Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
ಮರಳು ಮರಳಾದ ತುಪ್ಪ ಮನೆಯಲ್ಲೇ ಮಾಡಿ! ಸುಲಭದ ಹಾಗೆ ಸರಿಯಾದ ವಿಧಾನವಿದು!
ನೀವು ಮನೆಯಲ್ಲಿ ತುಪ್ಪವನ್ನು ಬಳಸಿ ಹಲವು ರೀತಿ ಖಾದ್ಯಗಳ ಮಾಡಬಹುದು. ಅದ್ರಲ್ಲೂ ಸಿಹಿ ತಿಂಡಿಗಳಿಂದ ಹಿಡಿದು ಒಂದಿಷ್ಟು ಅಡುಗೆಗೆ ತುಪ್ಪ ಬಳಸುವುದು ಕಾಮನ್. ಅದ್ರಲ್ಲೂ ಹಬ್ಬದ ಸಮಯದಲ್ಲಂತು ತುಪ್ಪದ ಬಳಕೆ ಮಾಡಿಯೇ ಮಾಡುತ್ತೇವೆ. ವಿಶೇಷ ಹಬ್ಬದ ಸಮಯದಲ್ಲಿ ಮನೆಯಲ್ಲಿ ದೇವರಿಗೆ ತುಪ್ಪದ ದೀಪ ಬೆಳಗುವುದು ಸಹ ಇದೆ. ಹಾಗೆ ಬೆಳಗ್ಗೆ ಯಾವುದಾದರು ತಿಂಡಿ ಸವಿಯಲು ಸಹ ತುಪ್ಪ ಬಳಸುತ್ತೇವೆ.
ಇನ್ನು ಸಣ್ಣಪುಟ್ಟ ಕಾಯಿಲೆಗಳಲ್ಲಿ ಮನೆಮದ್ದಿನ ರೀತಿ ತುಪ್ಪದ ಬಳಕೆ ಮಾಡುವುದು ಕೂಡ ಇದೆ. ಆದ್ರೆ ಮಾರುಕಟ್ಟೆಯಲ್ಲಿ ಈಗ ತುಪ್ಪ ಚಿನ್ನದಂತೆ ದುಬಾರಿ ಆಗಿದೆ. ಹಾಗೆ ದರ ಏರಿಕೆಯಿಂದಾಗಿ ಮಾರುಕಟ್ಟೆಯಲ್ಲಿ ಈಗ ಶುದ್ಧ ತುಪ್ಪ ಅನ್ನೋದೆ ಸಿಗದಂತಾಗಿದೆ. ಅದ್ರಲ್ಲೂ ದೇಸಿ ತುಪ್ಪವಂತು ಈಗ ಕಣ್ಮರೆಯಾಗಿದೆ.

ದೇಸಿ ತುಪ್ಪ ಹಳ್ಳಿಗಳಲ್ಲಿ ಮಾತ್ರವೇ ಅಲ್ಲಲ್ಲಿ ಸಿಗುತ್ತಿದೆ. ಅದರ ದರ ಕೂಡ ಗಗನಕ್ಕೇರಿದೆ. ಆದ್ರೆ ಮನೆಯಲ್ಲಿ ಬೆಣ್ಣೆ ಇದ್ದರೆ ನಾವೇ ತುಪ್ಪ ಮಾಡಿಕೊಳ್ಳಬಹುದು. ಆದ್ರೆ ತುಪ್ಪ ಮಾಡಿದರೆ ಬಹುಬೇಗ ಹಾಳಾಗುತ್ತದೆ ಎಂಬ ಕಾರಣಕ್ಕೆ ಹವಲರು ಮಾಡುವುದಿಲ್ಲ. ಆದ್ರೆ ನಾವಿಂದು ಮಾರುಕಟ್ಟೆಯಲ್ಲಿ ಸಿಗುವಂತಹ ರುಚಿ ರುಚಿಯ ತುಪ್ಪವನ್ನು ಮನೆಯಲ್ಲೇ ಮಾಡುವ ಕುರಿತು ಹೇಳಲಿದ್ದೇವೆ.
ಈ ಹಿಂದೆ ನಾವು ಪ್ಯಾಕೆಟ್ ಹಾಲಿನಿಂದ ಬೆಣ್ಣೆ ತೆಗೆಯುವುದು ಹೇಗೆ ಅನ್ನೋದನ್ನು ಹೇಳಿದ್ದೆವು. ಆದ್ರೆ ಬೆಣ್ಣೆಯನ್ನು ಒಟ್ಟು ಮಾಡಿಟ್ಟು ಅದರಿಂದ ತುಪ್ಪ ರೆಡಿ ಮಾಡುವುದು ಹೇಗೆ ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಹಾಗಾದ್ರೆ ಸುಲಭವಾಗಿ ಮನೆಯಲ್ಲೇ ತುಪ್ಪ ಮಾಡಿಕೊಳ್ಳುವುದು ಹೇಗೆ? ಮಾಡಲು ಯಾವೆಲ್ಲಾ ಪದಾರ್ಥಗಳು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ತಿಳಿದುಕೊಳ್ಳೋಣ. ಮನೆಯಲ್ಲೇ ತುಪ್ಪ ಮಾಡೋದು ಹೇಗೆ? ಮಾಡಲು ಏನೆಲ್ಲಾ ಬಳಸಬೇಕು? ಸರಿಯಾದ ವಿಧಾನವೇನು ಎಂಬುದನ್ನು ತಿಳಿಯೋಣ.
ಮೊದಲಿಗೆ ಬೆಣ್ಣೆಯಿಂದ ತುಪ್ಪ ತೆಗೆಯಲು ಏನೇನು ಬೇಕು ತಿಳಿದುಕೊಳ್ಳಿ
ಬೆಣ್ಣೆ
ವೀಳ್ಯದೆಲೆ ಅರ್ಧ
ಕಾಲು ಮೆಣಸಿನ ಪುಡಿ
ಅರಶಿಣ
ಉಪ್ಪು
ಮೆಂತ್ಯ ಕಾಳು
ಬೆಳ್ಳುಳ್ಳಿ
ಬೆಣ್ಣೆಯಿಂದ ತುಪ್ಪ ತೆಗೆಯುವ ಸರಿಯಾದ ವಿಧಾನವೇನು?
ಮೊದಲು ದಪ್ಪ ತಳ ಇರುವ ಪಾತ್ರೆ ತೆಗೆದುಕೊಂಡು ಅದಕ್ಕೆ ಬೆಣ್ಣೆ ಹಾಕಿಕೊಂಡು ಒಲೆ ಮೇಲೆ ಇಟ್ಟು ಸಣ್ಣ ಉರಿಯಲ್ಲಿ ಇಡಿ. ಬೆಣ್ಣೆ ಕರಗಲು ಆರಭಿಸಿದಾಗ ಮೆಂತ್ಯ ಪುಡಿ ಹಾಕಬೇಕು. 1 ಸ್ಪೂನ್ ಮೆಂತ್ಯ ತೆಗೆದುಕೊಂಡು ಹುರಿದು ಅದನ್ನು ಮಿಕ್ಸಿ ಜಾರ್‌ನಲ್ಲಿ ಪುಡಿ ಮಾಡಿಟ್ಟುಕೊಳ್ಳಬೇಕು. ಹಾಗೆ ಬೆಣ್ಣಗೆ ಕಾಲು ಸ್ಪೂನ್ ಅರಶಿಣ, ಚಿಟಿಕೆ ಮೆಣಸಿನ ಕಾಳಿನ ಪುಡಿ ಹಾಕಿ.
ಇದೆಲ್ಲಾ ವಸ್ತು ಹಾಕಿ ಮಿಕ್ಸ್ ಮಾಡಿ ಚಿಟಿಕೆ ಉಪ್ಪು ಕೂಡ ಹಾಕಿಕೊಳ್ಳಿ. ಕಲ್ಲು ಉಪ್ಪು ಇದ್ದರೆ ಉತ್ತಮ. ಹಾಗೆ ಬೆಳ್ಳುಳ್ಳಿಯನ್ನು ಜಜ್ಜಿ ಹಾಕಿಕೊಳ್ಳಿ. ಮತ್ತೆ ಅರ್ಧ ವೀಳ್ಯದೆಲೆಯನ್ನು ಇದರೊಳಗೆ ಹಾಕಿ. ಮಿಕ್ಸ್ ಮಾಡಿಕೊಂಡು ಕುದಿಬರಲು ಬಿಡಿ.
ತುಪ್ಪ ಕುದಿಯಲು ಆರಂಭಿಸಿ ಗುಳ್ಳೆಗಳು ಬರುತ್ತವೆ. ಹಾಗೆ 5 ನಿಮಿಷ ಬಿಟ್ಟರೆ ಅದು ದಪ್ಪವಾದರಂತೆ ಕಾಣಿಸಲಿದೆ. ಈ ಸಮಯದಲ್ಲಿ ಒಲೆ ಆಫ್ ಮಾಡಿ ತುಪ್ಪವನ್ನು ಇಳಿಸಿಕೊಂಡು ತಣ್ಣಗಾಗಲು ಬಿಡಬೇಕು. ಬಳಿಕ ಅದನ್ನು ಒಂದು ಪಾತ್ರೆಗೆ ಜರಡಿ ಹಿಡಿದು ಸೋಸಿಕೊಳ್ಳಬೇಕು. ಬೇಕಾದರೆ ನೀವು ಆ ಪಾತ್ರೆಯನ್ನು ತಣ್ಣಗಿರುವ ನೀರಿನಲ್ಲಿ ಅದ್ದಿ ಇಡಬಹುದು. ಆದ್ರೆ ಫ್ರಿಡ್ಜ್‌ನಲ್ಲಿ ಇಡಲು ಮುಂದಾಗಬೇಡಿ.
ಹೀಗೆ ಮಾಡಿದ್ರೆ ರುಚಿ ರುಚಿಯಾದ ಹಾಗೆ ಮರಳು ಮರಳಾಗಿರುವ ತುಪ್ಪ ಸಿದ್ದವಾಗುತ್ತೆ. ಇದು ಅಂಗಡಿಯಲ್ಲಿ ಸಿಗುವಂತಹ ತುಪ್ಪದಂತಹ ರುಚಿ ಬರಲಿದೆ.



Click it and Unblock the Notifications
