Latest Updates
-
ಮಳೆಗಾಲದಲ್ಲಿ ಡೆಂಗ್ಯೂ ಕಾಟ: ಮನೆಯಲ್ಲೇ 7 ನಿಮಿಷದ ಈ ಚೆಕ್ ಲಿಸ್ಟ್ ಪಾಲಿಸಿ, ಸುರಕ್ಷಿತವಾಗಿರಿ! -
ನಾಗರ ಪಂಚಮಿ: ದೇವಸ್ಥಾನದ ಕ್ಯೂನಲ್ಲಿ ನಿಲ್ಲುವಾಗ ಬೆನ್ನು, ಕಾಲು ನೋವು ತಪ್ಪಿಸಲು ಈ ಟಿಪ್ಸ್ ಫಾಲೋ ಮಾಡಿ! -
ಸೋಷಿಯಲ್ ಮೀಡಿಯಾದಲ್ಲಿ ಪ್ರೀತಿ ವ್ಯಕ್ತಪಡಿಸುವ ಮುನ್ನ ಎಚ್ಚರ: ದಂಪತಿಗಳಿಗೆ ಇಲ್ಲಿದೆ ಡಿಜಿಟಲ್ ಶಿಷ್ಟಾಚಾರದ ಟಿಪ್ಸ್ -
ಮಳೆಗಾಲದ ಸಂಜೆ: ನಿಮ್ಮ ಅಪಾರ್ಟ್ಮೆಂಟ್ ಸೋರಿಕೆಯಾಗದಂತೆ ತಡೆಯಲು ಈ ತ್ವರಿತ ಟಿಪ್ಸ್ ಫಾಲೋ ಮಾಡಿ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: 30 ನಿಮಿಷದಲ್ಲಿ ಸುಂದರ ಪೂಕಳಂ ಬಿಡಿಸುವುದು ಹೇಗೆ? -
ಶ್ರಾವಣ ಸೋಮವಾರದ ವ್ರತ: ಆಫೀಸ್ ಕೆಲಸದ ನಡುವೆ ಮಧುಮೇಹಿಗಳು ಆರೋಗ್ಯವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್ -
ಮಳೆಗಾಲದ ಫೋಟೋಗಳು ವೈರಲ್ ಆಗಬೇಕಾ? ಈ ಸಿಂಪಲ್ ಮೊಬೈಲ್ ಟ್ರಿಕ್ಸ್ ಟ್ರೈ ಮಾಡಿ! -
ಆಗಸ್ಟ್ 17 ರಂದು ರಜೆ ಇದೆಯಾ? ಕೃಷ್ಣ ಜನ್ಮಾಷ್ಟಮಿ ಗೊಂದಲಕ್ಕೆ ಇಲ್ಲಿದೆ ಸ್ಪಷ್ಟ ಮಾಹಿತಿ -
ಪಾರ್ಸಿ ಹೊಸ ವರ್ಷದ ಸಂಭ್ರಮ: ನಿಮ್ಮ ಪಾರ್ಸಿ ಸಂಬಂಧಿಕರ ಮನೆಗೆ ಹೋಗುವಾಗ ಈ ಶಿಷ್ಟಾಚಾರಗಳನ್ನು ಮರೆಯದಿರಿ! -
ಸ್ವಾತಂತ್ರ್ಯ ದಿನಾಚರಣೆ ನಂತರದ ಕ್ಲೀನಪ್: ಬಾಲ್ಕನಿ ಸ್ವಚ್ಛತೆ ಮತ್ತು ರಾಷ್ಟ್ರಧ್ವಜದ ಗೌರವಯುತ ನಿರ್ವಹಣೆ
ಬಹುಕಾಲದ ಎಣ್ಣೆ ಜಿಡ್ಡು ತೊಲಗಿಸೋದು ಹೇಗೆ? ಇಲ್ಲಿದೆ ಸುಲಭದ ಟ್ರಿಕ್ಸ್!
ಒಮ್ಮೆ ಅಡುಗೆಮನೆಯಲ್ಲಿ ಕಾಲಿಟ್ಟಾಗ ಅಲ್ಲಿ ಕೆಲಸಗಳು ಕಣ್ಣಿಗೆ ಬೀಳುತ್ತೆ. ಅದ್ರಲ್ಲೂ ಪಾತ್ರೆಗಳಲ್ಲಿ ಎಣ್ಣೆ ಜಿಡ್ಡು ತೆಗೆಯುವುದು ಅಂದ್ರೆ ಇಡೀ ದಿನದ ಕೆಲಸ ಹಾಳಾದಂತೆ. ಅಡುಗೆ ಮಾಡುವ ವೇಳೆ ಎಣ್ಣೆಯ ಜಿಡ್ಡು, ಪದಾರ್ಥಗಳು ಕೆಳಗೆ ಚೆಲ್ಲಿಹೋಗುವುದು ಇತ್ಯಾದಿ ಸಮಸ್ಯೆಗಳು ಸಾಮಾನ್ಯ. ವಿಶೇಷವಾಗಿ ಎಣ್ಣೆ ಜಿಡ್ಡನ್ನು ಸ್ವಚ್ಛಗೊಳಿಸುವುದು ತುಂಬಾ ಕಠಿಣವಾಗುತ್ತದೆ.
ನೆಲದ ಮೇಲೆ ಬಿದ್ದ ಜಿಡ್ಡನ್ನು ತಕ್ಷಣ ನೀವು ಬಟ್ಟೆಯಲ್ಲಿ ಒರೆಸುತ್ತೀರಿ. ಹಾಗೆ ಒಲೆ ಮೇಲೆ ಎಣ್ಣೆ, ಒಗ್ಗರಣೆಯ ಜಿಡ್ಡನ್ನು ಬಟ್ಟೆಯಿಂದಲೇ ತೆಗೆಯಬಹುದು. ಆದ್ರೆ ಪಾತ್ರೆಗೆ ಅಂಟಿರುವ ಹಾಗೆ ಬಿಡಿಲಾಗದಷ್ಟು ಹಿಡಿದಿರುವ ಎಣ್ಣೆ ಜಿಡ್ಡನ್ನು ನೀವು ಬಿಡಿಸುವುದು ಬಹಳ ಕಷ್ಟವಾಗುತ್ತದೆ. ಸ್ಟೀಲ್ ಪಾತ್ರೆಗೆ ಅಂಟಿಕೊಳ್ಳುವ ಜಿಡ್ಡು ನಿಧಾನವಾಗಿ ಗಟ್ಟಿಯಾಗುತ್ತಾ ಕಪ್ಪು ಕಲೆಗಳನ್ನು ಉಂಟು ಮಾಡುತ್ತದೆ.

ನೀವು ಎಷ್ಟೇ ತೊಳೆದರು ಸಹ ಈ ಜಿಡ್ಡು ಸುಲವಭವಾಗಿ ಹೋಗುವುದಿಲ್ಲ. ಹೀಗಾಗಿ ನೀವು ಸಹ ಕಷ್ಟಪಟ್ಟು ಅದನ್ನು ತೊಳೆಯುವ ಬದಲಾಗಿ ಹಾಗೆಯೇ ಬಿಟ್ಟಿರುತ್ತೀರಿ. ಅದು ಮುಂದೆ ದೊಡ್ಡ ಕಲೆಯಾಗಿ ಉಳಿದುಬಿಡುತ್ತದೆ. ಪಾತ್ರೆಗಳನ್ನು ನೋಡಿದಾಗಲೆಲ್ಲ ಅದನ್ನು ತೊಳೆಯುವ ಆಲೋಚನೆ ಬಂದರೂ ಎಣ್ಣೆ ಜಿಡ್ಡನ್ನು ಹೋಗಲಾಡಿಸುವುದು ಅಷ್ಟು ಸುಲಭವಲ್ಲ.
ಅದರಲ್ಲೂ ಕಾವಲಿಗಳಲ್ಲಿ ಕಪ್ಪು ಜಿಡ್ಡು ದಪ್ಪವಾಗಿ ಹಿಡಿದಿರುತ್ತದೆ. ಹೀಗಾಗಿ ಅದನ್ನು ಬಿಡಿಸುವುದು ನಿಮಗೆ ಕಷ್ಟವಾಗಿರಬಹುದು. ಹಾಗಾದ್ರೆ ನಾವಿಂದು ಪಾತ್ರೆಗಳಿಗೆ ಹಿಡಿದ ಬಹುಕಾಲದ ಎಣ್ಣೆ ಜಿಡ್ಡುಗಳನ್ನು ಸುಲಭವಾಗಿ ತೆಗೆಯುವುದು ಹೇಗೆ ಅನ್ನೋದನ್ನು ತಿಳಿದುಕೊಳ್ಳೋಣ.
ನಿಂಬೆ ಸೋಡಾ ದ್ರಾವಣ
ಮೊದಲು ಎಣ್ಣೆ ಜಿಡ್ಡು ಹಿಡಿದಿರುವ ಪಾತ್ರೆ ಅಥವಾ ಕಾವಲಿಯನ್ನು ಸಾಮಾನ್ಯ ಸಾಬೂನು, ಪುಡಿ, ಲಿಕ್ವಿಡ್ ಬಳಸಿ ಒಮ್ಮೆ ತೊಳೆದುಕೊಳ್ಳಿ. ಅನಂತರ ಒಂದು ಬೌಲ್‌ಗೆ ಒಂದು ನಿಂಬೆ ಹಣ್ಣಿನ ರಸವನ್ನು ಹಿಂಡಿಕೊಂಡು ಅದಕ್ಕೆ ಅಡುಗೆ ಸೋಡಾ ಹಾಕಿಕೊಂಡು ಚೆನ್ನಾಗಿ ಕಲಸಿ ಮಿಕ್ಸ್ ಮಾಡಿಕೊಳ್ಳಿ. ಅನಂತರ 5 ನಿಮಿಷ ಬಿಟ್ಟು ಈ ದ್ರಾವಣವನ್ನು ಜಿಡ್ಡು ಹಿಡಿದಿರುವ ಪಾತ್ರೆಗೆ ಚೆನ್ನಾಗಿ ಹಚ್ಚಿ ಮತ್ತೆ 2 ನಿಮಿಷಗಳ ಕಾಲ ಹಾಗೆಯೇ ಬಿಡಿ. ಅನಂತರ ಪಾತ್ರೆ ಉಜ್ಜುವ ಸಾಮಾನ್ಯ ಬ್ರಷ್ ಬಳಸಿ ಚೆನ್ನಾಗಿ ಉಜ್ಜಿದರೆ ಬಹುಕಾಲದ ಎಣ್ಣೆ ಜಿಡ್ಡು ನಿವಾರಣೆಯಾಗಲಿದೆ. ನೀವು ಸಹ ಈ ರೀತಿ ಟ್ರೈ ಮಾಡಿ ನೋಡಬಹುದು.
ಉಪ್ಪು ಸೋಡಾ ಪುಡಿ
ಇನ್ನು ಈ ಜಿಡ್ಡನ್ನು ಹೋಗಲಾಡಿಸುವ ಮತ್ತೊಂದು ಮಾರ್ಗವೆಂದರೆ ಉಪ್ಪು, ಸೋಡಾ ಪುಡಿ ಹಾಗೆ ಲಿಕ್ವಿಡ್ ಮಿಶ್ರಣ. ಮೊದಲು ಈ ಜಿಡ್ಡು ಹಿಡಿದ ಪಾತ್ರೆಯ ಮೇಲೆ ಸೋಡಾ ಪುಡಿಯನ್ನು ಹಾಕಿಕೊಳ್ಳಿ. ಹಾಗೆ ಅದರ ಮೇಲೆ ಪುಡಿ ಉಪನ್ನು ಹರಡಿಕೊಳ್ಳಿ. ಕೊನೆಯಲ್ಲಿ ಪಾತ್ರೆ ತೊಳೆಯುವ ಯಾವುದಾದರು ಲಿಕ್ವಿಡ್ ಅನ್ನು ಸಹ ಇದರ ಮೇಲೆ ಹಾಕಿಕೊಂಡು ಚೆನ್ನಾಗಿ ಉಜ್ಜಿದರೆ ಬಹಳ ಹಳೆಯ ಎಣ್ಣೆಯ ಜಿಡ್ಡು ಕೂಡ ನಿವಾರಣೆಯಾಗಲಿದೆ. ನೀವು ಈ ರೀತಿ ವಿಧಾನವನ್ನು ಸಹ ಒಮ್ಮೆ ಟ್ರೈ ಮಾಡಿ ನೋಡಿ.
ಪೇಪರ್ ಸೋಡಾ ಪುಡಿ ದ್ರಾವಣ
ಇನ್ನು ಯಾವುದಾದರು ಪಾತ್ರೆಗೆ ಬಹಳಷ್ಟು ಹಳೆಯ ಎಣ್ಣೆ ಜಿಡ್ಡು ಹಿಡಿದಿದ್ದರೆ ಈ ರೀತಿ ದ್ರಾವಣ ಮಾಡಿ. ಇಂದು ಬೌಲ್‌ಗೆ ಸೋಡಾ ಪುಡಿ ಹಾಗೆ ಯಾವುದಾದರು ಬಟ್ಟೆ ತೊಳೆಯುವ ಲಿಕ್ವಿಡ್ ಹಾಕಿ ಮಿಶ್ರಣ ಮಾಡಿಕೊಳ್ಳಿ. ಅನಂತರ ಈ ಮಿಶ್ರಣವನ್ನು ಟಿಶ್ಯೂ ಪೇಪರ್ ಅಥವಾ ಖಾಲಿ ಹಾಳೆಯ ಮೇಲೆ ಚೆನ್ನಾಗಿ ಹಾಕಿಕೊಳ್ಳಿ. ಅನಂತರ ಈ ಪೇಪರ್ ಅನ್ನು ಜಿಡ್ಡು ಅಥವಾ ಕಲೆಗಳಿರುವ ಪಾತ್ರೆಯ ಮೇಲೆ ಹರಡಿ ಬಿಟ್ಟುಬಿಡಿ. ಸ್ವಲ್ಪ ಸಮಯದ ಬಳಿಕ ಈ ಪೇಪರ್ ತೆಗೆದು ಉಜ್ಜಿದರೆ ಪಾತ್ರೆ ಹೊಸತರಂತೆ ಹೊಳೆಯಲಿದೆ.



Click it and Unblock the Notifications