Latest Updates
-
ಗಣೇಶೋತ್ಸವದ ಸಂಭ್ರಮದಲ್ಲಿ ದಂಪತಿಗಳ ಜಗಳ ಬೇಡ: ಸಮಯ ಮತ್ತು ಬಜೆಟ್ ನಿರ್ವಹಣೆಗೆ ಇಲ್ಲಿದೆ ಸಿಂಪಲ್ ಪ್ಲಾನ್! -
ಗಣೇಶೋತ್ಸವ 2026: ಮಳೆಯ ನಡುವೆಯೂ ಪರಿಸರ ಸ್ನೇಹಿ ಹಬ್ಬ ಆಚರಣೆಗೆ ಇಲ್ಲಿದೆ ಸರಳ ಟಿಪ್ಸ್! -
ಪ್ಯಾಕ್ ಮಾಡಿದ ಆಹಾರದಲ್ಲಿ ಸಕ್ಕರೆ, ಉಪ್ಪು ಹೆಚ್ಚಿದ್ದರೆ ಕೆಂಪು ಲೇಬಲ್: ಸುಪ್ರೀಂ ಕೋರ್ಟ್ ಪ್ರಶ್ನೆ, ಗ್ರಾಹಕರಿಗೆ ಸಿಗುತ್ತಾ ಪರಿಹಾರ? -
ಝೊಮ್ಯಾಟೋದಲ್ಲಿ 'ಪೇ ಆನ್ ಡೆಲಿವರಿ' ಶುಲ್ಕದ ಶಾಕ್: ನಿಮ್ಮ ಬಿಲ್ ಹೆಚ್ಚಾಗುತ್ತಿದೆಯೇ? ಬಚಾವ್ ಆಗೋದು ಹೇಗೆ? -
ಗಣೇಶೋತ್ಸವದ ಮಳೆ ಮತ್ತು ದರ್ಶನದ ಕ್ಯೂ: ಆಯಾಸವಿಲ್ಲದೆ ಬಪ್ಪನ ದರ್ಶನ ಪಡೆಯಲು ಇಲ್ಲಿದೆ ಬೆಸ್ಟ್ ಟಿಪ್ಸ್! -
ಅಮಾವಾಸ್ಯೆಯ ದಿನ ಜಗಳ ಬೇಡ: ದಂಪತಿಗಳ ನಡುವಿನ ಪ್ರೀತಿ ಹೆಚ್ಚಿಸಲು ಈ ಸಂಭಾಷಣೆ ಸೂತ್ರಗಳು -
ಆರೆಂಜ್ ಅಲರ್ಟ್: ಭಾರಿ ಮಳೆಯಿಂದ ಮನೆ ರಕ್ಷಿಸಲು ಈ 5 ಟಿಪ್ಸ್ ಪಾಲಿಸಿ, ಸುರಕ್ಷಿತವಾಗಿರಿ! -
ಪ್ರೊಟೀನ್ ಪೌಡರ್ನಲ್ಲಿ ಹುಳುಗಳು! ಬಾಲಿವುಡ್ ನಟಿಯ ಆತಂಕ, ಎಫ್ಡಿಎ ತನಿಖೆ ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಟಿಪ್ಸ್ -
BRICS ಶೃಂಗಸಭೆ: ದೆಹಲಿಯಲ್ಲಿ ಟ್ರಾಫಿಕ್ ನಿರ್ಬಂಧ, ಪ್ರಯಾಣಕ್ಕೂ ಮುನ್ನ ಈ ರೂಟ್ ಮ್ಯಾಪ್ ನೋಡಿ! -
ತೆಲಂಗಾಣದಲ್ಲಿ ಭಾರಿ ಮಳೆ: ಮಳೆಯಲ್ಲಿ ವಾಕಿಂಗ್ ಹೋಗುವ ಮುನ್ನ ಈ ಸುರಕ್ಷತಾ ಟಿಪ್ಸ್ ಮರೆಯದಿರಿ
ಹೀಗೆ ಮಾಡಿದ್ರೆ ಗಿಡಗಳ ತುಂಬಾ ಹೂವು ಬಿಡುತ್ತೆ..! ಇಲ್ಲಿದೆ ಟಿಪ್ಸ್..!
ಮನೆಯಂಗಳದಲ್ಲಿ ಒಂದು ಹೂವಿನ ಗಿಡದ ತೋಟವಿದ್ದರೆ ಆ ಮನೆಯ ಸೌಂದರ್ಯವೇ ಹೆಚ್ಚಾಗುತ್ತದೆ. ಈಗ ಹಳ್ಳಿಗಳಲ್ಲಿ ಮನೆಯ ಮುಂದೆ ಕೈತೋಟ ಇರುವುದು ಬಿಟ್ಟರೆ ನಗರಗಳಲ್ಲಿ ಈ ರೀತಿ ಹೂವಿನ ತೋಟ ಮಾಡುವುದು ಕನಸಿನ ಮಾತು. ನಗರಗಳಲ್ಲಿ ಜಾಗದ ಸಮಸ್ಯೆ ಹಾಗೂ ನೀರಿನ ಸಮಸ್ಯೆಯೂ ಇರುವ ಕಾರಣ ಹೂವಿನ ಗಿಡಗಳ ರಾಶಿ ನೋಡಲು ಸಾಧ್ಯವಾಗುವುದಿಲ್ಲ.
ಆದರೆ ಇರುವ ಜಾಗದಲ್ಲಿ ಹೂವಿನ ಗಿಡಗಳ ಬೆಳೆಸುವ ಮೂಲಕ ನಿತ್ಯ ಅವುಗಳ ಪಾಲನೆ ಪೋಷಣೆಯಲ್ಲಿ ಗೃಹಿಣಿಯರು ತೊಡಗಿರುವುದನ್ನು ನಾವು ನೋಡಬಹುದು. ಮನೆಯ ಮುಂಭಾಗ ಸ್ವಲ್ಪ ಜಾಗದಲ್ಲಿ ಪಾಟ್‌ಗಳಲ್ಲಿ ಹೂವಿನ ಗಿಡ ಬೆಳೆಸುತ್ತಾರೆ. ಜೊತೆಗೆ ಟೆರೆಸ್ ಮೇಲೆಯೂ ಸಹ ಹೂವಿನ ಗಿಡಗಳ ಇಟ್ಟು ನೀರು ಹಾಕಿ ಬೆಳೆಸುತ್ತಾರೆ.

ಜಾಗದ ಕೊರತೆಯಿಂದ ಹೂವಿನ ಗಿಡಗಳ ಸಂಖ್ಯೆಯೂ ಕಡಿಮೆಯೇ ಇರುತ್ತದೆ. ಆದ್ರೆ ನೀವು ಬೆಳಸುತ್ತಿರುವ ಗಿಡಗಳು ಹೂವು ಬಿಡದೆ ಇರುವ ಸಾಧ್ಯತೆ ಇರುತ್ತದೆ. ನೀವು ನರ್ಸರಿಯಿಂದ ತರುವಾಗ ಗಿಡದ ತುಂಬ ಹೂವು, ಮೊಗ್ಗುಗಳು ಇರುವುದನ್ನು ಕಂಡು ನೀವು ದುಬಾರು ಬೆಲೆ ನೀಡಿ ಖರೀದಿಸಿರುತ್ತೀರಿ. ಆದ್ರೆ ಮನೆಗೆ ತಂದು ನೆಟ್ಟ ಬಳಿಕ ಹೂವು ಬಿಡದೆ ಇರಬಹುದು.
ಅದ್ರಲ್ಲೂ ನರ್ಸರಿಯಲ್ಲಿ ಬಗೆ ಬಗೆಹ ಹೂವು ಬಿಡುವ ಗಿಡಗಳ ಇಟ್ಟಿರುತ್ತಾರೆ. ಅಲ್ಲಿ ಹೂವು ಬಿಟ್ಟ ಗಿಡ ಮನೆಗೆ ತಂದು ನೆಟ್ಟರೆ ಹೂ ಬಿಡದೇ ಇರಬಹುದು. ಅಥವಾ ದೊಡ್ಡ ದೊಡ್ಡ ಗಿಡವಾದರು ಹೂವು ಮಾತ್ರ ಒಂದೋ ಎರಡೋ ಮಾತ್ರ ಬಿಡುತ್ತಿರಬಹುದು.
ಆದ್ರೆ ನಾವಿಂದು ಕಸಿ ಗಿಡಗಳು, ಅನ್ಯ ಜಾತಿ ಗಿಡಗಳನ್ನು ಒಂದೇ ಗಿಡದಲ್ಲಿ ಬೆಳೆಸುವ ಪದ್ಧತಿ ಹೀಗೆ ನರ್ಸರಿಯಲ್ಲಿ ಹಲವು ರೀತಿಯ ನಾವಿನ್ಯತೆಗೆ ಸಾಕ್ಷಿಯಾಗಿದ್ದೇವೆ. ಆದರೆ ನಿಮ್ಮ ಕೈ ತೋಟದಲ್ಲಿ ಗಿಡಗಳು ಹೂವುಗಳನ್ನೇ ಬಿಡದಿದ್ದರೆ ಏನು ಮಾಡುವುದು?
ಹೌದು ಸಾಮಾನ್ಯವಾಗಿ ಎಲ್ಲಾ ಗೃಹಿಣಿಯರ ಸಮಸ್ಯೆಗಳಲ್ಲು ಇದೂ ಒಂದಾಗಿದೆ. ಹಾಗಾದ್ರೆ ಗಿಡದಲ್ಲಿ ಹೂವು ಬಿಡುವಂತೆ ಮಾಡುವುದು ಹೇಗೆ? ಗಿಡಗಳಿಗೆ ಏನು ಹಾಕಿದರೆ ಹೂವು ಚೆನ್ನಾಗಿ ಬಿಡುತ್ತವೆ ಎಂಬ ನಿಮ್ಮ ಪ್ರಶ್ನೆಗೆ ಇಲ್ಲಿ ಉತ್ತರ ನೀಡಲಾಗಿದೆ.
ಟೀ ಪುಡಿ ಹಾಲು
ನೀವು ಟೀ ಮಾಡಿದ ಬಳಿಕ ಅದರ ಪುಡಿಯನ್ನು ಎಸೆಯಬೇಡಿ, ಈ ಪುಡಿಯನ್ನು ತೆಗೆದು ಒಂದು ಬೌಲ್‌ಗೆ ಹಾಕಿ ಟೀ ಪಾತ್ರೆ ತೊಳೆದು ಅದರ ನೀರನ್ನು ಈ ಪುಡಿ ಜೊತೆ ಹಾಕಿ ಇಡಿ. ಮತ್ತೊಂದು ಕಡೆ ಅರ್ಧ ಗ್ಲಾಸ್ ಹಾಲು ತೆಗೆದುಕೊಂಡು ಮತ್ತರ್ಧ ಗ್ಲಾಸ್ ನೀರು ಹಾಕಿ ಒಂದು ರಾತ್ರಿ ಬ್ಯಾಕ್ಟೀರಿಯಾ ರಿಯಾಕ್ಷನ್ ಆಗಲು ಬಿಡಿ
ಮಾರನೆ ದಿನ ಬೆಳಗ್ಗೆ ಎರಡನ್ನೂ ಚೆನ್ನಾಗಿ ಜರಡಿ ಹಿಡಿದು ಮತ್ತೊಂದು ಬೌಲ್‌ಗೆ ಹಾಕಿಕೊಳ್ಳಿ. ನಂತರ ನೀರುಗಳನ್ನು ಹೂವಿನ ಗಿಡದ ಬುಡಕ್ಕೆ ಹಾಕಿಕೊಳ್ಳಿ. ಜೊತೆಗೆ ಎಲೆಗಳಿಗೆ ಸ್ಪೇ ಕೂಡ ಮಾಡಬಹುದು.
ಮೊದಲ ಮೊಗ್ಗುಗಳನ್ನು ಕತ್ತರಿಸಿ
ನಿಮ್ಮ ಹೂವಿನ ತೋಟದಲ್ಲಿ ಯಾವುದೇ ಗಿಡ ಆಗಿರಲಿ ಅದರಲ್ಲಿ ಬಹುಬೇಗ ಹೂವು ಬಿಡಲು ಆರಂಭಿಸುತ್ತದೆ. ಆದ್ರೆ ಮೊದಲ ಬಾರಿಗೆ ಹೂವು ಬಿಡಲು ಬಿಡಬಾರದು. ಗಿಡದಲ್ಲಿ ಸಣ್ಣದಾಗಿ ಮೊಗ್ಗುಗಳು ಕಾಣಿಸಿಕೊಳ್ಳು ಆರಂಭಿಸಿದಾಗಲೇ ಆ ಮೊಗ್ಗುಗಳನ್ನು ತೆಗೆದು ಹಾಕಬೇಕು. ಇದರಿಂದ ಗಿಡ ಅಗಲವಾಗಿ ಹರಡಿಕೊಳ್ಳುತ್ತದೆ. ಜೊತೆಗೆ ಮುಂದಿನ ದಿನದಲ್ಲಿ ಹೂವಿನ ಸಂಖ್ಯೆಗಳು ಹೆಚ್ಚಾಗಿತ್ತವೆ.
ಇಂಗು ಮತ್ತು ಟೀ ಪುಡಿ
ಒಂದು ಬೌಲ್‌ನಲ್ಲಿ ನೀರು ತೆಗೆದುಕೊಂಡು ಚಿಟಿಕೆಯಷ್ಟು ಇಂಗು ತೆಗೆದುಕೊಂಡು ಆ ನೀರಿಗೆ ಹಾಕಿ ಬಳಿಕ ಎರಡರಿಂದ ಮುರು ಸ್ಪೂನ್ ಚಹಾ ಪುಡಿ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಬಳಿಕ 2ರಿಂದ 3 ಗಂಟೆ ಹಾಗೆಯೆ ಇಡಿ. 3 ಗಂಟೆಯ ಬಳಿಕ ಮತ್ತೆ ಮಿಕ್ಸ್ ಮಾಡಿಕೊಂಡು ಯಾವ ಗಿಡಕ್ಕೆ ಬೇಕೋ ಆ ಗಿಡದ ಬುಡಕ್ಕೆ ಹಾಕಿ. ಆದರೆ ಎಷ್ಟು ಪ್ರಮಾಣದಲ್ಲಿ ಹಾಕಬೇಕು ಎನ್ನುವುದನ್ನು ನೀವೇ ನಿರ್ಧರಿಸಿ. ದೊಡ್ಡ ಗಿಡ ಇದ್ದರೆ ಹೆಚ್ಚು ಹಾಕಿ. ಸಣ್ಣ ಗಿಡಗಳಿಗೆ ಸ್ವಲ್ಪ ಕಡಿಮೆ ಹಾಕಿ. ಹೀಗೆ ಹಾಕೋದ್ರಿಂದ ಗಿಡದಲ್ಲಿ ಹೂವುಗಳ ಸಂಖ್ಯೆ ಹೆಚ್ಚಾಗುತ್ತದೆ.



Click it and Unblock the Notifications
