Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ಮಾರ್ಕೆಟ್‌ನಲ್ಲಿ ಸಿಗುವಂತ ಗಟ್ಟಿ ಮೊಸರು ಮನೆಯಲ್ಲೇ ಮಾಡಿ..! 5 ನಿಮಿಷ ಸಾಕು!
ಸಾಮಾನ್ಯವಾಗಿ ನಾವು ನಿತ್ಯ ಮನೆಯಲ್ಲಿಯೇ ಮಧ್ಯಾಹ್ನದ ಊಟ ಹಾಗೂ ರಾತ್ರಿಯ ಊಟ ಮಾಡುವವರಾಗಿದ್ದರೆ ಖಂಡಿರ ಮೊಸರು, ಮಜ್ಜಿಗೆಯೊಂದಿಗೆ ಊಟ ಮಾಡುತ್ತೇವೆ. ಬೇಸಿಗೆಯ ದಿನಗಳಲ್ಲಿ ಮಸಾಲೆ ಭರಿತ ಸಾರು, ಸಾಂಬಾರ್, ಪಲ್ಯಕ್ಕಿಂತ ತಣ್ಣನೆಯ ಮೊಸರು, ಮಜ್ಜಿಗೆಯ ಊಟ ಬೊಂಬಾಟ್ ಆಗಿರುತ್ತದೆ. ನಮ್ಮ ದೇಹಕ್ಕೂ ಕೂಡ ಇದು ಅತ್ಯಂತ ಒಳ್ಳೆಯ ಆಹಾರವಾಗುತ್ತದೆ.
ಮೊಸರಿನಲ್ಲಿ ನಮ್ಮ ಜೀರ್ಣಕ್ರಿಯೆಗೆ ಸಹಕರಿಸುವಂತಹ ಉತ್ತಮ ಬ್ಯಾಕ್ಟೀರಿಯಾ ಇರುತ್ತದೆ. ಇದು ನಮ್ಮ ಕರುಳಿನ ಆರೋಗ್ಯಕ್ಕೂ ಬಹಳ ಉತ್ತಮ. ಹೀಗಾಗಿ ಒಂದು ಹೊತ್ತಾದ್ರು ಮೊಸರು ಸವಿಯಬೇಕು. ಹಾಗೆ ಗಟ್ಟಿ ಮೊಸರು ದೇಹಕ್ಕೆ ಬಹಳ ಒಳ್ಳೆಯದು. ಆದ್ರೆ ಮನೆಯಲ್ಲಿ ಗಟ್ಟಿ ಮೊಸರು ಮಾಡುವುದು ಹೇಗೆ? ಮನೆಯಲ್ಲಿ ಗಟ್ಟಿ ಮೊಸರನ್ನು ಸುಲಭವಾಗಿ ಮಾಡಬಹುದು.

ಹಾಗಾದ್ರೆ ಮಾರುಕಟ್ಟೆಯಲ್ಲಿ ಸಿಗುವಂತಹ ಗಟ್ಟಿ ಮೊಸರನ್ನು ಮನೆಯಲ್ಲಿ ಮಾಡುವುದಾದ್ರು ಹೇಗೆ? ಇದಕ್ಕೆ ಯಾವ ರೀತಿ ಕ್ರಮ ಅನುಸರಿಸಬೇಕು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗೆ ಮನೆಯಲ್ಲೇ ಈ ಗಟ್ಟಿ ಮೊಸರನ್ನು ಮಾಡಿ ಸವಿಯಲು ಮುಂದಾಗೋಣ.
ಮೊದಲು ಒಲೆ ಮೇಲೆ ಹಾಲು ಕುದಿಸುವ ಪಾತ್ರೆ ಇಟ್ಟು ಒಂದು ಲೀಟರ್ ಹಾಲು ಹಾಕಿ ಚೆನ್ನಾಗಿ ಕುದಿಸಿಕೊಳ್ಳಿ. ಹಾಲು ಉಕ್ಕದಂತೆ ನೋಡಿಕೊಳ್ಳಬೇಕು. ಆಗಾಗ ಕೈ ಆಡಿಸಬೇಕು. ಒಟ್ಟು 10 ನಿಮಿಷ ಸಣ್ಣ ಉರಿಯಲ್ಲಿ ಕುದಿಸಿರಬೇಕು. ನಂತರ ಒಲೆ ಆಫ್ ಮಾಡಿಕೊಂಡು ಉಗುರು ಬೆಚ್ಚಗೆತಣ್ಣಗಾಗಲು ಬಿಡಿ.
ಈಗ ಒಂದು ಪಾತ್ರೆಗೆ ಹಾಲು ಹಾಕಿಕೊಂಡು ಅದಕ್ಕೆ 2 ಸ್ಪೂನ್ ಸಕ್ಕರೆ ಹಾಕಿ ಮಿಕ್ಸ್ ಮಾಡಿಕೊಳ್ಳಿ. ಹಾಗೆ ಮುಚ್ಚಳ ಮುಚ್ಚಿ ಹಾಗೆ ಬಿಡಬೇಕು. ಸುಮಾರು 5ರಿಂದ 6 ಗಂಟೆಯಾದರೂ ಹಾಗೆ ಇಡಬೇಕು. ಇಷ್ಟಾದರೆ ನೀವು ಗಟ್ಟಿ ಮೊಸರು ಪಡೆಯಬಹುದು, ನೀವು ಇದನ್ನು ಫ್ರಿಡ್ಜ್‌ನಲ್ಲಿಟ್ಟರೆ ಈ ಮೊಸರು ಮತ್ತಷ್ಟು ಗಟ್ಟಿಯಾಗುತ್ತದೆ. ಈ ಮೊಸರನ್ನು ನೀವು ಊಟಕ್ಕೆ ಬಳಸಬಹುದು. ಇನ್ನು ನೀವು ಮಣ್ಣಿನ ಮಡಿಕೆಯಲ್ಲಿ ಗಟ್ಟಿ ಮೊಸರು ಮಾಡಿದರೆ ಮತ್ತಷ್ಟು ದಪ್ಪವಾದ ಗಟ್ಟಿಯಾದ ಮೊಸರು ಮಾಡಬಹುದು.
ಈ ಮೊಸರನ್ನು ಬಳಸಿ ನೀವು ಹಲವು ರೀತಿಯ ಖಾದ್ಯಗಳ ಸಿದ್ದ ಮಾಡಬಹುದು. ಮೊಸರು ಹುಳಿ ಮಾಡುವುದಾದರೆ ಈ ರೀತಿ ಗಟ್ಟಿ ಮೊಸರು ಮಾಡಿಕೊಳ್ಳಿ. ನೀವು ಗಟ್ಟಿ ಮೊಸರು ಮಾಡುವಾಗ ಹಾಲಿಗೆ ಸ್ವಲ್ಪ ನೀರು ಹಾಕಿದರೂ ಕೂಡ ಮೊಸರು ದಪ್ಪವಾಗಿ ಬರುವುದಿಲ್ಲ. ಹಾಗೆ ಹಾಲನ್ನು ಚೆನ್ನಾಗಿ ಕುದಿಸದೆ ಇದ್ದರೂ ಕೂಡ ಹೆಪ್ಪು ಹಾಕಲು ಆಗವುದಿಲ್ಲ. ಇದರಿಂದ ಗಟ್ಟಿ ಮೊಸರು ಮಾಡಲು ಆಗುವುದಿಲ್ಲ.
ಮತ್ತೆ ಬಿಸಿ ಹಾಲಿಗೆ ಎಂದಿಗೂ ಸಕ್ಕರೆ ಹಾಕಿ ಹೆಪ್ಪಾಗಲು ಬಿಡಬಾರದು. ಬಿಸಿ ಹಾಲಿಗೆ ನೀವು ಏನೆ ಸೇರಿಸಿದರೂ ಕೂಡ ಅದು ಬಹುಬೇಗ ರಾಸಾಯನಿಕ ಕ್ರಿಯೆಗೆ ಒಳಪಡುತ್ತದೆ. ಹೀಗಾಗಿ ಬಿಸಿ ಹಾಲಿಗೆ ಹೆಪ್ಪು ಹಾಕಬೇಡಿ, ಹಾಲು ತಣ್ಣಗೆ ಮಾಡಿದ ಬಳಿಕ ಉಗುರು ಬೆಚ್ಚಗಿನ ಹಾಲಿಗೆ ಹೆಪ್ಪು ಹಾಕಬೇಕು. ಹಾಗೆ ಹಾಲು ಪೂರ್ಣ ತಣ್ಣಗಾದಾಗಲು ಹೆಪ್ಪು ಹಾಕಬೇಡಿ, ಇದರಿಂದ ಹಾಲು ರಾಸಾಯನಿಕ ಕ್ರಿಯೆಗೆ ಒಳಗಾಗುವುದೇ ಇಲ್ಲ. ಹಾಲು ದಪ್ಪ ಮೊಸರು ಆಗುವುದಿಲ್ಲ.
ಹಾಲಿಗೆ ಸಕ್ಕರೆ ಹಾಕೋದ್ರಿಂದ ನಿಮ್ಮಲ್ಲಿ ಸರಿಯಾಗಿ ಹೆಪ್ಪಾಗದಿದ್ದರೆ ಅಥವಾ ಮೊಸರು ಗಟ್ಟಿಯಾಗಿ ಬಾರದಿದ್ದರೆ 2 ಸ್ಪೂನ್ ಹುಳಿ ಮೊಸರು ಇದ್ದರೆ ಅದಕ್ಕೆ ಹಾಕಬೇಕು ಇದರಿಂದ ಹಾಲು ಬೇಗ ಮೊಸರಾಗುತ್ತದೆ.



Click it and Unblock the Notifications
