Latest Updates
-
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ಕಣ್ಣಿನ ಬಳಿ ಉಂಟಾಗುವ ಹುಣ್ಣು ನಿವಾರಣೆಗೆ ಇಲ್ಲಿದೆ ಮನೆಮದ್ದು!!
ಚಳಿಗಾಲ ಆರಂಭಗೊಂಡಿದೆ. ಹೀಗಾಗಿ ಹವಾಮಾನ ಬದಲಾವಣೆಯಿಂದಾಗಿ ನಮ್ಮ ದೇಹದಲ್ಲಿ ಹಲವು ರೀತಿಯ ಬದಲಾವಣೆಗಳು ಉಂಟಾಗುತ್ತಿರುವುದು ನೋಡಬಹುದು. ಈ ಸಮಯದಲ್ಲಿ ನಮ್ಮ ಪಂಚೇಂದ್ರಿಯ ಸಂಬಂಧಾಗಿಯೂ ಹಲವು ರೀತಿಯು ಸಣ್ಣಪುಟ್ಟ ಸಮಸ್ಯೆಗಳ ಅನುಭವಿಸಬಹುದು. ಅದ್ರಲ್ಲೂ ಚಳಿಗಾಲದಲ್ಲಿ ಹೆಚ್ಚಾಗಿ ನಮ್ಮ ಕಣ್ಣಿನ ಆರೈಕೆ ಮಾಡುವುದು ಬಹಳ ಮುಖ್ಯ.
ಚಳಿಗಾಲದಲ್ಲಿ ಕಣ್ಣಿನ ರೆಪ್ಪೆಯ ಬಳಿ ಗುಳ್ಳೆಗಳು ಕಾಣಿಸಿಕೊಳ್ಳುವುದು ನೋಡಬಹುದು. ಈ ಗುಳ್ಳೆಗಳು ನೋವಿನಿಂದ ಕೂಡಿರುವುದಲ್ಲದೆ ವಿಪರೀತ ಉರಿಗೂ ಕಾರಣವಾಗುತ್ತದೆ. ಹಾಗೆ ಮುಖದ ಅಂದವನ್ನು ಸಹ ಇವು ಹಾಳು ಮಾಡುತ್ತವೆ. ಕಣ್ಣಿನ ರೆಪ್ಪೆಗಳ ಮೇಲೆ ಕೆಲವೊಮ್ಮೆ ಮೂರರಿಂದ ನಾಲ್ಕು ಗುಳ್ಳೆಗಳು ಕಾಣಿಸಿಕೊಳ್ಳುತ್ತದೆ.

ಈ ಗುಳ್ಳೆಗಳು ಅಸಹನೀಯ ನೀವು ನೀಡಲಿವೆ. ಆದ್ರೆ ಇದಕ್ಕೆ ನೀವು ಯಾವುದೇ ಚಿಕಿತ್ಸೆ ಮಾಡದೆ ಇದ್ದರೂ ವಾರದೊಳಗೆ ಕಡಿಮೆಯಾಗುತ್ತದೆ. ಹಾಗೆ ಸಣ್ಣದಾಗಿ ನೋವು ಕೂಡ ನಿವಾರಣೆಯಾಗಲಿದೆ. ಆದ್ರೆ ಮನೆಯಲ್ಲಿಯೇ ನೀವು ಈ ನೋವಿಗೆ ಪರಿಹಾರ ಮಾಡಿಕೊಳ್ಳಬಹುದು. ಇದನ್ನು ಚಲಜಿಯಾ (Chalazia) ಎಂದು ಕರೆಯಲಾಗುತ್ತದೆ. ಇದು ವಾತಾವರಣದಲ್ಲಿ ತಂಪು ಉಂಟಾಗಿ ದೇಹದ ಉಷ್ಣಾಂಶ ಹೆಚ್ಚಾಗುವ ಕಾರಣದಿಂದ ಉಂಟಾಗುತ್ತದೆ.
ಹಾಗಾದ್ರೆ ಕಣ್ಣು ರೆಪ್ಪೆಯಲ್ಲಿ ಉಂಟಾಗುವ ಈ ಕುರು ಅಥವಾ ಗುಳ್ಳೆಯ ನಿವಾರಣೆಗೆ ನಾವು ಮನೆಯಲ್ಲೇ ಯಾವ ರೀತಿ ಮದ್ದು ಮಾಡಿಕೊಳ್ಳಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಕಣ್ಣಿನ ಪ್ರದೇಶವನ್ನು ಸ್ವಚ್ಛವಾಗಿಡಿ
ಕಣ್ಣಿನ ಸುತ್ತಲಿನ ಪ್ರದೇಶವನ್ನು ತಂಪಾಗಿ ಇರಿಸಲು ನೀವು ಪ್ರಯತ್ನಿಸಿ. ಇದಕ್ಕಾಗಿ ಆಗಾಗ ನೀರಿನಿಂದ ತೊಳೆಯುವುದು ಅಥವಾ ಮಾಯಿಶ್ಚರೈಸರ್ ಹಚ್ಚಿಕೊಳ್ಳುವುದು ಉತ್ತಮ. ಇದರಿಂದ ಕಣ್ಣಿನ ಭಾಗ ತಂಪಾಗಿರಲಿದೆ. ಈ ಗುಳ್ಳೆ ಕೂಡ ನಿವಾರಣೆಯಾಗಲಿದೆ.
ಮೇಕ್ ಅಪ್ ಕುರಿತು ಜಾಗೃತೆ
ನೀವು ಬಳಸುವ ಮೇಕ್ ಅಪ್‌ನಿಂದಲೂ ಈ ಸಮಸ್ಯೆ ಉಂಟಾಗಬಹುದು. ಅಥವಾ ಈ ಗುಳ್ಳೆಗಳ ಹಾನಿ ಹೆಚ್ಚಾಗಲು ಈ ಮೇಕ್‌ಅಪ್ ಕೂಡ ಕಾರಣವಾಗಬಹುದು. ಅದರಲ್ಲಿನ ರಾಸಾಯನಿಕಗಳು ನಿಮ್ಮ ಕಣ್ಣಿಗೆ ಹಾನಿ ಮಾಡಬಹುದು. ಹೀಗಾಗಿ ಸೌಂದರ್ಯ ವರ್ಧಕ ಬಳಸುವಾಗ ಎಚ್ಚರ ವಹಿಸುವುದು ಉತ್ತಮ.
ಸೌತೆಕಾಯಿ ಮಸಾಜ್
ಕಣ್ಣಿನ ರೆಪ್ಪೆಗಳ ಮೇಲಿನ ಗುಳ್ಳೆಗಳ ನಿವಾರಣೆಗೆ ಸೌತೆಕಾಯಿಯನ್ನು ಕತ್ತರಿಸಿಕೊಂಡು ಕಣ್ಣಿನ ಮೇಲೆ ಇಟ್ಟು ಮಲಗಬೇಕು. ಇದರಿಂದ ಕಣ್ಣಿನ ಉರಿ ಕಡಿಮೆಯಾಗಲಿದೆ. ಹಾಗೆ ತಂಪಾಗುವ ಕಾರಣ ಗುಳ್ಳೆ ಕೂಡ ನಿವಾರಣೆಯಾಗಲಿದೆ.
ಟೀ ಬ್ಯಾಗ್ ಕಂಪ್ರೆಸ್
ಟೀ ಬ್ಯಾಗ್ ಕಂಪ್ರೆಸ್ ಪೀಡಿತ ಪ್ರದೇಶದ ಸುತ್ತಲೂ ಊತವನ್ನು ಕಡಿಮೆ ಮಾಡಲು ಹಾಯ ಮಾಡುತ್ತದೆ. ಟೀ ಬ್ಯಾಗ್ ಅನ್ನು ಕೆಲವು ನಿಮಿಷಗಳ ಕಾಲ ಕುದಿಯುವ ನೀರಿನಲ್ಲಿ ನೆನೆಸಿ ಮತ್ತು ಅದನ್ನು ತೆಗೆದುಹಾಕಿ. ಚರ್ಮಕ್ಕೆ ಮೃದುವಾಗುವವರೆಗೆ ಟೀ ಬ್ಯಾಗ್ ತಣ್ಣಗಾಗಲು ಬಿಡಿ, ನಂತರ ಅದನ್ನು ಪೀಡಿತ ಪ್ರದೇಶದ ಮೇಲೆ 10 ನಿಮಿಷಗಳ ಕಾಲ ಇರಿಸಿ. ಹೀಗೆ ಮಾಡುವುದರಿಂದ ರೆಪ್ಪೆ ಮೇಲೆ ಕಾಣಿಸಿಕೊಂಡ ಗುಳ್ಳೆಗಳು ನಿವಾರಣೆಯಾಗುತ್ತದೆ.
ಹಾಲು, ಬೆಣ್ಣೆ
ರೆಪ್ಪೆಯ ಮೇಲೆ ಗುಳ್ಳೆಗಳು ಎದ್ದಿದ್ದರೆ ಅದರ ಮೇಲೆ ಬೆಣ್ಣೆ ಅಥವಾ ಹಾಲು ಹಚ್ಚಬೇಕು. ಬೆಣ್ಣೆ ಹಚ್ಚಿ ಬೆಳಗ್ಗೆ ತೊಳೆಯಬೇಕು. ಇದರಿಂದ ಕಣ್ಣ ರೆಪ್ಪೆಯ ಗುಳ್ಳೆ ನಿವಾರಣೆಯಾಗಲಿದೆ.
ಇದಿಷ್ಟೇ ಅಲ್ಲ ಬಿ ಕಾಂಪ್ಲೆಕ್ಸ್ ಹಾಗೆ ಒಂದಿಷ್ಟು ಔಷಧಿಗಳು ಕೂಡ ಕಣ್ಣ ಮೇಲಿನ ಕುರು ಅಥವಾ ಗುಳ್ಳೆ ನಿವಾರಿಸಲಿದೆ.
(ಹಕ್ಕುತ್ಯಾಗ: ಮೇಲೆ ಒದಗಿಸಲಾದ ಮಾಹಿತಿಯು ಅಂತರ್ಜಾಲದಲ್ಲಿ ಲಭ್ಯವಿರುವ ಊಹೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ ಮತ್ತು ಅದು ನಿಖರವಾಗಿರುತ್ತದೆ ಎಂದು ಖಾತರಿಪಡಿಸುವುದಿಲ್ಲ. ಕನ್ನಡ ಬೋಲ್ಡ್ ಸ್ಕೈ ಲೇಖನದಲ್ಲಿನ ಮಾಹಿತಿಯನ್ನು ಅನುಮೋದಿಸುವುದಿಲ್ಲ. ಮತ್ತು ಮಾಹಿತಿಯನ್ನು ಒದಗಿಸುವುದು ನಮ್ಮ ಏಕೈಕ ಉದ್ದೇಶವಾಗಿದೆ)



Click it and Unblock the Notifications
