Latest Updates
-
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI!
ಪ್ಯಾಕೆಟ್ ಹಾಲಿನಿಂದ ಮನೆಯಲ್ಲಿ ಮೊಸರು ಮಾಡೋದು ಹೇಗೆ? ಈ ಟಿಪ್ಸ್ ಗೊತ್ತಾ?
ಮನೆಯಲ್ಲಿ ಊಟದ ಜೊತೆಗೆ ಮೊಸರು ಇದ್ದರೆ ಕೆಲವರ ಊಟ ಪೂರ್ಣವಾಗುತ್ತೆ. ಗಟ್ಟಿ ಮೊಸರು ಹಾಕಿಕೊಂಡು ಊಟ ಮಾಡುವುದು ಉತ್ತಮ ಅಭ್ಯಾಸವೂ ಹೌದು. ಮೊಸರು ಸೇವಿಸುವುದು ನಿಮ್ಮ ಕರುಳಿನ ಆರೋಗ್ಯಕ್ಕೆ ಬಹಳ ಉತ್ತಮ ಎಂದು ನೀವು ಕೂಡ ಕೇಳಿರುತ್ತೀರಿ. ಆದ್ರೆ ಅಂಗಡಿಯಿಂದ ತರುವ ಮೊಸರಿಗಿಂತಲು ಮನೆಯಲ್ಲೇ ಮಾಡಿ ಸವಿಯಬಹುದಾದ ಮೊಸರು ಬಹಳ ರುಚಿ ನೀಡಲಿದೆ.
ಆದ್ರೆ ಮನೆಯಲ್ಲಿ ಮೊಸರು ಮಾಡುವುದು ಅಂದ್ರೆ ಕೆಲವರಿಗೆ ದೊಡ್ಡ ಕೆಲಸ ಎನಿಸಬಹುದು. ಹಾಗೆ ಪ್ಯಾಕೆಟ್ ಹಾಲಿನಿಂದಲೂ ಅದ್ಭುತವಾಗಿ ಮೊಸರು ಮಾಡಬಹುದು ಎಂಬುದು ಹಲವರಿಗೆ ತಿಳಿದಿರುವುದಿಲ್ಲ. ಹೌದು ಅಂಗಡಿ ಹಾಲಿನಿಂದ ಮನೆಯಲ್ಲಿ ಮೊಸರು ಮಾಡಬಹುದು. ಮನೆಯಲ್ಲಿ ಮಾಡಿದ ಮೊಸರು ಅದ್ಭುತ ರುಚಿ ಹಾಗೆ ಆರೋಗ್ಯಕ್ಕೂ ಬಹಳ ಉತ್ತಮ.

ಹಾಗಾದ್ರೆ ಪ್ಯಾಕೆಟ್ ಹಾಲಿನಲ್ಲಿ ಮೊಸರು ಮಾಡುವುದು ಹೇಗೆ? ಅನ್ನೋದನ್ನು ನಾವಿಂದು ತಿಳಿದುಕೊಳ್ಳೋಣ. ಪ್ಯಾಕೆಟ್ ಹಾಲಿನಿಂದ ಮೊಸರು ಮಾಡುವ ವಿಧಾನ ತಿಳಿದುಕೊಳ್ಳಿ. ಅದ್ರಲ್ಲೂ ಮನೆಯಲ್ಲಿ ಹಾಲು ಹೆಚ್ಚಾಗಿ ಉಳಿಸಿದ್ದರೆ ಅದರಿಂದ ಮೊಸರು ಮಾಡಿಟ್ಟುಕೊಳ್ಳುವುದು ಉತ್ತಮ.
ಪ್ಯಾಕೆಟ್ ಹಾಲಿನಿಂದ ಮೊಸರು ಮಾಡುವುದು ಹೇಗೆ?
ಮೊದಲು ಹಾಲನ್ನು ನೀರು ಬಳಸದೆಯೇ ಒಲೆ ಮೇಲೆ ಇಟ್ಟು ಕುದಿಸಬೇಕು. ಹಾಲು ಚೆನ್ನಾಗಿ ಕುದಿಯಬೇಕು. ಹಾಲು ಕುದಿಬಂದ ಬಳಿಕ ಅದು ಕೆನೆಯಾಗಬೇಕು. ಈ ರೀತಿ ಕುದಿ ಬಂದ ಹಾಲನ್ನು ಮತ್ತೊಂದು ಪಾತ್ರೆಗೆ ಹಾಕಿಕೊಳ್ಳಿ. ಈಗ 4ರಿಂದ 5 ಸ್ಪೂನ್ ಅಷ್ಟು ಮನೆಯಲ್ಲಿನ ಮಜ್ಜಿಗೆಯನ್ನು ಈ ಹಾಲಿಗೆ ಹಾಕಿಕೊಡು ಒಮ್ಮೆ ಮಿಕ್ಸ್ ಮಾಡಿಕೊಂಡು ಮುಚ್ಚಳ ಮುಚ್ಚಿ ಇಡಿ.
ಹೀಗೆ ಮುಚ್ಚಿ ಸುಮಾರು 6ರಿಂದ 7 ಗಂಟೆಗಳ ಕಾಲ ಬಿಟ್ಟರೆ ಮೊಸರು ಸವಿಯಲು ಸಿದ್ದವಾಗುತ್ತದೆ. ನೀವು ಎಷ್ಟು ಪ್ರಮಾಣದ ಹಾಲನ್ನು ಬೇಕಾದರು ಬಳಸಬಹುದು. ಹಾಗೆ ಮಜ್ಜಿಗೆಯನ್ನು ಕೂಡ ಅಳತೆಯಷ್ಟೇ ಬಳಸಿ ಹೆಚ್ಚು ಮಜ್ಜಿಗೆ ಬಳಸಿದರೆ ಈ ಮೊಸರು ಸ್ವಲ್ಪ ಹುಳಿಯಾಗಬಹುದು. ಹೀಗಾಗಿ ಸುಲಭವಾಗಿ ಈ ರೀತಿಯಾಗಿ ಮಜ್ಜಿಗೆಯನ್ನು ಮಾಡಿ ಸವಿಯಬಹುದು. ನೀವು ಕೂಡ ಈ ಮೊಸರು ಮಾಡಿ ಸವಿದು ನೋಡಿ.
ಗಟ್ಟಿ ಮೊಸರು ಮಾಡೋದು ಹೇಗೆ?
ಇನ್ನು ಹಾಲು ಬಳಸಿ ಈ ರೀತಿಯಾಗಿ ಮೊಸರು ಮಾಡಿಕೊಳ್ಳುವುದು ನೋಡಿದ್ದೀರಿ. ಆದ್ರೆ ಮನೆಯಲ್ಲೇ ಗಟ್ಟಿ ಮೊಸರು ಮಾಡಿಕೊಳ್ಳುವುದು ಹೇಗೆ ಅನ್ನೋದು ನಿಮಗೆ ಗೊತ್ತಾ? ಮೊದಲು ಒಲೆ ಮೇಲೆ ಹಾಲಿಟ್ಟು ಚೆನ್ನಾಗಿ ಕುದಿಬರಲು ಬಿಡಬೇಕು, ಹಾಲು ಉಕ್ಕುವ ಸಮಯಕ್ಕೆ ಒಲೆ ಆಫ್ ಮಾಡಿಕೊಳ್ಳಿ. ಹಾಲು ಚೆನ್ನಾಗಿ ಕಾದಿರಬೇಕು. ಸಣ್ಣ ಉರಿಯಲ್ಲಿ ಹಾಲು ಬಿಸಿಯಾಗಬೇಕು. ಈಗ ಹಾಲು ತಣ್ಣಗಾಗಲು ಬಿಡಿ. ತಣ್ಣಗಾದ ಬಳಿಕ ಈಗ ಇದಕ್ಕೆ ಒಂದು ಸ್ಪೂನ್ ಮೊಸರನ್ನು ಹಾಕಿಕೊಳ್ಳಿ. ಈಗ ಇದೆರಡು ಬೆರೆಯುವಂತೆ ಚೆನ್ನಾಗಿ ಮಿಕ್ಸ್ ಮಾಡಿಕೊಳ್ಳಿ.
ಈಗ ಒಂದು ಪಾತ್ರೆಗೆ ಹಾಲನ್ನು ಹಾಕಿಕೊಂಡು ಮುಚ್ಚಿಡಬೇಕು. ಸುಮಾರು 8 ಗಂಟೆಯಾದರು ಹಾಗೆ ಮುಚ್ಚಿಡಬೇಕು. ರಾತ್ರಿ ಮಾಡಿ ಇಟ್ಟರೆ ಬಹಳ ಉತ್ತಮ. ಇಷ್ಟಾದರೆ ಬೆಳಗ್ಗೆ ನಿಮಗೆ ಗಟ್ಟಿ ಮೊಸರು ಸಿಗುತ್ತದೆ. ಒಂದು ವೇಳೆ ನಿಮ್ಮಲ್ಲಿ ಮಣ್ಣಿನ ಮಡಿಕೆ ಇದ್ದರೆ ಅದರಲ್ಲಿ ಗಟ್ಟಿ ಮೊಸರು ಮಾಡಿ ನೋಡಿ. ಬಹಳ ಸುಲಭವಾಗಿ ಹಾಗೆ ಬಹಳ ಗಟ್ಟಿಯಾದ ಮೊಸರು ನಿಮಗೆ ಸಿಗಿದೆ. ನೀವು ಕೂಡ ಒಮ್ಮೆ ಇದನ್ನು ಟ್ರೈ ಮಾಡಿ ನೋಡಿ. ಗಟ್ಟಿ ಮೊಸರು ಊಟಕ್ಕಿದ್ದರೆ ಆ ರುಚಿಗೆ ನೀವು ಫಿದಾ ಆಗುತ್ತೀರಿ. ನೀವು ಸಹ ಪ್ಯಾಕೆಟ್ ಹಾಲಿನಿಂದ ಈ ರೀತಿ ಗಟ್ಟಿ ಮೊಸರು ಮಾಡಿ ನೋಡಿ.



Click it and Unblock the Notifications
