮಾಡಿ ಅದರಲ್ಲಿ ಗಂಟೆಗಳ ಕಾಲ ನೆನೆಸಿಡುತ್ತೇವೆ, ಆದರೆ ತೊಳೆದ ಬಳಿಕವೂ ಆ ಕಲೆಗಳು ಹೋಗಿರುವುದೇ ಇಲ್ಲ. ಇಂತಹ ಸಂದರ್ಭದಲ್ಲಿ ಈ ರೀತಿ ಮಾಡಿ ನೋಡಿ.
ಮೊದಲು ಒಂದು ಟಬ್ ಅಥವಾ ಬಕೆಟ್‌ನಲ್ಲಿ ನೀರು ತೆಗೆದುಕೊಳ್ಳಿ. ಆ ನೀರಿಗೆ ಈನೋ ಪ್ಯಾಕೆಟ್ ಒಡೆದು ಹಾಕಿ. ಗ್ಯಾಸ್ಟ್ರಿಕ್ ಸಮಯದಲ್ಲಿ ನೀರಿಗೆ ಹಾಕಿ ಕುಡಿಯುವ ಈನೋ ಪ್ಯಾಕ್ ಅನ್ನು ಒಡೆದು ಹಾಕಿ. ಬಳಿಕ ಇದಕ್ಕೆ ಅರ್ಧ ನಿಂಬೆ ಹಣ್ಣಿನ ರಸವನ್ನು ಹಾಕಿ, ಇದಕ್ಕೆ ಸ್ವಲ್ಪ ಸೋಪಿನ ಪುಡಿ ಸಹ ಹಾಕಿ ನೀರನ್ನು ಕರಡಿಕೊಳ್ಳಿ. ಬಳಿಕ ಇದಕ್ಕೆ ಬಣ್ಣ ಹಿಡಿದಿರುವ ಬಟ್ಟೆಯನ್ನು ಹಾಕಿ ಚೆನ್ನಾಗಿ ಅದ್ದಿ ಇಡಿ.
15ರಿಂದ 20 ನಿಮಿಷಗಳ ಕಾಲ ನೆನೆಸಿಟ್ಟರೆ ಸಾಕು. ಬಳಿಕ ಬಟ್ಟೆಯನ್ನು ನೀರಿನಿಂದ ತೆಗೆದು ಕೈನಿಂದ ಉಜ್ಜಿಕೊಳ್ಳಿ. ಬಳಿಕ ಬಟ್ಟೆಗೆ ಯಾವುದಾದರು ಸೋಪನ್ನು ಹಚ್ಚಿ ಬ್ರಷ್‌ನಿಂದ ಉಜ್ಜಿಕೊಳ್ಳಿ. ಬಹುತೇಕ ಬಣ್ಣಗಳು ಒಂದೇ ಬಾರಿಗೆ ಮಾಯವಾಗುತ್ತೆ. ಒಂದು ವೇಳೆ ಕಲೆಗಳು ಹೋಗದೆ ಸಣ್ಣದಾಗಿ ಉಳಿದರೆ ಮತ್ತೊಮ್ಮೆ ಇದೇ ಪ್ರಕಾರವಾಗಿ ಮಾಡಿ ತೊಳೆದರೆ ಖಂಡಿತ ಈ ಕಲೆಗಳು ಹೋಗುತ್ತವೆ.
ಮತ್ತೊಂದು ವಿಧಾನ
ಈಗ ಕಲೆ ಹಿಡಿದಿರುವ ಬಟ್ಟೆಯನ್ನು ತೆಗೆದುಕೊಂಡು ಒಂದು ಟೇಬಲ್ ಮೇಲೆ ಇಟ್ಟುಕೊಳ್ಳಿ. ಬಳಿಕ ಒಂದು ನಿಂಬೆ ಹಣ್ಣು ಕತ್ತರಿಸಿ ಈ ಕಲೆಗಳ ಮೇಲೆ ಅದರ ರಸವನ್ನು ಹಾಕಿ ಸುತ್ತಲೂ ಉಜ್ಜಿಕೊಳ್ಳಿ. ಈಗ ಒಂದು ಟಬ್‌ಗೆ ಸೋಪಿನ ಪುಡಿ ಹಾಕಿ, ಇದರ ಜೊತೆಗೆ ಒಂದು ಸ್ಪೂನ್ ಬ್ಲೀಚಿಂಗ್ ಪೌಡರ್ ಹಾಕಿಕೊಂಡು ಚೆನ್ನಾಗಿ ಕರಗುವಂತೆ ಮಾಡಿ. ಇದರ ಒಳಗೆ ಬಟ್ಟೆಯನ್ನು ನೆನೆಯಲು ಹಾಕಿ. ಸುಮಾರು 15 ನಿಮಿಷ ಈ ನೀರಿನಲ್ಲಿ ಅದ್ದಿ ಇಟ್ಟರೆ ಸಾಕಾಗುತ್ತದೆ. ಬಳಿಕ ನೀರಿನಿಂದ ಮೇಲಕ್ಕೆ ತೆಗೆದು ಕೈನಿಂದ ಉಜ್ಜಿಕೊಳ್ಳಬೇಕು. ಎಲ್ಲಿ ಕಲೆಗಳು ಹಿಡಿದಿದ್ಯೋ ಅಲ್ಲಿ ಕೈನಿಂದ ಉಜ್ಜಿಕೊಳ್ಳಿ.
ಬಳಿಕ ಎಂದಿನಿಂದ ನೀವು ಬಟ್ಟೆ ತೊಳೆಯುವಂತೆಯೇ ಒಮ್ಮೆ ತೊಳೆದರೆ ಈ ಕಲೆಗಳು ಮಾಯವಾಗುತ್ತದೆ. ನೀವು ಸಹ ಒಮ್ಮೆ ಮನೆಯಲ್ಲಿ ಕಲೆಯಾಗಿರುವ ಬಟ್ಟೆ ಕ್ಲೀನ್ ಮಾಡಲು ಈ ಪ್ರಯತ್ನ ಮಾಡಿ.



Click it and Unblock the Notifications
