Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಗುಲಾಬಿ ಗಿಡವನ್ನು ಹೇಗೆ ನೆಡಬೇಕು? ಬಹುಬೇಗ ಹೂ ಬಿಡುವಂತೆ ಮಾಡುವುದು ಹೇಗೆ?
ಮನೆಯಲ್ಲಿ ಒಂದಿಷ್ಟು ಗಿಡಗಳನ್ನು ನೆಟ್ಟು ಹೂವು ಬಿಟ್ಟರೆ ಆ ಮನೆ ಮತ್ತಷ್ಟು ಸುಂದರವಾಗುತ್ತೆ. ಹೀಗಾಗಿ ಎಲ್ಲರ ಮನೆಯ ಮುಂದೆ ಒಂದು ಸಣ್ಣ ಕೈದೋಟ ಅಥವಾ ಟೆರೆಸ್ ಮೇಲೆ ಸಣ್ಣ ಸಣ್ಣ ಪಾಟ್‌ಗಳಲ್ಲಿ ಹೂವಿನ ಗಿಡಗಳನ್ನು ನೆಟ್ಟು ಬೆಳೆಸುತ್ತಾರೆ, ಆದ್ರೆ ಹಲವರಿಗೆ ಹೂವಿನ ಗಿಡಗಳ ನೆಡುವುದು ಹೇಗೆ?, ಅದರ ಪೋಷಣೆ ಹೇಗೆ ಮಾಡಬೇಕು? ಯಾವ ರೀತಿ ಗೊಬ್ಬರ ಹಾಕಬೇಕು ಎಂಬ ಮಾಹಿತಿ ಇರುವುದೇ ಇಲ್ಲ.
ಜೊತೆಗೆ ಮಾಹಿತಿ ಇಲ್ಲದೆ ಅದರ ಪಾಲನೆ ಸರಿಯಾಗಿ ಮಾಡಲಾಗದೆ. ಗಿಡಗಳು ಸತ್ತು ಹೋಗುವುದು ಇಲ್ಲವೆ ಹೂವುಗಳೇ ಬಿಡದಂತೆ ಆಗುವುದನ್ನು ನಾವು ನೋಡಿದ್ದೇವೆ. ಕೆಲವರ ಮನೆಯಲ್ಲಿ ವರ್ಷದಿಂದಲೂ ಇರುವ ಹಿಡದಲ್ಲಿ ಒಮ್ಮೆಯೂ ಹೂವು ಬಿಡದೆ ಬರಿ ದೊಡ್ಡ ಗಿಡ ಮಾತ್ರ ಉಳಿಯುವುದನ್ನು ಸಹ ನೋಡಬಹುದು.

ಮತ್ತೆ ಕೆಲವರಿಗೆ ಹೂವಿನ ಗಿಡ ನೆಡುವ ಕುರಿತು ಮಾಹಿತಿ ಇರುವುದಿಲ್ಲ. ಹಾಗಾದ್ರೆ ನಾವಿಂದು ಗುಲಾಬಿ ಹೂವಿನ ಗಿಡ ನೆಡುವುದು ಹೇಗೆ? ಅದರ ಪಾಲನೆ ಹೇಗೆ ಮಾಡಬೇಕು? ಬೇಗ ಗಿಡದ ತುಂಬ ಹೂವು ಬಿಡುವಂತೆ ಮಾಡುವುದು ಹೇಗೆ ಎಂಬೆಲ್ಲಾ ಮಾಹಿತಿ ತಿಳಿದುಕೊಳ್ಳೋಣ.
ಮೊದಲು ಗುಲಾಬಿ ಗಿಡದ ಕಾಂಡವನ್ನು ನೀವು ನೆಡುತ್ತಿದ್ದರೆ ಸಣ್ಣ ಪಾಟ್‌ನಲ್ಲಿ ಅದನ್ನು ನೆಟ್ಟು ಚಿಗುರು ಒಡೆದ ಬಳಿಕ ದೊಡ್ಡ ಪಾಟ್‌ಗೆ ವರ್ಗಾಯಿಸಬೇಕು. ನೀವೇನಾದರು ದೊಡ್ಡ ಗುಲಾಬಿ ಗಿಡವನ್ನೇ ನೆಡುವುದಾದರೆ ದೊಡ್ಡ ಪಾಟ್ ಅನ್ನೇ ಬಳಸಿಕೊಳ್ಳಿ. ಈಗ ಗುಲಾಬಿ ಕಾಂಡ ನೆಡುವುದು ಹೇಗೆ ನೋಡಿ.
ಗುಲಾಬಿ ಗಿಡದ ಕಾಂಡ ನೆಡುವುದಾದರೆ ಒಂದು ಸಿಕ್ಕ ಪಾಟ್ ತೆಗೆದುಕೊಳ್ಳಿ. ಪಾಟ್‌ನ ಮುಕ್ಕಾಲು ಭಾಗ ಮರಳು ಮಿಶ್ರಿತ ಮಣ್ಣು ಸೇರಿಸಬೇಕು. ಬಿಗಿಯಾಗಿ ಹಾಕಬಾರದು. ಬಳಿಕ ಮೇಲಿನಿಂದ ನೀರನ್ನು ಸ್ಪ್ರೇ ಮಾಡಿಕೊಂಡು ಮಧ್ಯದಲ್ಲಿ ಒಂದು ತೂತು ಮಾಡಬೇಕು. ಆದರೆ ಗುಲಾಬಿ ಕಾಂಡ ನೆಡುವ ಮುನ್ನ ಅದರ ಬುಡವನ್ನು 40 ಡಿಗ್ರಿ ರೀತಿ ಕತ್ತರಿಸಬೇಕು. ಹಾಗೆ ಕಾಂಡದ ತಲೆಗೆ ಅರಶಿನ ಪುಡಿಯನ್ನು ಹಾಕಬೇಕು.
ಈಗ ಪಾಟ್‌ನಲ್ಲಿ ಹಾಕಲಾಗಿರುವ ತೂತಿನಲ್ಲಿ ಈ ಗುಲಾಬಿ ಕಾಂಡವನ್ನು ಇಟ್ಟು ಮಣ್ಣು ಹಾಕಿ. ಬಳಿಕ 20 ದಿನಗಳ ಕಾಲ ಇದಕ್ಕೆ ನಿರಂತರ ನೀರು ನೀಡುತ್ತಾ ಇರಬೇಕು. ಈ ಗಿಡ 20 ದಿನದಲ್ಲಿ ಚಿಗುರು ಒಡೆಯುತ್ತದೆ. ಬಳಿಕ ಇದನ್ನು ದೊಡ್ಡ ಪಾಟ್‌ಗೆ ಹಾಕಿ ಅದನ್ನು ನೆಡಬೇಕು.
ಇನ್ನು ದೊಡ್ಡ ಗುಲಾಬಿ ಗಿಡ ನೆಡುವುದಾದರೆ ದೊಡ್ಡ ಪಾಟ್‌ನಲ್ಲಿ ಮಣ್ಣು ಹಾಕಿ ಮಧ್ಯದಲ್ಲಿ ದೊಡ್ಡ ಹೊಂಡ ಮಾಡಿ ಅದರೊಳಗೆ ಗಿಡವಿಟ್ಟು ನೆಡಬೇಕು. ಬಳಿಕ ನೀರು ಹಾಕಬೇಕು. ಇಷ್ಟಾದರೆ ಗುಲಾಬಿ ಗಿಡ ನೆಡುವ ಪ್ರಕ್ರಿಯೆ ಅಂತ್ಯವಾಗುತ್ತದೆ.
ಗುಲಾಬಿ ಗಿಡದ ತುಂಬೆಲ್ಲಾ ಹೂ ಬಿಡುವಂತೆ ಮಾಡುವುದು ಹೇಗೆ?
ಕೆಲವು ಗಿಡಗಳು ದೊಡ್ಡದಾದ ಬಳಿಕವೂ ಹೂವು ಬಿಡುವುದಿಲ್ಲ. ಒಂದೊಂದೇ ಹೂವು ಬಿಡುವುದನ್ನು ಸಹ ನಾವು ನೋಡಿದ್ದೇವೆ, ಆದರೆ ಈ ಟ್ರಿಕ್ಸ್ ಮೂಲಕ ಗಿಡದ ತುಂಬೆಲ್ಲಾ ಹೂವು ಬಿಡುವಂತೆ ಮಾಡಬಹುದು. ಮೊದಲು ಒಂದು ಪಾತ್ರೆಯಲ್ಲಿ 2 ಸ್ಪೂನ್ ಹಾಲು ತೆಗದುಕೊಂಡು ಅದಕ್ಕೆ 2 ಗ್ಲಾಸ್ ನೀರು ಹಾಕಿ ಎನ್ನಾಗಿ ಮಿಕ್ಸ್ ಮಾಡಿ ಪಾತ್ರೆಯನ್ನು ಹಾಗೆ ಇಡಿ.
ಈಗ ಇನ್ನೊಂದು ಪಾತ್ರೆಯಲ್ಲಿ 2 ಸ್ಲೂನ್ ಬಳಸಿದ್ದ ಟೀಪುಡಿಯನ್ನು ಹಾಕಿ ಅದಕ್ಕೆ ಒಂದು ಗ್ಲಾಸ್ ನೀರು ಹಾಕಿ ಇಡಿ. ಈ 2 ಮಿಶ್ರಣವನ್ನು ರಾತ್ರಿಯಲ್ಲ ಇಟ್ಟು ಬೆಳಗ್ಗೆ ನೋಡಿ. ನಂತರ ಒಂದು ಪಾತ್ರೆಗೆ ಇದನ್ನು ಜರಡಿ ಹಿಡಿದುಕೊಳ್ಳಿ. ಎರಡೂ ಮಿಶ್ರಣವನ್ನು ಒಂದೇ ಪಾತ್ರೆಗೆ ಜರಡಿ ಮಾಡಿಕೊಳ್ಳಿ. ಈ ನೀರನ್ನು ಗುಲಾಬಿ ಗಿಡದ ಬುಡಕ್ಕೆ ಹಾಕಿಕೊಳ್ಳಿ. ಖಂಡಿತ ಗಿಡದ ತುಂಬೆಲ್ಲಾ ಹೂವು ಬಿಡಲಿದೆ.



Click it and Unblock the Notifications
