Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಅಣಬೆಯನ್ನು ತಿಂಗಳಾನುಗಟ್ಟಲೇ ಶೇಖರಿಸಿಡೋದು ಹೇಗೆ? ಇಲ್ಲಿದೆ ಟಿಪ್ಸ್!
ಅಣಬೆ ಇಂಗ್ಲೀಷ್ ನಲ್ಲಿ ಮಶ್ರೂಮ್ ಅಂತ ಕರೆಯಲಾಗುತ್ತದೆ. ಮಶ್ರೂಮ್ ಬಿರಿಯಾನಿ ಮಶ್ರೂಮ್ ಫ್ರೈಡ್ ರೈಸ್ ಹೆಸರು ಕೇಳಿದ್ರೇನೆ ಬಾಯಲ್ಲಿ ನೀರೂರುತ್ತೆ ಅಲ್ವಾ? ಅಣಬೆಯು ಪ್ರೋಟೀನ್ಗಳು, ಕಾರ್ಬೋಹೈಡ್ರೇಟ್ಗಳು, ಖನಿಜ ಲವಣಗಳು ಮತ್ತು ವಿಟಮಿನ್ಗಳಂತಹ ಅನೇಕ ಪೋಷಕಾಂಶಗಳನ್ನು ಒಳಗೊಂಡಿದೆ. ಇನ್ನೂ ಅಣಬೆಯನ್ನು ಬಳಸಿಕೊಂಡು ಪಾಪಡ್, ಉಪ್ಪಿನಕಾಯಿ, ಬಿಸ್ಕತ್ತು, ಟೋಸ್ಟ್, ಕುಕೀಸ್, ನೂಡಲ್ಸ್, ಜಾಮ್, ಸಾಸ್, ಸೂಪ್, ಬ್ರೆಡ್, ಚಿಪ್ಸ್, ಸೇವ್, ಚಕ್ಲಿ ಇತ್ಯಾದಿಗಳನ್ನು ಮನೆಯಲ್ಲೇ ತಯಾರಿಸಲೂಬಹುದು.
ಸಸ್ಯಹಾರಿ ಆಹಾರ ಸೇವಿಸುವವರು ಇದನ್ನು ಹೆಚ್ಚಾಗಿ ಸೇವಿಸ್ತಾರೆ. ಇತರ ತರಕಾರಿಗಳಿಗೆ ಹೋಲಿಕೆ ಮಾಡಿದ್ರೆ ಅಣಬೆ ಕೊಂಚ ದುಬಾರಿ ಹೀಗಾಗಿ ಇದನ್ನು ಪ್ರತಿ ನಿತ್ಯ ಆಹಾರಕ್ಕೆ ಬಳಸೋದಿಲ್ಲ. ಆದರೆ ಯಾವಾಗಲಾದರೂ ಒಮ್ಮೆ ಖಂಡಿತ ಸೇವನೆ ಮಾಡುತ್ತೇವೆ. ಇನ್ನೂ ಅಣಬೆ ಬೇಗನೆ ಕೆಡುವುದರಿಂದ ಇದರ ಅವಶ್ಯಕತೆ ಯಾವಾಗ ಇದ್ಯೋ ಆ ದಿನ ತಂದು ಅಡುಗೆಗೆ ಬಳಸಲಾಗುತ್ತದೆ. ಹಾಗಾದ್ರೆ ಅಣಬೆ ತಿಂಗಳುಗಟ್ಟಲೇ ಫ್ರೆಶ್ ಆಗಿ ಇರಬೇಕಂದ್ರೆ ಏನು ಮಾಡ್ಬೇಕು? ಈ ಟಿಪ್ಸ್ ಫಾಲೋ ಮಾಡಿದ್ರೆ ಅಣಬೆ ತಿಂಗಳುಗಳ ಕಾಲ ಖಂಡಿತ ಫ್ರೆಶ್ ಆಗಿ ಇರುತ್ತೆ.

ಅಣಬೆಯನ್ನು ತೊಳೆಯಬೇಡಿ
ಅಣಬೆಯಲ್ಲಿ 80 ರಿಂದ 90 ಪ್ರತಿಶತ ನೀರಿನಾಂಶದಿಂದ ಕೂಡಿದೆ. ಇದರ ಸೂಕ್ಷ್ಮ ರಂಧ್ರದ ವಿನ್ಯಾಸವು ಸ್ಪಂಜಿನಂತೆ ಇದ್ದು, ಸಾಕಷ್ಟು ನೀರನ್ನು ಹೀರಿಕೊಳ್ಳುತ್ತದೆ. ಇನ್ನೂ ಹೆಚ್ಚಿನ ತೇವಾಂಶದಿಂದಾಗಿ ಅಣಬೆ ಹಾಳಾಗುವ ಸಾಧ್ಯತೆಯಿದೆ. ಒಂದು ವೇಳೆ ನೀವು ಮಶ್ರೂಮ್ ಅನ್ನು ಸಂಗ್ರಹಿಸಬೇಕು ಅಮತ ಇಚ್ಛಿಸಿದ್ರೆ ಅದನ್ನು ತೊಳೆಯೋದಕ್ಕೆ ಹೋಗಬೇಡಿ. ಹಾಗೆಯೇ ಎತ್ತಿಡಿ. ಯಾವಾಗ ಅಣಬೆಯನ್ನು ಬಳಸಬೇಕು ಅಂದುಕೊಳ್ಳುತ್ತೀರಿ ಆಗ ಚೆನ್ನಾಗಿ ತೊಳೆದು ಬಳಸಿಕೊಳ್ಳಿ.
ಬಲವಾದ ವಾಸನೆಯ ವಸ್ತುಗಳಿಂದ ದೂರವಿರಿ
ಈರುಳ್ಳಿಯಂತಹ ಬಲವಾದ ವಾಸನೆಯಂತಹ ವಸ್ತುಗಳಿಂದ ದೂರವಿಡಿ. ಯಾಕಂದ್ರೆ ಅಂತಹ ವಸ್ತುಗಳಿಂದ ಅಣಬೆಯು ಎಲ್ಲಾ ವಾಸನೆಯನ್ನು ಹೀರಿಕೊಳ್ಳುತ್ತದೆ. ಅದು ತನ್ನದೇ ಆದ ರುಚಿಯನ್ನು ಸಂಪೂರ್ಣವಾಗಿ ಹಾಳುಮಾಡುತ್ತದೆ.
ಕಾಗದದ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ
ಅಣಬೆಯನ್ನು ಕಾಗದದ ಚೀಲದಲ್ಲಿ ಬಿಗಿಯಾಗಿ ಸುತ್ತುವ ಮೂಲಕ ನೀವು ವಾರಗಳವರೆಗೆ ಅಣಬೆಗಳನ್ನು ತಾಜಾವಾಗಿರಿಸಿಕೊಳ್ಳಬಹುದು. ಇದರಿಂದ ಅಣಬೆಯು ಬೇಗನೆ ಹಾಳಾಗುವುದಿಲ್ಲ. ನೀವು ಕತ್ತರಿಸಿದ ಅಣಬೆಗಳಾದರೆ ಅವುಗಳನ್ನು 3 ದಿನಗಳವರೆಗೆ ಫ್ರಿಡ್ಜ್ ನಲ್ಲಿ ಇಡಬಹುದು.
ಬೆಣ್ಣೆಯಲ್ಲಿ ಫ್ರೈ ಮಾಡಿ
ಅಣಬೆಯನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ ಬೆಣ್ಣೆಯಲ್ಲಿ ಸ್ವಲ್ಪ ಸಮಯದವರೆಗೆ ಫ್ರೈ ಮಾಡಿ. ನಂತರ ಇದನ್ನು ಚೆನ್ನಾಗಿ ತಣ್ಣಗಾಗಿಸಿ ಮತ್ತು ಪ್ಲಾಸ್ಟಿಕ್ ಚೀಲ ಅಥವಾ ಗಾಳಿಯಾಡದ ಡಬ್ಬದಲ್ಲಿ ಹಾಕಿ ಫ್ರಿಡ್ಜ್ ನಲ್ಲಿಡಿ. ಈ ರೀತಿ ಮಾಡಿದ್ರೆ ಮಶ್ರೂಮ್ ತನ್ನ ಮೂಲ ರುಚಿಯನ್ನು ಕಳೆದುಕೊಳ್ಳದೆ ಕೆಲವು ತಿಂಗಳುಗಳ ಕಾಲ ತಾಜಾವಾಗಿರಬಹುದು.



Click it and Unblock the Notifications

