Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಮನೆಯಲ್ಲೇ ಮಾಡಬಹುದು ಶಾಂಪೂ..! ಈ 4 ವಸ್ತು ಇದ್ದರೆ ಸಾಕು..ಎಲ್ಲಾ ಸಮಸ್ಯೆ ಬಗೆಹರಿಯಲಿದೆ!!
ನಾವು ನಮ್ಮ ಕೂದಲಿನ ಬಗ್ಗೆ ವಿಶೇಷ ಕಾಳಜಿ ವಹಿಸುತ್ತೇವೆ, ತಲೆ ತುಂಬಾ ಕೂದಲಿದ್ದರೆ ಸೌಂದರ್ಯ ಹೆಚ್ಚಾಗುತ್ತದೆ. ಆದ್ರೆ ಕೂದಲನ್ನು ಕಾಪಾಡಿಕೊಳ್ಳುವುದು ಅಷ್ಟೊಂದು ಸುಲಭದ ಮಾತಲ್ಲ. ಏಕೆಂದರೆ ಈಗಂತು ಕೂದಲಿನ ಮೇಲೆ ಎಲ್ಲಾ ಅಂಶಗಳು ಪರಿಣಾಮ ಬೀರುತ್ತದೆ. ನಮ್ಮ ಜೀವನ ಶೈಲಿ, ಧೂಳು, ಹೊರಗಿನ ಪರಿಸರ, ನೀರು ಹೀಗೆ ಒಂದಲ್ಲಾ ಒಂದು ರೀತಿಯಲ್ಲಿ ನಾವು ಸಮಸ್ಯೆಯ ನೋಡುತ್ತಿರುತ್ತೇವೆ.
ಹಾಗೆ ನಮ್ಮ ಕೂದಲಿನ ಆರೈಕೆಗಾಗಿ ನಾವು ಹಲವು ರೀತಿಯ ಶಾಂಪುಗಳು, ಕಂಡಿಷನರ್ ಸಹ ಬಳಸುತ್ತೇವೆ. ಕೆಲವರು ತಲೆ ಹೊಟ್ಟು ನಿವಾರಣೆಗೆ, ಶೈನಿಂಗ್ ಬರಲು, ಕೂದಲು ಉದುರುವುದು ನಿಲ್ಲಲು ಹಲವು ಶಾಂಪುಗಳ ಬಳಸುವುದು ನಾವು ನೋಡಿರುತ್ತೇವೆ. ಆದ್ರೆ ಇದೆಲ್ಲವು ಕೆಲವೊಮ್ಮೆ ಕೂದಲಿನ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವುದು ನಾವು ನೋಡಬಹುದು.

ಹೀಗಾಗಿ ಕೂದಲಿನ ಆರೈಕೆಗೆ ನಾವು ಮನೆಯಲ್ಲೇ ಹಲವು ರೀತಿ ಮದ್ದುಗಳನ್ನು ಕೂಡ ಮಾಡುತ್ತೇವೆ. ಆದ್ರೆ ಮನೆಯಲ್ಲೇ ನಮಗೆ ಬೇಕಾದ ಹಾಗೂ ಕೂದಲಿಗೆ ಅತ್ಯಂತ ಉತ್ತಮವಾದ ಪೋಷಕಾಂಶಗಳ ನೀಡುವಂತಹ ಶಾಂಪೂ ಮಾಡುವುದು ಹೇಗೆ ಗೊತ್ತಾ? ಹಾಗಾದ್ರೆ ನಾವು ಮನೆಯಲ್ಲೇ ಶಾಂಪು ಕೂಡ ಮಾಡುವುದು ಹೇಗೆ ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಈ ಹರ್ಬಲ್ ಶಾಂಪೂವನ್ನು ಮನೆಯಲ್ಲಿ ಕೆಲವೇ ವಸ್ತುಗಳ ಬಳಸಿ ಮಾಶಡಬಹುದು. ಇದು ಹರ್ಬಲ್ ಆಗಿರೋದ್ರಿಂದ ನಿಮಗೆ ಯಾವುದೇ ಅಡ್ಡ ಪರಿಣಾಮ ಆಗುವುದಿಲ್ಲ. ಮೊದಲು ಇದನ್ನು ಮಾಡಲು ಸೀಗೆ ಪುಡಿಯ ಅವಶ್ಯಕತೆ ಇದೆ, ಅಂಗಡಿಯಲ್ಲಿ ಸೀಗೆ ಪುಡಿ ಸುಲಭವಾಗಿ ಸಿಗುತ್ತದೆ.
- ಸೀಗೆಕಾಯಿ ಪುಡಿ
- ಆಮ್ಲ ಪುಡಿ
- ಅಗಸೆ ಬೀಜ
- ಅಂಟುವಾಳ ಕಾಯಿ
ಮೊದಲು ಅಂಟುವಾಳದ ಬೀಜವನ್ನು ತೆಗೆದು ಎಸೆಯಬೇಕು. ನಂತರ ಉಳಿದ ಸಿಪ್ಪೆಗಳ ಮಿಕ್ಸಿ ಜಾರ್‌ಗೆ ಹಾಕಿಕೊಂಡು ರುಬ್ಬಿಕೊಳ್ಳಬೇಕು. ಪುಡಿ ಪುಡಿ ಮಾಡಿಕೊಂಡು ಒಂದು ಬೌಲ್‌ಗೆ ಹಾಕಿಕೊಳ್ಳಿ. ಇನ್ನೊಂದು ಕಡೆ ಅಗಸೆ ಬೀಜವನ್ನು ಕೂಡ ಪುಡಿ ಮಾಡಿಕೊಳ್ಳಿ.
ಈಗ ಒಂದು ಕುಕ್ಕರ್ ಒಲೆ ಮೇಲೆ ಇಟ್ಟು ಅದಕ್ಕೆ ಎರಡೂವರೆ ಲೀಟರ್ ನೀರು ಇಟ್ಟುಕೊಳ್ಳಿ. ಈ ನೀರಿಗೆ ಸೀಗೆಕಾಯಿಯ ಪುಡಿ ಹಾಗೂ ಆಮ್ಲ ಪುಡಿಯನ್ನು ಹಾಕಿಕೊಂಡು ಚೆನ್ನಾಗಿ ಮಿಕ್ಸ್ ಮಾಡಿಕೊಂಡು ಕುದಿಯಲು ಬಿಡಬೇಕು. ಕುದಿಯಲು ಆರಂಭಿಸಿದಾಗ ಇದಕ್ಕೆ ಅಂಟುವಾಳ ಕಾಯಿಯ ಪುಡಿ ಹಾಗೂ ಅಗಸೆ ಬೀಜದ ಪುಡಿಯನ್ನು ಕೂಡ ಹಾಕಿ ಒಮ್ಮೆ ಮಿಕ್ಸ್ ಮಾಡಿ.
ಈಗ ಈ ಎಲ್ಲಾ ಅಂಶಗಳು ಹಾಕಿದ ಬಳಿಕ ಕುದಿಯಲು ಬಿಡಿ. 45ರಿಂದ 50 ನಿಮಿಷ ಕುದಿಯಲು ಬಿಡಬೇಕು, ನಂತರ ಒಲೆ ಆಫ್ ಮಾಡಿಕೊಂಡು ತಣ್ಣಗಾಗಲು ಬಿಡಿ. ಈ ಮಿಶ್ರಣ ತಣ್ಣಗಾದ ಬಳಿಕ ನೀವು ಇದನ್ನು ಇನ್ನೊಂದು ಪಾತ್ರೆಗೆ ಸೋಸಿಕೊಳ್ಳಿ. ಅನಂತರ ಯಾವುದಾದರು ಬಾಟಲಿಗೆ ಇದನ್ನು ಹಾಕಿಟ್ಟುಕೊಳ್ಳಿ. ನಿಮಗೆ ಬೇಕಾದಾಗ ಬಳಸಬಹುದು.
ಈ ಶಾಂಪೂವಿನಿಂದ ನಿಮ್ಮ ಕೂದಲು ಹೆಚ್ಚು ಹೊಳಪು ಬರುತ್ತದೆ, ಕಪ್ಪು ಕೂದಲು ನಿವಾರಣೆಯಾಗುತ್ತೆ. ಹಾಗೆ ಗಟ್ಟಿಯಾಗಿ ಉದುರುವುದು ಸಹ ನಿಲ್ಲುತ್ತದೆ. ಇದರ ಜೊತೆಗೆ ತಲೆ ಹೊಟ್ಟು, ತುರಿಕೆ, ಕೂದಲು ತುಂಡಾಗುವುದು ಕೂಡ ನಿವಾರಣೆಯಾಗುತ್ತದೆ. ಈ ರೀತಿ ಮಾಡಿರುವ ಶಾಂಪುವಿನಲ್ಲಿ ನೀವು ವಾರದಲ್ಲಿ ಎರಡು ಬಾರಿ ತಲೆಗೆ ಹಾಕಿಕೊಂಡು ಸ್ನಾನ ಮಾಡಿದರೆ ನಿಮ್ಮ ಸಮಸ್ಯೆಗಳಿಗೆ ತಕ್ಷಣದ ಪರಿಹಾರ ಮಾಡಬಹುದು.



Click it and Unblock the Notifications
