Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಬೇಸಿಗೆಯಲ್ಲಿ ಸಾಕು ಪ್ರಾಣಿಗಳ ಆರೋಗ್ಯ ಕಾಪಾಡಿ..!
ದಿನಕಳೆದಂತೆ ಬೇಸಿಗೆಯ ಉರಿ ಹೆಚ್ಚಾಗುತ್ತಲಿದೆ. ತಾಪಮಾನ 40 ಡಿಗ್ರಿ ದಾಟುತ್ತಿದೆ. ಇದು ನಗರಗಳ ಪರಿಸ್ಥಿತಿ ಮಾತ್ರವಲ್ಲ ಹಳ್ಳಿಗಳಲ್ಲೂ ತಾಪಮಾನದ ಏರಿಕೆಯಿಂದ ಜನ ಹೈರಾಣಾಗುತ್ತಿದ್ದಾರೆ. ಇನ್ನು ಇಷ್ಟು ತಾಪವನ್ನು ಮನುಷ್ಯರೇ ತಡೆಯುವುದು ಕಷ್ಟವಾಗಿರುವಾಗ ಸಾಕು ಪ್ರಾಣಿಗಳು ಹೇಗೆ ತಡೆದುಕೊಳ್ಳಬೇಕು ಅಲ್ಲವಾ?
ಯಾರೆಲ್ಲಾ ಮನೆಯಲ್ಲಿ ಪ್ರಾಣಿಗಳನ್ನು ಸಾಕುತ್ತಿದ್ದೀರಿ ವಿಶೇಷವಾಗಿ ನಾಯಿ ಹಾಗೂ ಬೆಕ್ಕು. ಬೇಸಿಗೆಯಲ್ಲಿ ನೀವು ಇದರ ಕಾಳಜಿ ಮಾಡೋದು ತುಂಬಾನೇ ಮುಖ್ಯವಾಗುತ್ತದೆ. ಅತೀವ ಬಿಸಿಲಿನಿಂದ ಇವುಗಳಿಗೆ ರೋಗ ಬಂದಪ್ಪಳಿಸೋ ಸಾಧ್ಯತೆ ಕೂಡ ಇದೆ. ಆದ್ದರಿಂದ ಕೆಲವೊಂದು ಟಿಪ್ಸ್‌ಗಳನ್ನು ಫಾಲೋ ಮಾಡುವುದರ ಮುಖಾಂತರ ನಿಮ್ಮ ಸಾಕು ಪ್ರಾಣಿಗಳ ಕಾಳಜಿಯನ್ನು ನೀವು ಮಾಡಬಹುದು.

ಸಾಕು ಪ್ರಾಣಿಗಳಿಗೆ ನೀರು, ಹಣ್ಣು ನೀಡಿ
ಸಾಕು ಪ್ರಾಣಿಗಳು ಸರಿಯಾದ ಸಮಯಕ್ಕೆ ನೀರು ಕುಡಿಯುತ್ತಿರಬೇಕು. ಅವು ಬೇಸಿಗೆಯಲ್ಲಿ ತುಸು ಹೆಚ್ಚಾಗಿ ನೀರು ಕುಡಿಯುತ್ತವೆ. ಹೀಗಾಗಿ ಅವುಗಳಿಗೆ ನೀರಿಡುವುದನ್ನು ಮರೆಯಬೇಡಿ. ಇನ್ನು ಅತೀಯಾದ ತಾಪಮಾನವಿದ್ದಾಗ ಅವುಗಳಿಗೂ ಬಾಳೆಹಣ್ಣು, ಕಲ್ಲಂಗಡಿ ಹಣ್ಣು ನೀಡಬಹುದು. ಇದರಿಂದ ಅವುಗಳ ದೇಹದಲ್ಲೂ ನೀರಿನಾಂಶ ಇರುವಂತೆ ಸಹಾಯ ಮಾಡುತ್ತದೆ.
ರೋಗ ಬಂದಾಗ ನಿರ್ಲಕ್ಷಿಸಬೇಡಿ
ಪ್ರಾಣಿಗಳು ಕೂಡ ಮನುಷ್ಯರ ಹಾಗೆನೇ. ಬೇಸಿಗೆಯಲ್ಲಿ ಪ್ರಾಣಿಗಳು ಕೂಡ ಡಿಹೈಡ್ರೇಟ್ ಆಗುತ್ತದೆ. ಹಾಗೂ ಅವುಗಳಲ್ಲಿ ಜ್ವರ, ವಾಂತಿಯಂತಹ ರೋಗ ಲಕ್ಷಣಗಳು ಕಾಣಿಸಿಕೊಳ್ಳುತ್ತದೆ. ಇಂತಹ ಸಂದರ್ಭದಲ್ಲಿ ನಿರ್ಲಕ್ಷಿಸಬೇಡಿ. ತಕ್ಷಣ ವೈದ್ಯರನ್ನು ಕರೆಸಿ ಚಿಕಿತ್ಸೆ ಕೊಡಿಸಿ. ಇಲ್ಲದಿದ್ದರೆ ಸಾವು ಸಂಭವಿಸುವ ಅಪಾಯ ಹೆಚ್ಚಾಗಿರುತ್ತದೆ. ಆದಷ್ಟು ಜಾಗರೂಕತೆಯಿಂದ ನೋಡಿಕೊಳ್ಳಿ.
ತ್ವಚೆಯ ಆರೈಕೆ ಮಾಡಿ
ಬೇಸಿಗೆಯಲ್ಲಿ ನಿಮ್ಮ ಸಾಕುಪ್ರಾಣಿಗಳಿಗೆ ಬಟ್ಟೆ ಅಥವಾ ಮಾಸ್ಕ್ ಧರಿಸೋದು ಒಳ್ಳೆಯದಲ್ಲ. ಈ ಬೇಸಿಗೆಯಲ್ಲಿ ಅವುಗಳನ್ನು ಹೊರಗಡೆ ಕರೆದುಕೊಂಡು ಹೋದಾಗ ಯಾವುದೇ ರೀತಿ ಬಟ್ಟೆ ಧರಿಸಬೇಡಿ. ಅವುಗಳಿಗೆ ಮುಕ್ತವಾಗಿ ಉಸಿರಾಡಲು ಅವಕಾಶ ನೀಡಿ. ಉಣ್ಣೆ ಅಥವಾ ಬೇರೆ ಕ್ರಿಮಿಗಳು ಇದ್ಯಾ ಎಂದು ಅವುಗಳ ಕೊರಳ ಒಟ್ಟಿಯನ್ನು ಪರಿಶೀಲಿಸಿ. ಅಲೋವೆಲಾ ಹಾಗೂ ಟೀ ಟ್ರೀ ಅಂಶವಿರೋ ಶಾಂಪೂ ಬಳಸಿ. ಇನ್ನೂ ಮನೆಯಲ್ಲಿ ನಾಯಿಯ ಗಾಯ ಗುಣಪಡಿಸುವ ಸ್ಪ್ರೇ ಇಟ್ಟುಕೊಳ್ಳಿ.
ಸಾಕು ಪ್ರಾಣಿಯ ತೂಕ ಗಮನಿಸಿ
ಅನೇಕ ಸಾಕು ಪ್ರಾಣಿಗಳು ಬೇಸಿಗೆ ಕಾಲದಲ್ಲಿ ತಮ್ಮ ತೂಕವನ್ನು ಹೆಚ್ಚಿಸಿಕೊಳ್ಳುತ್ತದೆ. ಆದರೆ ಬೇಸಿಗೆ ಕಾಲದಲ್ಲಿ ಅವುಗಳ ತೂಕವನ್ನು ಸಮತೋಲನದಲ್ಲಿಡುವುದು ತುಂಬಾನೇ ಮುಖ್ಯವಾಗುತ್ತದೆ. ಹೀಗಾಗಿ ಆದಷ್ಟು ವ್ಯಾಯಾಮ ಮಾಡಿಸಿ. ಹೀಗಾಗಿ ಬೆಳಗ್ಗಿನ ಜಾವ ಅಥವಾ ಸಂಜೆಯ ವೇಳೆ ನಿಮ್ಮ ಶ್ವಾನವನ್ನು ವಾಕಿಂಗ್‌ಗೆ ಕರೆದುಕೊಂಡು ಹೋಗಿ. ಈ ಸಮಯದಲ್ಲಿ ಸೂರ್ಯನ ನೇರ ಕಿರಗಳು ಅವುಗಳ ಮೇಲೆ ಬೀಳುವುದಿಲ್ಲ. ಜೊತೆಗೆ ಹೊರಗಡೆ ಕರೆದುಕೊಂಡು ಹೋದರೆ ಅವುಗಳು ಹಿತವಾದ ಗಾಳಿಯನ್ನು ಅನುಭವಿಸಬಹುದು.
ಸಾಕುಪ್ರಾಣಿಗಳಿಗೆ ಆಗಾಗ ಸ್ನಾನ ಮಾಡಿಸಿ
ನೀವು ಯಾವ ರೀತಿ ಸ್ನಾನ ಮಾಡಿದ ನಂತರ ತಾಜಾತನವನ್ನು ಅನುಭವಸುತ್ತೀರೋ ಅದೇ ರೀತಿ ನಿಮ್ಮ ನಾಯಿಗೂ ಯಾವಾಗಲಾದರೂ ಒಮ್ಮೆ ಸ್ನಾನ ಮಾಡಿಸಿ. ಅದರ ಹಲ್ಲುಜ್ಜಿ, ಉಗುರುಗಳನ್ನು ಕತ್ತರಿಸಿ. ಇನ್ನೂ ಸಾಧ್ಯವಾದರೆ ಈ ಬೇಸಿಗೆಯಲ್ಲಿ ಅದರ ಕ್ಷೌರ ಕೂಡ ಮಾಡಿಸಿ. ಇದರಿಂದ ಅವುಗಳಿಗೂ ಏನೋ ಹೊಸತು ಅನುಭವವಾಗುತ್ತದೆ. ಹಾಗೂ ಅವುಗಳು ಆರಾಮದಾಯಕವಾಗಿರುತ್ತವೆ.
ಸಾಕು ಪ್ರಾಣಿಯನ್ನು ಕಾರ್‌ನೊಳಗಡೆ ಬಿಡಬೇಡಿ
ಈ ಬೇಸಿಗೆ ಕಾಲದಲ್ಲಿ ನಿಮ್ಮ ಸಾಕು ಪ್ರಾಣಿಯನ್ನು ಕಾರ್‌ನ ಒಳಗಡೆ ಬಿಡಬೇಡಿ. ಏಕೆಂದರೆ ಅದಕ್ಕೆ ಉಸಿರುಗಟ್ಟಿದಂತಾಗುತ್ತದೆ. ಸಾಮಾನ್ಯ ವೇಳೆ ಕಾರ್‌ನ ಒಳಭಾಗದ ಉಷ್ಣಾಂಶ 40 ಡಿಗ್ರಿ ಸೆಲ್ಸಿಯಸ್ ನಷ್ಟಿರುತ್ತದೆ. ಅದೇ ಬೇಸಿಗೆ ಕಾಲದಲ್ಲಿ ಸೂರ್ಯ ಕಿರಣಗಳು ನೇರವಾಗಿ ಒಳಬರೋದ್ರಿಂದ ಕಾರಿನ ಒಳಗಿನ ಉಷ್ಣಾಂಶ 120 ಡಿಗ್ರಿಯನ್ನು ತಲುಪುತ್ತದೆ. ಇನ್ನೂ ನೀವು ನಿಮ್ಮ ಸಾಕು ಪ್ರಾಣಿಯ ಜೊತೆಗೆ ಕಾರಿನಲ್ಲಿ ಪ್ರಯಾಣಿಸೋದಾದರೆ ನೀರಿನ ಬಾಟಲ್ ಹಾಗೂ ಒಂದು ಬೌಲ್ ಇಟ್ಟುಕೊಳ್ಳಿ.
ಮಲಗುವ ಜಾಗ ತಂಪಾಗಿರಲಿ
ಸಾಕು ಪ್ರಾಣಿಗಳಾದ ಬೆಕ್ಕು ಮತ್ತು ನಾಯಿಗಳು ಮನೆಯ ಒಳಗೆ ಹಾಗೂ ಹೊರಗು ಮಲಗುತ್ತವೆ. ಬೇಸಿಗೆಯಲ್ಲಿ ಸರಿಯಾಗಿ ಗಾಳಿ ಬರುವ ಕಡೆ ಅವುಗಳ ಮಲಗುವ ಜಾಗವಿದ್ದರೆ ಒಳ್ಳೆಯದು. ಅಥವಾ ಅವು ಮಲಗುವ ಕಡೆಯಲ್ಲಿ ಫ್ಯಾನ್ ಇದ್ದರೆ ಮತ್ತು ಉತ್ತಮ.



Click it and Unblock the Notifications
