Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಕಿಟಕಿ, ಐರನ್ ಬಾಕ್ಸ್‌ನ ಕಲೆಗಳ ತೆಗೆಯುವುದು ಹೇಗೆ? ಈ ಮೂರು ವಸ್ತು ಇದ್ರೆ ಸಾಕು..!!
ಹಬ್ಬದಲ್ಲಿ ನಾವು ಎಲ್ಲಾ ವಸ್ತುಗಳನ್ನು ಕ್ಲೀನ್ ಮಾಡುವ ಕೆಲಸ ಮಾಡುತ್ತೇವೆ, ಅದರಲ್ಲೂ ಮನೆಯ ಮೂಲೆ ಮೂಲೆಯನ್ನು ಗುಡಿಸಿ ಕಸವನ್ನು ತೆಗೆದು ಸ್ವಚ್ಛ ಮಾಡುತ್ತೇವೆ. ಬಹು ಕಾಲದಿಂದ ಮುಟ್ಟದೆ ಹಾಗೆಯೇ ಇದ್ದ ಎಲ್ಲಾ ವಸ್ತುಗಳ ಮೇಲಿರುವ ಧೂಳನ್ನು ನಾವು ಅಂದು ಸರಿಯಾಗಿ ಕ್ಲೀನ್ ಮಾಡಿರುತ್ತೇವೆ.
ಹಾಗೆ ಹಬ್ಬದ ಹಿಂದಿನ ದಿನದವರೆಗೂ ಮನೆಯ ಕ್ಲೀನಿಂಗ್ ನಡೆದೇ ಇರುತ್ತದೆ. ಆದ್ರೆ ಕೆಲವೊಮ್ಮೆ ಕ್ಲೀನಿಂಗ್ ಕೆಲಸವೇ ದೊಡ್ಡ ತಲೆನೋವಾಗುತ್ತದೆ. ಏಕೆಂದರೆ ಕೆಲವು ಕಲೆಗಳನ್ನು ಹೆಚ್ಚು ಹೊತ್ತು ಕ್ಲೀನ್ ಮಾಡಬೇಕಾದ ಅನಿವಾರ್ಯತೆ ಎದುರಾಗುತ್ತದೆ. ಅದರಲ್ಲಿ ಕಿಟಕಿಯ ಮೇಲೆ ಹಿಡಿದಿರುವು ಜಿಡ್ಡು ಹಾಗೂ ತುಕ್ಕು ಕೂಡ ಒಂದಾಗಿದೆ.

ಅಡುಗೆ ಮನೆಯ ಕಿಟಕಿಯಲ್ಲಿ ಸಾಮಾನ್ಯವಾಗಿ ಜಿಡ್ಡು, ಕಲೆಗಳು, ತುಕ್ಕು ಹಿಡಿಯುವುದು ಸಾಮಾನ್ಯ. ಆದ್ರೆ ಇದನ್ನು ಎಷ್ಟು ಬಾರಿ ತೊಳೆದರು ಕ್ಲೀನ್ ಮಾಡಿದರೂ ಕೂಡ ಅದು ಹೋಗುವುದಿಲ್ಲ. ಹೀಗಾಗಿ ಬಹು ಸಮಯ ನೀವು ಈ ಕ್ಲೀನಿಂಗ್‌ನಲ್ಲಿ ಕಳೆಬೇಕಾಗುತ್ತದೆ. ಆದ್ರೆ ನಾವಿಂದು ಈ ಕ್ಲೀನಿಂಗ್ ಅನ್ನು ಸುಲಭವಾಗಿ ಮಾಡುವುದು ಹೇಗೆ? ಕಿಟಕಿಯಲ್ಲಿ ಹಿಡಿದ ಜಿಡ್ಡು, ತುಕ್ಕನ್ನು ಸುಲಭವಾಗಿ ತೆಗೆಯುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ.
ಮೊದಲು ಕಿಟಕಿಯಲ್ಲಿರುವ ಜಿಡ್ಡು ಹಾಗೂ ಕಬ್ಬಿಣದ ತುಕ್ಕು ತೆಗೆಯುವುದು ಹೇಗೆ?
ಈ ತುಕ್ಕನ್ನು ನೀರು ಹಾಕಿ, ಸೋಪಿನ ಪುಡಿಯಲ್ಲಿ ತೆಗೆಯುವುದು ಬಹಳ ಕಷ್ಟ. ಈಗ ಒಂದು ಬೌಲ್ ತೆಗೆದುಕೊಂಡು ಅದಕ್ಕೆ ಬೇಕಿಂಗ್ ಸೋಡಾ ಹಾಕಿಕೊಂಡು ಒಂದು ಇಡಿ ನಿಂಬೆ ಹಣ್ಣನ್ನು ಹಿಂಡಿಕೊಂಡು ಕಲಸಿಕೊಳ್ಳಿ. ಈಗ ನೀವು ಬಳಸುವ ಟೂಥ್ ಪೇಸ್ಟ್ ಅನ್ನು ಸ್ವಲ್ಪ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಸ್ವಲ್ಪ ವಿನೆಗರ್ ಸಹ ಹಾಕಿ 10 ನಿಮಿಷ ಹಾಗೆಯೇ ಬಿಡಿ.
ಇದಾದ ಬಳಿಕ ಒಂದು ಹಲ್ಲು ಉಜ್ಜುವಂತಹ ಹಳೆಯ ಬ್ರಷ್ ತೆಗೆದುಕೊಂಡು ಈ ಮಿಶ್ರಣದಲ್ಲಿ ಅದ್ದಿ ಬಳಿಕ ಕಿಟಕಿಯ ಮೇಲೆ ಉಜ್ಜಿಕೊಳ್ಳಿ. ಹಾಗೆ ಉಜ್ಜಿದ ಬಳಿಕ ಸುಮಾರು 5 ನಿಮಿಷ ಹಾಗೆ ಬಿಟ್ಟು ಬಿಡಿ. ನಂತರ ಯಾವುದಾದರು ಪಾತ್ರೆ ಉಜ್ಜುವಂತಹ ಲಿಕ್ವಿಡ್ ಅನ್ನು ಒಂದು ಬ್ರಷ್‌ಗೆ ಹಾಕಿ ಕಿಟಕಿಯನ್ನು ಉಜ್ಜಿಕೊಳ್ಳಿ. ನಂತರ ನೀರಿನಿಂದ ತೊಳೆಯಿರಿ.
ಈ ರೀತಿ ಮಾಡುವುದರಿಂದ ಹಳೆಯ ಕಲೆಗಳು ಕ್ಷಣದಲ್ಲಿ ಕ್ಷಣದಲ್ಲಿ ತೆಗೆಯಬಹುದು. ಹೆಚ್ಚು ಶ್ರಮ ಹಾಕುವ ಅವಶ್ಯಕತೆಯೂ ಇರುವುದಿಲ್ಲ.
ಐರನ್ ಬಾಕ್ಸ್‌ಗೆ ಹಿಡಿದ ಕಲೆ ತೆಗೆಯುವುದು ಹೇಗೆ?
ಇನ್ನು ನಾವು ನಿತ್ಯ ಬಳಸುವ ಐರನ್ ಬಾಕ್ಸ್‌ಗೆ ಸುಟ್ಟಿರುವ ಕಲೆಗಳು, ಹಳೆಯ ಬಟ್ಟೆಯ ಕಲೆ, ಬಣ್ಣ ಹಿಡಿದಿರುತ್ತದೆ. ಆದ್ರೆ ಅದನ್ನು ತೆಗೆಯಲು ನೀವು ಹಲವು ಬಾರಿ ಪ್ರಯತ್ನಿಸಿರಬಹುದು, ಆದ್ರೆ ಅದು ಅಷ್ಟೊಂದು ಸುಲಭವಲ್ಲ. ಹಾಗಾದ್ರೆ ನಾವಿಂದು ಸುಲಭವಾಗಿ ಈ ಕಲೆಗಳ ತಗೆಯುವುದು ಹೇಗೆ ಎಂಬುದನ್ನ ತಿಳಿದುಕೊಳ್ಳೋಣ>
ಮೊದಲು ಒಂದು ಬೌಲ್ ತೆಗೆದುಕೊಳ್ಳಿ ಅದಕ್ಕೆ ಬೇಕಿಂಗ್ ಸೋಡಾ, ಟೂಥ್ ಪೇಸ್ಟ್, ವಿನೆಗರ್ ಎರಡು ಚಮಚ ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ವಿನೆಗರ್ ಹಾಕಿದಾಗ ಚೆನ್ನಾಗಿ ನೊರೆ ಬರುತ್ತದೆ, ಹಾಗೆ ಇದರ ಮಿಶ್ರಣ ರೆಡಿಮಾಡಿಕೊಳ್ಳಿ. ಈಗ ಐರನ್ ಬಾಕ್ಸ್ ಅನ್ನು ಹೀಟ್ ಮಾಡಲು ಸ್ವಿಚ್ ಆನ್ ಮಾಡಿ ಇಡಿ. ಸ್ವಲ್ಪ ಬಿಡಿಯಾದಾಗ ಸ್ವಿಚ್ ಆಫ್ ಮಾಡಿ ಒಂದು ಬಟ್ಟೆಗೆ ಈ ಮಿಶ್ರಣ ಹಚ್ಚಿಕೊಂಡು ಹಿಂಬದಿಯಲ್ಲಿ ಗಟ್ಟಿಯಾಗಿ ಒರೆಸಿಕೊಳ್ಳಿ.
ಹೀಗೆ ಮಾಡುವುದರಿಂದ ಹಳೆಯ ಕಲೆಗಳು ಕಿತ್ತು ಬರುತ್ತದೆ. ನಂತರ ಚೆನ್ನಾಗಿ ನೀರಿನ ಪಸೆ ಇಲ್ಲದಂತೆ ಒಣಗಿದ ಬಟ್ಟೆಯಲ್ಲಿ ಒರೆಸಿಕೊಂಡರೆ ಐರನ್ ಬಾಕ್ಸ್‌ನ ಹಿಂದೆ ಇರುವ ಕಲೆ, ತುಕ್ಕು ನಿವಾರಣೆಯಾಗುತ್ತದೆ.



Click it and Unblock the Notifications
