Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಫ್ರಿಡ್ಜ್‌ನಲ್ಲಿ ಸೊಪ್ಪಿಟ್ಟರೆ ಬೇಗನೆ ಹಾಳಾಗುತ್ತದೆ ಅಲ್ವಾ? ಹೀಗೆ ಇಟ್ಟರೆ ತುಂಬಾನೇ ಫ್ರೆಷ್ ಆಗಿರುತ್ತೆ!
ಫ್ರಿಡ್ಜ್‌ನಲ್ಲಿ ಇತರ ತರಕಾರಿ ಇಡಬಹುದು, ಆದರೆ ಸೊಪ್ಪು ಇಟ್ಟರೆ ಮಾರನೆಯ ದಿನಕ್ಕೆ ಅದರ ಫ್ರೆಷ್‌ನೆಸ್ ಹೋಗಿರುತ್ತದೆ, ಎರಡು ದಿನವಿಟ್ಟಾ ಕೊಳೆತ ರೀತಿಯಾಗುವುದು ಬಳಕೆ ಮಾಡಲು ಸಾಧ್ಯವೇ ಇಲ್ಲ.
ಅರಿವೆ ಸೊಪ್ಪು, ಪಾಲಾಕ್ ಸೊಪ್ಪು, ದಂಟಿನ ಸೊಪ್ಪು ಈ ರೀತಿ ಸಾರು, ಪಲ್ಯದ ಸೊಪ್ಪು ಇಟ್ಟಾಗ ಈ ರೀತಿಯಾಗುವುದು. ಇದನ್ನು ವಾರದವರೆಗೆ ಇಡುವ ಟಿಪ್ಸ್ ನೀಡಲಾಗಿದೆ.
ಇನ್ನು ಕೊತ್ತಂಬರಿ, ಪುದೀನಾ, ಕರಿಬೇವು ಕೂಡ ಹಾಗೆಯೇ ಇಟ್ಟರೆ ಒಂದರಿಂದ ಎರಡು ದಿನ ಇಡಬಹುದು, ಅದರೆ ನೀವು ಕೆಲವೊಂದು ಟಿಪ್ಸ್ ಬಳಸಿ ಇಟ್ಟರೆ ಒಂದು ತಿಂಗಳು ಹಾಗೆಯೇ ಇರುತ್ತದೆ, ಬನ್ನಿ ಸೊಪ್ಪನ್ನು ಫ್ರಿಡ್ಜ್‌ನಲ್ಲಿ ಹೇಗಿಡಬೇಕು ಎಂದು ನೋಡೋಣ ಬನ್ನಿ:

ಗಾಳಿ ತುಂಬಿ ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಇಡಬೇಕು
ಹೌದು ಈ ಐಡಿಯಾ ಬಹುಶಃ ಗೊತ್ತಿರುವುದಿಲ್ಲ, ಆದರೆ ಇದು ನಿಜ ಕೂಡ, ನೀವು ಪ್ಲಾಸ್ಟಿಕ್ ಬ್ಯಾಗ್‌ನಲ್ಲಿ ಸೊಪ್ಪನ್ನು ಇಟ್ಟು ನಿಮ್ಮ ಬಾಯಿಂದ ಊದಿ ಗಾಳಿ ತುಂಬಿ ತಕ್ಷಣ ಗಂಟು ಹಾಕಿ ಇಡಿ. ನೀವು ಕಾರ್ಬಾನ್ ಡೈಯಾಕ್ಸೈಡ್ (ಇಂಗಾಲದ ಡಯಾಕ್ಸೈಡ್ ಇರುವುದರಿಂದ ಅದನ್ನು ಹೀರಿಕೊಳ್ಳುತ್ತದೆ 3-4 ದಿನ ಹೇಗೆ ಇಟ್ಟಿದ್ದೀರೋ ಅದೇ ರೀತಿ ಇರುತ್ತದೆ. ಈ ಐಡಿಯಾ ಖಂಡಿತ ವರ್ಕ್ ಆಗುತ್ತೆ ನೋಡಿ. ಟ್ರೈ ಮಾಡಿ ನಿಮಗೆ ತುಂಬಾನೇ ಖುಷಿಯಾಗುತ್ತೆ.
ಪೇಪರ್‌ನಲ್ಲಿ ಹಾಕಿ ಪ್ಲಾಸ್ಟಿಕ್ ಬ್ಯಾಗ್ ಅಥವಾ ಡಬ್ಬದಲ್ಲಿ ಹಾಕಿಡಿ
ನೀವು ಸೊಪ್ಪನ್ನು ಸೋಸಿ ತೊಳೆದು ಒಂದು ಪ್ಲಾಸ್ಟಿಕ್ ಕವರ್‌ನಲ್ಲಿ ಹಾಕಿ ಡಬ್ಬದಲ್ಲಿ ಹಾಕಿಟ್ಟರೆ ಸೊಪ್ಪು ಒಂದೆರಡು ದಿನ ಫ್ರೆಷ್ ಆಗಿರುತ್ತದೆ. ನೀವು ಸೊಪ್ಪು ತೊಳೆದು ಇಡುವ ಮುನ್ನ ಅದನ್ನು ಕಾಟನ್ ಬಟ್ಟೆಯಿಂದ ಒತ್ತಿ ಇಡಿ, ನೀರಿನಂಶ ಹಾಗೆಯೇ ಇರುವಂತೆ ಇಡಬೇಡಿ. ನೀರಿನಂಶ ಇದ್ದರೆ ಸೊಪ್ಪು ಅದರ ತಾಜಾತನ ಕಳೆದುಕೊಳ್ಳುತ್ತದೆ.
ಬಟ್ಟೆಯಲ್ಲಿ ಸುತ್ತಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ
ನೀವು ಪೇಪರ್ ಅಥವಾ ಬಟ್ಟೆಯಲ್ಲಿ ಸುತ್ತಿ ಗಾಳಿಯಾಡದ ಡಬ್ಬದಲ್ಲಿ ಹಾಕಿಡಿ. ನಂತರ ಅದರ ಮೇಲೆ ಮತ್ತೊಂದು ಬಟ್ಟೆ ಸುತ್ತಿಡಿ, ಹೀಗೆ ಮಾಡುವುದರಿಂದ ಸೊಪ್ಪು ತುಂಬಾನೇ ಫ್ರೆಷ್ ಆಗಿರುತ್ತದೆ.
ಸೊಪ್ಪಿನಲ್ಲಿರುವ ನೀರಿನಂಶ ತೆಗೆಯಿರಿ
ನೀವು ಸೊಪ್ಪನ್ನು ತೊಳೆದು ಹಾಗೆಯೇ ಇಡಬೇಡಿ, ಅದನ್ನು ಚೆನ್ನಾಗಿ ತೊಳೆದು ನೀರು ಹೋಗಲು ನೀರು ಹೋಗುವ ಬುಟ್ಟಿಯಲ್ಲಿ ಹಾಕಿಡಿ. ನಂತರ ಮೆಲ್ಲನೆ ಕಾಟನ್ ಬಟ್ಟೆಯಿಂದ ಒತ್ತಿ ಪೇಪರ್‌ನಲ್ಲಿ ಕವರ್ ಮಾಡಿ ಡಬ್ಬದಲ್ಲಿ ಹಾಕಿಡಿ. ಹೀಗೆ ಡಬ್ಬದಲ್ಲಿ ಹಾಕಿಟ್ಟರೆ ನೀವು ತುಂಬಾ ಸಮಯ ಬಲಸಬಹುದು.
ಕೊತ್ತಂಬರಿ ಸೊಪ್ಪು ತಿಂಗಳವರೆಗೆ ಇಡಬಹುದು
ನೀವು ಕೊತ್ತಂಬರಿ ಸೊಪ್ಪನ್ನು ಕ್ಲೀನ್ ಮಾಡಿ ತೊಳೆದು ನೀರಿನಂಶ ಹೋಗಲು ಇಡಿ, ನಂತರ ತೆಳುವಾದ ಚಿಕ್ಕ ಕಾಟನ್ ಬ್ಯಾಗ್‌ನಲ್ಲಿ ತುಂಬಿ ಸ್ಟೀಲ್ ಡಬ್ಬದಲ್ಲಿ ಹಾಕಿ ಫ್ರಿಡ್ಜ್‌ನಲ್ಲಿಡಿ, ತಿಂಗಳವರೆಗೆ ಇಡಬಹುದು.
ಪುದೀನಾ ಹಾಗೂ ಕೊತ್ತಂಬರಿ ಸೊಪ್ಪನ್ನು ಇದೇ ರೀತಿ ಡಬ್ಬದಲ್ಲಿ ಹಾಕಿಡಿ. ಇವುಗಳನ್ನು ನೀವು ತಿಂಗಳವರೆಗೆ ಫ್ರೆಷ್ ಆಗಿ ಬಳಸಬಹುದು.
- ಈ ರೀತಿ ಇಡುವುದರಿಂದ ನೀವು ಮಾರ್ಕೆಟ್‌ಗೆ ಹೋದಾಗ ಒಮ್ಮೆ ತಂದರೆ ಸಾಕು. ಸೊಪ್ಪು ತರುವುದಕ್ಕೆ ಆಗಾಗ ಮಾರುಕಟ್ಟೆಗೆ ಹೋಗಬೇಕಾಗಿಲ್ಲ.
- ಅಲ್ಲದೆ ಫ್ರೀ ಇದ್ದಾಗ ನೀವು ಸೊಪ್ಪು ಕ್ಲೀನ್ ಮಾಡಿ ಫ್ರಿಡ್ಜ್‌ನಲ್ಲಿ ಇಟ್ಟರೆ ನಿಮಗೆ ಆಫೀಸ್‌ಗೆ ಹೋಗುವಾಗ ಸುಲಭವಾಗಿ ಅಡುಗೆ ಮಾಡಬಹುದು.
- ಅದರಲ್ಲು ಆಗಷ್ಟೇ ಕಿತ್ತ ಅಥವಾ ಕಿತ್ತು ಒಂದು ದಿನವಾಗಿರದ ಸೊಪ್ಪು ತಂದು ಫ್ರಿಡ್ಜ್‌ನಲ್ಲಿ ಇಡಿ.



Click it and Unblock the Notifications
