Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ರೇಷ್ಮೆ ಸೀರೆ ಹಾಳಾಗದಂತೆ ವರ್ಷಗಳ ಕಾಲ ಬಾಳಿಕೆ ಬರುವಂತೆ ಇಡುವುದು ಹೇಗೆ? ಇಲ್ಲಿದೆ ಟಿಪ್ಸ್
ಮಹಿಳೆಯರ ಸೌಂದರ್ಯ ಹೆಚ್ಚಿಸುವ ವಸ್ತುಗಳಲ್ಲಿ ಸೀರೆ ಕೂಡ ಒಂದು. ಸೀರೆ ಅಂದ್ರೆ ಯುವತಿಯರು, ಮಹಿಳೆಯರಿಗೆ ಅಚ್ಚು ಮೆಚ್ಚು. ಸೀರೆ ಉಟ್ಟರೆ ಮಹಿಳೆಯ ಸೌಂದರ್ಯ ದುಪ್ಪಟ್ಟಾಗುತ್ತೆ. ಹಾಗೆ ಸೀರೆಗೂ ಮೆರುಗು ಬರುತ್ತದೆ. ಹಾಗೆ ರೇಷ್ಮೆ ಸೀರೆಗಳು ಅಂದರೆ ಮಹಿಳೆಯರ ಫೇವರಿಟ್. ಮೈಸೂರು ರೇಷ್ಮೆಗೆ ಸೀರೆ ಲಕ್ಷ ರೂಪಾಯಿಗೂ ಅಧಿಕ ಬೆಲೆ ಇದೆ.
ಆದರೆ ರೇಷ್ಮೆ ಸೀರೆಗಳನ್ನು ಒಂದು ಹೆಚ್ಚು ವರ್ಷಗಳ ಕಾಲ ಇಡುವುದೇ ದೊಡ್ಡ ಸವಾಲು. ಏಕೆಂದರೆ ರೇಷ್ಮೆ ಸೀರೆಗಳನ್ನ ಬಹಳ ದಿನಗಳ ಕಾಲ ಒಂದೇ ಕಡೆ ಇಡುವುದರಿಂದ ಬೇಗ ಹಾಲಾಗುತ್ತದೆ. ವಾತಾವರಣದಲ್ಲಿ ಬದಲಾವಣೆಯಾದಂತೆ ಈ ಸೀರೆಗಳ ಬಣ್ಣ, ರೇಷ್ಮೆಯ ರಚನೆಯಲ್ಲಿ ಬದಲಾಗುತ್ತದೆ. ಆದ್ರೆ ಇವು ಬಹುಕಾಲ ಉಳಿಯಬೇಕಾದ ಸಂಪತ್ತಿನಂತೆ ಮಹಿಳೆಯರು ಅದರ ಜೋಪಾನ ಮಾಡುತ್ತಾರೆ.

ಅದರಲ್ಲೂ ಹಿರಿಯರು ನೀಡಿರುವ ರೇಷ್ಮೆ ಸೀರೆಗಳನ್ನು ಉಡುವುದು ಹಾಗಿರಲಿ ಅದನ್ನು ಕಾಪಾಡಿಕೊಳ್ಳುವುದೇ ಸವಾಲಾಗಿರುತ್ತದೆ. ಎಲ್ಲಿ ಇಡಬೇಕು. ಎಷ್ಟು ಜೋಪಾನ ಮಾಡವೇಕು ಎನ್ನುದುದು ದೊಡ್ಡ ಸವಾಲು. ಏಕೆಂದರೆ ಎಲ್ಲಿಯಾದರು ಅಪ್ಪಿ ತಪ್ಪಿ ಕಲೆಗಳಾದರೆ, ನೀರು ತಾಕಿದರೆ, ಬೆವರು, ಮಣ್ಣು, ಕಲೆಗಳು ಹಿಡಿದರೆ ಅದನ್ಉ ಬಿಡಿಸುವುದು ಕಷ್ಟ ಹಾಗೆ ಸೀರೆಯೂ ಹಾಳಾಗುತ್ತದೆ.
ಆದ್ರೆ ಈ ಸೀರೆಗಳು ಎಷ್ಟೇ ಹಳೆಯದಾದರು ಅದರ ಬೆಲೆ ಕಡಿಮೆಯಾಗುವುದಿಲ್ಲ. ಹಾಗೆ ಅದರ ಶ್ರೇಷ್ಠತೆ, ಸೌಂದರ್ಯ ಮಾಸುವುದೇ ಇಲ್ಲ. ಹೀಗಾಗಿ ಈ ರೇಷ್ಮೆ ಸೀರೆಗಳಿಗೆ ಅಷ್ಟೊಂದು ಮಹತ್ವವಿದೆ. ಕೆಲವರು ಹಬ್ಬಗಳಲ್ಲಿ, ಶುಭ ಸಮಾರಂಭಗಳಲ್ಲಿ ಈ ರೇಷ್ಮೆ ಸೀರೆ ಉಡುತ್ತಾರೆ. ಹಾಗೆ ಪೂಜೆಗಳಲ್ಲಿೂ ಈ ರೇಷ್ಮೆ ಸೀರೆ ಇಟ್ಟು ದೇವಿಗೆ ಪೂಜೆ ಮಾಡುವುದನ್ನು ನೋಡಿದ್ದೇವೆ.
ಒಮ್ಮೆ ಬಳಸಿ ಒಳಗಿಡುವ ಮುನ್ನ ಸ್ವಚ್ಛ ಮಾಡಿ
ರೇಷ್ಮೆ ಸೀರೆಗಳನ್ನು ಒಮ್ಮೆ ಉಟ್ಟುಕೊಂಡ ಬಳಿಕ ಮತ್ತೆ ಅದನ್ನು ತೊಳೆದು ಇಡಬೇಕು. ಹಾಗೆಯೇ ಇಟ್ಟರೆ ಕಲೆಗಳು ಹಿಡಿದಿದ್ದರೆ ಉಳಿದುಬಿಡುತ್ತವೆ. ಈ ರೀತಿ ಉಳಿದ ಕಲೆಗಳು ಮತ್ತೆಂದು ಬಿಡಿಸಲು ಆಗುವುದಿಲ್ಲ. ಹಾಗೆ ತೊಳೆದ ಬಳಿಕ ಮಂದ ಬಿಸಿಲಿನಲ್ಲಿ ಒಣಗಿಸಬೇಕು. ಹಸಿ ಹಸಿಯಾಗಿರುವ ಸೀರೆಯನ್ನು ಮಡಚಿ ಒಳಗೆ ಇಡಬಾರದು, ಇದರಿಂದ ಸೀರೆ ಹಾಳಾಗುತ್ತದೆ.
ಡ್ರೈ ಕ್ಲೀನಿಂಗ್
ರೇಷ್ಮೇ ಸೀರೆಗಳನ್ನು ಡ್ರೈ ಕ್ಲೀನಿಂಗ್‌ಗೆ ನೀಡುವುದು ಉತ್ತಮ. ಏಕೆಂದರೆ ನೀವು ಬಳಸುವ ಸಾಬೂನು ಹಾಗೂ ಸೋಪಿನ ಪುಡಿಗಳಿಂದ ನಿಮ್ಮ ರೇಷ್ಮೆ ಸೀರೆಗಳಿಗೆ ಹಾನಿ ಮಾಡಬಹುದು. ಹಾಗೆ ವಾಷಿಂಗ್ ಮೆಷಿನ್‌ಗೆ ಹಾಕುವುದು, ಕೈಯಿಂದ ಉಜ್ಜಿ ತೊಳೆಯುವುದು ಸೀರೆಗೆ ಹಾನಿ ಮಾಡಬಹುದು. ಹೀಗಾಗಿ ಡ್ರೈಕ್ಲೀನಿಂಗ್‌ಗೆ ನೀಡುವುದು ಒಳ್ಳೆಯದು.
ಪ್ಲಾಸ್ಟಿಕ್ ಚೀಲದಲ್ಲಿ ಇಡಲೇಬೇಡಿ
ರೇಷ್ಮೆ ಸೀರೆಗಳನ್ನು ಎಂದಿಗೂ ಪ್ಲಾಸ್ಟಿಕ್ ಚೀಲದಲ್ಲಿ ಇಡಬೇಡಿ. ಏಕೆಂದರೆ ಪ್ಲಾಸ್ಟಿಕ್‌ನಿಂದ ರಾಸಾಯನಿಕ ಕ್ರಿಯೆಗೆ ಒಳಗಾಗಬಹುದು. ಬೆವರು ಉಂಟಾಗಬಹುದು. ಇದರಿಂದ ಸೀರೆಗೆ ಹಾನಿಯಾಗಬಹುದು.
ಆಗಾಗ ತೆಗೆದು ಮತ್ತೆ ಮಡಚಿ ಇಡುವುದು
ಕೆಲವರು ರೇಷ್ಮೆ ಸೀರೆಯನ್ನು ಆಗಾಗ ಹೊರಗೆ ತೆಗೆದರೆ ಹಾಳಾಗುತ್ತೆ ಎಂದುಕೊಂಡಿರುತ್ತಾರೆ. ಆದ್ರೆ ಸೀರೆಯನ್ನ ಒಂದೇ ಕಡೆ ಇಟ್ಟರೆ ಬೇಗ ಹಾಳಾಗುತ್ತದೆ. ಹೀಗಾಗಿ ಆಗಾಗ ತೆಗೆದು ಬೇರೆ ರೀತಿ ಮಡಚಬೇಕು, ಯಾವಾಗಲೂ ಒಂದೇ ರೀತಿ ಮಡಚಿ ಇಡಬಾರದು.
ಹ್ಯಾಂಗರ್‌ಗೆ ನೇತು ಹಾಕಬೇಡಿ
ರೇಷ್ಮೆ ಸೀರೆಗಳ ಮಡಚಿ ಒಂದು ಬಿಳಿ ಬಟ್ಟೆಯ ಬಳಸಿ ಕಟ್ಟಿ ಇಟ್ಟರೆ ಉತ್ತಮ. ಹ್ಯಾಂಗರ್‌ಗೆ ಹಾಕಿ ನೇತು ಹಾಕಬಾರದು. ಏಕೆಂದರೆ ಇದರಿಂದ ಸೀರೆಯ ಗುಣಮಟ್ಟ ಹಾಳಾಗುತ್ತದೆ. ಅದರ ನೂಲುಗಳು ಸಡಿಲವಾಗುವ ಸಾಧ್ಯತೆ ಇರುತ್ತದೆ. ಹೀಗಾಗಿ ಸೀರೆ ಮಡಚಿ ಇಡಬೇಕು.



Click it and Unblock the Notifications
