Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಮನೆಯಲ್ಲೇ 2 ನಿಮಿಷದಲ್ಲಿ ಮಯೋನೀಸ್ ಮಾಡೋದು ಹೇಗೆ? ಮಯೋನೀಸ್ ಉಪಯೋಗ ಎಷ್ಟಿದೆ ಗೊತ್ತಾ?
ನೀವು ಹೋಟೆಲ್ ರೆಸ್ಟೋರೆಂಟ್‌ನಲ್ಲಿ ಕರಿದ ತಿಂಡಿಗಳ ಆರ್ಡರ್ ಮಾಡಿದಾಗ ಅದರ ಜೊತೆಗೆ ಮಯೋನೀಸ್ ನೀಡುತ್ತಾರೆ. ಮಯೋನೀಸ್ ಜೊತೆಗೆ ಫ್ರೈಡ್ ಐಟಂಗಳ ಸವಿಯಲು ಬಹಳ ರುಚಿ ನೀಡಲಿದೆ. ಮಯೋನೀಸ್ ಇಲ್ಲದೆ ಕರಿದ ತಿಂಡಿಗಳ ಸವಿಯಲು ಸಾಧ್ಯವೇ ಇಲ್ಲ. ಹಾಗೆ ಕೆಎಫ್‌ಸಿ, ಫ್ರೆಂಚ್ ಫ್ರೈಸ್, ಬರ್ಗರ್ ಸವಿಯಲು ಮಯೋನೀಸ್ ಬೇಕೆ ಬೇಕು.
ಹಾಗೆ ಮನೆಯಲ್ಲಿ ಮಾಡುವ ಕೆಲವು ಸ್ವಾದಿಷ್ಟ ಖಾದ್ಯಗಳ ಸವಿಯುವಾಗಲು ಮಯೋನೀಸ್ ಇರಬೇಕು. ಹೆಚ್ಚಾಗಿ ಪಾಸ್ತಾದಿಂದ ನೀವು ಯಾವುದಾದರು ಖಾದ್ಯ ಮಾಡಿದರೆ ಅದರ ಜೊತೆ ಮಯೋನೀಸ್ ಇರಲೇ ಬೇಕು. ಮಯೋನೀಸ್ ನೀವು ಅಂಗಡಿಯಿಂದ ಖರೀದಿಸಿ ತಂದು ಸವಿದಿರುತ್ತೀರಿ. ಆದ್ರೆ ಎಂದಾದರು ಮನೆಯಲ್ಲೇ ಮಾಡಿ ಸವಿದಿದ್ದೀರಾ?

ಮಯೋನೀಸ್ ಅನ್ನು ಮನೆಯಲ್ಲೇ ಮಾಡಿ ಯಾವುದೇ ಖಾದ್ಯದೊಂದಿಗೆ ಸವಿಯಬಹುದು. ಹಾಗೆ ಮಯೋನೀಸ್ ಸವಿಯುವುದು ಆರೋಗ್ಯದ ದೃಷ್ಟಿಯಿಂದ ಹಾನಿ ಎಂದು ತಿಳಿದಿರುತ್ತೀರಿ, ಆದ್ರೆ ಮಯೋನೀಸ್‌ನಿಂದ ಹಲವು ರೀತಿಯ ಲಾಭಗಳಿವೆ. ಅದರಲ್ಲಿನ ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಂಶ ಹೃದಯದ ಆರೋಗ್ಯಕ್ಕೆ ಉತ್ತಮ. ಆದ್ರೆ ಮಯೋನೀಸ್ ಪ್ರಮಾಣ ಹೆಚ್ಚಿನ ಪ್ರಮಾಣದಲ್ಲಿ ಸವಿಯುವುದು ಕೂಡ ಉತ್ತಮವಲ್ಲ. ಇದನ್ನು ಕೂದಲು ಚಿಕಿತ್ಸೆಯಲ್ಲೂ ಕೂಡ ಬಳಸುವುದು ನೋಡಬಹುದು.
ಹಾಗಾದ್ರೆ ನಾವಿಂದು ಮನೆಯಲ್ಲೇ ಮಯೋನೀಸ್ ಮಾಡುವುದು ಹೇಗೆ? ಮಾಡಲು ಯಾವೆಲ್ಲಾ ವಸ್ತು ಬೇಕು? ಎಷ್ಟು ಸಮಯ ಹಿಡಿಯಲಿದೆ ಎಂಬುದನ್ನು ಇಲ್ಲಿ ತಿಳಿಯೋಣ. ಮಯೋನೀಸ್‌ನಿಂದ ಆಗುವ ಹಲವು ರೀತಿಯ ಉಪಯೋಗಗಳ ಕುರಿತಾಗಿಯೂ ತಿಳಿದುಕೊಳ್ಳೋಣ. '
ಮನೆಯಲ್ಲೇ ಮಯೋನೀಸ್ ಮಾಡಲು ಯಾವೆಲ್ಲಾ ವಸ್ತುಗಳು ಬೇಕು?
- ಮೊಟ್ಟೆ- 2
- ಕಾಳು ಮೆಣಸಿನ ಪುಡಿ
- ವಿನೆಗರ್
- ಸಕ್ಕರೆ 1 ಸ್ಪೂನ್
- ಅಡುಗೆ ಎಣ್ಣೆ
- ಬೆಳ್ಳುಳ್ಳಿ
- ಉಪ್ಪು
ಮನೆಯಲ್ಲೇ ಮಯೋನೀಸ್ ಮಾಡುವುದು ಹೇಗೆ?
ಮೊದಲು ಒಂದು ಮಿಕ್ಸಿ ಜಾರ್‌ಗೆ ಮೊಟ್ಟೆಯನ್ನು ಒಡೆದು ಹಾಕಿಕೊಳ್ಳಿ. ನಂತರ ಅದಕ್ಕೆ ಚಿಕ್ಕದಾಗಿ ಕತ್ತರಿಸಿಕೊಂಡ ಬೆಳ್ಳುಳ್ಳಿ, 1 ಸ್ಪೂನ್ ಸಕ್ಕರೆ, ಉಪ್ಪು, 1 ಸ್ಪೂನ್ ವೆನಿಗರ್ ಹಾಕಿ ರುಬ್ಬಿಕೊಳ್ಳಿ. ಅರ್ಧ ನಿಮಿಷ ರುಬ್ಬಿದ ಬಳಿಕ ಮುಚ್ಚಳ ತೆಗೆದು 4 ಸ್ಪೂನ್ ಎಣ್ಣೆ ಹಾಕಿಕೊಳ್ಳಿ. ಮತ್ತೆ ಮಿಕ್ಸಿ ಆನ್ ಆಫ್ ಆಫ್ ಮಾಡುತ್ತಾ ಅರ್ಧ ನಿಮಿಷ ರುಬ್ಬಿ.
ಹಾಗೆ ಈಗ ಕಾಳು ಮೆಣಸಿನ ಪುಡಿ ಹಾಕಿ, ಮತ್ತೆ ಸ್ವಲ್ಪ ಎಣ್ಣೆ ಹಾಕಿ ರುಬ್ಬಿ. ನಂತರ ಮತ್ತೆ ಎಣ್ಣೆ ಹಾಕಿ ರುಬ್ಬಿ. 1 ನಿಮಿಷ ಆನ್ ಆಫ್ ಆನ್ ಆಫ್ ಮಾಡಿಕೊಂಡರೆ ನಿಮ್ಮ ಉಂದೆ ಮಯೋನೀಸ್ ರೆಡಿಯಾಗುತ್ತೆ. ಇದನ್ನು ಮಾಡೋದು ಬಹಳ ಸುಲಭ ಹಾಗೆ 2 ನಿಮಿಷದಲ್ಲಿ ಮಾಡಬಹುದು.
ಮಯೋನೀಸ್‌ನಿಂದ ಆಗುವ ಹಲವು ಪ್ರಯೋಜನವೇನು ಗೊತ್ತಾ?
ಮಯೋನೀಸ್ ಅನ್ನು ನೀವು ಕೇವಲ ವೆಜ್ ಅಥವಾ ನಾನ್ ವೆಜ್ ಖಾದ್ಯಗಳ ಜೊತೆಗೆ ಸವಿಯಬಹುದು ಎಂದುಕೊಂಡಿರಬಹುದು. ಆದ್ರೆ ಇದರ ಹಲವು ರೀತಿಯ ಲಾಭಗಳಿವೆ. ಕೆಲವರು ಇದೇ ಮಯೋನೀಸ್ ಅನ್ನು ಕೂದಲು ನಯವಾಗಲು ಬಳಸುತ್ತಾರೆ. ಈ ಮಯೋನೀಸ್ ಅನ್ನು ಕೂದಲಿಗೆ ಹಚ್ಚಿಕೊಂಡು ಸ್ನಾನ ಮಾಡುವುದು ನೋಡಬಹುದು.
ಸ್ಟೇನ್‌ಲೆಸ್ ಸ್ಟೀಲ್‌ನಿಂದ ಫಿಂಗರ್‌ಪ್ರಿಂಟ್ ಸ್ವಚ್ಛಗೊಳಿಸಿ
ನಿಮ್ಮ ಮನೆಯಲ್ಲಿನ ಅಲಂಕಾರಿಕಾ ವಸ್ತುಗಳು, ಫ್ರಿಡ್ಜ್ ಅಥವಾ ಸ್ಟೈನ್ ಲೆಸ್ ಸ್ಟೀಲ್‌ನ ಮೇಲೆ ಬೆರಳುಗಳ ಅಚ್ಚು ಬಿದ್ದಿದ್ದರೆ ಅದನ್ನು ತೆಗೆಯಲು ಮಯೋನೀಸ್ ಅನ್ನು ನಯವಾಗಿ ಹಚ್ಚಿ ಬಳಿಕ ಶುದ್ಧ ಬಟ್ಟೆಯಿಂದ ಒರೆಸಿದರೆ ಹೊಳೆಯುವಂತಾಗಲಿದೆ.
ಗೋಡೆಗಳ ಮೇಲಿನ ಗಣ್ಣದ ಕಲೆಗಳು
ಮನೆಯಲ್ಲಿ ಮಕ್ಕಳು ಗೋಡೆಯ ಮೇಲೆ ಕ್ರಯೋನ್ ಗಳಿಂದ ಅಥವಾ ಬಣ್ಣಗಳಿಂದ ಚಿತ್ರಗಳ ಬಿಡಿಸಿದ್ದರೆ ಈ ಮಯೋನೀಸ್ ಅನ್ನು ಅದರ ಮೇಲೆ ಹಚ್ಚಿ ಚೆನ್ನಾಗಿ ಉಜ್ಜಿದರೆ ಅದರ ಕಲೆಗಳು ನಿವಾರಣೆಯಾಗಲಿದೆ.



Click it and Unblock the Notifications
