Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಕಬ್ಬಿಣದ ಪಾತ್ರೆಗಳಿಗೆ ತುಕ್ಕು ಹಿಡಿದಿದ್ಯಾ? ಈ ಟಿಪ್ಸ್ ಬಳಸಿ ಹೊಸತರಂತೆ ಮಾಡಿ!
ನೀವು ಮನೆಯಲ್ಲಿ ಅಡುಗೆಗಾಗಿ ಹಲವು ಪಾತ್ರೆಗಳ ಉಪಯೋಗಿಸುತ್ತೀರಿ. ಅದ್ರಲ್ಲೂ ಸ್ಟೀಲ್ ಪಾತ್ರೆಗಳೇ ಈಗ ಬಹುತೇಕ ಅಡುಗೆಗೆ ಬಳಕೆಯಾಗುತ್ತಿದೆ. ಆದ್ರೆ ಸಾಮಾನ್ಯವಾಗಿ ಈ ಪಾತ್ರೆಗಳಿಗಿಂತ ವಿಶೇಷ ಸಮಯದಲ್ಲಿ ಅಥವಾ ಅಪರೂಪದ ಅಡುಗೆಗಳಿಗೆ ಕಬ್ಬಿಣದ ಪಾತ್ರೆಗಳ ಬಳಕೆಯನ್ನು ಸಹ ನಾವು ನೋಡಬಹುದು. ದೋಸೆ, ರೊಟ್ಟಿ ಮಾಡುವಾಗ ಕಬ್ಬಿಣದ ಪಾತ್ರೆಗಳು ಹಾಗೆ ಎಣ್ಣೆಯಲ್ಲಿ ಕರಿಯುವ ವಸ್ತುಗಳಿದ್ದಾಗಲು ಕಬ್ಬಿಣದ ಪಾತ್ರೆಗಳ ಬಳಸುವುದು ಕಾಮನ್.
ಬೇರೆಲ್ಲಾ ಪಾತ್ರೆಗಳಿಗಿಂತ ಕಬ್ಬಿಣ ಹಾಗೂ ತಾಮ್ರದ ಪಾತ್ರೆಯಲ್ಲಿ ಅಡುಗೆ ಮಾಡಿ ಸವಿದರೆ ಅದರ ರುಚಿ ಮರೆಯಲು ಸಾಧ್ಯವಾಗೋದಿಲ್ಲ. ಇನ್ನು ಈ ಕಬ್ಬಿಣದ ಪಾತ್ರೆಯಲ್ಲಿ ಅಡುಗೆ ಮಾಡಿದ್ರೆ ಆರೋಗ್ಯಕ್ಕೂ ಕೂಡ ಬಹಳ ಉತ್ತಮ. ದೇಹಕ್ಕೆ ಇದು ಪೂರಕವಾಗಿರಲಿದೆ. ಹಾಗೆ ಕಬ್ಬಿಣದ ಪಾತ್ರೆಗಳು ಬಹುಕಾಲ ಬಾಳಿಕೆ ಬರುವುದರಿಂದ ಎಲ್ಲರು ಇದನ್ನು ಬಳಸುವುದು ನೋಡಬಹುದು.

ಹಿಂದಿನ ಕಾಲದಲ್ಲಿ ಬಹುತೇಕರು ಈ ರೀತಿ ಕಬ್ಬಿಣ, ತಾಮ್ರದ ಪಾತ್ರೆಗಳ ಬಳಸುತ್ತಿದ್ದರು. ಹಾಗೆ ಕಬ್ಬಿಣದ ಪಾತ್ರೆಯನ್ನು ಬಳಸುವುದು ಎಷ್ಟು ಪ್ರಯೋಜನಕಾರಿಯೋ ಅದರಿಂದ ಒಂದಿಷ್ಟು ಹಾನಿಯ ಸುಳಿವು ಇರಲಿದೆ. ಕಬ್ಬಿಣದ ಪಾತ್ರೆಗ ತುಕ್ಕುಗಳು ದೇಹ ಸೇರುವುದು ಉತ್ತಮವಲ್ಲ. ಹಾಗೆ ಈ ಪಾತ್ರೆಯಲ್ಲಿನ ಎಣ್ಣೆ ಜಿಡ್ಡುಗಳು ಸಹ ಅಪಾಯಕಾರಿಯಾಗುತ್ತವೆ.
ಈ ಜಿಡ್ಡುಗಳಲ್ಲಿ ಬ್ಯಾಕ್ಟೀರಿಯಾ ಸೃಷ್ಟಿಯಾಗಬಹುದು, ಹಾಗೆ ತುಕ್ಕು ನಿಮ್ಮ ದೇಹ ಸೇರುವುದು ಅಪಾಯಕಾರಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಹೀಗಾಗಿ ನಾವಿಂದು ಈ ಕಬ್ಬಿಣದ ಪಾತ್ರೆಗೆ ತಗುಲಿರುವ ತುಕ್ಕನ್ನು ಸುಲಭವಾಗಿ ಮನೆಯಲ್ಲಿ ತೆಗೆಯುವುದು ಹೇಗೆ? ಸ್ವಚ್ಛವಾಗಿಟ್ಟು ಆರೋಗ್ಯಕರ ಅಡುಗೆ ಮಾಡಿಕೊಳ್ಳುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ಮೊದಲು ಒಂದು ಬೌಲ್‌ನಲ್ಲಿ ವಿನೆಗರ್ ಹಾಗೂ ಸಮ ಪ್ರಮಾಣದ ನೀರು ಹಾಕಿ ಮಿಕ್ಸ್ ಮಾಡಿ. ಹಾಗೆ ಅರ್ಧ ನಿಂಬೆ ರಸವನ್ನು ಹಿಂಡಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿ ತುಕ್ಕು ಹಿಡಿದಿರುವ ಕಬ್ಬಿಣದ ಪಾತ್ರೆಗೆ ಹಚ್ಚಿ ಇಟ್ಟು 5 ನಿಮಿಷ ಬಿಡಿ. ಅನಂತರ ಯಾವುದಾದರು ಪಾತ್ರೆ ತೊಳೆಯುವ ಲಿಕ್ವಿಡ್ ಅಥವಾ ಸಾಬೂನು ಬಳಸಿ ಚೆನ್ನಾಗಿ ಉಜ್ಜಿ ತೊಳೆದರೆ ತುಕ್ಕು ಮಾಯವಾಗಲಿದೆ.
ತುಕ್ಕು ಹಿಡಿದಿರುವ ಪಾತ್ರೆಯನ್ನು ಒಮ್ಮೆ ಸಾಮಾನ್ಯ ಸಾಬೂನು ಬಳಸಿ ತೊಳೆಯಿರಿ. ಅನಂತರ ಅದರ ಮೇಲೆ ಕಲ್ಲು ಉಪ್ಪನ್ನು ಹಾಕಿ. ಅನಂತರ ಕತ್ತರಿಸಿದ ಅರ್ಧ ನಿಂಬೆಯನ್ನು ಅದರ ಮೇಲೆ ಉಜ್ಜಿ ಈ ವಿಧಾನದಲ್ಲಿ ಎರಡರಿಂದ ಮೂರು ಬಾರಿ ಮಾಡಿದರೆ ತುಕ್ಕು ಸುಲಭವಾಗಿ ನಿವಾರಣೆಯಾಗಲಿದೆ.
ಹಾಗೆ ತುಕ್ಕು ಹಿಡಿದ ಪಾತ್ರೆಯ ಮೇಲೆ ಅಡುಗೆ ಸೋಡಾ ಅನ್ನು ಚೆನ್ನಾಗಿ ಹಾಕಿಕೊಳ್ಳಿ. ಈಗ ನಿಂಬೆ ರಸ ಅಥವಾ ವಿನೆಗರ್ ಅನ್ನು ಪಾತ್ರೆ ಉಜ್ಜುವ ಸ್ಕ್ರಬ್‌ಗೆ ಹಚ್ಚಿಕೊಂಡು ಚೆನ್ನಾಗಿ ವೃತ್ತಾಕಾರವಾಗಿ ಉಜ್ಜಿಕೊಳ್ಳಿ. ಇದು ತುಕ್ಕು ಹಾಗೆ ಹಳೆಯ ಜಿಡ್ಡುಗಳನ್ನು ನಿವಾರಿಸಲಿದೆ. ಪಾತ್ರೆ ಹೊಸತರಂತೆ ಹೊಳೆಯುತ್ತದೆ.
ಕಬ್ಬಿಣದ ವಸ್ತುಗಳಿಗೆ ಹಿಡಿದ ತುಕ್ಕು ತೆಗೆಯುವುದು ಹೇಗೆ?
ಇನ್ನು ಮನೆ ಬಳಕೆ ಕೆಲ ವಸ್ತುಗಳಿಗೆ ತುಕ್ಕು ಹಿಡಿಯುವುದು ನೋಡಬಹುದು. ಅದ್ರಲ್ಲೂ ಕತ್ತಿ, ಚಾಕು, ಕಾಯಿ ತುರಿಯುವ ಸಾಧನ ಸೇರಿ ಹಲವು ಕಬ್ಬಿಣದಿಂದ ಕೂಡಿದ್ದು ಇವು ಸಹ ತುಕ್ಕಿಗೆ ಒಳಗಾಗುತ್ತವೆ. ಇದರಿಂದ ತುಕ್ಕು ತೆಗೆಯಲು ನಿಂಬೆ ರಸ, ವಿನೆಗರ್, ಅಡುಗೆ ಸೋಡಾ, ಉಪ್ಪು ಈ ಮಿಶ್ರಣಗಳ ಬಳಸಿಕೊಳ್ಳಬಹುದು. ಸುಲಭವಾಗಿ ತುಕ್ಕು ನಿವಾರಣೆಯಾಗಲಿದೆ.
(ಹಕ್ಕುತ್ಯಾಗ: ಮೇಲೆ ನೀಡಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ವಿಶ್ವಾಸಾರ್ಹವಾಗಿದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನಕ್ಕೆ ಸಂಬಂಧಿಸಿದ ಮಾಹಿತಿಯನ್ನು ದೃಢೀಕರಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ. ಈ ಸಮಸ್ಯೆಗೆ ಪರಿಹಾರ ಮಾಡುವ ಮುನ್ನ ತಜ್ಞರ ಸಲಹೆ ಪಡೆಯಲು ಸಲಹೆ ನೀಡಲಾಗುತ್ತದೆ)



Click it and Unblock the Notifications
