Latest Updates
-
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು!
ಕೊತ್ತಂಬರಿ ಸೊಪ್ಪು ಹಾಳಾಗದಂತೆ ಇಡುವ ಸುಲಭದ ಮಾರ್ಗವಿದು..!!
ಕೊತ್ತಂಬರಿ ಸೊಪ್ಪನ್ನು ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಬಳಸಿಯೇ ಬಳಸುತ್ತಾರೆ. ಯಾವುದೇ ರೀತಿಯ ಅಡುಗೆ ಇದ್ದರೂ ಅದಕ್ಕೆ ಕೊತ್ತಂಬರಿ ಸೊಪ್ಪು ಹಾಕಿದರೆ ಅದರ ರುಚಿ ದುಪ್ಪಟ್ಟಾಗುತ್ತೆ. ಅದರಲ್ಲೂ ನಾಟಿ ಕೊತ್ತಂಬರಿ ಹಾಗೂ ಅಪರೂಪದ ತಳಿಯ ಕೊತ್ತಂಬರಿಗಳ ನಾವು ನೋಡಬಹುದು. ಹಾಗೆ ಹಲವು ರೀತಿಯ ಕೊತ್ತಂಬರಿಗಳು ಮಾರುಕಟ್ಟೆಯಲ್ಲಿ ದುಬಾರಿಯಾಗಿರುವುದು ಕೂಡ ಹೌದು.
ಇತ್ತೀಚಿಗೆ ಈ ಕೊತ್ತಂಬರಿ ಸೊಪ್ಪಿನ ದರವು 5 ರೂಪಾಯಿಂದ ಹಿಡಿದು 25 ರೂಪಾಯಿ ವರೆಗೂ ಇರುವುದು ನೋಡಬಹುದು. ಹಾಗೆ ಪ್ರತಿ ದಿನ ಮಾರುಕಟ್ಟೆಯಲ್ಲಿ ತರಕಾರಿ ಜೊತೆಗೆ ಎಲ್ಲರು ಕೊತ್ತಂಬರಿ ಸೊಪ್ಪು ಖರೀದಿಸಿಯೇ ಖರೀದಿಸುತ್ತಾರೆ. ಹಾಗೆ ಮತ್ತೆ ಕೆಲವು ಬಾರಿ ಚಿಲ್ಲರೆ ಇಲ್ಲಾದಾಗ ತರಕಾರಿ ಅಂಗಡಿಯಾತ ಈ ಕೊತ್ತಂಬರಿ ಸೊಪ್ಪನ್ನು ನೀಡುವುದು ಸಹ ನೋಡಬಹುದು.

ಆದ್ರೆ ಈಗ ಬಿಸಿಲಿನ ಕಾಲವಾಗಿರುವುದರಿಂದ ಬಹಳ ಕಾಲ ಸೊಪ್ಪನ್ನ ಮನೆಯಲ್ಲಿ ಇಡಲು ಆಗುವುದಿಲ್ಲ. ಮಾರುಕಟ್ಟೆಯಿಂದ ತಂದಾಗ ಎಷ್ಟು ಫ್ರೆಶ್ ಆಗಿರುತ್ತೋ ಒಂದೇ ದಿನದಲ್ಲಿ ಒಣಗುವುದು ಇಲ್ಲವೆ ಕೊಳೆತಂತೆ ಆಗುವುದು ನೋಡಬಹುದು. ಹಾಗೆ ನೀವು ಫ್ರಿಡ್ಜ್‌ನಲ್ಲಿಟ್ಟರು ಕೂಡ ಬಹುಬೇಗ ಕೊಳೆಯುವುದು ನೋಡಬಹುದು. ಹಾಗಾದ್ರೆ ಈ ಕೊತ್ತಂಬರಿ ಸೊಪ್ಪು ಹಾಳಾಗದಂತೆ ಇಡುವ ಸರಿಯಾದ ಮಾರ್ಗ ಯಾವುದು ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲಿಗೆ ಎಲೆಗಳು ಹಾಳಾಗುತ್ತವೆ. ಅನಂತರ ದಂಟು ಕೂಡ ಹಾಳಾಗುತ್ತದೆ. ಹಾಗಾದ್ರೆ ಕೊತ್ತಂಬರಿ ಸೊಪ್ಪನ್ನು ಸಂಗ್ರಹಿಸಿಡುವ ಸರಿಯಾದ ಮಾರ್ಗ ಯಾವುದು? ಯಾವ ರೀತಿಯಲ್ಲಿ ಇಟ್ಟರೆ ಬಹುಬೇಗ ಕೆಡುವುದಿಲ್ಲ ಅನ್ನೋದನ್ನು ತಿಳಿದುಕೊಳ್ಳೋಣ.
ಆಹಾರದಲ್ಲಿ ಕೊತ್ತಂಬರಿ ಸೊಪ್ಪನ್ನು ಸೇರಿಸುವುದರಿಂದ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳನ್ನು ಪಡೆಯಬಹುದು. ಮುಖ್ಯವಾಗಿ ಕೊತ್ತಂಬರಿ ಸೊಪ್ಪು ಮಧುಮೇಹವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಕೊತ್ತಂಬರಿ ಸೊಪ್ಪು ಸೇವಿಸುವುದು ಇನ್ಸುಲಿನ್ ನಿಯಂತ್ರಣದಲ್ಲಿಡಲು ಸಹಕರಿಯಾಗಲಿದೆ. ದೇಹದ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಚಯಾಪಚಯ ಕ್ರಿಯೆ ಹೆಚ್ಚಾದಾಗ ದೇಹದ ತೂಕವೂ ಕಡಿಮೆಯಾಗುತ್ತದೆ. ಹೀಗೆ ಅನೇಕ ಆರೋಗ್ಯಕರ ಲಾಭ ಹೊಂದಿರುವ ಕೊತ್ತಂಬರಿ ಸೊಪ್ಪನ್ನು ಮನೆಯಲ್ಲಿ ಹೇಗೆ ಸಂಗ್ರಹಿಸಬೇಕು ಎಂಬುದನ್ನು ತಿಳಿದುಕೊಳ್ಳೋಣ.
ಕೊಳೆತ ಅಥವಾ ಹಣ್ಣಾಗಿರುವ ಎಲೆ ತೆಗೆದುಹಾಕಿ
ಅಂಗಡಿಯಲ್ಲಿ ಕೊತ್ತಂಬರಿ ಸೊಪ್ಪು ಖರೀದಿಸುವ ಮುನ್ನವೇ ಹಸಿರಾಗಿರುವ ಕಟ್ಟನ್ನು ಆಯ್ದುಕೊಳ್ಳಿ. ಹಾಗೆ ಈ ಕಟ್ಟುಗಳಲ್ಲಿರುವ ಹಣ್ಣಾಗಿರುವ ಹಾಗೂ ಕೊಳೆತ ಎಲೆಗಳನ್ನು ಹುಡುಕಿ ತೆಗೆದುಹಾಕಿ. ಇದರಿಂದ ಬೇರೆ ಎಲೆಗಳು ಕೂಡ ಕೊಳೆಯುವುದರಿಂದ ತಡೆಯಬಹುದು. ಹಾಗೆ ಕೊತ್ತಂಬರಿ ಸೊಪ್ಪನ್ನು ಮನೆಗೆ ತಂದು ಅದನ್ನು ನೀರಿನಲ್ಲಿ ನೆನೆಸಬೇಕು. ಬಳಿಕ ಒಂದು ಪೇಪರ್ ಮೇಲೆ ಅದನ್ನು ಚೆನ್ನಾಗಿ ಬಿಡಿ ಬಿಡಿಯಾಗಿ ಹರಡಬೇಕು. ಹೀಗೆ ಹರಡುವುದರಿಂದ ತೇವಾಂಶದಿಂದ ಕೊಳೆಯುವುದಿಲ್ಲ, ಹಾಗೆ ಬಹಳ ದಿನ ಇದೇ ರೀತಿ ಇಡಬಹುದು.
ಕೊತ್ತಂಬರಿ ಸೊಪ್ಪನ್ನು ತಣ್ಣೀರಿನಲ್ಲಿ ಎರಡು ಅಥವಾ ಮೂರು ಬಾರಿ ನೆನೆಸಿ ನಂತರ ನೀರಿನಿಂದ ತೆಗೆದು ಜರಡಿ ಮೇಲೆ ಹಾಕಿ. ಕೊತ್ತಂಬರಿ ಸೊಪ್ಪಿನಿಂದ ನೀರು ಬಸಿದ ನಂತರ, ಕೊತ್ತಂಬರಿ ಸೊಪ್ಪನ್ನು ಹತ್ತಿ ಬಟ್ಟೆಯ ಮೇಲೆ ಹಾಕಿ. ನಂತರ ಒಣಗಲು ಬಿಡಿ. ಹೀಗೆ ಮಾಡುವುದರಿಂದಲೂ ಬಹಳ ದಿನಗಳ ಕಾಲ ಕೊತ್ತಂಬರಿ ಸೊಪ್ಪು ಹಾಳಾಗದಂತೆ ಇಡಬಹುದು. ಇನ್ನು ಈ ಕೊತ್ತಂಬರಿ ಸೊಪ್ಪನ್ನು ಬಿಡಿಸಿಕೊಂಡು ನಂತರ ಜಿಪ್ ಲಾಕ್ ಕವರ್‌ನಲ್ಲಿ ಹಾಕಿ ಇಡಬಹುದು.
ಇನ್ನು ನೀರಿನ ಅಂಶವಿಲ್ಲದೆ ಒಣಗಿದ ಬಳಿಕ ಕೊತ್ತಂಬರಿ ಸೊಪ್ಪನ್ನು ಬಾಕ್ಸ್‌ಗೆ ಹಾಕಿ ಇಡಬಹುದು. ಬಾಕ್ಸ್‌ನಲ್ಲಿ ಟಿಷ್ಯೂ ಪೇಪರ್ ಇಟ್ಟು ನಂತರ ಅದರ ಮೇಲೆ ಕೊತ್ತಂಬರಿ ಸೊಪ್ಪು ಇಟ್ಟು ಅದರ ಮೇಲೆ ಮತ್ತೆ ಟಿಷ್ಯೂ ಪೇಪರ್ ಇಟ್ಟು ಮುಚ್ಚಳ ಮುಚ್ಚಿ ಗಾಳಿ ಹೋಗದಂತೆ ಇಟ್ಟರೆ ಬಹಳ ದಿನಗಳ ಕಾಲ ಇಡಬಹುದು.



Click it and Unblock the Notifications
