Latest Updates
-
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ?
ಪ್ಯಾಕೆಟ್ ಹಾಲಿನಲ್ಲಿ ಬೆಣ್ಣೆ: ಒಂದು ತಿಂಗಳಲ್ಲಿ ಕೆ.ಜಿ ಬೆಣ್ಣೆ ತೆಗೆಯೋ ಸೀಕ್ರೆಟ್ ಇಲ್ಲಿದೆ!
ನೀವು ಬೆಳಗ್ಗೆ ತಿಂಡಿಯನ್ನು ಮಾಡುವಾಗ ಹಾಗೆ ಹಲವು ಖಾದ್ಯಗಳನ್ನು ತಯಾರಿಸುವಾಗ ಬೆಣ್ಣೆಯನ್ನು ಬಳಸುವುದು ಸಾಮಾನ್ಯ. ಎಣ್ಣೆಯ ಬಳಕೆ ಕಡಿಮೆ ಮಾಡಿ ಬೆಣ್ಣಯನ್ನು ಅಡುಗೆಯಲ್ಲಿ ಹೆಚ್ಚಾಗಿ ಬಳಸುವುದು ಕೂಡ ನಾವು ನೋಡಬಹುದು. ಇದನ್ನು ಮಿತವಾಗಿ ಬಳಸುವುದು ಆರೋಗ್ಯದ ದೃಷ್ಟಿಯಿಂದ ಬಹಳ ಉತ್ತಮ. ಹಾಗೆ ಬೆಣ್ಣೆಯಿಂದ ಹಲವು ರೀತಿಯ ರುಚಿ ರುಚಿಯ ಖಾದ್ಯ ಮಾಡಿ ಸವಿಯುವುದು ಸಹ ನಾವು ನೋಡಬಹುದು.
ಇನ್ನು ಬೆಣ್ಣೆಯನ್ನು ನೀವು ಖರೀದಿಸಿ ತರುವುದೇ ಹೆಚ್ಚು. ಅದನ್ನು ಫ್ರಿಡ್ಜ್‌ನಲ್ಲಿ ತಿಂಗಳ ಕಾಲ ಇಟ್ಟು ಸವಿಯಬಹುದು. ಹಾಗೆ ಬೆಣ್ಣೆಯು ಗಟ್ಟಿಯಾದ ಮಾದರಿಯಲ್ಲಿ ಸಿಗುವುದರಿಂದ ನೈಜ ಬೆಣ್ಣೆಯ ರುಚಿ ಸವಿಯಲು ನಿಮಗೆ ಸಿಗೋದಿಲ್ಲ. ಹೀಗಾಗಿ ಅಂಗಡಿಯಲ್ಲಿ ಸಿಗುವ ಬೆಣ್ಣೆ ಹೆಚ್ಚು ರುಚಿಯಾಗಿದೆ ಎನಿಸೋದಿಲ್ಲ.

ಆದ್ರೆ ನೀವು ನಿತ್ಯ ಹಾಲನ್ನು ಖರೀದಿಸಿ ತರುತ್ತಿದ್ದರೆ ಅದರಿಂದ ಕೂಡ ಬೆಣ್ಣೆ ಮಾಡಿ ಸವಿಯಬಹುದು ಎಂಬುದು ನಿಮಗೆ ಗೊತ್ತಾ? ಹೌದು ನೀವು ಖರೀದಿಸಿ ತರುವಂತಹ ನಂದಿನಿ ಹಾಲಿನ ಪ್ಯಾಕ್‌ನಿಂದಲೂ ನಾವು ಬೆಣ್ಣೆ ತೆಗೆಯಬಹುದು. ಮನೆಯಲ್ಲಿ ಸುಲಭವಾಗಿ ಕೆ.ಜಿಗೂ ಅಧಿಕ ಬೆಣ್ಣೆ ಮಾಡಬಹುದು. ಹಾಗಾದ್ರೆ ಪ್ಯಾಕೆಟ್ ಹಾಲಿನಿಂದ ಬೆಣ್ಣೆ ತೆಗೆಯುವುದು ಹೇಗೆ? ಯಾವ ವಿಧಾನ ಬಳಸಿ ಬೆಣ್ಣೆ ಮಾಡಬಹುದು ಎಂಬುದನ್ನು ನಾವಿಂದು ತಿಳಿದುಕೊಳ್ಳೋಣ.
ಮೊದಲು ಇದಕ್ಕೆ ನಂದಿನಿ ದಪ್ಪ ಹಾಲು ಬೇಕಾಗುತ್ತದೆ. ಅಂದರೆ ಇದಕ್ಕೆ ನೀಲಿ ಪ್ಯಾಕೆಟ್‌ನಲ್ಲಿ ಬರುವ ಹಾಲು ಬಳಸಬೇಡಿ. ಇದರಲ್ಲಿ ಕಡಿಮೆ ಕೆನೆ ಬರುತ್ತದೆ. ಬೆಣ್ಣೆ ಮಾಡಲು ಕೆಂಪು ಬಣ್ಣದ ಅಥವಾ ಶುಭಂ, ಹೋಮೋಜಿನೈಸ್ಡ್ ಹಾಲು ಬಳಸಬೇಕು. ನೀವು ಅರ್ಧ ಲೀಟರ್ ಅಥವಾ ಅದಕ್ಕಿಂತ ಹೆಚ್ಚಿನ ಪ್ರಮಾಣದ ಹಾಲನ್ನು ಬಳಸಿ ಬೆಣ್ಣೆ ತೆಗೆಯಬಹುದು.
ಮೊದಲು ಹಾಲನ್ನು ಪಾತ್ರೆಗೆ ಹಾಕಿ ಒಲೆ ಮೇಲಿಟ್ಟು ಕುದಿಯಲು ಬಿಡಬೇಕು. ಇದಕ್ಕೆ ನೀರು ಹಾಕದೆ ಕುದಿಸಬೇಕು. ಕುದಿಬರುವ ಮುನ್ನ ಒಮ್ಮೆ ಹಾಲನ್ನು ಮಿಕ್ಸ್ ಮಾಡಬೇಕು. ಹಾಲು ಕುದಿಬರಲು ಆರಂಭಿಸಿದಾಗ ಸಣ್ಣ ಉರಿಯಲ್ಲಿ ಇಟ್ಟು ಮತ್ತೆ 5 ನಿಮಿಷ ಕುದಿಬರಲು ಬಿಡಬೇಕು. ನಂತರ ಒಲೆ ಆಫ್ ಮಾಡಿ ಕೆಳಗೆ ಇಳಿಸಿಕೊಂಡು ತಣ್ಣಗಾಗಲು ಬಿಡಿ.
ಸ್ವಲ್ಪ ತಣ್ಣದಾಗ ಬಳಿಕ ಇದನ್ನು ಮುಕ್ಕಾಲು ಭಾಗ ಮುಚ್ಚಳದಿಂದ ಮುಚ್ಚಿ ಫ್ರಿಡ್ಜ್‌ನಲ್ಲಿಡಿ. ಸುಮಾರು 6ರಿಂದ 7 ಗಂಟೆಗಳ ಕಾಲ ಫ್ರಿಡ್ಜ್‌ನಲ್ಲಿ ಇಡಬೇಕು. ಅದರಲ್ಲಿ ಕೆನೆ ಬರಲು ಆರಂಭಿಸಿದಾಗ ಯಾವುದೇ ಕಾರಣಕ್ಕೂ ಕೆನೆಯನ್ನು ಅಲುಗಾಡಿಸುವುದು, ಮಿಕ್ಸ್ ಮಾಡುವ ಕೆಲಸ ಮಾಡಬೇಡಿ. ಹಾಲು ತೆಗೆಯುವಾಗ ನಿಧಾನವಾಗಿ ಇಂದು ಬದಿಯಲ್ಲಿ ಮಾತ್ರವೇ ಹಾಲನ್ನು ತೆಗೆದು ಕೆನೆಯನ್ನು ಹಾಗೆಯೇ ಬಿಡಿ.
ನಂತರ ದಪ್ಪವಾಗಿ ಬಂದಿರುವ ಕೆನೆಯನ್ನು ನಿಧಾನವಾಗಿ ತೆಗೆದು ಒಂದು ಡಬ್ಬಿಯಲ್ಲಿ ಹಾಕಿ ಫ್ರಿಡ್ಜ್‌ನಲ್ಲಿ ಇಡಬೇಕು. ಇದೇ ರೀತಿ ಒಂದು ತಿಂಗಳ ಕಾಲ ಕೆನೆಯನ್ನು ಹಾಲಿನಿಂದ ಬೇರ್ಪಡಿಸಿ ಈ ಡಬ್ಬಿಯಲ್ಲಿ ತುಂಬಿಸುವ ಕೆಲಸ ಮಾಡಿ. ಒಂದು ತಿಂಗಳಿಗೆ ಬಹಳಷ್ಟು ಕೆನೆ ಸಂಗ್ರಹವಾಗಿರುತ್ತದೆ.
ಬೆಣ್ಣೆ ಮಾಡುವ ವಿಧಾನವೇನು?
ಈಗ ನೀವು ಸಂಗ್ರಹಿಸಿಟ್ಟಿರುವ ಕೆನೆಯನ್ನು ತೆಗೆದುಕೊಳ್ಳಿ. ಒಂದು ದೊಡ್ಡ ಪಾತ್ರೆಯಲ್ಲಿ ಎಲ್ಲವನ್ನು ಹಾಕಿ ಪಾತ್ರೆಯ ತಳದಲ್ಲಿ 2ರಿಂದ 3 ಸ್ಪೂನ್ ಮೊಸರು ಹಾಕಿ. ನಂತರ ಎಲ್ಲಾ ಕೆನೆ ಇದಕ್ಕೆ ಹಾಕಿ. ನಂತರ ಇದನ್ನು 1 ಗಂಟೆ ಹಾಗೆಯೆ ಬಿಡಿ. ಈಗ ಈ ಕೆನೆ ಮುಚ್ಚುವಷ್ಟು ನೀರು ಹಾಕಿಕೊಂಡು ಸೌಟಿನಿಂದ ಮಿಕ್ಸ್ ಮಾಡಿಕೊಳ್ಳಿ. ಸ್ವಲ್ಪ ತೆಳುವಾಗಬೇಕು. ಈಗ ಕುಡುಗೂಲಿನ ರೀತಿಯಲ್ಲಿ ಮಿಕ್ಸರ್ ಬಳಸಿಕೊಂಡು ತಿರುಗಿಸಿಕೊಳ್ಳುತ್ತಾ ಇರಬೇಕು.
ಸುಮಾರು 15ರಿಂದ 20 ನಿಮಿಷ ಮಿಕ್ಸ್ ಮಾಡಿಕೊಳ್ಳುತ್ತಾ ಇದ್ದರೆ ಬೆಣ್ಣೆ ಬರಲು ಆರಂಭಿಸುತ್ತದೆ. ನಂತರ ಕೈ ನೆನೆಸಿಕೊಂಡು ಬೆಣ್ಣೆಯನ್ನು ನಿಧಾನವಾಗಿ ತೆಗೆದು ಉಂಡೆ ಕಟ್ಟಿಕೊಳ್ಳಿ. ಇಷ್ಟಾದರೆ ನಿಮ್ಮ ಮುಂದೆ ಬೆಣ್ಣೆ ಮುದ್ದೆ ರೆಡಿಯಾಗಿರುತ್ತದೆ. ನೀವು ಸಹ ಈ ಪ್ಯಾಕೆಟ್ ಹಾಲಿನಲ್ಲಿ ಬೆಣ್ಣೆ ಮಾಡಬಹುದು. ಈ ಬೆಣ್ಣೆಯನ್ನು ಫ್ರಿಡ್ಜ್‌ನಲ್ಲಿ ಇಟ್ಟು 1ವಾರದೊಳಗೆ ಇದನ್ನು ತುಪ್ಪ ಮಾಡಿಕೊಳ್ಳಿ.



Click it and Unblock the Notifications
