Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ತಳ ಹಿಡಿದ-ಸೀದು ಹೋದ ಪಾತ್ರೆ ಕಲೆ ತೆಗೆಯೋದು ಹೇಗೆ? ಇಲ್ಲಿದೆ ಟಿಪ್ಸ್..!
ಅಡುಗೆ ಮನೆಯಲ್ಲಿ ಪಾತ್ರೆ ತೊಳೆಯೋದೇ ಒಂದು ಕಲಸ ಆಗಿಬಿಟ್ಟಿರುತ್ತೆ. ಕೆಲವೊಂದು ಬಾರಿ ಇಡೀ ದಿನದ ಪಾತ್ರೆ ತೊಳೆಯಬೇಕಾದ ಅನಿವಾರ್ಯತೆ ಎದುರಾಗಿರುತ್ತೆ. ಅದ್ರಲ್ಲೂ ಜಿಡ್ಡು ಹಿಡಿದಿರುವ ಪಾತ್ರೆ ಇಲ್ಲವೆ ತಳೆ ಹಿಡಿದ ಪಾತ್ರೆ ಇದ್ದರೆ ಕೈ ನೋವು ಬಂದರೂ ಪಾತ್ರೆ ಮಾತ್ರ ಬೆಳ್ಳಗಾಗುವುದೇ ಇಲ್ಲ. ಹಾಗಾದ್ರೆ ಪಾತ್ರೆಯನ್ನು ಸುಲಭವಾಗಿ ಸ್ವಚ್ಛ ಮಾಡೋದಾದ್ರು ಹೇಗೆ?
ಕೆಲವೊಮ್ಮೆ ಅಡುಗೆ ಮಾಡುವಾಗ ಪಾತ್ರೆ ತಳ ಹಿಡಿದರೆ ಅದನ್ನ ಬಿಡಿಸುವುದೇ ದೊಡ್ಡ ಸವಾಲಾಗುತ್ತದೆ, ಗಂಟೆಗಳ ಕಾಲ ನೆನೆಸಿಟ್ಟ ಬಳಿಕ ಚೆನ್ನಾಗಿ ತೊಳೆದರೆ ಬಿಟ್ಟುಕೊಳ್ಳುತ್ತೆ. ಆದ್ರೆ ಹಾಲಿನ ಪಾತ್ರೆ, ಕುಕ್ಕರ್ ಸೇರಿ ಹಲವು ಪಾತ್ರೆ ವರ್ಷಗಳಿಂದ ಕಲೆಗಳು ಹಾಗೆ ಉಳಿದುಬಿಡುತ್ತವೆ. ಯಾವಾಗಲು ಒಂದೇ ರೀತಿಯ ಅಡುಗೆ ಆ ಪಾತ್ರೆಗಳಲ್ಲಿ ಮಾಡೋದ್ರಿಂದ ಈ ಪಾತ್ರೆಗಳಲ್ಲಿ ಕಲೆಗಳು ಉಳಿಯುತ್ತವೆ.

ಈ ಪಾತ್ರೆಗಳನ್ನ ನೀವು ಎಷ್ಟು ಬಾರಿ ಉಜ್ಜಿದರ ಅದರ ಕಲೆಗಳು ಹೋಗುವುದೇ ಇಲ್ಲ. ಕೆಲವೊಮ್ಮೆ ಜಿಡ್ಡು ಹಾಗೂ ತಳ ಹಿಡಿದ ಕಲೆ ತೆಗೆಯಲು ಸಾಧ್ಯವೇ ಆಗುವುದಿಲ್ಲ. ಕೆಲವು ಇಂತಹ ಪಾತ್ರೆಯನ್ನ ಬಳಸುವುದನ್ನೇ ನಿಲ್ಲಿಸಿ ಬಿಡುತ್ತಾರೆ. ಆದ್ರೆ ನಾವಿಂದು ಈ ಕಲೆಗಳನ್ನು ಮನೆಯಲ್ಲಿ ಸುಲಭವಾಗಿ ತೆಗೆಯುವುದು ಹೇಗೆ? ಎಂಬುದನ್ನು ತಿಳಿದುಕೊಳ್ಳೋಣ.
ಬಟ್ಟೆ ತೊಳೆಯುವ ಪುಡಿ
ಸೀದು ಹೋಗಿರುವ ಅಥವಾ ತಳ ಹಿಡಿದ ಪಾತ್ರೆಯನ್ನು ತೆಗೆದುಕೊಂಡು ಅದಕ್ಕೆ ಒಂದು ಸ್ಪೂನ್ ಬಟ್ಟೆ ತೊಳೆಯಲು ಬಳಸುವ ಪುಡಿಯನ್ನು ಹಾಕಿ. ಯಾವುದಾದರು ನಡೆಯುತ್ತೆ. ಬಳಿಕ ಅದಕ್ಕೆ ಸ್ವಲ್ಪ ನೀರು ಹಾಕಿ. ಎರಡೂ ಹಾಕಿ ಒಲೆ ಮೇಲೆ ಇಟ್ಟು ಕುದಿ ಬರಲು ಬಿಡಿ. ಸಣ್ಣ ಉರಿಯಲ್ಲಿ ಕುದಿಯಲು ಬಿಡಿ. 5 ನಿಮಿಷದ ಬಳಿಕ ಒಲೆಯಿಂದ ತೆಗೆದು ನೀರು ಹೊರಗೆ ಹಾಕಿ. ಈಗ ಅದಕ್ಕೆ ಒಂದು ಚಮಚ ಉಪ್ಪು, ಬೇಕಿಂಗ್ ಸೋಡಾ ಹಾಕಿ. ನೀವು ಪಾತ್ರೆ ಉಜ್ಜುವ ಸ್ಕ್ರಬ್‌ನಿಂದ ಉಜ್ಜಿಕೊಳ್ಳಿ.
ಹೀಗೆ ಉಜ್ಜಿಕೊಂಡರೆ ತಳ ಹಿಡಿದ ಪಾತ್ರೆ ಸ್ವಚ್ಛವಾಗುತ್ತೆ. ಒಂದು ವೇಳೆ ಹೀಗೆ ಮಾಡಿದರೂ ಸ್ವಚ್ಛ ಮಾಡಿದರೂ ಕಲೆ ಬಿಡದಿದ್ದರೆ ಮತ್ತೆ ಸೋಪಿನ ಪುಡಿ ಹಾಕಿ ನೆನೆಯಲು ಬಿಟ್ಟು 5 ನಿಮಿಷದ ಬಳಿಕ ತೊಳೆದರೆ ಖಂಡಿತ ಸ್ವಚ್ಛವಾಗುತ್ತದೆ. ಹೀಗೆ ತೊಳಗೆ ಬಳಿಕ ಬೇಕಾದರೆ ಬಿಸಿ ನೀರು ಹಾಗೂ ನಿಂಬೆ ಹಣ್ಣಿನ ರಸ ಹಿಂಡಿ ಮತ್ತೆ ತೊಳೆದುಕೊಳ್ಳಿ. ಏಕೆಂದರೆ ಸೋಪಿನ ಪುಡಿ ಹಾಕಿರುವುದರಿಂದ ಅದರಲ್ಲಿ ಅಂಶ ಉಳಿಯಬಾರದು.
ವಿಮ್ ಜೆಲ್, ವಿನೆಗರ್
ಮನೆಯಲ್ಲಿ ಪಾತ್ರೆ ತೊಳೆಯಲು ನೀವು ಬಳಸುವ ಯಾವುದಾದರು ಜೆಲ್ ಅಥವಾ ವಿಮ್ ಜೆಲ್ ಇದ್ದರೆ ಕಲೆ ಇರುವ ಪಾತ್ರೆ ಒಳಗೆ ಒಂದು ಸ್ಪೂನ್ ಹಾಕಿ. ಬಳಿಕ ಸ್ವಲ್ಪ ವಿನೆಗರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ನೆನೆಯಲು ಬಿಡಿ. ಸುಮಾರು 15 ನೆನೆಯಲು ಬಿಟ್ಟ ಬಳಿಕ ಸಾಮಾನ್ಯವಾಗಿ ನೀವು ಪಾತ್ರೆ ಉಜ್ಜಲು ಬಳಸುವ ಸೋಪ್ ಅಥವಾ ಪುಡಿಯನ್ನು ಬಳಸಿ ನೀರಿನೊಂದಿಗೆ ತೊಳೆಯಿರಿ ಹೀಗೆ ಮಾಡುವುದರಿಂದ ಕಲೆ ಮಾಯವಾಗುತ್ತೆ.
ಪಾತ್ರೆ ಉಜ್ಜುವ ಲಿಕ್ವಿಡ್
ಪಾತ್ರೆಯ ತಳ ಹಿಡಿದಿರುವುದನ್ನು ತೆಗೆಯುವ ಮತ್ತೊಂದು ವಿಧಾನವೆಂದರೆ ಪಾತ್ರೆಗೆ ಯಾವುದಾದರು ಲಿಕ್ವಿಡ್ ಹಾಕಬೇಕು. ಪಾತ್ರೆ ತೊಳೆಯಲು ಬಳಸುವ ಯಾವುದಾದರು ಒಂದು ಲಿಕ್ವಿಡ್ ತೆಗೆದುಕೊಂಡು ಅದನ್ನು ಪಾತ್ರೆ ತಳ ಹಿಡಿದ ಕಲೆಗಳ ಮೇಲೆ ಹಾಕಿ. ಬಳಿಕ ಸುಟ್ಟಿರುವ ಜಾಗ ಮುಚ್ಚುವಷ್ಟು ನೀರು ಹಾಕಿ ಅದನ್ನು ಒಲೆ ಮೇಲೆ ಕುದಿಯಲು ಬಿಡಿ. ನಂತರ ಒಲೆ ಆಫ್ ಮಾಡಿ ನೀರು ತೆಗೆಯಿರಿ. ಬಳಿಕ ಪಾತ್ರೆಯನ್ನು ಸೋಪಿನ ಪುಡಿ ಬಳಸಿ ತೊಳೆದರೆ ಕಲೆಗಳು ಹೋಗಲಿದೆ. ಇದು ಪಾತ್ರೆ ಜಿಡ್ಡು ತೆಗೆಯುವ ಸುಲಭ ವಿಧಾನಗಳಾಗಿವೆ.



Click it and Unblock the Notifications
