Latest Updates
-
ಆಗಸ್ಟ್ 2026 ಏಕಾದಶಿ: ಸ್ಮಾರ್ತ vs ವೈಷ್ಣವ ವ್ರತದ ದಿನಾಂಕಗಳ ಗೊಂದಲವೇ? ಮಧುಮೇಹಿಗಳಿಗೆ ಇಲ್ಲಿದೆ ಉಪವಾಸದ ಸೂತ್ರ! -
ರಾಷ್ಟ್ರೀಯ ಬಾಹ್ಯಾಕಾಶ ದಿನ 2026: ನಿಮ್ಮ ಮಕ್ಕಳೊಂದಿಗೆ ಚಂದ್ರನ ರಹಸ್ಯಗಳನ್ನು ಅನ್ವೇಷಿಸಲು ಇಲ್ಲಿದೆ ಬೆಸ್ಟ್ ಪ್ಲಾನ್! -
ಓಣಂ ಹಬ್ಬದ ಸಂಭ್ರಮ: ಮಳೆಯಲ್ಲೂ ಸ್ಟೈಲಿಶ್ ಆಗಿ ಕಾಣಲು ₹1,200 ರೊಳಗೆ ಬೆಸ್ಟ್ ಫ್ಯಾಷನ್ ಟಿಪ್ಸ್! -
ಮಳೆಗಾಲದಲ್ಲಿ ಹಿರಿಯರು ಜಾರಿ ಬೀಳುವ ಆತಂಕವೇ? ಸುರಕ್ಷಿತವಾಗಿರಲು ಈ 12 ನಿಮಿಷಗಳ ಚೇರ್-ಯೋಗ ಟ್ರೈ ಮಾಡಿ! -
ಹಿರಿಯರ ಆರೋಗ್ಯಕ್ಕೆ ದಿನಕ್ಕೆ 12 ನಿಮಿಷದ 'ಚೇರ್ ಯೋಗ': ಚೈತನ್ಯ ಮತ್ತು ಸಮತೋಲನಕ್ಕೆ ಇದುವೇ ಮಂತ್ರ! -
ಫ್ಯಾಮಿಲಿ ವಾಟ್ಸಾಪ್ ಗ್ರೂಪ್ನಲ್ಲಿ ರಾಜಕೀಯ ಜಗಳವೇ? ಈ ಟಿಪ್ಸ್ ಪಾಲಿಸಿ, ಸಂಬಂಧ ಉಳಿಸಿಕೊಳ್ಳಿ! -
ಓಣಂ ಹಬ್ಬದ ಸಂಭ್ರಮ: ಹೂವಿನ ಬೆಲೆ ಏರಿಕೆ ನಡುವೆ ಕಡಿಮೆ ದರದಲ್ಲಿ ಖರೀದಿಸಲು ಇಲ್ಲಿವೆ ಟಿಪ್ಸ್! -
ಸಸ್ಯಜನ್ಯ ಹಾಲು: ತೂಕ ಇಳಿಕೆ ಮತ್ತು ಮಧುಮೇಹ ನಿಯಂತ್ರಣಕ್ಕೆ ಇದುವೇ ಬೆಸ್ಟ್ ಪರ್ಯಾಯ! -
ಸಕ್ಕರೆ ಬೆಲೆ ಏರಿಕೆ ಬಿಸಿ: ಹಬ್ಬದ ಸಿಹಿ ಬಜೆಟ್ ಉಳಿಸಲು ಇಲ್ಲಿದೆ 300 ರೂಪಾಯಿಯ ಸ್ಮಾರ್ಟ್ ಟಿಪ್ಸ್ -
ವರಮಹಾಲಕ್ಷ್ಮೀ ವ್ರತದ ಶಾಸ್ತ್ರೋಕ್ತ ವಿಧಾನ ಮತ್ತು ಪೂಜಾ ನಿಯಮಗಳು
ಸಿಹಿ ಅಡಿಕೆಪುಡಿ ಇಷ್ಟು ರುಚಿಯಾಗಿ ಮಾಡಿದ್ರೆ ದಿನಾಲು ವೀಳ್ಯ ಸವಿಯುತ್ತೀರಿ..! ಮನೆಯಲ್ಲೇ ಮಾಡಿ!
ನೀವು ಮದುವೆ ಮನೆ, ಗೃಹ ಪ್ರವೇಶ, ಶುಭ ಸಮಾರಂಭಗಳಲ್ಲಿ ಊಟದ ಬಳಿಕ ಸಂಪ್ರದಾಯದಂತೆ ಫಲ ತಾಂಬುಲು ನೀಡುತ್ತಾರೆ. ಹಾಗೆ ಅತಿಥಿಗಳಿಗಾಗಿ ಊಟದ ಬಳಿಕ ಸವಿಯಲು ಸಿಹಿ ಅಡಿಕೆಪುಡಿ ಇಟ್ಟಿರುತ್ತಾರೆ. ಬಹುತೇಕ ಎಲ್ಲರು ಇದನ್ನು ಸವಿಯಲು ಇಷ್ಟಪಡುತ್ತಾರೆ. ಮಕ್ಕಳಿಂದ ಹಿಡಿದು ಹಿರಿಯರು ಕೂಡ ಈ ಸಿಹಿ ಅಡಿಕೆಯ ಪುಡಿಯನ್ನು ಸವಿಯುತ್ತಾರೆ.
ನಿಮಗೆ ವೀಳ್ಯದೆಲೆಯ ಉಪಯೋಗ ತಿಳಿದಿರಬಹುದು, ಇದರಿಂದ ನಮ್ಮ ಆರೋಗ್ಯಕ್ಕೂ ಹಲವು ರೀತಿ ಲಾಭವಿದೆ. ನಮ್ಮ ಜೀರ್ಣಕ್ರಿಯೆಗೆ ವೀಳ್ಯದೆಲೆಯಲ್ಲಿ ಉಪಯುಕ್ತ ಅಂಶವಿದೆ. ವೀಳ್ಯದೆಲೆಯು ಪ್ರಬಲವಾದ ಕ್ಯಾನ್ಸರ್ ವಿರೋಧಿ ಮತ್ತು ಆಂಟಿಮ್ಯುಟಾಜೆನಿಕ್ ಸಂಯುಕ್ತಗಳನ್ನು ಹೊಂದಿದೆ ಮತ್ತು ಕ್ಯಾನ್ಸರ್ ಬೆಳವಣಿಗೆಯ ಅಪಾಯವನ್ನು ಕಡಿಮೆ ಮಾಡುತ್ತದೆ ಕೂಡ. ವೀಳ್ಯದೆಲೆಯು ಬಾಯಿಯ ದುರ್ವಾಸನೆಯನ್ನು ಕಡಿಮೆ ಮಾಡುತ್ತದೆ.

ಆದ್ರೆ ಸಿಹಿ ಅಡಿಕೆ ಪುಡಿಯನ್ನು ನಾವು ಮನೆಯಲ್ಲೇ ಮಾಡಿಕೊಳ್ಳಬಹುದು ಎಂಬುದು ನಿಮಗೆ ಗೊತ್ತಾ?, ಹೌದು ಈ ಅದ್ಭುತ ರುಚಿ ನೀಡುವ ಸಿಹಿ ಅಡಿಕೆ ಪುಡಿಯನ್ನು ಮನೆಯಲ್ಲಿ ಮಾಡಿ ಸವಿಯಬಹುದು. ನಾವು ಕೂಡ ಊಟವಾದ ಬಳಿಕ ಮೌತ್ ಫ್ರೇಶ್‌ನರ್ ಬಳಸುತ್ತೇವೆ. ಅಂಗಡಿಯಿಂದ ಖರೀದಿಸಿ ತಂದು ಊಟದ ಬಳಿಕ ಸವಿಯು ಅಭ್ಯಾಸ ಇರುತ್ತದೆ. ಹಾಗಾದ್ರೆ ಈ ಸಿಹಿ ಅಡಿಕೆ ಪುಡಿಯನ್ನು ಮನೆಯಲ್ಲೇ ಮಾಡೋದು ಹೇಗೆ?
ಸಿಹಿ ಅಡಿಕೆ ಪುಡಿ ಮಾಡಿಕೊಳ್ಳಲು ಯಾವೆಲ್ಲಾ ಪದಾರ್ಥಗಳು ಬೇಕು?
- ಅಡಿಕೆ ಪುಡಿ
- ಕುಂಬಳಕಾಯಿ ಬೀಜ
- ರೆಡ್ ಬಾಲ್ಸ್ ಅಥವಾ ಸ್ವೀಟ್ ಬಾಲ್
- ಡೈಮಂಡ್ ಸಕ್ಕರೆ /ಕಲ್ಲು ಸಕ್ಕರೆ
- ಜಾಯಿಕಾಯಿ
- ಕೊಬ್ಬರಿ- ಅರ್ಧ ಕಪ್
- ಜಾಯಿ ಪತ್ರೆ - 5ಗ್ರಾಮ್
- ಸೋಂಪು
- ಲವಂಗ
- ಏಲಕ್ಕಿ - 4
ಸಿಹಿ ಅಡಿಕೆ ಪುಡಿ ಮಾಡುವುದು ಹೇಗೆ?
ಮೊದಲಿಗೆ ಏಲಕ್ಕಿ, ಲವಂಗ, ಜಾಯಿಕಾಯಿ, ಜಾಯಿಪತ್ರೆಯನ್ನು ಕುಟ್ಟಿ ಪುಡಿ ಮಾಡಿಕೊಳ್ಳಬೇಕು. ಮಿಕ್ಸಿಗೆ ಹಾಕುವುದಕ್ಕಿಂತ ಕಲ್ಲಿನಲ್ಲಿ ಕುಟ್ಟಿ ಪುಡಿ ಮಾಡಿಕೊಳ್ಳುವುದು ಉತ್ತಮ. ತರಿತರಿಯಾಗಿ ಕುಟ್ಟಿ ಪುಡಿ ಮಾಡಿಕೊಳ್ಳಿ. ಅನಂತರ ಒಂದು ಬಾಣಲೆ ಒಲೆ ಮೇಲೆ ಇಟ್ಟು ಉಪ್ಪು, ಚಿಟಿಕೆ ಉಪ್ಪು ಹಾಕಿಕೊಂಡು ಅದಕ್ಕೆ 2 ಕಪ್ ಅಡಿಕೆ ಪುಡಿ ಹಾಕಿ ಹುರಿದುಕೊಳ್ಳಬೇಕು. 1 ನಿಮಿಷ ಹುರಿದುಕೊಂಡ ಬಳಿಕ ಕುಟ್ಟಿ ಪುಡಿ ಮಾಡಿಕೊಂಡಿರುವ ಎಲ್ಲಾ ಮಸಾಲೆಗಳನ್ನು ಸಹ ಸೇರಿಸಿಕೊಂಡು ಒಲೆ ಆಫ್ ಮಾಡಿಕೊಳ್ಳಿ. ಹಾಗೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಸ್ವಲ್ಪ ಕೊಬ್ಬರಿ ಕೂಡ ಹಾಕಿ ಮಿಕ್ಸ್ ಮಾಡಿ. ಈಗ ಒಂದು ಪಾತ್ರೆಗೆ ಹಾಕಿಕೊಂಡು ತಣ್ಣಗಾಗಲು ಬಿಡಿ. ಪೂರ್ಣ ತಣ್ಣಗಾದ ಬಳಿಕ ಇದಕ್ಕೆ ಡೈಮಂಡ್ ಸಕ್ಕರೆ ಹಾಗೂ ಸ್ವೀಟ್ ಬಾಲ್‌ಗಳನ್ನು ಹಾಕಿಕೊಳ್ಳಿ (ಅಡಿಕೆ ಪುಡಿ ಮಧ್ಯೆ ಕೆಂಪು ಬಣ್ಣದಲ್ಲಿರುವ ಸಣ್ಣ ಸಣ್ಣ ಕಾಳುಗಳು). ಇದನ್ನು ಹಾಕಿದ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ. ಇಷ್ಟಾದರೆ ಸಾಕು ನಿಮ್ಮ ಮುಂದೆ ಅದ್ಭುತ ರುಚಿಯ ಈ ಅಡಿಕೆ ಪುಡಿ ರೆಡಿಯಾಗುತ್ತದೆ.
ನೀವು ಇದನ್ನು ಹಲವು ದಿನಗಳ ಇಟ್ಟು ಊಟ ಆದ ಬಳಿಕ ಸವಿಯಬಹುದು. ಅಂಗಡಿಯಿಂದ ತಂದು ಸವಿಯುವುದಕ್ಕಿಂತ ಮನೆಯಲ್ಲೇ ಮಾಡುವುದು ತುಂಬಾ ಒಳ್ಳೆಯದು. ನೀವು ಕೂಡ ಮಾಡಿ ನೋಡಿ.



Click it and Unblock the Notifications